ಸೂರ್ಯವಂಶಿ ಟೈಮ್ ವೇಸ್ಟ್ ಯಾಕೆ? – ವೈಭವ್‌ಗೆ ಬೆಂಚ್ ಕಾಯೋ ಶಿಕ್ಷೆ!

ಸೂರ್ಯವಂಶಿ ಟೈಮ್ ವೇಸ್ಟ್ ಯಾಕೆ? – ವೈಭವ್‌ಗೆ ಬೆಂಚ್ ಕಾಯೋ ಶಿಕ್ಷೆ!

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲೂ ವೈಭವ್ ಸೂರ್ಯವಂಶಿಗೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಅಂದರೆ, ಐದಕ್ಕೆ ಐದೂ ಪಂದ್ಯಗಳಲ್ಲಿ ವೈಭವ್ ಬೆಂಚ್‌ನಲ್ಲೇ ಉಳಿದರು. ಇಷ್ಟೆಲ್ಲಾ ನಿರೀಕ್ಷೆ ಮೂಡಿಸಿದ್ದ ಆಟಗಾರನಿಗೆ ಒಂದೇ ಒಂದು ಅವಕಾಶವನ್ನೂ ನೀಡದಿರುವುದು ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ವೈಭವ್‌ಗೆ ಯಾಕಿಲ್ಲ ಚಾನ್ಸ್‌?

ಸರಣಿನಡೆದ ಪಂದ್ಯಗಳು – ವೈಭವ್ ಆಡಿದ್ದು       ಆಡದಿದ್ದು
ಐರ್ಲೆಂಡ್ ವಿರುದ್ಧ202
ಇಂಗ್ಲೆಂಡ್ ವಿರುದ್ಧ532
ಜಿಂಬಾಬ್ವೆ ವಿರುದ್ಧ330
ಏಷ್ಯನ್ ಗೇಮ್ಸ್220
ಅಫ್ಘಾನಿಸ್ತಾನ ವಿರುದ್ಧ303
ವೆಸ್ಟ್ ಇಂಡೀಸ್ ವಿರುದ್ಧ505
ಒಟ್ಟು20812

ಈಗ ನಡೆಯುತ್ತಿರೋ ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯ ಹೊರತುಪಡಿಸಿ ಭಾರತ ತಂಡಕ್ಕೆ ಆಯ್ಕೆಯಾದ ಬಳಿಕ 20 ಟಿ20ಐ ಪಂದ್ಯಗಳು ನಡೆದಿದೆ, ಇದ್ರಲ್ಲಿ ಐರ್ಲೆಂಡ್ ವಿರುದ್ಧದ ಎರಡು ಪಂದ್ಯದಲ್ಲಿ ವೈಭವ್ ಆಡಿಲ್ಲ,  ಇಂಗ್ಲೆಂಡ್ ವಿರುದ್ಧದ 5 ಪಂದ್ಯದ ಮ್ಯಾಚ್‌ನಲ್ಲಿ ವೈಭವ್ 3 ಪಂದ್ಯ ಆಡಿದ್ದಾರೆ.  ಜಿಂಬಾಬ್ವೆ ವಿರುದ್ಧ ಮಾತ್ರ ಮೂರಕ್ಕೆ 3 ಪಂದ್ಯ ವೈಭವ್ ಆಡಿದ್ದಾರೆ. ಏಷ್ಯನ್ ಗೇಮ್ಸ್      ನಲ್ಲಿ ಎರಡು ಪಂದ್ಯ ಆಡಿದ್ದಾರೆ. ಆಮೇಲೆ  ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯ ಬೆಂಚ್ ಕಾದಿದ್ರೆ, ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯ ಬೆಂಚ್ ಕಾದಿದ್ದಾರೆ. ಅಂದ್ರೆ 20  ಪಂದ್ಯದಲ್ಲಿ  ವೈಭವ್ ಆಡಿದ್ದು 8 ಪಂದ್ಯಗಳಲ್ಲಿ  ಮಾತ್ರ. 12 ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ಇಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆಯಿದೆ.   ಎಂಟು ಪಂದ್ಯಗಳಲ್ಲಿ 246 ರನ್ ಗಳಿಸಿದ್ದು, 186ಕ್ಕೂ ಅಧಿಕ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಎರಡು ಅರ್ಧ ಶತಕಗಳಿಸಿದ್ದು 81 ಗರಿಷ್ಠ ಸ್ಕೋರ್ ಆಗಿದೆ. ಇದು ಇಂತಹ ಆಟಗಾರನಿಗೆ ಸತತವಾಗಿ ಅವಕಾಶ ನೀಡದೆ ಕಾಯಿಸುವುದು ಸರಿಯಾದ ನಿರ್ಧಾರವೇ? ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ. )

ಆದರೆ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರ ವಾದವೂ ಇದೆ. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಆರಂಭಿಕ ಜೋಡಿಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬುದು ತಂಡದ ನಿಲುವು. ವೈಭವ್‌ಗೆ ಅವರ ಸಮಯ ಬಂದಾಗ ಅವಕಾಶ ಸಿಗಲಿದೆ, ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಬೇಕು ಎಂದು ಶ್ರೇಯಸ್ ಹೇಳಿದ್ದಾರೆ. ಈ ಹೇಳಿಕೆ ಸರಿಯಿದ ಅಂತ ಹೇಳಿದ್ರೂ ವೈಭವ್‌ಗೆ ಅನ್ಯಾಯ ಯಾಕೆ ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಕೇಳಿ ಬರ್ತಿದೆ.

ಹಾಗಾದರೆ ಇಲ್ಲಿ ತಪ್ಪು ಯಾರದ್ದು? ಈಗಾಗಲೇ ಉತ್ತಮ ಪ್ರದರ್ಶನ ನೀಡುತ್ತಿರುವ ಆರಂಭಿಕರನ್ನು ಕೈಬಿಟ್ಟು ವೈಭವ್‌ಗೆ ಅವಕಾಶ ಕೊಡಬೇಕೆಂದು ಹೇಳುವುದೂ ಸುಲಭವಲ್ಲ. ಆದರೆ ತಂಡಕ್ಕೆ ಆಯ್ಕೆ ಮಾಡಿದ ಮೇಲೆ ಆತನ ಪ್ರತಿಭೆಯನ್ನು ಪರೀಕ್ಷಿಸಲು ಸೂಕ್ತ ಸಮಯದಲ್ಲಿ ಅವಕಾಶ ನೀಡುವುದು ಕೂಡ ಮುಖ್ಯ ಅಲ್ಲವೇ?

ಇನ್ನು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಈ ಸರಣಿಯಲ್ಲಾದರೂ ವೈಭವ್‌ಗೆ ಅವಕಾಶ ಸಿಗಬೇಕು. ಆದರೆ ನಾಯಕ ಶ್ರೇಯಸ್ ಅಯ್ಯರ್ ನೀಡಿರುವ ಹೇಳಿಕೆ ಪ್ರಕಾರ, ಆರಂಭಿಕ ಸ್ಥಾನಗಳಲ್ಲಿ ಈಗಲೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆಯಿದೆ.

ವೈಭವ್ ಸೂರ್ಯವಂಶಿ ಇನ್ನೂ ಕೇವಲ 15 ವರ್ಷದ ಯುವ ಆಟಗಾರ. ಹೀಗಾಗಿ ತಕ್ಷಣವೇ ಅವಕಾಶ ಸಿಗಲಿಲ್ಲವೆಂದು ಅವರ ವೃತ್ತಿಜೀವನ ಮುಗಿಯಿತು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಪ್ರತಿಭೆ ಇರುವ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಿ, ನಿರಂತರವಾಗಿ ಬೆಂಚ್‌ನಲ್ಲಿ ಕೂರಿಸುವ ಬದಲು, ಸರಿಯಾದ ಸಮಯದಲ್ಲಿ ಅವಕಾಶ ನೀಡುವುದು ಉತ್ತಮ ನಿರ್ಧಾರ.

Kishor KV

Leave a Reply

Your email address will not be published. Required fields are marked *