KL ಸೊನ್ನೆ.. 113ಕ್ಕೆ ಆಲೌಟ್ – NZನಲ್ಲೂ ಟೆಸ್ಟ್ ಗೆಲ್ಲಲ್ವಾ ಭಾರತ?
25ರಲ್ಲಿ ಗೆದ್ದಿದ್ದೇ 5.. WTC ಹೇಗೆ?

KL ಸೊನ್ನೆ.. 113ಕ್ಕೆ ಆಲೌಟ್ – NZನಲ್ಲೂ ಟೆಸ್ಟ್ ಗೆಲ್ಲಲ್ವಾ ಭಾರತ?25ರಲ್ಲಿ ಗೆದ್ದಿದ್ದೇ 5.. WTC ಹೇಗೆ?

ಒಂದ್ಕಡೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟಿ-20ಐ ಸರಣಿ ನಡೀತಿದ್ರೆ ಮತ್ತೊಂದ್ಕಡೆ ಭಾರತ ಎ ಮತ್ತು ನ್ಯೂಜಿಲೆಂಡ್ ಎ ತಂಡಗಳ ನಡುವೆ ಅನಧಿಕೃತ ಟೆಸ್ಟ್ ಸರಣಿ ಕೂಡ ಸ್ಟಾರ್ಟ್ ಆಗಿದೆ. ಶಾಕಿಂಗ್ ವಿಚಾರ ಏನಂದ್ರೆ ಫಸ್ಟ್ ಇನ್ನಿಂಗ್ಸ್​ನಲ್ಲೇ ಭಾರತ ಪಲ್ಟಿ ಹೊಡೆದಿದೆ. ಐವರು ಖಾತೆಯನ್ನೇ ತೆರೆಯದೇ ವಿಕೆಟ್ ಒಪ್ಪಿಸಿದ್ದಾರೆ. ಆಟಗಾರರ ಇದೇ ಪ್ರದರ್ಶನ ನೆಕ್ಸ್​ಟ್ ಅಧಿಕೃತ ಟೆಸ್ಟ್ ಪಂದ್ಯಗಳ ಪ್ರದರ್ಶನದ ಬಗ್ಗೆಯೂ ಪ್ರಶ್ನೆಗಳನ್ನ ಮೂಡಿಸಿದೆ. ಮೊದ್ಲೇ ನ್ಯೂಜಿಲೆಂಡ್ ಪಿಚ್​ನಲ್ಲಿ ಟೆಸ್ಟ್ ಪಂದ್ಯಗಳನ್ನ ಗೆಲ್ಲೋದು ಕಬ್ಬಿಣದ ಕಡಲೆ ಇದ್ದಂತೆ.

ಇದನ್ನೂ ಓದಿ : ಟೀಕೆಗೆ ಸಂಜು ಡೋಂಟ್‌ಕೇರ್‌ – ಸೂರ್ಯವಂಶಿಗೆ DK ವಾರ್ನಿಂಗ್

ನ್ಯೂಜಿಲೆಂಡ್‌ನ ಬರ್ಟ್ ಸಟ್​ಕ್ಲಿಫ್ ಓವಲ್ ಮೈದಾನದಲ್ಲಿ ಇವತ್ತಿಂದ ಆರಂಭವಾಗಿರೋ ನ್ಯೂಜಿಲೆಂಡ್ ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಕಂಪ್ಲೀಟ್ ಆಗಿ ಫ್ಲ್ಯಾಪ್ ಆಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಟೀಂ ಭಾರತದ ಆಟಗಾರರನ್ನ ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದ್ದಾರೆ. ಕಿವೀಸ್ ಬೌಲರ್​ಗಳ ಆರ್ಭಟಕ್ಕೆ ಥಂಡಾ ಹೊಡೆದ ಭಾರತ ಫಸ್ಟ್ ಇನ್ನಿಂಗ್ಸ್​ನಲ್ಲಿ  ಕೇವಲ 113 ರನ್‌ಗಳಿಗೆ ಆಲೌಟ್ ಆಗಿದೆ.

ರಾಹುಲ್ ಸೇರಿ ಐವರು ಸೊನ್ನೆ.. ಮಾನ ಉಳಿಸಿದ ಡಿಡಿಪಿ & ರಾಥೋಡ್!

ಟಾಸ್ ಸೋತು ಫಸ್ಟ್ ಬ್ಯಾಟಿಂಗ್​ಗೆ ಬಂದ ಭಾರತದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಓಪನ್ ಮಾಡಿದ್ರು. ಆದ್ರೆ ರಾಹುಲ್ 8 ಬಾಲ್​ಗಳನ್ನ ಫೇಸ್ ಮಾಡಿ ಒಂದೂ ರನ್ ಗಳಿಸದೆ ವಿಕೆಟ್ ಒಪ್ಪಿಸಿದ್ರು. ನಂಬರ್ 3ನಲ್ಲಿ ದೇವದತ್ ಪಡಿಕ್ಕಲ್ 32 ರನ್ ಗಳಿಸಿ ಔಟ್ ಆದ್ರೆ ಯಶಸ್ವಿ ಜೈಸ್ವಾಲ್ 17 ರನ್​ಗಳಿಗೆ ಪೆವಿಲಿಯನ್ ಸೇರಿದ್ರು. ಆ ನಂತ್ರದಲ್ಲಿ ಸಾಯಿ ಸುದರ್ಶನ್ 0, ಧ್ರುವ್ ಜುರೇಲ್ 1, ವಾಷಿಂಗ್ಟನ್ ಸುಂದರ್ 0, ಅನ್ಶುಲ್ ಕಾಂಬೋಜ್ 10, ಯಶ್ ರಾಥೋಡ್ 44, ಆಕಿಬ್ ನಬಿ 10, ಆಕಾಶ್ ದೀಪ್ & ಮುಕೇಶ್ ಚೌದರಿ ಕೂಡ ಸೊನ್ನೆಗೆ ಔಟ್ ಆದ್ರು. ಅಲ್ಲಿಗೆ ಭಾರತದ ಪರ ಐವರು ಬ್ಯಾಟರ್ಸ್ ಖಾತೆಯನ್ನೂ ತೆರೀಲಿಲ್ಲ. 182 ನಿಮಿಷಗಳಲ್ಲಿ 113 ರನ್ ಗಳಿಸಿ ಇಡೀ ತಂಡ ಆಲೌಟ್ ಆಯ್ತು. ಕಿವೀಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಸಿಮೊನ್ ಕೀನೆ ಫೈವ್ ಫರ್ ವಿಕೆಟ್​ಗಳನ್ನ ಬೇಟೆಯಾಡಿದ್ರೆ ಝಾಕ್ ಗಿಬ್ಸನ್ 3 ವಿಕೆಟ್ಸ್ ತೆಗೆದ್ರು. ಫ್ರಸೆರ್ ಶಿಯಾಟ್, ಕ್ರಿಸ್ಟಿಯಾನ್ ಕ್ಲಾರ್ಕ್ ತಲಾ ಒಂದೊಂದು ವಿಕೆಟ್ಸ್ ಬೇಟೆಯಾಡಿದ್ರು. ಹೀಗೆ ಫಸ್ಟ್ ಇನ್ನಿಂಗ್ಸ್​ನಲ್ಲಿ ಭಾರತವನ್ನ ಕಟ್ಟಿ ಹಾಕಿದ ಕಿವೀಸ್ ಬ್ಯಾಟಿಂಗ್​ನಲ್ಲೂ ಕ್ರಿಸ್ ಕಚ್ಚಿ ನಿಂತಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ 135/3 ರನ್ ಗಳಿಸಿದ ಕಿವೀಸ್!

ಭಾರತವನ್ನ 113ಕ್ಕೆ ಆಲೌಟ್ ಮಾಡಿದ್ದ ಕಿವೀಸ್ ಬ್ಯಾಟಿಂಗ್​ನಲ್ಲೂ ಚೆನ್ನಾಗಿ ಆಡ್ತಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ 135 ರನ್ ಗಳಿಸಿ 3 ವಿಕೆಟ್ಸ್ ಕಳ್ಕೊಂಡಿದ್ದಾರೆ. ಔಕಿಬ್ ನಬಿ 2 ವಿಕೆಟ್ಸ್ ತೆಗೆದ್ರೆ ಮುಕೇಶ್ ಚೌಧರಿ 1 ವಿಕೆಟ್ ತೆಗೆದಿದ್ರು. ಬಟ್ ಶಾಕಿಂಗ್ ವಿಚಾರ ಅಂದ್ರೆ ಔಕಿಬ್ ನಬಿ 5 ನೋ ಬಾಲ್​ಗಳನ್ನ ಹಾಕಿದ್ದಾರೆ.. ಈ ಮೂಲಕ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 22 ರನ್​ಗಳ ಲೀಡ್ ಸಾಧಿಸಿದೆ. ಌಕ್ಚುಲಿ ಈ ಪಂದ್ಯ ಅನ್ ಅಫಿಶಿಯಲ್ ಇದ್ರೂ ನ್ಯೂಜಿಲೆಂಡ್ ವಿರುದ್ಧ ನವೆಂಬರ್​ನಲ್ಲಿ 2 ಟೆಸ್ಟ್ ಪಂದ್ಯಗಳಲ್ಲೂ ಆಡ್ಬೇಕಿದೆ. ಹೀಗಾಗಿ ಅನಧಿಕೃತ ಪಂದ್ಯಗಳಲ್ಲಿ ಗೆದ್ರೆ ಆಟಗಾರರಿಗೆ ಕಾನ್ಫಿಡೆನ್ಸ್ ಕೂಡ ಜಾಸ್ತಿಯಾಗುತ್ತೆ. ಅದೂ ಅಲ್ದೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಈಗಾಗ್ಲೇ ಟಫ್ ಆಗಿದೆ.

7 ಪಂದ್ಯಗಳಲ್ಲೂ ಗೆದ್ರಷ್ಟೇ ಡೈರೆಕ್ಟ್ ಫೈನಲ್ ಟಿಕೆಟ್!

ಶ್ರೀಲಂಕಾ ಸರಣಿಯ ಬಳಿಕ ಭಾರತ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ 48.15% ಪಾಯಿಂಟ್ಸ್ ಶೇಕಡಾವಾರು   ಹೊಂದಿದೆ. ಡಬ್ಲ್ಯೂಟಿಸಿಯಲ್ಲಿ ಫೈನಲ್ ತಲುಪಲು 60% ಕ್ಕಿಂತ ಹೆಚ್ಚು PCT ಇರಬೇಕಾಗುತ್ತೆ. ಪ್ರಸ್ತುತ ಸೈಕಲ್​ನಲ್ಲಿ ಭಾರತಕ್ಕೆ ಇನ್ನು 7 ಟೆಸ್ಟ್ ಪಂದ್ಯಗಳು ಬಾಕಿ ಇವೆ. ನ್ಯೂಜಿಲೆಂಡ್ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಸರಣಿ ಇದೆ. ಭಾರತ ಈ ಎಲ್ಲಾ ಪಂದ್ಯಗಳನ್ನ ಗೆದ್ರೆ ತಂಡದ PCT 70.37% ತಲುಪುತ್ತದೆ. ಸೋ ಡೈರೆಕ್ಟ್ ಆಗಿ ಫೈನಲ್ ಟಿಕೆಟ್ ಪಡ್ಕೊಳ್ತಾರೆ.  ಒಂದು ವೇಳೆ ಭಾರತ 5 ಅಥವಾ 6 ಪಂದ್ಯಗಳನ್ನು ಗೆದ್ದು, ಕೇವಲ ಒಂದು ಪಂದ್ಯದಲ್ಲಿ ಸೋತರೆ ಅಥವಾ ಡ್ರಾ ಮಾಡಿಕೊಂಡರೆ, ಫೈನಲ್ ಪ್ರವೇಶ ಬೇರೆ ತಂಡಗಳ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಈ 7 ಪಂದ್ಯಗಳ ಪೈಕಿ 2ರಲ್ಲಿ ಸೋತ್ರೂ ಫೈನಲ್ ಆಸೆ ಬಿಡ್ಬೇಕು. ಹೀಗಾಗಿ ನ್ಯೂಜಿಲೆಂಡ್​​ನಲ್ಲಿ ಎರಡಕ್ಕೆ ಎರಡೂ ಟೆಸ್ಟ್ ಪಂದ್ಯಗಳನ್ನ ಗೆಲ್ಬೇಕಿದೆ. ಹಾಗಂತ ಕಿವೀಸ್ ನಾಡಲ್ಲಿ ಟೆಸ್ಟ್ ಸರಣಿ ಗೆಲುವು ಈಸಿ ಇಲ್ವೇ ಇಲ್ಲ.

25 ಪಂದ್ಯಗಳಲ್ಲಿ ಭಾರತ ಗೆದ್ದಿದ್ದೇ 5 ಪಂದ್ಯ!

ಶ್ವದ ಬಹುತೇಕ ಪಿಚ್‌ಗಳು ದಿನ ಕಳೆದಂತೆ ಒಡೆದು ಸ್ಪಿನ್ನರ್‌ಗಳಿಗೆ ನೆರವಾಗುತ್ತವೆ. ಆದರೆ ನ್ಯೂಜಿಲೆಂಡ್‌ನಲ್ಲಿ ಬಿಸಿಲು ಕಡಿಮೆಯಿರುವುದರಿಂದ ಪಿಚ್‌ಗಳು ಒಡೆಯುವುದಿಲ್ಲ. ಹೀಗಾಗಿ 3, 4ನೇ ದಿನದಾಟದಲ್ಲಿ ಬ್ಯಾಟಿಂಗ್ ಈಸಿಯಾಗುತ್ತೆ. ಕಿವೀಸ್ ನಾಡಲ್ಲಿ ಭಾರತ ಟೆಸ್ಟ್ ಪಂದ್ಯಗಳಲ್ಲಿ ಒದ್ದಾಡಿರೋದು ಕೂಡ ಗೊತ್ತಾಗುತ್ತೆ. ಭಾರತವು ನ್ಯೂಜಿಲೆಂಡ್ ನೆಲದಲ್ಲಿ ಇದುವರೆಗೆ ಒಟ್ಟು 25 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ ಕೇವಲ 5 ಪಂದ್ಯಗಳಲ್ಲಿ ಮಾತ್ರ ಜಯಭೇರಿ ಬಾರಿಸಿದೆ. ಕಿವೀಸ್ ಪಡೆ 10 ಪಂದ್ಯಗಳಲ್ಲಿ ಗೆದ್ದಿದೆ.  10 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಹೀಗಾಗಿ ಈ ಬಾರಿ 2 ಪಂದ್ಯಗಳನ್ನ ಗೆದ್ರೆ ಮಾತ್ರವೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್​ನಲ್ಲಿ ಉಳಿಯೋಕೆ ಸಾಧ್ಯ. ಆದ್ರೆ ಅನಧಿಕೃತ ಟೆಸ್ಟ್ ಪಂದ್ಯಗಳಲ್ಲೇ ಈ ರೀತಿ ಎಡವಿದ್ರೆ ಮುಂದೇಗೆ ಅನ್ನೋ ಆತಂಕ ಶುರುವಾಗಿದೆ.

Shantha Kumari

Leave a Reply

Your email address will not be published. Required fields are marked *