ಗೌತಮ್‌ ಕೈಯಲ್ಲಿ ಶಕುಂತಲಾ ಲಾಕ್? – JD ಸುಳ್ಳಿನ ಕೋಟೆಗೆ ಭೂಮಿ ಬ್ರೇಕ್.. ಅಮೃತಧಾರೆ ಸೀರಿಯಲ್‌ END?

ಗೌತಮ್‌ ಕೈಯಲ್ಲಿ ಶಕುಂತಲಾ ಲಾಕ್? – JD ಸುಳ್ಳಿನ ಕೋಟೆಗೆ ಭೂಮಿ ಬ್ರೇಕ್.. ಅಮೃತಧಾರೆ ಸೀರಿಯಲ್‌ END?

ಕೇಡಿ ಜೈದೇವ್‌, ಶಕುಂತಲಾ ಪಾಪದ ಕೊಡ ತುಂಬಿದೆ. ಇನ್ಮುಂದೆ ಕುತಂತ್ರಿಗಳ ಆಟ ದಿವಾನ್‌ ಮನೆಯಲ್ಲಿ ನಡೆಯಲ್ಲ. ಒಂದ್ಕಡೆ ಭೂಮಿಕಾ ಸಾವಿನಿಂದ ಬಚಾವ್‌ ಆಗಿದ್ದಾಳೆ. ಮತ್ತೊಂದ್ಕಡೆ ಗೌತಮ್‌ ಕೂಡ ಅಮೆರಿಕಾದಿಂದ ಮನೆಗೆ ವಾಪಾಸ್‌ ಬಂದಿದ್ದಾನೆ. ಗೌತಮ್‌ ಮನೆಗೆ ಬರ್ತಿದ್ದಂತೆ ಜೈದೇವ್‌ಗೆ ಚಳಿ ಬಿಡಿಸಿದ್ದಾನೆ. ಕಪಾಳ ಮೋಕ್ಷ ಮಾಡಿ, ಆತನ ಇನ್ನೊಂದು ಮುಖವನ್ನ ಎಲ್ಲರಿಗೂ ತಿಳಿಸಿದ್ದಾನೆ. ಇದೀಗ ಶಕುಂತಲಾ ಕುತಂತ್ರ ಕೂಡ ಗೌತಮ್‌ಗೆ ಗೊತ್ತಾಗುತ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಮತ್ತೊಂದ್ಕಡೆ ಸೀರಿಯಲ್‌ ಕೂಡ ಎಂಡ್‌ ಆಗಲಿದೆ ಎನ್ನೋ ಸುದ್ದಿಯೊಂದು ಸದ್ದು ಮಾಡ್ತಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ನೆಲ್ಲಿಕಾಯಿ ಬೆಸ್ಟ್!‌ – ಆಮ್ಲದಿಂದ ಎಷ್ಟೊಂದು ಲಾಭ!

ಅಮೃತಧಾರೆ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಭೂಮಿಕಾ, ಹಾಗೂ ಕೆಲಸದ ಹಿನ್ನೆಲೆ ವಿದೇಶಕ್ಕೆ ತೆರಳಿದ್ದ ಗೌತಮ್ ದಿವಾನ್ ಪ್ರಾಣ ತೆಗೆಯಲು ಇಲ್ಲಿಂದಲೇ ಜೈದೇವ್ ಮತ್ತು ಶಕುಂತಲಾ ಪ್ಲಾನ್ ಮಾಡಿದ್ದರು. ಆದ್ರೆ ಅವರ ಪ್ಲ್ಯಾನ್‌ ಎಲ್ಲಾ ಈಗ ಉಲ್ಟಾ ಆಗಿದೆ. ಭೂಮಿಕಾ ಸಾವು ಗೆದ್ದಿದ್ದಾಳೆ. ಇನ್ನು ದೀಪಿಕಾ ಕೂಡ ಭೂಮಿಕಾ ಪರವಾಗೇ ಕೆಲಸ ಮಾಡ್ತಿದ್ದಾಳೆ. ದುಷ್ಟರ ಸಂಚು ವಿಫಲವಾಗಿದ್ದರಿಂದ ಗೌತಮ್ ಸುರಕ್ಷಿತವಾಗಿ ಮರಳಿದ್ದಾನೆ. ಜೈದೇವ್‌ಗೆ ಬಿಗ್‌ ಶಾಕ್ ನೀಡಿದ್ದಾನೆ.

ಹೌದು, ಗೌತಮ್‌ಗೆ ಪಾರ್ಥ ಮನೆಯ ಎಲ್ಲಾ ವಿಚಾರ ಮೊದಲೇ ತಿಳಿಸಿದ್ದ. ಅಪಾಯದಲ್ಲಿದ್ದ ಅತ್ತಿಗೆಯನ್ನು ರಕ್ಷಣೆ ಮಾಡಿದ್ದಕ್ಕೆ ಅನಿವಾರ್ಯವಾಗಿ ಮನೆಯೊಳಗೆ ಕರೆದುಕೊಳ್ಳಲಾಯ್ತು ಎಂದು ಪಾರ್ಥ ಹೇಳಿದ್ದಾನೆ. ಇದರಿಂದ ಕೋಪಗೊಂಡ ಗೌತಮ್, ಭೂಮಿಕಾಳ ಜಾಗದಲ್ಲಿರುವ ದೀಪಿಕಾಳನ್ನು ಕರೆದು ಪ್ರಶ್ನೆ ಮಾಡಿದ್ದಾನೆ. ನನ್ನನ್ನು ರಕ್ಷಣೆ ಮಾಡಿದ್ದರಿಂದ ಬದಲಾಗಿರಬಹುದು. ಹಾಗಾಗಿ ಒಂದು ಅವಕಾಶ ನೀಡಿದೆ ಎಂದಷ್ಟೇ ಹೇಳಿ ದೀಪಿಕಾ ನುಣುಚಿಕೊಂಡಿದ್ದಾಳೆ. ಕೂಡಲೇ ಕರೆ ಮಾಡಿ ಜೈದೇವ್‌ಗೆ ಮನೆಗೆ ಬರಬೇಕೆಂದು ಹೇಳುವಂತೆ ಗೌತಮ್ ಸೂಚಿಸಿದ್ದಾನೆ. ಕೂಡಲೇ ಶಕುಂತಲಾ ಜೈದೇವ್‌ಗೆ ಕಾಲ್‌ ಮಾಡಿದ್ದಾಳೆ. ಭೂಮಿಕಾಳನ್ನು ರಕ್ಷಿಸಿರೋದಕ್ಕೆ ಗೌತಮ್ ಖುಷಿಯಾಗಿದ್ದಾನೆ. ಗೌತಮ್ ಒಳ್ಳೆಯ ಮೂಡ್‌ನಲ್ಲಿರುವಾಗಲೇ ಮನೆಗೆ ಬಂದು ಸೇರಿಕೊಳ್ಳುವಂತೆ ಎಂದು ಹೇಳಿದ್ದಾನೆ. ಅವನ ಮಾತನ್ನ ಕೇಳಿ ಜೈದೇವ್‌ ಕೂಡ ಓಡೋಡಿ ಬಂದಿದ್ದಾನೆ. ಆತ ಬರ್ತಿದ್ದಂತೆ ಗೌತಮ್‌ ಕಪಾಳಕ್ಕೆ ಬಾರಿಸಿದ್ದಾನೆ. ಅಮೆರಿಕಾದಲ್ಲಿ ನನ್ನ ಮೇಲೆ ನಡೆದ ಎಲ್ಲಾ ದಾಳಿಗಳ ಹಿಂದಿರೋದು ನೀನೇ ಎಂಬ ಸತ್ಯ ಕಂಡುಕೊಂಡಿದ್ದೇನೆ. ಗೌತಮ್‌ ಉಗ್ರ ರೂಪ ನೋಡಿ ಜೈದೇವ್ ಮತ್ತು ಶಕುಂತಲಾ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲ ಪೊಲೀಸ್‌ಗೆ ಫೋನ್‌ ಮಾಡುತ್ತೇನೆ ಎಂದು ಹೇಳುತ್ತಿದ್ದಂತೆ, ಆತ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.

ಇನ್ನೊಂದ್ಕಡೆ ಮಲ್ಲಿ ಹಾಗೂ ಭೂಮಿಕಾ, ದಿಪೀಕಾಳನ್ನ ಮುಂದಿಟ್ಟುಕೊಂಡು ಶಕುಂತಲಾ ಮತ್ತೆ ಜೈದೇವ್‌ನ ಮಟ್ಟಹಾಕಲು ಮುಂದಾಗಿದ್ದಾರೆ. ಅವರಿಬ್ಬರ ಪ್ರತಿ ಪ್ಲ್ಯಾನ್‌ ಬಗ್ಗೆ ಅಪ್‌ಡೇಟ್‌ ಪಡೆಯುತ್ತಿದ್ದಾರೆ. ಇದೀಗ ಶಕುಂತಲಾ ಮುಖವಾಡ ಕೂಡ ಶೀಘ್ರದಲ್ಲೇ ಕಳಚಿ ಬೀಳಲಿದೆ. ಜೈದೇವ್‌ ಕುತಂತ್ರಕ್ಕೆ ಶಕುಂತಲಾ ಕೂಡ ಕೈ ಜೋಡಿಸಿದ್ದಾಳೆ ಎಂದು ಗೌತಮ್‌ಗೆ ಗೊತ್ತಾದ್ರೆ ಶಕುಂತಲಾ ಸುಮ್ಮನೆ ಇರಲ್ಲ. ಆಕೆಯನ್ನ ಕೂಡ ಜೈಲಿಗೆ ಕಳುಹಿಸೋದು ಫಿಕ್ಸ್‌ ಆಗಿದೆ. ಇನ್ನು ಮನೆಯಲ್ಲಿರೋದು ಭೂಮಿಕಾ ಅಲ್ಲ ದೀಪಿಕಾ ಅನ್ನೋದನ್ನ ಕೂಡ  ಗೌತಮ್‌ಗೆ ಸದ್ಯದಲ್ಲೇ ಗೊತ್ತಾಗಲಿದೆ.

ಇನ್ನು ಅಮೃತಧಾರೆ ಸೀರಿಯಲ್‌ ಶೀಘ್ರದಲ್ಲೇ ಎಂಡ್‌ ಆಗಲಿದೆ ಎಂಬ ಸುದ್ದಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಅಮೃತಧಾರೆ ಸೀರಿಯಲ್‌ ಆರಂಭದಲ್ಲಿ ಗೌತಮ್‌ ಮತ್ತು ಭೂಮಿಕಾ ನಡುವಿನ ಸಂಬಂಧ, ಕುಟುಂಬದ ಏಳುಬೀಳುಗಳು ಹಾಗೂ ಭಾವನಾತ್ಮಕ ಸನ್ನಿವೇಶಗಳ ಮೂಲಕ ಗಮನ ಸೆಳೆದಿತ್ತು. ಆದರೆ ಕಥೆ ಮುಂದುವರಿದಂತೆ ಹೊಸ ಪಾತ್ರಗಳು, ಅನಿರೀಕ್ಷಿತ ತಿರುವುಗಳು ಮತ್ತು ಭೂಮಿಕಾಳ ಜಾಗಕ್ಕೆ ದೀಪಿಕಾ ಬಂದಿರುವ ಪ್ರಸಂಗ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ವಿಪರೀತ ನೆಗೆಟಿವ್‌ ಕಾಮೆಂಟ್‌ಗಳು ಹರಿದಾಡುತ್ತಿದ್ದವು. ಅವಳಿ ಪಾತ್ರಗಳ ಸುತ್ತ ಕಥೆ ಸಾಗುತ್ತಿರುವುದು ಕೆಲವರಿಗೆ ಕುತೂಹಲ ಮೂಡಿಸಿದರೆ, ಇನ್ನು ಕೆಲವರಿಗೆ ಹಳೆಯ ಗೌತಮ್‌-ಭೂಮಿಕಾ ಕಥೆಯನ್ನೇ ಮುಂದುವರಿಸಬೇಕಿತ್ತು ಎನ್ನುವ ಅಭಿಪ್ರಾಯ ಇತ್ತು. ಇದೀಗ ಗೌತಮ್‌ ಕೂಡ ಮನೆಗೆ ಬಂದಿದ್ದಾನೆ. ಭೂಮಿಕಾ ಕೂಡ ಹುಷಾರಾಗಿದ್ದಾಳೆ. ಕುತಂತ್ರಿಗಳ ಬಣ್ಣ ಕೂಡ ಬಯಲಾಗಿದೆ. ಇನ್ನು ದೀಪಿಕಾ ಅಮ್ಮನ ಮಡಿಲು ಸೇರಿದ್ರೆ ಆಯ್ತು. ಹೀಗಾಗಿ ವೀಕ್ಷಕರು ಸೀರಿಯಲ್‌ ಆದಷ್ಟು ಬೇಗ ಎಂಡ್‌ ಆಗಲಿದೆ ಅಂತ ಹೇಳ್ತಿದ್ದಾರೆ. ಆದ್ರೆ ಈ ಬಗ್ಗೆ ಸೀರಿಯಲ್‌ ಟೀಂ ಆಗ್ಲಿ, ವಾಹಿನಿ ಆಗ್ಲಿ ಯಾವುದೇ ಅಪ್‌ಡೇಟ್‌ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಪ್‌ಡೇಟ್‌ ಸಿಗುತ್ತಾ ಅಂತ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *