ಹಣಕ್ಕಾಗಿ ಕುಚಿಕು ಗೆಳೆಯನ ಹ*ತ್ಯೆ! – ಕೊ*ಲೆ ಬಳಿಕ ಮನೆಯಲ್ಲೇ ಉಪ್ಪಿಟ್ಟು ಸವಿದ ಹಂತಕ

ಗೆಳೆಯನನ್ನೇ ಕೊಂದುಬಿಟ್ಟ! ಹಣದ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಗೆಳೆಯನನ್ನು ಕೊಂದ ಬಳಿಕ ಆತನ ಮನೆಗೇ ತೆರಳಿ ಆರೋಪಿ ಉಪ್ಪಿಟ್ಟು ಸವಿದಿದ್ದಾನೆ ಎಂಬ ಆಘಾತಕಾರಿ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ.
ಇಲ್ಲಿ ಕೊಲೆಯಾದ ವ್ಯಕ್ತಿ 62 ವರ್ಷದ ದ್ಯಾಮಪ್ಪ ಗೊಜನೂರು. ಕೊಲೆ ಆರೋಪ ಎದುರಿಸುತ್ತಿರುವ ವ್ಯಕ್ತಿ ಶರಣಪ್ಪ ನರಗುಂದ.
ಅಕ್ಟೋಬರ್ 8ರಂದು ಮನೆಯಿಂದ ತೆರಳಿದ್ದ ದ್ಯಾಮಪ್ಪ ಮರಳಿ ಬಂದಿರಲಿಲ್ಲ. ಹೀಗಾಗಿ ಎರಡು ದಿನಗಳ ಬಳಿಕ ಕುಟುಂಬ ಈ ಬಗ್ಗೆ ಪೊಲೀಸರಿಗೆ ದೂರು ನೀಡಿತ್ತು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿರುವ ಹೊತ್ತಲ್ಲಿಯೇ ಅ.19ರಂದು ಕಾಲುವೆಯಲ್ಲಿ ಶವವಾಗಿ ದ್ಯಾಮಪ್ಪ ಪತ್ತೆಯಾಗಿದ್ದರು. ರೈತರಿಂದ ಬೆಳೆ ಖರೀದಿ ವ್ಯವಹಾರ ಮಾಡುತ್ತಿದ್ದ ದ್ಯಾಮಪ್ಪ, ಶರಣಪ್ಪನ ಹೆಸರಲ್ಲಿ 45 ಕ್ವಿಂಟಾಲ್ ಕಡಲೆಯನ್ನು ಇಟ್ಟಿದ್ದರು. ಆದರೆ ಶರಣಪ್ಪ, ದ್ಯಾಮಪ್ಪನಿಗೆ ಗೊತ್ತಾಗದಂತೆ ಅವನ್ನು ಮಾರಿದ್ದ ಮತ್ತು ಆ ಹಣವನ್ನು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ. ಕಡಲೆ ಬಗ್ಗೆ ದ್ಯಾಮಪ್ಪ ಕೇಳಿದರೆ ತನ್ನ ಕಳ್ಳಾಟ ಗೊತ್ತಾಗುತ್ತೆ. ಹೀಗಾಗಿ ಆತನನ್ನೇ ಕೊಂದು ಬಿಟ್ಟರೆ ಯಾವುದೇ ವಿಷಯ ಹೊರಗೆ ಬರಲ್ಲ ಎಂದು ಸ್ನೇಹಿತನ ಕತೆಯನ್ನೇ ಆರೋಪಿ ಮುಗಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಇಂಡೋನೇಷ್ಯಾಕ್ಕೆ ಸೋಲುಣಿಸಿ ಚಿನ್ನ ಗೆದ್ದ ಭಾರತ! – ಶೀತಲ್ ದೇವಿ–ತೋಮನ್ ಕುಮಾರ್ ಐತಿಹಾಸಿಕ ಸಾಧನೆ!
ಹಣಕಾಸಿನ ವಿಚಾರಕ್ಕೆ ಇಬ್ಬರು ಗೆಳೆಯರ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದೇ ವಿಚಾರ ಕೊಲೆಯಲ್ಲಿ ಅಂತ್ಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ವರ್ಷಗಳಿಂದ ಸ್ನೇಹಿತರಾಗಿದ್ದವರ ನಡುವಿನ ಹಣದ ವ್ಯವಹಾರ ಇಂತಹ ಭೀಕರ ಘಟನೆಗೆ ಕಾರಣವಾಗಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಆದರೆ ಈ ಪ್ರಕರಣದಲ್ಲಿ ಎಲ್ಲರನ್ನೂ ಬೆಚ್ಚಿಬೀಳಿಸುವ ಮತ್ತೊಂದು ಸಂಗತಿಯಿದೆ. ಗೆಳೆಯನನ್ನು ಕೊಂದ ಬಳಿಕ ಆರೋಪಿ ಶರಣಪ್ಪ, ದ್ಯಾಮಪ್ಪನ ಮನೆಗೇ ತೆರಳಿ ಉಪ್ಪಿಟ್ಟು ಸವಿದಿದ್ದ ಎಂಬ ವಿಚಾರ ತನಿಖೆಯ ವೇಳೆ ಬಯಲಾಗಿದೆ ಎನ್ನಲಾಗಿದೆ.

ನೋಡಿರಿ

