6 ಬಾಲ್.. 11 ರನ್ಸ್.. ಢವಢವ – ಕೊನೆಗೂ ಗೆಲುವಿನ ತಿಲಕವಿಟ್ಟ ರೆಡ್ಡಿ  
ಪಂದ್ಯ ಗೆದ್ರೂ ಅಲರ್ಟ್ ಮೆಸೇಜ್

6 ಬಾಲ್.. 11 ರನ್ಸ್.. ಢವಢವ – ಕೊನೆಗೂ ಗೆಲುವಿನ ತಿಲಕವಿಟ್ಟ ರೆಡ್ಡಿ  ಪಂದ್ಯ ಗೆದ್ರೂ ಅಲರ್ಟ್ ಮೆಸೇಜ್

ಸೇಮ್ ಪಿಚ್.. ಸೇಮ್ ಫಾರ್ಮೇಟ್.. ಎರಡೂ ಕಡೆ ಆಲ್ಮೋಸ್ಟ್ ಸೇಮ್ ಪ್ಲೇಯರ್ಸ್.. ಌಂಡ್ ಆಲ್ಸೋ ಸೇಮ್ ಫಿನಿಶಿಂಗ್. ಸೇಮ್ ರಿಸಲ್ಟ್.. ಮೊನ್ನೆ ಮ್ಯಾಚಲ್ಲೂ 4 ವಿಕೆಟ್​ಗಳಿಂದ ಗೆದ್ದಿದ್ದ ಭಾರತ ಎರಡನೇ ಟಿ-20ಐ ಮ್ಯಾಚಲ್ಲೂ 4 ವಿಕೆಟ್​ಗಳಿಂದ ಗೆದ್ದು ಬೀಗಿದೆ. ನ್ಯೂಜಿಲೆಂಡ್ ವಿರುದ್ಧ 2ನೇ ಪಂದ್ಯವನ್ನೂ ಗೆಲ್ಲೋ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಲೀಡ್ ಸಾಧಿಸಿದ್ದಾರೆ.

ಇದನ್ನೂ ಓದಿ : ಬೌಲಿಂಗ್ MAGIC.. ಬ್ಯಾಟಿಂಗ್ FIRE! – ಭಾರತಕ್ಕೆ ಸಿಕ್ಕ ಬೆಸ್ಟ್ ಆಲ್ ರೌಂಡರ್

ಕ್ರೈಸ್ಟ್​​ಚರ್ಚ್ ಮೈದಾನದಲ್ಲಿ ನಡೆದ ಭಾರತ ವರ್ಸಸ್ ನ್ಯೂಜಿಲೆಂಡ್ ನಡುವಿನ ಮೊದಲ ಮ್ಯಾಚಲ್ಲಿ ಬ್ಯಾಟರ್​ಗಳು ದರ್ಬಾರ್ ಮಾಡಿದ್ರೆ ಎರಡನೇ ಪಂದ್ಯದಲ್ಲಿ ಬೌಲರ್ಸ್ ಕಂಪ್ಲೀಟ್ ಡಾಮಿನೇಟ್ ಮಾಡಿದ್ರು. ಅದ್ರಲ್ಲೂ ಕಿವೀಸ್ ಬೌಲರ್​ಗಳಂತೂ ಭಾರತದ ಬ್ಯಾಟರ್​ಗಳ ಬೆವರಿಳಿಸಿದ್ರು. ಆದ್ರೆ ಎಂಡ್ ಆಫ್ ದಿ ಡೇ ಭಾರತ ವೀ ಆರ್ ವರ್ಲ್ಡ್ ಚಾಂಪಿಯನ್ಸ್ ಅನ್ನೋದನ್ನ ಪ್ರೂವ್ ಮಾಡಿದ್ರು. ಕಿವೀಸ್ ಪಡೆಗೆ ಗೆಲುವಿನ ಆಸೆ ತೋರಿಸಿ ಕೊನೆಗೆ ಮತ್ತೆ ಸೋಲಿನ ರುಚಿ ತೋರಿಸಿದ್ರು.

ಕೈಕೊಟ್ಟ ಟಾಪ್ ಆರ್ಡರ್.. ಪಂದ್ಯ ಗೆಲ್ಲಿಸಿದ ತಿಲಕ್ & ರೆಡ್ಡಿ!

ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯ ಭಾರತದ ಪಾಲಿಗೆ ಐತಿಹಾಸಿಕ ಪಂದ್ಯ. ಯಾಕಂದ್ರೆ ಇದು ಟಿ-20ಐ ಮಾದರಿಯಲ್ಲಿ 300ನೇ ಪಂದ್ಯ. ಈ ಮ್ಯಾಚ್​ಗೆ  ಪ್ಲೇಯಿಂಗ್ 11ನಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ರು. ಇಶಾನ್ ಕಿಶನ್​ಗೆ ಇಂಜುರಿ ಕಾರಣಕ್ಕೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿತ್ತು. ಹಾಗೇ ಮಯಾಂಕ್ ಯಾದವ್​ರನ್ನು ಹೊರಗಿಟ್ಟು ಪ್ರಿನ್ಸ್ ಯಾದವ್ ರನ್ನು ಆಡಿಸಲಾಗಿತ್ತು. ಟಾಸ್ ಗೆದ್ದು ಮೊದಲು ಬೌಲಿಂಗ್ ಚೂಸ್ ಮಾಡಿಕೊಂಡ ಭಾರತಕ್ಕೆ ಫಸ್ಟ್ ಇನ್ನಿಂಗ್ಸ್ ತುಂಬಾನೇ ಚೆನ್ನಾಗಿತ್ತು. ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ ಎಕ್ಸ್​ಪೆನ್ಸಿವ್ ಆದ್ರೂ ಕೂಡ 180ಕ್ಕೆ ಕಟ್ಟಿ ಹಾಕಿದ್ರು. ಆದ್ರೆ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಗೆಲುವು ಈಸಿ ಇರಲಿಲ್ಲ. ಆಲ್ಮೋಸ್ಟ್ ಮ್ಯಾಚ್ ಕೈಯಿಂದ ಜಾರೇ ಬಿಡ್ತೇನೋ ಅನ್ನೋ ಥರ ಆಗಿತ್ತು. ಆದ್ರೂ ತಿಲಕ್ ಮತ್ತು ನಿತೀಶ್ ರೆಡ್ಡಿ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ಲಾಸ್ಟ್ ಓವರ್​ನಲ್ಲಿ ಸಿನಿಮಾ ಥ್ರಿಲ್ಲರ್​ನೂ ಮೀರಿಸುವಂತೆ ಪಂದ್ಯ ಗೆದ್ದು ಸರಣಿಯಲ್ಲಿ ಲೀಡ್ ಕೂಡ ಸಾಧಿಸಿದ್ರು. ಹೀಗಿದ್ರೂ ಭಾರತ ಮುಂದಿನ ಪಂದ್ಯಕ್ಕೂ ಮುನ್ನ ಕೆಲ ವಿಚಾರಗಳಲ್ಲಿ ಅಲರ್ಟ್ ಆಗ್ಬೇಕಿದೆ.

ಬೌಲರ್ ಗಳ ಧಮಾಕ!

ಟಾಸ್ ಸೋತು ಬ್ಯಾಟಿಂಗ್ ಗೆ ಬಂದ ಕಿವೀಸ್ ಗೆ ಆರಂಭದಲ್ಲೇ ಆಘಾತ

ಪವರ್ ಪ್ಲೇನಲ್ಲಿ 3 ವಿಕೆಟ್ ಕಳ್ಕೊಂಡು 43 ರನ್ ಗಳಿಸಿದ್ದ ನ್ಯೂಜಿಲೆಂಡ್

4ನೇ ವಿಕೆಟ್ ಗೆ ಗ್ಲೆನ್ ಫಿಲಿಪ್ಸ್ & ಬೆವನ್ ಜೇಕಬ್ಸ್ 116 ರನ್ಸ್ ಜೊತೆಯಾಟ

16ನೇ ಓವರ್ ಮುಕ್ತಾಯದ ವೇಳೆಗೆ 133/3 ರನ್ಸ್ ಗಳಿಸಿದ್ದ ಕಿವೀಸ್

20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ಸ್ ಕಲೆ ಹಾಕಿದ ಕಿವೀಸ್

ಭಾರತದ ಪರ 2ನೇ ಪಂದ್ಯದಲ್ಲೂ ದುಬಾರಿಯಾದ ಭುವಿ 50 ರನ್ಸ್ 1 ವಿಕೆಟ್

181 ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಆರಂಭದ ಓವರ್ ಗಳಲ್ಲೇ ಡ್ರಾಮಾ

ಫಸ್ಟ್ ಓವರ್ ಮೇಡನ್.. 2ನೇ ಓವರ್ ನೋ ಬಾಲ್ ಡ್ರಾಮಾ

ಪವರ್ ಪ್ಲೇ ಮುಗಿಯೋ ಹೊತ್ತಿಗೆ 1 ವಿಕೆಟ್ ನಷ್ಟಕ್ಕೆ 44 ರನ್ಸ್

ಸಂಜು 14(17), ಅಭಿಷೇಕ್ 27(21), ವೈಭವ್ 4(8) ರನ್ಸ್ ಗೆ ಔಟ್

10 ಓವರ್ ಗಳಲ್ಲಿ ಕಿವೀಸ್ ನಂತೆಯೇ ಭಾರತಕ್ಕೂ 66ಕ್ಕೆ 3 ವಿಕೆಟ್

11ನೇ ಓವರ್ ನಲ್ಲಿ ಶ್ರೇಯಸ್ 7(11) & ಅಕ್ಷರ್ 11(09) ವಿಕೆಟ್

17 ಬಾಲಲ್ಲೇ 31 ರನ್ಸ್ ಸಿಡಿಸಿ ಪ್ರೆಶರ್ ಕಡಿಮೆ ಮಾಡಿದ ನಮನ್ ಧೀರ್

ಕೊನೆಯ 2 ಓವರ್ ಗಳಲ್ಲಿ ಭಾರತದ ಗೆಲುವಿಗೆ 29 ರನ್ಸ್ ಅಗತ್ಯ

20ನೇ ಓವರ್ ನಲ್ಲಿ 11 ರನ್ ಗಳ ಅಗತ್ಯ.. 1 ಬಾಲ್ ಇದ್ದಾಗ ಗೆಲುವು

ತಿಲಕ್ ವರ್ಮಾ 51(26) & ನಿತೀಶ್ ರೆಡ್ಡಿ 26(13) ಗೇಮ್ ಚೇಂಜರ್ಸ್

ಹೀಗೆ ತಿಲಕ್ ಮತ್ತು ನಿತೀಶ್ ರೆಡ್ಡಿ ಅವ್ರ ಅದ್ಭುತ ಪಾರ್ಟ್ನರ್​ಶಿಪ್​ನಿಂದ ಭಾರತ ಗೆದ್ದು ಬೀಗಿದೆ. ಆರಂಭದಲ್ಲಿ 9.5ರ ರಿಕ್ವೈರ್ ರನ್​ರೇಟ್​ನಲ್ಲಿ ಮ್ಯಾಚ್ ಸ್ಟಾರ್ಟ್ ಮಾಡಿ ಡೆತ್ ಓವರ್ ವೇಳೆಗೆ 14+ ರಿಕ್ವೈರ್ ರನ್​ರೇಟ್ ತಲುಪಿದ್ರೂ ಅಂತಿಮವಾಗಿ ಪಂದ್ಯವನ್ನ ಗೆದ್ದಿದ್ದಾರೆ. ಌಂಡ್ ನ್ಯೂಜಿಲೆಂಡ್​ನಲ್ಲಿ ಭಾರತದ ಟಿ-20ಐ ಅಜೇಯ ವಿಜಯಯಾತ್ರೆ ಕಂಟಿನ್ಯೂ ಆಗ್ತಿದೆ. ಆದ್ರೆ ಭಾರತ ಲಾಸ್ಟ್ ಮೂಮೆಂಟ್​ನಲ್ಲಿ ವಿನ್ ಆದ್ರೂ ಈ ಪಂದ್ಯದಲ್ಲಿ ಹಲವು ಅಂಶಗಳನ್ನ ಗಮನಿಸಬೇಕಾಗಿದೆ.

 ಸ್ಪಿನ್ನರ್ ಬೇಕಿತ್ತಾ?

ಭಾರತದ ಬೌಲರ್ಸ್ ದುಬಾರಿಯಾಗ್ತಿದ್ದಾರೆ ಎನ್ನುವ ಆತಂಕಕ್ಕೆ ರಿಲ್ಯಾಕ್ಸ್

ಪವರ್ ಪ್ಲೇನಲ್ಲೇ 3 ವಿಕೆಟ್ಸ್ ಬೇಟೆಯಾಡಿದ್ದ ಟೀಂ ಇಂಡಿಯಾ

ಪವರ್ ಪ್ಲೇ ಆದ್ಮೇಲೆ 6-17ನೇ ಓವರ್ ವರೆಗೆ ಒಂದೂ ವಿಕೆಟ್ ಇಲ್ಲ

ಭಾರತದ ಪರ ಮಿಡಲ್ ಆರ್ಡರ್ ಸ್ಪಿನ್ನರ್ಸ್ ಆಬ್ಸೆನ್ಸ್ ಹೊಡೆತ

ಮಿಡಲ್ ಆರ್ಡರ್ ನಲ್ಲಿ ಭಾರತದ ವಿಕೆಟ್ಸ್ ತೆಗೆದಿದ್ದೇ ಕಿವೀಸ್ ಸ್ಪಿನ್ನರ್ಸ್

ಭುವಿ ದುಬಾರಿ ಆಗ್ತಿದ್ದರಿಂದ ನಮನ್ ಕೈಯಿಂದ ಇನ್ನೊಂದು ಓವರ್ ಚಾನ್ಸ್

Shantha Kumari

Leave a Reply

Your email address will not be published. Required fields are marked *