ಈ ಹಣ್ಣು ಸೇವಿಸಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ! – ಒಂದು ಹಣ್ಣಿನಿಂದ ಎಷ್ಟೊಂದು ಆರೋಗ್ಯ ಲಾಭ!

ಈ ಹಣ್ಣು ಸೇವಿಸಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ! – ಒಂದು ಹಣ್ಣಿನಿಂದ ಎಷ್ಟೊಂದು ಆರೋಗ್ಯ ಲಾಭ!

ಮಕ್ಕಳು ಮಾತ್ರವಲ್ಲದೇ, ಯುವಕರು ಕೂಡ ಫಾಸ್ಟ್‌ ಫುಡ್‌ ಸೇವನೆ ಮಾಡ್ತಾರೆ. ತರಕಾರಿ ಹಣ್ಣು ತಿನ್ನುವುದನ್ನೇ ಬಿಟ್ಟಿದ್ದಾರೆ. ಇದ್ರಿಂದಾಗಿ ದೇಹದಲ್ಲಿ ಪೋಷಕಾಂಗಳ ಕೊರತೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಒಂದೊಂದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಹೀಗಾಗಿ ಈ ಪೋಷಕಾಂಶಗಳನ್ನು ಸುಲಭವಾಗಿ ಪೂರೈಸಲು ಹಣ್ಣುಗಳ ಸೇವನೆ ಉತ್ತಮ ಮಾರ್ಗ. ಸೀಸನ್‌ ನಲ್ಲಿರುವ ಹಣ್ಣುಗಳ ಸೇವನೆ ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.  ಇದ್ರಲ್ಲಿ ಪೇರಳೆ ಹಣ್ಣು ಕೂಡ ಒಂದು.

ಇದನ್ನೂ ಓದಿ: ನನ್ನ ಬಳಿಯೂ ಹೆಲ್ಮೆಟ್‌ ಇದೆ.. – ಹೆಲ್ಮೆಟ್‌ ಧರಿಸಿ ಮಾಲೀಕನೊಂದಿಗೆ ಬೈಕ್‌ ರೈಡ್‌ ಮಾಡಿದ ಶ್ವಾನ!

ಪೇರಳೆ ಹಣ್ಣು ಮಾತ್ರವನ್ನ ಅದರ ಎಲೆಯಲ್ಲೂ ಕೂಡ ಔಷಧಿಯ ಗುಣವಿದೆ. ಪೇರಳೆ ಹಣ್ಣನ್ನ ಸೇವಿಸುವುದರಿಂದ ಆರೋಗ್ಯವಾಗಿ ಇಡುವುದರ ಜೊತೆಗೆ ಅನೇಕ ರೋಗಗಳಿಂದ ರಕ್ಷಣೆ ಮಾಡುತ್ತದೆ. ಆಯುರ್ವೇದ ತಜ್ಞರ ಪ್ರಕಾರ, ಪೇರಳೆ ಹಣ್ಣು ವಾತ, ಪಿತ್ತ ಮತ್ತು ಕಫ ಸಮತೋಲನದಲ್ಲಿಡುತ್ತದೆ. ಇದು ಅವುಗಳನ್ನು ಅನನ್ಯವಾಗಿಸುತ್ತದೆ. ಇದು ಕ್ಯಾರೊಟಿನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ ಹೊಂದಿದೆ. ವಯಸ್ಸಾಗುವಿಕೆಯ ವಿರೋಧಿ ಮತ್ತು ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣ ಹೊಂದಿದೆ. ಚರ್ಮ ಮತ್ತು ಕೂದಲಿಗೆ ಉತ್ತಮ. ಪೇರಳೆ ಹಣ್ಣು, ಎಲೆ ಮತ್ತು ತೊಗಟೆ ಔಷಧವಾಗಿ ಬಳಕೆ ಮಾಡಲಾಗುತ್ತದೆ.

ಮಧುಮೇಹದಲ್ಲಿ ಸಿಪ್ಪೆ ತೆಗೆದ ಪೇರಳೆ ಸೇವಿಸುವುದು ರಕ್ತದ ಸಕ್ಕರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾಲಿಸ್ಯಾಕರೈಡ್ ಅಂಶವು ಟೈಪ್-2 ಮಧುಮೇಹ ಕಡಿಮೆ ಮಾಡುತ್ತದೆ. ಪೇರಳೆ ಎಲೆಯ ಸಾರವು  ಆ್ಯಂಟಿ-ಹೈಪರ್ಗ್ಲೈಸೆಮಿಕ್ ಗುಣಲಕ್ಷಣ ಹೊಂದಿದೆ. ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಆಹಾರದಲ್ಲಿ ಪೇರಳೆ ಸೇರಿಸಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಪೇರಳೆಯಲ್ಲಿ ವಿಟಮಿನ್‌ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತದೆ. ವಿಟಮಿನ್-ಸಿ ರೋಗ ನಿರೋಧಕ ವ್ಯವಸ್ಥೆ ಸುಧಾರಿಸುತ್ತದೆ. ರೋಗಕಾರಕಗಳ ವಿರುದ್ಧ ಹೋರಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಆರೋಗ್ಯಕರ ಹೃದಯಕ್ಕೆ ಸಹಕಾರಿ

ಪೇರಳೆ ಸೇವನೆ ಹೃದಯಕ್ಕೂ ಪ್ರಯೋಜನಕಾರಿ. ಪೊಟ್ಯಾಸಿಯಮ್ ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಕೆಲಸ ಮಾಡುತ್ತದೆ. ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ. ಪೇರಳೆಯರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿರಿಸುತ್ತದೆ.

ಜೀರ್ಣಶಕ್ತಿ ಹೆಚ್ಚಿಸುತ್ತದೆ

ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಇದು ಉತ್ತಮ ಪ್ರಮಾಣದ ಆಹಾರದ ಫೈಬರ್ ಹೊಂದಿದೆ. ಫೈಬರ್ ಕೊರತೆ ಮಲಬದ್ಧತೆ ಕಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿಡಬಹುದು.

ಕಣ್ಣುಗಳಿಗೂ ಪ್ರಯೋಜನಕಾರಿ

ಪೌಷ್ಟಿಕಾಂಶದ ಅಂಶಗಳ ಕೊರತೆ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಹೋಗಲಾಡಿಸುತ್ತದೆ. ಪೇರಳೆಯಲ್ಲಿರುವ ವಿಟಮಿನ್-ಎ, ಸಿ, ಫೋಲೇಟ್, ಸತು ಮತ್ತು ತಾಮ್ರ ಗುಣಗಳು ಕಣ್ಣಿನ ಆರೋಗ್ಯ ಕಾಪಾಡುತ್ತದೆ. ಇದರ ಎಲೆಗಳನ್ನು ಹೇಗೆ ಬಳಸಬೇಕೆಂದು ಈಗ ತಿಳಿಯಿರಿ

ಪೇರಳೆ ಎಲೆಗಳ ಕಷಾಯ

ಹತ್ತು ಪೇರಳೆ ಎಲೆಗಳನ್ನು ನಾಲ್ಕು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ಅರ್ಧಕ್ಕೆ ಬಂದ ನಂತರ ಶೋಧಿಸಿ ಕುಡಿಯಿರಿ. ಮುಟ್ಟಿನ ಸೆಳೆತ, ಆಮ್ಲೀಯತೆ, ಮಧುಮೇಹಕ್ಕೆ ಈ ಕಷಾಯವನ್ನು ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಗಾರ್ಗ್ಲಿಂಗ್ ಮಾಡಿದ್ರೆ ಬಾಯಿ ಹುಣ್ಣು, ಒಸಡು ರಕ್ತಸ್ರಾವ ಮತ್ತು ಬಾಯಿಯ ಆರೋಗ್ಯಕ್ಕೆ ಕಾಪಾಡುತ್ತದೆ. ಕೂದಲ ಉದುರುವಿಕೆ ತಡೆಯುತ್ತದೆ.

ಪೇಸ್ಟ್ ರೂಪದಲ್ಲಿ ಪೇರಳೆ ಎಲೆ ಬಳಕೆ

ತಾಜಾ ಪೇರಳೆ ಎಲೆಗಳ ಪೇಸ್ಟ್ ಉರಿಯೂತ, ಜ್ವರ, ತಲೆನೋವು ಮತ್ತು ಕೀಲು ನೋವು ನಿವಾರಿಸುತ್ತದೆ. ಇದು ಪೇರಳೆತಿನ್ನಲು ಉತ್ತಮ ಸಮಯ

Shwetha M

Leave a Reply

Your email address will not be published. Required fields are marked *