ENG ಬೌಲರ್ಸ್ ಅಟ್ಟಾಡಿಸಿದ ಲಂಕಾ – 430 ರನ್ಸ್ ಟಾರ್ಗೆಟ್ ಗೆದ್ದು ಚರಿತ್ರೆ
PAKನಲ್ಲಿ ಬ್ಯಾಟರ್ ಗಳ ದರ್ಬಾರ್

ENG ಬೌಲರ್ಸ್ ಅಟ್ಟಾಡಿಸಿದ ಲಂಕಾ – 430 ರನ್ಸ್ ಟಾರ್ಗೆಟ್ ಗೆದ್ದು ಚರಿತ್ರೆPAKನಲ್ಲಿ ಬ್ಯಾಟರ್ ಗಳ ದರ್ಬಾರ್

2027ರ ಏಕದಿನ ವಿಶ್ವಕಪ್​ಗೆ ಆಲ್ರೆಡಿ ಎಲ್ಲಾ ತಂಡಗಳು ಭರ್ಜರಿಯಾಗೇ ಪ್ರಿಪರೇಷನ್ಸ್ ನಡೆಸ್ತಿದ್ದಾರೆ. ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳ ನಡುವೆ ಪಾಕಿಸ್ತಾನದಲ್ಲಿ ಅಕ್ಟೋಬರ್ 18 ರಿಂದ 31ರವರೆಗೆ ತ್ರಿಕೋನ ಏಕದಿನ ಸರಣಿ ನಡೀತಿದೆ. ಇದೇ ಸರಣಿಯಲ್ಲೇ ಇಂಗ್ಲೆಂಡ್ ಮತ್ತು ಲಂಕಾ ನಡುವಿನ ಪಂದ್ಯ ಹೊಸ ಇತಿಹಾಸ ಬರೆದಿದೆ. ಬ್ಯಾಟರ್​ಗಳ ಅಬ್ಬರದ ಮುಂದೆ ಬೌಲರ್ಸ್ ಥಂಡಾ ಹೊಡೆದಿದ್ದಾರೆ.

ಇದನ್ನೂ ಓದಿ : ಸೂರ್ಯವಂಶಿ ಟೈಮ್ ವೇಸ್ಟ್ ಯಾಕೆ? – ವೈಭವ್‌ಗೆ ಬೆಂಚ್ ಕಾಯೋ ಶಿಕ್ಷೆ!

ಕ್ರಿಕೆಟ್​ನಲ್ಲಿ ಮೊದ್ಲೆಲ್ಲಾ ಬ್ಯಾಟರ್​ಗಳು ಅರ್ಧಶತಕ, ಶತಕ ಹೊಡೆದ್ರು ಅಂದ್ರೆ ಅದೇ ಗ್ರೇಟ್ ಅನ್ನಿಸ್ತಿತ್ತು. ಯಾಕಂದ್ರೆ ಬೌಲರ್ಸ್ ಆ ಮಟ್ಟಿಗೆ ಡಾಮಿನೇಟ್ ಮಾಡಿ ಕಂಟ್ರೋಲ್ ಮಾಡ್ತಿದ್ರು. ಆದ್ರೆ ಈಗ ಡಬಲ್ ಸೆಂಚುರಿ ಕೂಡ ಕಾಮನ್ ಆಗೋಗಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ಬ್ಯಾಟರ್​ಗಳು ಇತಿಹಾಸವನ್ನೇ ಸೃಷ್ಟಿಸಿದ್ದಾರೆ.

430 ರನ್ಸ್ ಟಾರ್ಗೆಟ್ ಚೇಸ್ ಮಾಡಿ ಲಂಕಾ ಇತಿಹಾಸ!

ಏಕದಿನ ಮಾದರಿ ಕ್ರಿಕೆಟ್ ಅಂತಾ ಬಂದಾಗ 300+ ರನ್ಸ್ ಅಂದಾಗ್ಲೇ ಬಿಗ್ ಟಾರ್ಗೆಟ್ ಅನ್ನೋ ರೀತಿ ಇರುತ್ತೆ. ಯಾಕಂದ್ರೆ ಇಲ್ಲಿ ರನ್ಸ್ ಚೇಸ್ ಮಾಡೋದಕ್ಕಿಂತ ಜಾಸ್ತಿ ವಿಕೆಟ್ ಉಳಿಸಿಕೊಳ್ಳೋದೇ ಅತಿದೊಡ್ಡ ಟಾಸ್ಕ್ ಆಗಿರುತ್ತೆ. ಆದ್ರೆ ಇಂಗ್ಲೆಂಡ್ ಮತ್ತು ಲಂಕಾ ನಡುವಿನ ಮ್ಯಾಚಲ್ಲಿ 430 ರನ್​​ಗಳ ಟಾರ್ಗೆಟ್ ಸೆಟ್ ಮಾಡಿದ್ರೂ ಸೇಫ್ ಇಲ್ಲ ಅನ್ನೋದು ಪ್ರೂವ್ ಆಗಿದೆ. ಪಾಕಿಸ್ತಾನ, ಇಂಗ್ಲೆಂಡ್ ಹಾಗೇ ಶ್ರೀಲಂಕಾ ನಡುವೆ ತ್ರಿಕೋನ ಏಕದಿನ ಸರಣಿ ನಡೀತಿದ್ದು ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದೆ. ಮೂರನೇ ಪಂದ್ಯ ಗುರುವಾರ ರಾವಲ್ಪಿಂಡಿಯಲ್ಲಿ ಇಂಗ್ಲೆಂಡ್ ಮತ್ತು ಲಂಕಾ ನಡುವೆ ನಡೆದಿದ್ದು ಈ ಪಂದ್ಯದಲ್ಲಿ ಶ್ರೀಲಂಕಾ ಗೆದ್ದು ಬೀಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಪಂದ್ಯದಲ್ಲಿ ಹೈಯೆಸ್ಟ್ ಟಾರ್ಗೆಟ್ ಚೇಸ್ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ. ಲಾಸ್ಟ್ ಓವರ್​ವರೆಗೂ ಯಾರ್ ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ನಡುವೆ ಕೊನೆಗೂ ಲಂಕನ್ನರೇ ಜಯಭೇರಿ ಬಾರಿಸಿದ್ದಾರೆ.

ಹ್ಯಾರಿ ಬ್ರೂಕ್ ಡಬಲ್ ಸೆಂಚುರಿ.. ಗೆಲುವಿನ ಆಸೆಯಲ್ಲಿದ್ದ ಆಂಗ್ಲರು!

ಅಂತಾರಾಷ್ಟ್ರೀಯ ಏಕದಿನ ಮಾದರಿ ಕ್ರಿಕೆಟ್​​ನಲ್ಲಿ 2006 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 435 ರನ್‌ಗಳ ಗುರಿಯನ್ನು ಬೆನ್ನಟ್ಟಿ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಇದುವರೆಗಿನ ಹೈಯೆಸ್ಟ್ ಟಾರ್ಗೆಟ್ ಚೇಸ್ ಆಗಿದೆ. ಇದೀಗ ಇಂಗ್ಲೆಂಡ್ ವಿರುದ್ಧ 430 ರನ್‌ಗಳನ್ನು ಬೆನ್ನಟ್ಟಿರುವ ಶ್ರೀಲಂಕಾ ಎರಡನೇ ಹೈಯೆಸ್ಟ್ ಚೇಸ್ ಅನ್ನೋ ದಾಖಲೆ ನಿರ್ಮಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಟಾಮ್ 50, ಜೋ ರೂಟ್ 69 ರನ್ಸ್ ಬಾರಿಸಿದ್ರೆ ಹ್ಯಾರಿ ಬ್ರೂಕ್ ಡಬಲ್ ಸೆಂಚುರಿ ಬಾರಿಸಿದ್ರು. ಇನ್ನು ವಿಲ್ ಜಾಕ್ಸ್ 30 ಬಾಲಲ್ಲೇ 66 ರನ್ಸ್ ಬಾರಿಸಿದ್ರು. ಹೀಗಾಗಿ ಫಸ್ಟ್ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ 429 ರನ್​ಗಳನ್ನ ಕಲೆ ಹಾಕಿ ನಾವು ಮ್ಯಾಚ್ ಗೆದ್ದೇಬಿಟ್ವಿ ಅನ್ನೋ ಜೋಶ್​ನಲ್ಲಿದ್ರು. ಡ್ರೆಸ್ಸಿಂಗ್ ರೂಮ್ ಪೂರ್ತಿ ಫುಲ್ ಖುಷಿ. ಇತ್ತ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾಗೆ ಆರಂಭದಲ್ಲೇ ಆಘಾತ. ಕಮಿಂಡು ಮೆಂಡಿಸ್ 16ಕ್ಕೆ ಔಟ್ ಆದ್ರೆ ಕುಸಾಲ್ ಮೆಂಡಿಸ್ ಖಾತೆಯನ್ನೂ ತೆರೀಲಿಲ್ಲ. 24ಕ್ಕೆ 2 ವಿಕೆಟ್ ಕಳ್ಕೊಂಡ ಲಂಕಾ ಪರ ಆವಿಷ್ಕ ಫರ್ನಾಂಡೋ 97 ರನ್ಸ್ ಕಲೆ ಹಾಕಿದ್ರೆ ಪವನ್ ರತ್ನಾಯಕೆ 130 ರನ್ಸ್ ಬಾರಿಸಿದ್ರು. ಜನಿತ್ ಲಿಯಾನಗೆ 27 ಬಾಲಲ್ಲಿ 61 ರನ್ಸ್ ಕಲೆ ಹಾಕಿ ಇನ್ನೂ ಒಂದು ಬಾಲ್ ಬಾಕಿ ಇದ್ದಂತೆಯೇ ಮ್ಯಾಚ್ ಫಿನಿಶ್ ಮಾಡಿದ್ರು. ಅಲ್ಲಿಗೆ ಲಂಕಾ ಪ್ಲೇಯರ್ಸ್ ಇತಿಹಾಸ ನಿರ್ಮಿಸಿದ್ರು. ಬಿಗ್ ಟಾರ್ಗೆಟ್ ಸೆಟ್ ಮಾಡಿ ಗೆದ್ದೇ ಬಿಡ್ತೀವಿ ಅನ್ಕೊಳ್ತಿದ್ದ ಇಂಗ್ಲೆಂಡ್​ಗೆ ಸೋಲೊಪ್ಪಿಕೊಳ್ದೇ ದಾರಿಯೇ ಇರಲಿಲ್ಲ. ಆದ್ರೆ ಇಲ್ಲಿ ಒಂದನ್ನ ಅರ್ಥ ಮಾಡಿಕೊಳ್ಬೇಕು. ಟಿ-20ಐನಲ್ಲಿ ಮಾತ್ರ 200+ ರನ್ಸ್ ಬರ್ತಿದ್ರೆ ಅನ್ಕೊಂಡ್ರೆ ಏಕದಿನ ಮಾದರಿಯಲ್ಲೂ ಬ್ಯಾಟರ್ಸ್ ಆರ್ಭಟ ಜಾಸ್ತಿಯಾಗಿದೆ. ಇತ್ತಿಚೆಗೆ ವಿಂಡೀಸ್ ವಿರುದ್ಧ ಬಾರತ 406 ರನ್​ಗಳ ಟಾರ್ಗೆಟ್ ಚೇಸ್ ಮಾಡಿ ಗೆದ್ದಿತ್ತು. ಈಗ ಲಂಕಾ ಕೂಡ 430ರನ್ಸ್ ಚೇಸ್ ಮಾಡಿದೆ. ಬೌಲರ್ಸ್ ಡಲ್ ಅನ್ಸೋಕೆ ಶುರುವಾಗಿದೆ. ಹೀಗಾಗಿ 2027ರ ಏಕದಿನ ವಿಶ್ವಕಪ್​ನಲ್ಲೂ ಬ್ಯಾಟರ್​ಗಳದ್ದೇ ಹವಾ ಇರೋದ್ರಲ್ಲಿ ಡೌಟೇ ಇಲ್ಲ.

Shantha Kumari

Leave a Reply

Your email address will not be published. Required fields are marked *