ವೈಭವ್ ಓಪನರ್ Or ನಂ.3 ಸ್ಲಾಟ್? – 3ನೇ ಪಂದ್ಯಕ್ಕೂ ಬೇಡ್ವಾ ಸ್ಪಿನ್ನರ್?
ಸರಣಿ ಕೈವಶಕ್ಕೆ ಹೀಗಿದೆ ಪ್ಲೇಯಿಂಗ್ 11

ವೈಭವ್ ಓಪನರ್ Or ನಂ.3 ಸ್ಲಾಟ್? – 3ನೇ ಪಂದ್ಯಕ್ಕೂ ಬೇಡ್ವಾ ಸ್ಪಿನ್ನರ್?ಸರಣಿ ಕೈವಶಕ್ಕೆ ಹೀಗಿದೆ ಪ್ಲೇಯಿಂಗ್ 11

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ 2 ಪಂದ್ಯಗಳಲ್ಲಿ ಲಾಸ್ಟ್ ಓವರ್​ನಲ್ಲಿ ರಣರೋಚಕವಾಗಿ ಗೆದ್ದಿರೋ ಭಾರತ ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ ದೂರದಲ್ಲಿದೆ. ಮಂಗಳವಾರ ಅಂದ್ರೆ ನಾಳೆ ಸರಣಿಯ ಮೂರನೇ ಪಂದ್ಯ ವೆಲ್ಲಿಂಗ್ಟನ್ ಮೈದಾನದಲ್ಲಿ ನಡೆಯಲಿದ್ದು ಈ ಪಂದ್ಯ ಎರಡೂ ತಂಡಗಳಿಗೆ ಮಸ್ಟ್ ವಿನ್ ಮ್ಯಾಚ್ದೆ. ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಬಗ್ಗೆ ಬಾರೀ ಕುತೂಹಲ ಮೂಡಿದೆ. ಯಾಕಂದ್ರೆ ಇಶಾನ್ ಕಿಶನ್ ಇನ್ನೂ ರಿಕವರ್ ಆಗದ ಕಾರಣ ವೈಭವ್ ಸೂರ್ಯವಂಶಿ ಮತ್ತೆ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೀತಾರೆ. ಆದ್ರೆ ಅವ್ರ ಸ್ಲಾಟ್ ಬಗ್ಗೆ ಕನ್ಫ್ಯೂಷನ್ ಶುರುವಾಗಿದೆ. ಮತ್ತೊಂದೆಡೆ ಈ ಪಂದ್ಯಕ್ಕೂ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದೇ ಆಡ್ತಾರಾ ಅನ್ನೋ ಪ್ರಶ್ನೆಗಳೂ ಇವೆ.

ಇದನ್ನೂ ಓದಿ : ಪಾಂಡ್ಯ OUT.. ಪಾಟಿದಾರ್ SAFE – ರಹಾನೆ, ರುತುರಾಜ್ ಡೇಂಜರ್ ಝೋನ್

5 ಪಂದ್ಯಗಳ ಟಿ-20ಐ ಸರಣಿಯಲ್ಲಿ ಆಲ್ರೆಡಿ ಎರಡು ಪಂದ್ಯಗಳನ್ನ ಗೆದ್ದಿರೋ ಭಾರತ ನಾಳಿನ ಮ್ಯಾಚ್​ನೂ ವಿನ್ ಆದ್ರೆ ಸರಣಿ ಕೈವಶ ಮಾಡಿಕೊಳ್ಳುತ್ತೆ. ಹಾಗೇ ಕಿವೀಸ್ ಪಡೆ ಗೆದ್ದು ಕಂ ಬ್ಯಾಕ್ ಮಾಡಿದ್ರೆ 2 ಪಂದ್ಯಗಳು ಸಿರೀಸ್ ಡಿಸೈಡರ್ ಆಗಲಿವೆ. ಮತ್ತೊಂದೆಡೆ ಈ ಪಂದ್ಯಕ್ಕೆ ಭಾರತದ ಬ್ಯಾಟಿಂಗ್ ಆರ್ಡರ್ ಬಗ್ಗೆಯೂ ಕುತೂಹಲ ಜಾಸ್ತಿಯಾಗಿದೆ. ವೈಭವ್ ಸೂರ್ಯವಂಶಿ ಬಗ್ಗೆ ಪರವಿರೋಧಗಳು ವ್ಯಕ್ತವಾಗ್ತಿವೆ.

ವೈಭವ್ ಓಪನರ್ ಆಗ್ತಾರಾ.. ನಂ.3ನಲ್ಲೇ ಆಡಿಸ್ತಾರಾ?

ವೈಭವ್ ಸೂರ್ಯವಂಶಿ ಹೇಳಿ ಕೇಳಿ ಓಪನಿಂಗ್ ಬ್ಯಾಟರ್. ಐಪಿಎಲ್, ಅಂಡರ್ 19, ಡೊಮೆಸ್ಟಿಕ್ ಹೀಗೆ ಎಲ್ಲಾ ಕಡೆಯೂ ಓಪನರ್ ಆಗಿ ಕಣಕ್ಕಿಳಿದಿದ್ದಾರೆ. ಅಷ್ಟೇ ಯಾಕೆ ಭಾರತ ತಂಡಕ್ಕೆ ಕಾಲಿಟ್ಟ ಮೇಲೂ ಮೊದಲ 8 ಪಂದ್ಯಗಳಲ್ಲೂ ಆರಂಭಿಕರಾಗೇ ಆಡಿದ್ದಾರೆ. ಆದ್ರೆ ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಇಶಾನ್ ಕಿಶನ್ ಆಬ್ಸೆನ್ಸ್​ನಲ್ಲಿ ವೈಭವ್ ನಂಬರ್ 3ನಲ್ಲಿ ಬ್ಯಾಟಿಂಗ್ ಮಾಡಿದ್ರು. ಆದ್ರೆ 8 ಬಾಲ್​ಗಳನ್ನ ಫೇಸ್ ಮಾಡಿ 4 ರನ್ಸ್ ಅಷ್ಟೇ ಗಳಿಸಿ ಔಟ್ ಆಗಿದ್ರು. ವೈಭವ್ ಫೇಲ್ಯೂರ್​ಗೆ ಸ್ಲಾಟ್ ಬದಲಾವಣೆಯೇ ಕಾರಣ ಅನ್ನೋದು ಕೆಲ ಮಾಜಿ ಕ್ರಿಕೆಟಿಗರ ವಾದ. ರವಿಚಂದ್ರನ್ ಅಶ್ವಿನ್ ಈ ಬಗ್ಗೆ ರಿಯಾಕ್ಟ್ ಮಾಡಿದ್ದು 6ನೇ ಓವರ್ ನಲ್ಲಿ ಸೂರ್ಯವಂಶಿ ಬ್ಯಾಟಿಂಗ್​ಗೆ ಬಂದು ನೀರಿಲ್ಲದ ಮೀನಿನಂತೆ ಒದ್ದಾಡಿದ್ರು. ಹೀಗಾಗಿ ಅಭಿ & ವೈಭವ್​ನ ಓಪನರ್ ಆಗಿ ಆಡ್ಸಿ ಸಂಜುನ ಬೇಕಿದ್ರೆ ನಂಬರ್ 3ನಲ್ಲಿ ಆಡಿಸಿ ಎಂದಿದ್ದಾರೆ. ಹಾಗೇ ಸದಗೋಪನ್ ರಮೇಶ್, ಮುರಳಿ ಕಾರ್ತಿಕ್, ಕೆ.ಶ್ರೀಕಾಂತ್ ಕೂಡ ವೈಭವ್​ಗೆ ಓಪನಿಂಗ್ ಸ್ಲಾಟ್ ನೀಡಿ. ನಂಬರ್ 3ನಲ್ಲಿ ಬ್ಯಾಟಿಂಗ್​ಗೆ ಕಳಿಸಿದ್ರೆ ಅವ್ರು ಪ್ಯಾನಿಕ್ ಆಗ್ತಾರೆ ಎಂದಿದ್ದಾರೆ. ಇದೇ ವೇಳೆ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಮಾತ್ರ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಓಪನರ್‌ಗಳಾಗಿ ಚೆನ್ನಾಗಿ ಆಡ್ತಿರೋದ್ರಿಂದ ಅವ್ರೇ ಕಂಟಿನ್ಯೂ ಆಗ್ಲಿ ಎಂದಿದ್ದಾರೆ. ಹೀಗಾಗಿ ನಾಳಿನ ಪಂದ್ಯಕ್ಕೆ ಸೂರ್ಯವಂಶಿ ಓಪನರ್ ಆಗ್ತಾರಾ ಅಥವಾ ನಂಬರ್ 3ನಲ್ಲೇ ಕಣಕ್ಕಿಳೀತಾರಾ ಅನ್ನೋ ಕುತೂಹಲ ಮೂಡಿದೆ. ಇದೆಲ್ಲದ್ರ ನಡುವೆ ಭಾರತ ಬೌಲಿಂಗ್ ವಿಭಾಗದಲ್ಲಿ ಮತ್ತೆ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದೇ ಕಣಕ್ಕಿಳಿಯುತ್ತಾರಾ ಅನ್ನೋದೇ ಕುತೂಹಲ.

ಮಿಡಲ್ ಓವರ್ ಗಳಲ್ಲಿ ಸ್ಪಿನ್ನರ್ ಇಲ್ಲದೇ ಟೀಂ ಇಂಡಿಯಾ ಒದ್ದಾಟ!

ಕಳೆದ ಎರಡೂ ಪಂದ್ಯಗಳಲ್ಲೂ ಟೀಂ ಇಂಡಿಯಾ ಐವರು ಬ್ಯಾಟರ್ಸ್, ಮೂವರು ಆಲ್​ರೌಂಡರ್ಸ್ ಹಾಗೇ ಮೂವರು ಫಾಸ್ಟ್ ಬೌಲರ್​ಗಳೊಂದಿಗೆ ಕಣಕ್ಕಿಳಿದಿದೆ. ಸ್ಪೆಷಲಿಸ್ಟ್ ಸ್ಪಿನ್ನರ್​ಗಳಾಗಿರೋ ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಇಬ್ರೂ ಇದ್ರೂ ಆಡಲು ಅವಕಾಶ ನೀಡಿಲ್ಲ. ಭಾರತದ ಬೌಲಿಂಗ್ ವೇಳೆ ಸ್ಪಿನ್ನರ್ಸ್ ಆಬ್ಸೆನ್ಸ್ ಎದ್ದು ಕಾಣ್ತಿದೆ. ಯಾಕಂದ್ರೆ ಮಿಡಲ್ ಓವರ್​ಗಳಲ್ಲಿ ವಿಕೆಟ್ಸ್ ಬರ್ತಿಲ್ಲ. ರೈಟ್ ಆರ್ಮ್ ಆಫ್ ಬ್ರೇಕ್ ಸ್ಪಿನ್ ಆಲ್​ರೌಂಡರ್ ನಮನ್ ಧೀರ್ ತಂಡದಲ್ಲಿದ್ರೂ ಮೊದಲ ಮ್ಯಾಚಲ್ಲಿ ಬೌಲಿಂಗ್​ಗೆ ಅವಕಾಶ ಕೊಟ್ಟಿಲ್ಲ. ಎರಡನೇ ಪಂದ್ಯದಲ್ಲಿ ಕೇವಲ 1 ಓವರ್ ಬೌಲಿಂಗ್ ಕೊಟ್ಟಿದ್ದು 7 ರನ್ಸ್ ನೀಡಿದ್ರು. ವಿಕೆಟ್ ಪಡೆದಿರಲಿಲ್ಲ. ಇನ್ನು ತಂಡದಲ್ಲಿ ಇರೋದೇ ಸ್ಲೋ ಲೆಫ್ಟ್ ಆರ್ಮ್ ಆರ್ಥೋಡಕ್ಸ್ ಸ್ಪಿನ್ ಆಲ್​ರೌಂಡರ್ ಅಕ್ಷರ್ ಪಟೇಲ್. ಎರಡೂ ಪಂದ್ಯಗಳಲ್ಲೂ ಒಂದೇ ಒಂದು ವಿಕೆಟ್ ಕೂಡ ಪಡೆದಿಲ್ಲ. ಆದ್ರೆ ನ್ಯೂಜಿಲೆಂಡ್ ತಂಡದಲ್ಲಿ ಮಿಚೆಲ್ ಸ್ಯಾಂಟ್ನರ್ ಮತ್ತು ಮೈಕೆಲ್ ಬ್ರೇಸ್​ವೆಲ್ ಮೊದಲ ಪಂದ್ಯದಲ್ಲಿ ತಲಾ ಎರಡೆರಡು ವಿಕೆಟ್ಸ್ ಪಡೆದಿದ್ರು. ಇನ್ನು ಎರಡನೇ ಪಂದ್ಯದಲ್ಲಂತೂ ಸ್ಯಾಂಟ್ನರ್ ಕಂಪ್ಲೀಟ್ ಡಾಮಿನೇಟ್ ಮಾಡಿ ಕೇವಲ 21 ರನ್ಸ್ ನೀಡಿ 4 ವಿಕೆಟ್ಸ್ ಬೇಟೆಯಾಡಿದ್ರು. ಹೀಗಾಗಿ ಮೂರನೇ ಪಂದ್ಯದಲ್ಲಾದ್ರೂ ಬೌಲಿಂಗ್​ನಲ್ಲಿ ಬದಲಾವಣೆ ತರ್ತಾರಾ ಅನ್ನೋ ಕುತೂಹಲ ಇದೆ.

ಸೂರ್ಯವಂಶಿಗೆ ಸ್ಲಾಟ್ ಟೆನ್ಷನ್!

ಅಭಿಷೇಕ್ ಶರ್ಮಾ

ಸಂಜು ಸ್ಯಾಮ್ಸನ್

ವೈಭವ್ ಸೂರ್ಯವಂಶಿ

ಶ್ರೇಯಸ್ ಅಯ್ಯರ್

ತಿಲಕ್ ವರ್ಮಾ

ನಿತೀಶ್ ಕುಮಾರ್ ರೆಡ್ಡಿ

ನಮನ್ ಧೀರ್

ಅಕ್ಷರ್ ಪಟೇಲ್

ಭುವನೇಶ್ವರ್ ಕುಮಾರ್

ಅರ್ಶದೀಪ್ ಸಿಂಗ್

ಪ್ರಿನ್ಸ್ ಯಾದವ್

Shantha Kumari

Leave a Reply

Your email address will not be published. Required fields are marked *