ರಣಜಿಯಲ್ಲಿ ಡ್ರಾ.. ಕರ್ನಾಟಕಕ್ಕೆ ಕಷ್ಟ IPLನಲ್ಲಿ ಮಾತ್ರ ಆಡೋದಾ ಪಾಂಡ್ಯ?
ವಿಶ್ವಕಪ್.. RO-KOಗೆ ಗ್ರೀನ್ ಸಿಗ್ನಲ್

ರಣಜಿಯಲ್ಲಿ ಡ್ರಾ.. ಕರ್ನಾಟಕಕ್ಕೆ ಕಷ್ಟ IPLನಲ್ಲಿ ಮಾತ್ರ ಆಡೋದಾ ಪಾಂಡ್ಯ?ವಿಶ್ವಕಪ್.. RO-KOಗೆ ಗ್ರೀನ್ ಸಿಗ್ನಲ್

ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕರೂ ವೈಭವ್ ಸೂರ್ಯವಂಶಿಗೆ ಆಡುವ ಅವಕಾಶ ಮಾತ್ರ ಸಿಗುತ್ತಿಲ್ಲ! ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ವೈ ಪ್ಲೇಯಿಂಗ್ 11 ಅವಕಾಶ ಸಿಕ್ಕಿಲ್ಲ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಮುಂದುವರಿಯಲಿದ್ದಾರೆ. ವೈಭವ್ ನಿರಂತರವಾಗಿ ಬೆಂಚ್ ಕಾಯುತ್ತಿದ್ದು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಾರಾ ಎಂಬ ಚರ್ಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಅಧ್ಯಕ್ಷ ಮಿಥುನ್ ಮನ್ಹಾಸ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.   ಆಟಗಾರರ ಆಯ್ಕೆಗೆ ಫಿಟ್ನೆಸ್‌ ಮತ್ತು ಪ್ರದರ್ಶನವೇ ಮಾನದಂಡವಾಗಬೇಕು. ಖಂಡಿತವಾಗಿಯೂ ವಯಸ್ಸಲ್ಲ ಎಂದಿದ್ದಾರೆ.ಹೀಗಾಗಿ ಉತ್ತಮ ಫಾರ್ಮ್‌ನಲ್ಲಿರೋ ರೋ-ಕೋ 2027 ವಿಶ್ವಕಪ್‌ಗೆ ಆಯ್ಕೆ ಆಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ.

ಕ್ರಿಕೆಟ್‌ನಲ್ಲಿ ಅಂಪೈರ್‌ಗಳ ನಿರ್ಧಾರವನ್ನು ಇನ್ನಷ್ಟು ನಿಖರಗೊಳಿಸಲು ಹೊಸ ತಂತ್ರಜ್ಞಾನ ಬರುತ್ತಿದೆ. ಭಾರತ–ನ್ಯೂಜಿಲೆಂಡ್ ಸರಣಿಯಲ್ಲಿ ಮೊದಲ ಬಾರಿಗೆ ‘ಸೋನಿಕ್’ ತಂತ್ರಜ್ಞಾನವನ್ನು ಡಿಆರ್‌ಎಸ್ ವ್ಯವಸ್ಥೆಯಲ್ಲಿ ಬಳಸಲಾಗಿದೆ. ಬ್ಯಾಟ್ ಮತ್ತು ಚೆಂಡಿನ ಸಂಪರ್ಕದ ಬಗ್ಗೆ ಪರಿಶೀಲಿಸುವಾಗ ಧ್ವನಿ ವಿಶ್ಲೇಷಣೆಯ ಮೂಲಕ ಮೂರನೇ ಅಂಪೈರ್‌ಗೆ ಇದು ನೆರವಾಗಲಿದೆ. ತಂತ್ರಜ್ಞಾನದ ಈ ಹೊಸ ಪ್ರಯೋಗ ತೀರ್ಪುಗಳ ನಿಖರತೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಜನವರಿ 2027 ರಲ್ಲಿ ಭಾರತದ ಹೈದರಾಬಾದ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಇಂಟರ್ನ್ಯಾಷನಲ್ ಮಾಸ್ಟರ್ಸ್ ಕ್ರಿಕೆಟ್ ವಿಶ್ವಕಪ್  ಟೂರ್ನಿಯಲ್ಲಿ ಭಾಗವಹಿಸಲು ಪಾಕ್ ತಂಡಕ್ಕೆ  ಪಾಕಿಸ್ತಾನ್ ಕ್ರಿಕೆಟ್ ಮಂಡಳಿ  ಅನುಮತಿ ನಿರಾಕರಿಸಿದೆ. ರಾಜತಾಂತ್ರಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದಾಗಿ, ಪಾಕಿಸ್ತಾನದ 50 ವರ್ಷದ ಮೇಲ್ಪಟ್ಟ ತಂಡವು ತನ್ನ ಚಾಂಪಿಯನ್ ಪಟ್ಟವನ್ನು ರಕ್ಷಿಸಿಕೊಳ್ಳುವ ಸುವರ್ಣ ಅವಕಾಶವನ್ನು ಕಳೆದುಕೊಂಡಂತಾಗಿದೆ

ಹಾರ್ದಿಕ್ ಪಾಂಡ್ಯ ಅವರ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಅವರು ಐಪಿಎಲ್ 2027ರವರೆಗೆ ಯಾವುದೇ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದು ಅನುಮಾನ ಎಂಬ ಆತಂಕಕಾರಿ ವರದಿಗಳು ಹೊರಬಿದ್ದಿವೆ. ಈ ಹಿನ್ನಡೆಯಿಂದಾಗಿ, ಮುಂಬರುವ ಟೀಮ್ ಇಂಡಿಯಾದ ಪ್ರಮುಖ ಸೀಮಿತ ಓವರ್‌ಗಳ ಸರಣಿಗಳಿಂದ ಪಾಂಡ್ಯ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಭಾರತದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್-ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ತಂಡದ ಆಡಳಿತ ಮಂಡಳಿಯಲ್ಲಿ ಸಂಪೂರ್ಣ ಬದಲಾವಣೆ ಮಾಡಿದಂತಾಗಿದೆ. ಕೋಚಿಂಗ್ ತಂಡದಲ್ಲಿ ಸೌರವ್ ಗಂಗೂಲಿ, ಯುವರಾಜ್ ಸಿಂಗ್ ಮತ್ತು ಚಾಮಿಂಡಾ ವಾಸ್ ಅವರೊಂದಿಗೆ ಇದೀಗ ಅಮಿತ್ ಮಿಶ್ರಾ ಕೂಡ ಸೇರಿಕೊಳ್ಳಲಿದ್ದಾರೆ

ಇದನ್ನೂ ಓದಿ: ಶ್ರೇಯಸ್ ಗೆ ಈಗ REAL ಸವಾಲ್! – ಬಲಿಷ್ಠ NZ ಬೇಟೆಯಾಡಿದ್ರಷ್ಟೇ ಭವಿಷ್ಯ

ರಣಜಿ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಕರ್ನಾಟಕ ಸತತ 2ನೇ ಪಂದ್ಯದಲ್ಲೂ ಡ್ರಾಗೆ ತೃಪ್ತಿಪಟ್ಟಿದೆ. ಈ ಪಂದ್ಯದಿಂದ 1 ಅಂಕ ಪಡೆದ ರಾಜ್ಯ ತಂಡವು ‘ಬಿ’ ಗುಂಪಿನಲ್ಲಿ 6ನೇ ಸ್ಥಾನದಲ್ಲಿದ್ದು, ಮುಂದಿನ ಹಂತಕ್ಕೇರಲು 4 ಗೆಲುವಿನ ಅಗತ್ಯವಿದೆ. ಮುಂಬೈ, ತಮಿಳುನಾಡು ಮತ್ತು ಕೇರಳ ತಂಡಗಳು ತಮ್ಮ ಪಂದ್ಯಗಳಲ್ಲಿ ಇನ್ನಿಂಗ್ಸ್ ಜಯ ಸಾಧಿಸಿವೆ.

ರಣಜಿ ಟ್ರೋಫಿಯಲ್ಲಿ ಕೇರಳ ತಂಡದ ಅನುಭವಿ ಆಲ್‌ರೌಂಡರ್ ಜಲಜ್ ಸಕ್ಸೇನಾ ಎದುರಾಳಿ ಒಡಿಶಾ ತಂಡಕ್ಕೆ ಸಿಂಹಸ್ವಪ್ನವಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 34 ರನ್ ನೀಡಿ 5 ವಿಕೆಟ್ ಕಬಳಿಸಿದ ಅವರು, ಕೇರಳಕ್ಕೆ ಇನ್ನಿಂಗ್ಸ್ ಮತ್ತು 36 ರನ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು. ಏಳು ಮೇಡನ್ ಓವರ್‌ಗಳನ್ನು ಎಸೆದ ಜಲಜ್, ತಮ್ಮ ಅನುಭವದ ಮೂಲಕ ಪಂದ್ಯವನ್ನೇ ತಿರುಗಿಸಿದರು. ದೇಶೀಯ ಕ್ರಿಕೆಟ್‌ನಲ್ಲಿ ಇವರ ಪ್ರದರ್ಶನ ಈಗ ಗಮನ ಸೆಳೆಯುತ್ತಿದೆ.

ರಣಜಿಯಲ್ಲಿ ಮಹಾರಾಷ್ಟ್ರ ವಿರುದ್ಧ ಸೋಲಿನ ಸುಳಿಗೆ ಸಿಲುಕಿದ್ದ ಜಾರ್ಖಂಡ್ ತಂಡವನ್ನು ಶಿಖರ್ ಮೋಹನ್ ತಮ್ಮ ಬ್ಯಾಟಿಂಗ್ ಮೂಲಕ ರಕ್ಷಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 127 ರನ್ ಗಳಿಸಿದ ಅವರು, ತಂಡಕ್ಕೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾದರು. ಎದುರಾಳಿ ತಂಡ ಗೆಲುವಿನತ್ತ ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ಶಿಖರ್ ತೋರಿದ ತಾಳ್ಮೆ ನಿರ್ಣಾಯಕವಾಯಿತು.

ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನ ಬೆಂಡೆತ್ತಿದ್ದಾರೆ. ದಕ್ಷಿಣ ಆಫ್ರಿಕಾ ನೀಡಿದ 425 ರನ್​ಗಳ ಬೃಹತ್ ಮೊತ್ತವನ್ನ ಬೆನ್ನಟ್ಟಿದ ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗ ಹರಿಣಗಳ ಬೌಲರ್​ಗಳ ದಾಳಿಗೆ ಧೂಳೀಪಟವಾಯಿತು. 4ನೇ ದಿನ ಆಸ್ಟ್ರೇಲಿಯಾ ತಂಡ ಕೇವಲ 99 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ, ‘ಫಾಲೋ-ಆನ್’ ಹೇರಿದ್ದು, ಸೋಲಿನ ಭಯದಲ್ಲಿ ಆಸ್ಟ್ರೇಲಿಯಾವಿದೆ.

 

 

 

Kishor KV

Leave a Reply

Your email address will not be published. Required fields are marked *