ಸುಪ್ರೀಂ ಕೋರ್ಟ್​ಗೆ ಮತ್ತಿಬ್ಬರು ನ್ಯಾಯಾಧೀಶರ ನೇಮಕ – 34 ಸ್ಥಾನಗಳೂ ಭರ್ತಿ..!

ಸುಪ್ರೀಂ ಕೋರ್ಟ್​ಗೆ ಮತ್ತಿಬ್ಬರು ನ್ಯಾಯಾಧೀಶರ ನೇಮಕ – 34 ಸ್ಥಾನಗಳೂ ಭರ್ತಿ..!

ಸುಪ್ರೀಂ ಕೋರ್ಟ್‌ಗೆ ಐವರು ನ್ಯಾಯಾಧೀಶರನ್ನು ನೇಮಿಸಿದ ಒಂದು ವಾರದ ಬಳಿಕ ಕೇಂದ್ರ ಸರ್ಕಾರ ಮತ್ತೆ ಇಬ್ಬರು ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲಾಗಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಪೂರ್ಣ ಬಲ 34ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ಸಚಿವರ ಮೇಲೆ ತುರಿಕೆ ಪುಡಿ – ಸಭೆಯಲ್ಲೇ ಬಟ್ಟೆ ಬಿಚ್ಚಿ ತೊಳೆದುಕೊಂಡ ವಿಡಿಯೋ ವೈರಲ್..!

ಪ್ರಸ್ತುತ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇಬ್ಬರು ನೂತನ ನ್ಯಾಯಾಧೀಶರ ನೇಮಕದ ಬಳಿಕ ಸುಪ್ರೀಂ ಕೋರ್ಟ್​ನ ಸಂಪೂರ್ಣ ಬಲ 34ಕ್ಕೆ ಏರಿಕೆ ಆಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾನೂನು ಸಚಿವ ಕಿರಣ್ ರಿಜಿಜು ‘ಭಾರತದ ಸಂವಿಧಾನದ ಅಡಿಯಲ್ಲಿನ ನಿಬಂಧನೆಗಳ ಪ್ರಕಾರ, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಹಾಗೂ ಗುಜರಾತ್ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್​ಗೆ ನನ್ನ ಶುಭಾಶಯ’ಗಳು ಎಂದು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿತ್ತಲ್, ಪಟ್ನಾ ಹೈಕೋರ್ಟ್ ಸಿಜೆ ಸಂಜಯ್ ಕರೋಲ್, ಮಣಿಪುರ ಹೈಕೋರ್ಟ್ ಸಿಜೆ ಪಿವಿ ಸಂಜಯ್ ಕುಮಾರ್, ಪಟನಾ ಹೈಕೋರ್ಟ್ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಮುಂಬಡ್ತಿ ಪಡೆದಿದ್ದರು.

 

suddiyaana