ಬಾಕ್ಸ್ ಆಫೀಸ್‌ನಲ್ಲಿ ಪ್ರೇಮದ ಸುನಾಮಿ! 200 ಕೋಟಿಯತ್ತ ಪ್ರೇಮದ ಊರಲಿ

ಒಂದು ಕಡೆ ಸ್ಟಾರ್ ನಟರ ಸಿನಿಮಾಗಳು, ಮತ್ತೊಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ! ಇವೆಲ್ಲದರ ನಡುವೆ ಯಾವುದೇ ದೊಡ್ಡ ಭಾಷೆಗಳ ಬೆಂಬಲವಿಲ್ಲದೆ, ಕನ್ನಡದಲ್ಲೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಸಿನಿಮಾ ‘ಪ್ರೇಮದ ಊರಲಿ’!
ಆರಂಭದಲ್ಲಿ ಸಣ್ಣ ಬಜೆಟ್‌ನ ಸಿನಿಮಾ ಅಂತಲೇ ಗುರುತಿಸಿಕೊಂಡಿದ್ದ ‘ಪ್ರೇಮದ ಊರಲಿ’, ಈಗ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನೇ ಬದಲಿಸುವ ಹಾದಿಯಲ್ಲಿದೆ. ಈಗಾಗಲೇ ಸುಮಾರು 125 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎನ್ನಲಾಗುತ್ತಿರುವ ಈ ಸಿನಿಮಾ, ಮುಂದಿನ ದಿನಗಳಲ್ಲಿ 150 ಕೋಟಿ ಗಡಿ ದಾಟಿ, 200 ಕೋಟಿ ಕ್ಲಬ್ ಸೇರಬಹುದೇ ಎಂಬ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ: ಕಾಲು ನೋವಿದೆ ಎಂದು ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನ ಇಡುತ್ತೀರಾ? – ಹಾಗಾದ್ರೆ ಈ ವಿಚಾರ ನಿಮಗೆ ಗೊತ್ತಿರಲಿ!
ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಚಾರ ಏನೆಂದರೆ, ವಿಶ್ವಾದ್ಯಂತದ ಗಳಿಕೆಯ ಆಧಾರದಲ್ಲಿ ಕನ್ನಡದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಆರನೇ ಸ್ಥಾನ ತಲುಪುವ ಸಾಧ್ಯತೆಯೂ ಈ ಚಿತ್ರಕ್ಕಿದೆ ಎನ್ನಲಾಗುತ್ತಿದೆ. ‘ಕೆಜಿಎಫ್ ಚಾಪ್ಟರ್ 2’, ‘ಕಾಂತಾರ ಚಾಪ್ಟರ್ 1’, ‘ಕಾಂತಾರ’, ‘ಟಾಕ್ಸಿಕ್’, ‘ಕೆಜಿಎಫ್ ಚಾಪ್ಟರ್ 1’ ಸಿನಿಮಾಗಳ ನಂತರದ ಸ್ಥಾನಕ್ಕೆ ‘ಪ್ರೇಮದ ಊರಲಿ’ ಬರಬಹುದೇ ಎಂಬ ಚರ್ಚೆ ಜೋರಾಗಿದೆ. ಅಷ್ಟೇ ಅಲ್ಲ, ‘ಸು ಫ್ರಂ ಸೋ’, ‘777 ಚಾರ್ಲಿ’, ‘ವಿಕ್ರಾಂತ್ ರೋಣ’, ‘ಜೇಮ್ಸ್’ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿದೆ ಎಂಬ ವರದಿಗಳೂ ಹರಿದಾಡುತ್ತಿವೆ.
ಮೊದಲನೆಯದಾಗಿ, ಪ್ರೇಕ್ಷಕರ ಬಾಯಿಮಾತಿನ ಪ್ರಚಾರ! ಸಿನಿಮಾ ನೋಡಿದವರು ಮತ್ತೊಬ್ಬರಿಗೆ ಹೇಳುತ್ತಿದ್ದಾರೆ. ಒಮ್ಮೆ ನೋಡಿದವರು ಮತ್ತೊಮ್ಮೆ ಥಿಯೇಟರ್‌ಗೆ ಬರುತ್ತಿದ್ದಾರೆ. ಕೆಲವರು ಮೂರ್ನಾಲ್ಕು ಬಾರಿಯೂ ಸಿನಿಮಾ ನೋಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಪ್ರೇಕ್ಷಕರೇ ಸಿನಿಮಾದ ಪ್ರಚಾರಕರಾಗಿರುವುದು ಬಾಕ್ಸ್ ಆಫೀಸ್ ಗಳಿಕೆಗೆ ದೊಡ್ಡ ಬಲ ನೀಡಿದೆ.
ಇನ್ನು ಸಾಲು ಸಾಲು ಹಬ್ಬದ ರಜೆಗಳು ಕೂಡ ಸಿನಿಮಾಗೆ ವರದಾನವಾಗಿವೆ. ಈವರೆಗೆ ಸುಮಾರು 65 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಮೂಲಗಳು ತಿಳಿಸಿವೆ. ಬಿಡುಗಡೆಯ 30ದಿನವಾದ್ರೂ ಸಿನಿಮಾ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ದೇಶಾದ್ಯಂತ 100ಕ್ಕೂ ಹೆಚ್ಚು ಶೋಗಳು ನಡೆಯುತ್ತಿದ್ದು, ಶೇಕಡಾ 75ರಷ್ಟು ಥಿಯೇಟರ್‌ಗಳು ಫುಲ್ ಆಗುತ್ತಿವೆ. ಇಷ್ಟು ದಿನಗಳಾದರೂ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿರುವುದು ಸಿನಿಮಾದ ಜನಪ್ರಿಯತೆಗೆ ಸಾಕ್ಷಿ.
ಇನ್ನೊಂದು ವಿಶೇಷ ಅಂದ್ರೆ, ಕನ್ನಡದಲ್ಲಿ ಬಿಡುಗಡೆಯಾದ ಈ ಸಿನಿಮಾ ತೆಲುಗು ಪ್ರೇಕ್ಷಕರನ್ನೂ ಸೆಳೆಯುತ್ತಿದೆ. ‘ಪ್ರೇಮನೆ ಊರಿಲೋ’ ಹೆಸರಿನಲ್ಲಿ ಬಿಡುಗಡೆಯಾದ ತೆಲುಗು ಆವೃತ್ತಿ ಅಲ್ಲಿಯೂ ಗಮನ ಸೆಳೆಯುತ್ತಿದೆ ಎಂಬ ವರದಿಗಳಿವೆ. ಅಂದರೆ, ಕನ್ನಡದ ಸಿನಿಮಾ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಬೇರೆ ಭಾಷೆಯ ಮಾರುಕಟ್ಟೆಯಲ್ಲೂ ಸೃಷ್ಟಿಸಿಕೊಳ್ಳುತ್ತಿದೆ.
ಇದರ ಪರಿಣಾಮ ಕೇವಲ ಕಲೆಕ್ಷನ್‌ಗೆ ಸೀಮಿತವಾಗಿಲ್ಲ. ಪ್ರೇಕ್ಷಕರ ಕೊರತೆಯಿಂದ ಬಾಗಿಲು ಮುಚ್ಚಿದ್ದ ಕೆಲವು ಚಿತ್ರಮಂದಿರಗಳಿಗೂ ಹೊಸ ಚೈತನ್ಯ ಸಿಕ್ಕಿದೆ ಎಂಬ ಮಾತು ಕೇಳಿಬರುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮತ್ತೆ ಬೇಡಿಕೆ ಮೂಡಿರುವುದು ಕನ್ನಡ ಚಿತ್ರರಂಗಕ್ಕೆ ಆಶಾದಾಯಕ ಬೆಳವಣಿಗೆ.
ಮುಂದೆ ದೀಪಾವಳಿ ರಜೆಗಳು ಕೂಡ ಇರುವುದರಿಂದ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ 200 ಕೋಟಿ ಕ್ಲಬ್ ಸೇರುವುದು ಖಚಿತ ಎನ್ನಲಾಗ್ತಿದೆ. ಒಂದು ವೇಳೆ 200 ಕೋಟಿ ಗಡಿ ದಾಟಿದ್ರೆ, ಕೆಜಿಎಫ್ ಚಾಪ್ಟರ್ 1 ದಾಖಲೆ ಮುರಿಯುವ ಚಾನ್ಸ್ ಕೂಡ ಹೆಚ್ಚಿದೆ.

ನೋಡಿರಿ

