ಬೌಲಿಂಗ್ MAGIC.. ಬ್ಯಾಟಿಂಗ್ FIRE! – ಭಾರತಕ್ಕೆ ಸಿಕ್ಕ ಬೆಸ್ಟ್ ಆಲ್ ರೌಂಡರ್
ಹಾರ್ದಿಕ್ SLOT ನಮನ್ ಗೆ ಫಿಕ್ಸ್?

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20ಐನಲ್ಲಿ ದಾಖಲೆಯ ರನ್ಸ್ ಚೇಸ್ ಮಾಡಿ ಭಾರತ ಇತಿಹಾಸ ಬರೆದಿದೆ. ಸರಣಿಯಲ್ಲಿ 1-0 ಅಂತರದ ಲೀಡ್ ಸಾಧಿಸೋ ಮೂಲಕ ಅಡ್ವಾಂಟೇಜ್ ಕೂಡ ಪಡೆದಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಹಲ್ಚಲ್ ಎಬ್ಬಿಸಿದ್ದು ನಮನ್ ಧೀರ್. ಭಾರತಕ್ಕೆ ಸಿಕ್ಕಿರೋ ಹೊಸ ಗೇಮ್ಚೇಂಜರ್ ಆಲ್ರೌಂಡರ್ ಆಗಿ ನಮನ್ ಧೀರ್ ಸದ್ದು ಮಾಡ್ತಿದ್ದಾರೆ.
ಇದನ್ನೂ ಓದಿ : ಕಾಂಗರೂಗಳ ತವರಿನಲ್ಲಿ ಹರಿಣಗಳ ಅಬ್ಬರ – ಆಸೀಸ್ ವಿರುದ್ಧ 2ನೇ ಟೆಸ್ಟ್ ಗೆದ್ದ ದಕ್ಷಿಣ ಆಫ್ರಿಕಾ
ಕಿವೀಸ್ ವಿರುದ್ಧ ಮೊದಲ ಮ್ಯಾಚಲ್ಲಿ 226 ರನ್ಗಳ ಬಿಗ್ ಟಾರ್ಗೆಟ್ನ ಚೇಸ್ ಮಾಡಿ ಭಾರತ ಪಂದ್ಯವನ್ನ ಗೆದ್ದಿದೆ. ಆದ್ರೆ ಈ ಮ್ಯಾಚ್ ಗೆಲ್ಲೋದು ಈಸಿ ಇರ್ಲಿಲ್ಲ. ಕೊನೆಯ ಓವರ್ವರೆಗೂ ಪಂದ್ಯ ಏನ್ ಬೇಕಾದ್ರೂ ಆಗ್ಬೋದಿತ್ತು. ಇಂಥಾ ಟೈಮಲ್ಲಿ ಭಾರತದ ಪರ ಫಿಯರ್ಲೆಸ್ ಆಗಿ ನಿಂತು ಪಂದ್ಯ ಗೆಲ್ಲಿಸಿದ್ದೇ ನಮನ್ ಧೀರ್. ಸಾಕಷ್ಟು ಸರಣಿಗಳಿಂದ ಭಾರತಕ್ಕೆ ಇಂಥಾ ರೆಸ್ಪಾನ್ಸಿಬಲ್ ಆಲ್ರೌಂಡರ್ ಕೊರತೆ ಎದ್ದು ಕಾಣ್ತಾ ಇತ್ತು. ಆದ್ರೆ ಟೀಂ ಇಂಡಿಯಾ ಟಿ-20ಐ ತಂಡಕ್ಕೆ ಕಾಲಿಟ್ಟು 2 ವಾರಗಳಲ್ಲೇ ಮ್ಯಾಚ್ ವಿನ್ನರ್ ಆಗಿ ಕಾಣ್ತಿದ್ದಾರೆ.
ಅಕ್ಟೋಬರ್ 6ರಂದು ಟಿ-20ಐ ತಂಡಕ್ಕೆ ಪದಾರ್ಪಣೆ!
ನಮನ್ ಧೀರ್ ಭಾರತ ಟಿ-20ಐ ತಂಡಕ್ಕೆ ಕಾಲಿಟ್ಟು ಕೆಲವೇ ದಿನಗಳಲ್ಲಿ ಇಂಪ್ಯಾಕ್ಟ್ ಮಾಡಿದ್ದಾರೆ. ಅಕ್ಟೋಬರ್ 6 ಲಕ್ನೋದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ-20ಐ ಪಂದ್ಯದ ಮೂಲಕ ಅವರು ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್ಗೆ ಡೆಬ್ಯೂ ಮಾಡಿದ್ರು. ತಮ್ಮ ಮೊದಲ ಪಂದ್ಯದಲ್ಲೇ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಮನ್ ಧೀರ್, 4 ಓವರ್ಗಳಲ್ಲಿ 31 ರನ್ ನೀಡಿ 3 ಪ್ರಮುಖ ವಿಕೆಟ್ ಬೇಟೆಯಾಡಿದ್ರು. ಌಂಡ್ ಬ್ಯಾಟಿಂಗ್ನಲ್ಲೂ ಕೂಡ ಇಂಪ್ಯಾಕ್ಟ್ ಮಾಡಬಲ್ಲೇ ಅನ್ನೋದನ್ನ ತೋರಿಸ್ತಿದ್ದಾರೆ. ಕಿವೀಸ್ ವಿರುದ್ಧ ಮೊದಲ ಮ್ಯಾಚಲ್ಲಿ 42 ರನ್ಗಳ ಇನ್ನಿಂಗ್ಸ್ ಆಡಿದ್ರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಕೊನೇ ಮ್ಯಾಚಲ್ಲಿ ಬೆಂಗಳೂರಲ್ಲೂ ಕೂಡ ನಮನ್ ಧೀರ್ ಬ್ಯಾಟಿಂಗ್ ಸೌಂಡ್ ಮಾಡಿತ್ತು. ಮಳೆ ಬಂದು 9 ಓವರ್ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ 6 ಬಾಲ್ಗಳಲ್ಲೇ 24 ರನ್ಸ್ ಸಿಡಿಸಿದ್ರು. ಬಟ್ ಈ ಟೈಮಲ್ಲೇ ಮಳೆ ಬಂದು ಮ್ಯಾಚ್ ಕ್ಯಾನ್ಸಲ್ ಆಗಿತ್ತು. ಈಗ ನ್ಯೂಜಿಲೆಂಡ್ನಲ್ಲಿ ತಮ್ಮ ಬ್ಯಾಟಿಂಗ್ ಕರಾಮತ್ತು ತೋರಿಸಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ಭಾರತಕ್ಕೆ ಹಾರ್ದಿಕ್ ಪಾಂಡ್ಯ ಬಳಿಕ ಇಂಥಾ ಒಬ್ಬ ರೆಸ್ಪಾನ್ಸಿಬಲ್ ಆಲ್ರೌಂಡರ್ನ ಅವಶ್ಯಕತೆ ಎದ್ದು ಕಾಣ್ತಿತ್ತು.
ಹಾರ್ದಿಕ್ ಜಾಗಕ್ಕೆ ನಮನ್ ರೆಡಿ ಮಾಡಬಹುದು ಎಂದ ಗವಾಸ್ಕರ್!
ಭಾರತ ಟಿ-20ಐ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಸ್ಟಾರ್ ಆಲ್ರೌಂಡರ್. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡ್ತಾರೆ. ಆದ್ರೆ ಐಪಿಎಲ್ ಬಳಿಕ ಇಂಜುರಿ ಕಾರಣಕ್ಕೆ ಒಂದೇ ಒಂದು ಪಂದ್ಯ ಆಡಿಲ್ಲ. ಈ ವರ್ಷ ಆಡೋದೂ ಡೌಟ್ ಇದೆ. ಸೋ ಇಂಥಾ ಟೈಮಲ್ಲಿ ಹಾರ್ದಿಕ್ ಜಾಗಕ್ಕೆ ನಮನ್ ಧೀರ್ ಸೂಟ್ ಆಗಬಹುದು ಅನ್ನೋ ಅಭಿಪ್ರಾಯಗಳು ಕೇಳಿ ಬರ್ತಿವೆ. ಸುನಿಲ್ ಗವಾಸ್ಕರ್ ಕೂಡ ಹಾರ್ದಿಕ್ ಪಾಂಡ್ಯ ಅವರ ಸಾಮರ್ಥ್ಯಕ್ಕೆ ಸರಿಸಮಾನವಾದ ಆಟಗಾರನನ್ನು ಹುಡುಕುವುದಕ್ಕಿಂತ, ತಂಡಕ್ಕೆ ಬೇಕಾದ ವಿಭಿನ್ನ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲ ಆಟಗಾರರನ್ನು ಬೆಳೆಸಬೇಕು. ನಮನ್ ಧೀರ್ ಬ್ಯಾಟಿಂಗ್ ಜೊತೆಗೆ ಕೆಲವು ಓವರ್ಗಳನ್ನು ಬೌಲ್ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರ ಎಂದಿದ್ರು. ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಜೊತೆಗೆ ವೇಗದ ಬೌಲಿಂಗ್ನಲ್ಲಿ ಪ್ರಮುಖ ಆಯ್ಕೆ ಆಗಿದ್ದಾರೆ. ಌಂಡ್ ಡೆತ್ ಓವರ್ಗಳಲ್ಲೂ ಬೌಲಿಂಗ್ ಮಾಡುವ ಸಾಮರ್ಥ್ಯ ಇದೆ. ಪಾಂಡ್ಯ ತಂಡದಲ್ಲಿ ಇದ್ದಾಗ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡ ಬ್ಯಾಲೆನ್ಸ್ ಆಗುತ್ತೆ. ಹಾಗೇ ನಮನ್ ಧೀರ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಇದೆ. ಅಗತ್ಯಕ್ಕೆ ತಕ್ಕಂತೆ ಎರಡು ಅಥವಾ ಮೂರು ಓವರ್ಗಳನ್ನು ಬೌಲ್ ಮಾಡಿಸಬಹುದು. ಹಾಗೇ ಬ್ಯಾಟಿಂಗ್ ಡೆಪ್ತ್ ಕೂಡ ಜಾಸ್ತಿಯಾಗುತ್ತೆ. ಒಟ್ನಲ್ಲಿ ಭಾರತದ ಪರ ಆಡಿರುವಂಥ ಕೆಲವೇ ಪಂದ್ಯಗಳಲ್ಲಿ ನಮನ್ ಧೀರ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮ್ಯಾಚ್-ವಿನ್ನಿಂಗ್ ಪ್ರದರ್ಶನ ನೀಡಿ ಟಿ-20 ತಂಡದ ಪ್ರಮುಖ ಆಲ್-ರೌಂಡರ್ ಆಗಿ ಕಾಣಿಸಿಕೊಳ್ತಿದ್ದಾರೆ. ಌಂಡ್ ಈ ಸರಣಿಯುದ್ದಕ್ಕೂ ಮ್ಯಾನೇಜ್ಮೆಂಟ್ ಅವ್ರ ಮೇಲೆ ಕಣ್ಣಿಡಲಿದೆ.

ನೋಡಿರಿ

