ಶ್ರೇಯಸ್ ಗೆ ಈಗ REAL ಸವಾಲ್! – ಬಲಿಷ್ಠ NZ ಬೇಟೆಯಾಡಿದ್ರಷ್ಟೇ ಭವಿಷ್ಯ
ಕ್ಯಾಪ್ಟನ್ಸಿ ಜೊತೆ ಬ್ಯಾಟಿಂಗ್ ಭಾರನಾ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ-20ಐ ಸರಣಿ ಸ್ಟಾರ್ಟ್ ಆಗಿದೆ. ಈ ಸರಣಿ ಬರೀ ಟೀಂ ಇಂಡಿಯಾಗಷ್ಟೇ ಅಲ್ಲ ಶ್ರೇಯಸ್ ಅಯ್ಯರ್ ಪಾಲಿಗೂ ನಿರ್ಣಾಯಕ. ಅವರ ಬ್ಯಾಟಿಂಗ್ ಫಾರ್ಮ್ ಜೊತೆಗೆ ನಾಯಕತ್ವದ ಸಾಮರ್ಥ್ಯಕ್ಕೂ ಅಗ್ನಿಪರೀಕ್ಷೆಯಾಗಲಿದೆ. ಆರಂಭದಲ್ಲೇ ವಿದೇಶಿ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಆಗಿ ಭಾರತದಲ್ಲೂ ಸ್ಟ್ರಗಲ್ ಪಡ್ತಿರೋ ಶ್ರೇಯಸ್ ಕಿವೀಸ್ ನಾಡಿನಲ್ಲಿ ಗೆದ್ದು ಬೀಗಲೇಬೇಕು.
ಇದನ್ನೂ ಓದಿ : ವೈಭವ್ನ DROP ಮಾಡುತ್ತಾ BCCI? – ರಾಜಸ್ಥಾನ್ಗೆ ಪಾಂಡ್ಯ, ಮುಂಬೈಗೆ ಜೈಸ್ವಾಲ್
2026ರ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗ್ತಾರೆ. ಆದ್ರೆ ಆ ನಂತ್ರದಲ್ಲಿ ತಂಡದ ಪರ್ಫಾಮೆನ್ಸ್ ಸಾಕಷ್ಟು ಏರಿಳಿತಗಳನ್ನ ಕಂಡಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಆಗಿದ್ದರಿಂದ ಅವ್ರ ನಾಯಕತ್ವದ ಮೇಲೆ ಸಾಕಷ್ಟು ಪ್ರೆಶರ್ ಕೂಡ ಇದೆ. ಆದ್ರೆ ಕಿವೀಸ್ ನೆಲದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಮ್ಮ ನಾಯಕತ್ವದ ಕ್ರೆಡಿಬಿಲಿಟಿಯನ್ನು ಜಾಸ್ತಿ ಮಾಡಿಕೊಳ್ಳೋಕೆ ಇದು ಬೆಸ್ಟ್ ಆಪರ್ಚುನಿಟಿ. ಌಂಡ್ ಇಲ್ಲಿ ಶ್ರೇಯಸ್ ಟಿ-20ಐ ಸರಣಿ ಆದ್ಮೇಲೆ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಿಗೂ ಅವರು ನಾಯಕನಾಗಿ ಲೀಡ್ ಮಾಡಬೇಕಿರೋ ಚಾಲೆಂಜ್ ಕೂಡ ಇದೆ.
ಸೂರ್ಯನಂತೆಯೇ ಬ್ಯಾಟಿಂಗ್ ನಲ್ಲಿ ಡಲ್ ಆದ್ರಾ ಶ್ರೇಯಸ್?
ಸೂರ್ಯಕುಮಾರ್ ಯಾದವ್ರನ್ನ ಟಿ-20ಐ ಕ್ಯಾಪ್ಟನ್ಸಿ ಜೊತೆಗೆ ತಂಡದಿಂದ ಕೈಬಿಟ್ಟಿದ್ದೇ ಅವ್ರ ಇಂಡಿವಿಶ್ಯುಯಲ್ ಪರ್ಫಾಮೆನ್ಸ್ ಡಲ್ ಇದೆ ಅನ್ನೋ ಕಾರಣಕ್ಕೆ. ಸದ್ಯ ಶ್ರೇಯಸ್ ಪ್ರದರ್ಶನವನ್ನೂ ಸೂರ್ಯನಿಗೆ ಹೋಲಿಕೆ ಮಾಡಲಾಗ್ತಿದೆ. ಸೂರ್ಯಕುಮಾರ್ ಅವರಿಂದ ಟಿ20ಐ ಜವಾಬ್ದಾರಿ ತಗೊಂಡಾಗಿಂದ ಅಯ್ಯರ್ ನಾಯಕತ್ವ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಇತ್ತೀಚೆಗೆ ಭಾರತದ ನೆಲದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯು 2-2 ಡ್ರಾನಲ್ಲಿ ಮುಗಿದಿತ್ತು. ಆದ್ರೆ ತಂಡದ ಸೋಲು ಗೆಲುವುಗಳ ನಡುವೆ ಮಿಡಲ್ ಆರ್ಡರ್ನಲ್ಲಿ ಶ್ರೇಯಸ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಅಂತಾ ಆಡಿದ್ದು ತೀರಾ ಕಮ್ಮಿ. ನ್ಯೂಜಿಲೆಂಡ್ ಸರಣಿ ಆರಂಭಕ್ಕೂ ಮುನ್ನ ನಾಯಕನಾಗಿ ಭಾರತದ ಪರ 21 ಪಂದ್ಯಗಳಲ್ಲಿ ತಂಡವನ್ನ ಲೀಡ್ ಮಾಡಿದ್ದು 34.7 ರ ಸರಾಸರಿಯಲ್ಲಿ ಮತ್ತು 152.45 ರ ಸ್ಟ್ರೈಕ್ ರೇಟ್ನಲ್ಲಿ 590 ರನ್ ಗಳಿಸಿದ್ದಾರೆ. ವಿಂಡೀಸ್ ವಿರುದ್ಧ ಮೊದಲ ಮ್ಯಾಚಲ್ಲಿ ಸೆಂಚುರಿ ಹೊಡೆದ್ರೂ ಕೂಡ ನಂತ್ರದ ನಾಲ್ಕು ಪಂದ್ಯಗಳಲ್ಲಿ 50 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ ನ್ಯೂಜಿಲೆಂಡ್ನಲ್ಲಿ ಬರೀ ತಂಡವನ್ನಷ್ಟೇ ಗೆಲ್ಲಿಸೋದಲ್ಲ ತಾನೂ ಕೂಡ ಬಿಗ್ ಇನ್ನಿಂಗ್ಸ್ ಮೂಲಕ ಮಿಡಲ್ ಆರ್ಡರ್ ಗೇಮ್ ಚೇಂಜರ್ ಆಗ್ಬೇಕಿದೆ. ಯಾಕಂದ್ರೆ ಕಿವೀಸ್ ವಿರುದ್ಧ ಶ್ರೇಯಸ್ ರೆಕಾರ್ಡ್ಸ್ ಕೂಡ ಚೆನ್ನಾಗಿದೆ.
ನ್ಯೂಜಿಲೆಂಡ್ ವಿರುದ್ಧ ಶ್ರೇಯಸ್ ಬೆಸ್ಟ್ ಪರ್ಫಾಮೆನ್ಸ್!
ನ್ಯೂಜಿಲೆಂಡ್ ವಿರುದ್ಧ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನ ಎಲ್ಲಾ ಮಾದರಿಯಲ್ಲೂ ಬೆಸ್ಟ್ ಅನ್ನೋ ಥರನೇ ಇದೆ. ಕಿವೀಸ್ ಪಡೆಗೆ ವಿರುದ್ಧ ಆಡಿರುವ 28 ಅಂತರರಾಷ್ಟ್ರೀಯ ಪಂದ್ಯಗಳಿಂದ 43.92 ರ ಸರಾಸರಿಯಲ್ಲಿ 1,098 ರನ್ ಗಳಿಸಿದ್ದು, ಇದರಲ್ಲಿ 3 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. 2023ರ ಏಕದಿನ ವಿಶ್ವಕಪ್ ಸೆಮಿಫೈನಲ್ ಕೇವಲ 70 ಎಸೆತಗಳಲ್ಲಿ ಅವರು ಸಿಡಿಸಿದ 105 ರನ್ಗಳ ಬಿರುಸಿನ ಇನ್ನಿಂಗ್ಸ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡ ಕುಸಿದಾಗ ಆಡಿದ 79 ರನ್ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ್ರು. ಇನ್ನು 2021ರಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಕಾನ್ಪುರದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವಾಡಿದ್ದ ಅಯ್ಯರ್, ಮೊದಲ ಇನ್ನಿಂಗ್ಸ್ನಲ್ಲಿ 105 ರನ್ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 65 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಆದ್ರೆ ಟೆಸ್ಟ್ ಮತ್ತು ಏಕದಿನಕ್ಕೆ ಕಂಪೇರ್ ಮಾಡಿದ್ರೆ ಟಿ20 ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಅವ್ರ ಪ್ರದರ್ಶನ ಆವರೇಜ್ ಅನ್ನೋ ಥರ ಇದೆ. 13 ಪಂದ್ಯಗಳ 11 ಇನ್ನಿಂಗ್ಸ್ಗಳಿಂದ 225 ರನ್ಸ್ ಕಲೆ ಹಾಕಿದ್ದಾರೆ. ಇದ್ರಲ್ಲಿ ಬೆಸ್ಟ್ ಸ್ಕೋರ್ ಅಂದ್ರೆ 58. ಸೋ ಈ ಬಾರಿಯ ಸರಣಿಯಲ್ಲಿ ಅವ್ರ ಬ್ಯಾಟಿಂಗ್ ಖದರ್ ಇನ್ನೂ ಇಂಪ್ರೂವ್ ಆಗ್ಬೇಕು. ಅದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಭಾರತ ಸರಣಿ ಗೆಲ್ಲಬೇಕು. ಆಲ್ರೆಡಿ ಟಿ-20ಐ ರ್ಯಾಂಕಿಂಗ್ನಲ್ಲೂ ನಂಬರ್ 1 ಸ್ಥಾನದಿಂದ ಕುಸಿತ ಕಂಡಿರೋದ್ರಿಂದ ಮತ್ತೆ ಟಾಪ್ನಲ್ಲಿ ಇರ್ಬೇಕು ಅಂದ್ರೆ ಈ ಸರಣಿ ಭಾರತಕ್ಕೆ ಕ್ರೂಶಿಯಲ್ ಆಗಲಿದೆ.

ನೋಡಿರಿ

