INDಗೆ ಸರಣಿ.. NZಗೆ ಜೀವದಾನ – 3ನೇ ಮ್ಯಾಚ್ ಗೆಲುವು ಯಾರಿಗೆ?
ಭುವಿ ದುಬಾರಿಗೆ ಬೀಳುತ್ತಾ ಬ್ರೇಕ್?

INDಗೆ ಸರಣಿ.. NZಗೆ ಜೀವದಾನ – 3ನೇ ಮ್ಯಾಚ್ ಗೆಲುವು ಯಾರಿಗೆ?ಭುವಿ ದುಬಾರಿಗೆ ಬೀಳುತ್ತಾ ಬ್ರೇಕ್?

ಭಾರತಕ್ಕೆ ಸರಣಿ ಗೆಲ್ಲೋ ಟಾರ್ಗೆಟ್.. ನ್ಯೂಜಿಲೆಂಡ್​ಗೆ ಸರಣಿಯಲ್ಲಿ ಜೀವಂತವಾಗಿರಬೇಕು ಅಂದ್ರೆ ಇದು ಲಾಸ್ಟ್ ಚಾನ್ಸ್.. ನಾಳಿನ ಪಂದ್ಯ ಎರಡೂ ತಂಡಗಳಿಗೂ ಮೋಸ್ಟ್ ಇಂಪಾರ್ಟೆಂಟ್ ಆಗಲಿದೆ. ಆಲ್ರೆಡಿ 2 ಪಂದ್ಯ ಗೆದ್ದಿರೋ ಭಾರತ 3ನೇ ಮ್ಯಾಚ್​ನೂ ಗೆದ್ದು ಸರಣಿ ಕೈವಶಮಾಡಿಕೊಳ್ಳೋಕೆ ನೋಡ್ತಿದ್ರೆ ತವರಿನ ಪ್ರತಿಷ್ಠೆ ಕಾಪಾಡಿಕೊಳ್ಳೋಕೆ ಕಿವೀಸ್ ಪಡೆ ಕಾಯ್ತಾ ಇದೆ.

ಇದನ್ನೂ ಓದಿ : ಪಾಂಡ್ಯ OUT.. ಪಾಟಿದಾರ್ SAFE – ರಹಾನೆ, ರುತುರಾಜ್ ಡೇಂಜರ್ ಝೋನ್

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗ್ಲೇ 2 ಪಂದ್ಯಗಳನ್ನ ಗೆದ್ದಿದೆ. ಕ್ರೈಸ್ಟ್​ಚರ್ಚ್ ಮೈದಾನದಲ್ಲಿ ನಡೆದ ಎರಡೂ ಪಂದ್ಯಗಳಲ್ಲೂ ಲಾಸ್ಟ್ ಓವರ್ ಡ್ರಾಮಾ ರಣರೋಚಕವಾಗಿತ್ತು. ಈಗ ಮೂರನೇ ಪಂದ್ಯ ವೆಲ್ಲಿಂಗ್ಟನ್ ಮೈದಾನದಲ್ಲಿ ನಡೆಯೋಡ್ರಿಂದ ಎರಡೂ ಟೀಮ್ಸ್ ಸ್ಪೆಷಲ್ಲಾಗಿ ರೆಡಿಯಾಗ್ಬೇಕಿದೆ. ಅದ್ರಲ್ಲೂ ಭಾರತಕ್ಕೆ ಸಾಕಷ್ಟು ವಿಚಾರಗಳಲ್ಲಿ ಅನಲೈಸ್ ಮಾಡೋಕೆ ಬೆಸ್ಟ್ ಆಪರ್ಚುನಿಟಿ ಆಗಲಿದೆ.

3ನೇ ಅಗ್ನಿಪರೀಕ್ಷೆ ಗೆಲ್ಲೋದ್ಯಾರು?

ವಿದೇಶಿ ನೆಲದಲ್ಲಿ ಕ್ಯಾಪ್ಟನ್ ಆಗಿ ಶ್ರೇಯಸ್ ಸಾಮರ್ಥ್ಯ ಸಾಬೀತು

ಅಭಿಷೇಕ್ ಗೆ ಆರಂಭ ಚೆನ್ನಾಗಿ ಸಿಕ್ರೂ ಬಿಗ್ ಇನ್ನಿಂಗ್ಸ್ ಬಂದಿಲ್ಲ

ಕಿಶನ್ ಆಬ್ಸೆನ್ಸ್ ನಲ್ಲಿ ಟಿ-20ಐನಲ್ಲಿ ಸೂರ್ಯವಂಶಿಗೆ ಬೆಸ್ಟ್ ಚಾನ್ಸ್

ಕಳೆದ ಎರಡೂ ಪಂದ್ಯಗಳಲ್ಲಿ ದುಬಾರಿಯಾಗಿರೋ ಭುವಿ ಮೇಲೆ ಕಣ್ಣು

ಹೀಗೆ ಕೆಲ ವಿಚಾರಗಳಲ್ಲಿ ಭಾರತ ಕಂ ಬ್ಯಾಕ್ ಮಾಡೋಕೆ ಮೂರನೇ ಪಂದ್ಯ ಬೆಸ್ಟ್ ಚಾನ್ಸ್ ಆಗಲಿದೆ. ಅಟ್ ದಿ ಸೇಮ್ ಟೈಂ ನ್ಯೂಜಿಲೆಂಡ್​ಗಂತೂ ಇದು ಡು ಆರ್ ಡೈ ಪಂದ್ಯ. ಪ್ರಸ್ತುತ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಈಗಾಗಲೇ 2-0 ಮುನ್ನಡೆ ಸಾಧಿಸಿದೆ. ಒಂದು ವೇಳೆ ನ್ಯೂಜಿಲೆಂಡ್ ಈ 3ನೇ ಪಂದ್ಯದಲ್ಲೂ ಸೋತರೆ, ಭಾರತ 3-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಳ್ಳುತ್ತದೆ. ಸರಣಿ ಜೀವಂತವಾಗಿರಬೇಕಾದರೆ ಕಿವೀಸ್ ಪಡೆಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಅಷ್ಟೇ ಅಲ್ಲದೆ ಹೋಮ್ ಗ್ರೌಂಡ್​ನಲ್ಲಿ ಆಡ್ತಿದ್ರೂ ಮೊದಲ ಎರಡು ಪಂದ್ಯಗಳನ್ನು ಸೋತಿರುವುದು ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಕಂಬ್ಯಾಕ್ ಮಾಡಲು ಮತ್ತು ತವರಿನ ಫ್ಯಾನ್ಸ್ ಎದುರು ಮಾನ ಉಳಿಸಿಕೊಳ್ಳೋಕೆ ನೋಡ್ತಿದ್ದಾರೆ. ಇದಕ್ಕಾಗಿ ಪಂದ್ಯಕ್ಕೂ ಮುನ್ನ ತಂಡದಲ್ಲಿ ಎಕ್ಸ್​ಟ್ರಾ ವರ್ಕ್ ಜೊತೆ ಲೆಕ್ಕಾಚಾರಗಳೊಂದಿಗೆ ಕಣಕ್ಕಿಳಿಯೋದಂತೂ ಪಕ್ಕಾ.

Shantha Kumari

Leave a Reply

Your email address will not be published. Required fields are marked *