3 ತಿಂಗಳು.. 3 ಸರಣಿ.. 11 ಪಂದ್ಯ! ಏಷ್ಯಾ ಕಪ್ ನಲ್ಲೂ ODI ವಾರ್
ವಿಶ್ವಕಪ್ ROAD MAP ಹೇಗಿದೆ?

3 ತಿಂಗಳು.. 3 ಸರಣಿ.. 11 ಪಂದ್ಯ! ಏಷ್ಯಾ ಕಪ್ ನಲ್ಲೂ ODI ವಾರ್ವಿಶ್ವಕಪ್ ROAD MAP ಹೇಗಿದೆ?

ಕ್ರಿಕೆಟ್ ಲೋಕದ ದಿಗ್ಗಜರ ಕಣ್ಣೆಲ್ಲಾ 2027ರ ಐಸಿಸಿ ಏಕದಿನ ವಿಶ್ವಕಪ್ ಮೇಲಿದೆ. ಮುಂದಿನ ವರ್ಷ ಅಕ್ಟೋಬರ್ 4 ರಿಂದ ನವೆಂಬರ್ 21ರವರೆಗೆ ನಡೆಯಲಿರೋ ಟೂರ್ನಮೆಂಟ್​ನಲ್ಲಿ ಚಾಂಪಿಯನ್ಸ್ ಆಗಲು 14 ತಂಡಗಳ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದೆ. 2003ರ ನಂತರ ಮೊದಲ ಬಾರಿಗೆ ಆಫ್ರಿಕಾದಲ್ಲಿ ವಿಶ್ವಕಪ್ ನಡೀತಿದ್ದು ಭಾರತ ಕೂಡ ಈಗಿನಿಂದಲೇ ತಯಾರಿ ನಡೆಸಿದೆ.

14ನೇ ಆವೃತ್ತಿಯ ಏಕದಿನ ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೇ ನಮೀಬಿಯಾ ಮೂರೂ ರಾಷ್ಟ್ರಗಳೂ  ಆತಿಥ್ಯ ವಹಿಸಲಿವೆ. ಹೀಗಿದ್ರೂ ಹೈಯೆಸ್ಟ್ ಮ್ಯಾಚಸ್ ಅಂದ್ರೆ 44 ಪಂದ್ಯಗಳು ಸೌತ್ ಆಫ್ರಿಕಾದಲ್ಲೇ ನಡೆಯಲಿವೆ. ಕಳೆದ ಆವೃತ್ತಿಯಲ್ಲಿ ಭಾರತದಲ್ಲೇ ಟೂರ್ನಿ ನಡೆದಾಗ ಭಾರತ ಅಜೇಯವಾಗಿ ಫೈನಲ್​ಗೆ ತಲುಪಿದ್ರೂ ಆಸೀಸ್ ವಿರುದ್ಧ ಸೋಲಬೇಕಾಯ್ತು. ಬಟ್ ಸೌತ್ ಆಫ್ರಿಕಾದಲ್ಲಿ ನಡೆಯಲಿರೋ ಟೂರ್ನಮೆಂಟ್​ನಲ್ಲಿ ಶತಾಯ ಗತಾಯ ಕಪ್ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಇದಕ್ಕಾಗಿ ವಿಶ್ವಕಪ್​ಗೂ ಮುನ್ನ ಹಲವು ಏಕದಿನ ಸರಣಿಗಳನ್ನೂ ಆಯೋಜನೆ ಮಾಡಲಾಗಿದೆ.

10 ತಂಡಗಳಿಗೆ ನೇರ ಅರ್ಹತೆ.. 4 ತಂಡಗಳಿಗೆ ಅರ್ಹತಾ ಟೂರ್ನಿ!

2027ರ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 14 ತಂಡಗಳು ಫೈಟ್ ನಡೆಸಲಿದ್ದು ಆಲ್ರೆಡಿ 10 ತಂಡಗಳು ಫೈನಲ್ ಆಗಿದೆ. ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಹೋಸ್ಟಿಂಗ್ ನೇಷನ್​ಗಳಾಗಿ ಡೈರೆಕ್ಟ್ ಆಗಿ ಕ್ವಾಲಿಫೈ ಆಗಿದ್ದಾರೆ. ಬಟ್ ನಮೀಬಿಯಾ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರವಲ್ಲದ ಕಾರಣ, ಅದು ಕ್ವಾಲಿಫೈಯರ್ ಪಂದ್ಯಗಳನ್ನು ಆಡಿ ಬರಬೇಕಿದೆ. ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯ ಮೂಲಕ ನಿರ್ಧಾರವಾಗಲಿವೆ.  ಒಂದ್ಕಡೆ ಟೂರ್ನಿಗೆ ಭರ್ಜರಿ ಸಿದ್ಧತೆಗಳು ನಡೀತಿದ್ರೆ ಟೀಂ ಇಂಡಿಯಾ ಕೂಡ ಏಕದಿನ ಪಂದ್ಯಗಳಿಗೆ ಹೆಚ್ಚಿನ ಪ್ರಿಯಾರಿಟಿ ನೀಡ್ತಿದೆ. ಹಾಗಾದ್ರೆ ಭಾರತ 2027ರ ಏಕದಿನ ವಿಶ್ವಕಪ್​ಗೂ ಮುನ್ನ ಎಷ್ಟು ಏಕದಿನ ಪಂದ್ಯಗಳನ್ನ ಆಡಲಿದೆ ಅನ್ನೋದನ್ನ ನೋಡೋಣ.

ವಿಶ್ವಕಪ್ ವರೆಗೆ ಭಾರತದ ಏಕದಿನ ಸರಣಿ!

ನವೆಂಬರ್ ನಲ್ಲಿ ನ್ಯೂಜಿಲೆಂಡ್ ನಲ್ಲಿ ಭಾರತಕ್ಕೆ 5 ಪಂದ್ಯಗಳ ಸರಣಿ

ನವೆಂಬರ್ 4, 7, 10, 13 ಹಾಗೂ 15ರಂದು ಪಂದ್ಯಗಳ ಶೆಡ್ಯೂಲ್

ಡಿಸೆಂಬರ್ ನಲ್ಲಿ ಶ್ರೀಲಂಕಾ ವಿರುದ್ಧ ಭಾರತದಲ್ಲಿ 3 ಪಂದ್ಯಗಳ ಸರಣಿ

ಡಿಸೆಂಬರ್ 13, 16 ಹಾಗೂ 19ರಂದು ನಡೆಯಲಿರುವ ಪಂದ್ಯಗಳು

2027ರ ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತದಲ್ಲಿ 3 ಪಂದ್ಯಗಳ ಸರಣಿ

ಜನವರಿ 3, 6 ಮತ್ತು 9ರಂದು ನಡೆಯಲಿರುವ 3 ಪಂದ್ಯಗಳು

ಸೋ ಜಿಂಬಾಬ್ವೆ ವಿರುದ್ಧದ ಸರಣಿವರೆಗೆ ಭಾರತದ ಏಕದಿನ ಪಂದ್ಯಗಳು ಶೆಡ್ಯೂಲ್ ಆಗಿವೆ. ಆ ನಂತ್ರದಲ್ಲಿ ಟಿ-20ಐ ಸಿರೀಸ್ ಇರುತ್ತೆ, ಆಮೇಲೆ ಐಪಿಎಲ್ ಬರುತ್ತೆ. ಈ ದ್ವಿಪಕ್ಷೀಯ ಸರಣಿಗಳ ಹೊರತಾಗಿ, 2027ರ ಜೂನ್ ಮತ್ತು ಜುಲೈನಲ್ಲಿ 50 ಓವರ್‌ಗಳ ಫಾರ್ಮ್ಯಾಟ್‌ನಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಇಲ್ಲಿ ಭಾರತ ತಂಡವು  ಕನಿಷ್ಠ 4 ರಿಂದ 7 ಏಕದಿನ ಪಂದ್ಯಗಳನ್ನು ಆಡಲಿದೆ. ಌಂಡ್ ಇದಾದ್ಮೇಲೆ ಸೌತ್ ಆಫ್ರಿಕಾದಲ್ಲೇ 5 ಪಂದ್ಯಗಳ ಏಕದಿನ ಸರಣಿಯನ್ನೂ ನಡೆಸೋಕೆ ಬಿಸಿಸಿಐ ಪ್ಲ್ಯಾನ್ ಮಾಡ್ತಿದೆ. ಯಾಕಂದ್ರೆ 2027ರ ಏಕದಿನ ವಿಶ್ವಕಪ್​ನ ಹೈಯೆಸ್ಟ್ ಪಂದ್ಯಗಳು ಸೌತ್ ಆಫ್ರಿಕಾದಲ್ಲೇ ನಡೆಯೋದ್ರಿಂದ ಟೂರ್ನಿಗೂ ಮೊದಲು ಏಕದಿನ ಸರಣಿ ಆಡಿದ್ರೆ ಅಲ್ಲಿನ ಪಿಚ್ ಹಾಗೇ ಕಂಡೀಷನ್​ಗೆ ಅಡ್ಜಸ್ಟ್ ಆಗೋಕೆ ಟೈಂ ಸಿಗುತ್ತೆ ಅನ್ನೋ ಪ್ಲ್ಯಾನ್​​ನಲ್ಲಿದೆ. ಹೀಗಾಗಿ ಭಾರತ ನೆಕ್ಸ್​ಟ್ ಒನ್ ಇಯರ್ ಏಕದಿನ ಮಾದರಿ ಪಂದ್ಯಗಳಿಗೆ ಹೆಚ್ಚಿನ ಪ್ರಿಯಾರಿಟಿ ನೀಡಿದೆ. ಅದೂ ಅಲ್ದೇ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅವರು 2027ರ ಏಕದಿನ ವಿಶ್ವಕಪ್ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ರೋಹಿತ್ ಕೂಡ ವಿಶ್ವಕಪ್​ನಲ್ಲೇ ಏಕದಿನ ಕರಿಯರ್ ಮುಗಿಸೋದ್ರಿಂದ ಈ ಟೂರ್ನಿ ಭಾರತೀಯರ ಪಾಲಿಗೆ ಎಮೋಷನಲ್ ಕೂಡ ಆಗಲಿದೆ.

Kishor KV

Leave a Reply

Your email address will not be published. Required fields are marked *