TRACK ಕಳ್ಕೊಂಡ ಹಾರ್ದಿಕ್! ಮಾಯದ ಗಾಯ.. SLOT ಭಯ
10 ಓವರ್ ಬೌಲಿಂಗ್ ಮಾಡಲ್ವಾ?

TRACK ಕಳ್ಕೊಂಡ ಹಾರ್ದಿಕ್! ಮಾಯದ ಗಾಯ.. SLOT ಭಯ10 ಓವರ್ ಬೌಲಿಂಗ್ ಮಾಡಲ್ವಾ?

2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರೋ ಭಾರತಕ್ಕೆ ಟಾಪ್-5 ಬ್ಯಾಟಿಂಗ್ ಫೈನಲ್ ಆಗಿದೆ. ಆದ್ರೆ  ಬೌಲರ್​ಗಳದ್ದೇ ತಲೆಬಿಸಿ. ಜಸ್ಪ್ರೀತ್ ಬುಮ್ರಾ ಒಬ್ರನ್ನ ಬಿಟ್ರೆ ಬೇರೆ ಯಾರೊಬ್ರ ಪ್ರಸೆನ್ಸ್ ಕೂಡ ಕನ್ಫರ್ಮ್ ಇಲ್ಲ. ಅದ್ರಲ್ಲೂ ಹಾರ್ದಿಕ್ ಪಾಂಡ್ಯ ಇಂಜುರಿಯೇ ದೊಡ್ಡ ಕಂಟಕವಾಗಿದೆ.

ಭಾರತದ ಪರ ಪ್ಲೇಯರ್ಸ್ ಇಂಜುರಿಯಾಗೋದು ಹೊಸದೇನು ಅಲ್ಲ. ಬಟ್ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಇದು ಈಸಿ ಇಲ್ವೇ ಇಲ್ಲ. ಈ ವರ್ಷ ಹಾರ್ದಿಕ್ ಪಾಂಡ್ಯ ಬ್ಯಾಕ್ ಟು ಬ್ಯಾಕ್ ಗಾಯದ ಸಮಸ್ಯೆಗಳನ್ನು ಫೇಸ್ ಮಾಡ್ತಿದ್ದಾರೆ. ಬ್ಯಾಟ್ ಹಾಗೇ ಬಾಲ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡೋ ಪಾಂಡ್ಯ ಕಳೆದ ಐದು ತಿಂಗಳಲ್ಲಿ ಮೂರು ಗಾಯಗಳಿಂದ ಬಳಲುತ್ತಿದ್ದಾರೆ. ಮೊದಲು ಅವರಿಗೆ ಬೆನ್ನು ನೋವು, ನಂತರ ಕಾಲಿನ ಗಾಯ ಮತ್ತು ಈಗ ಮೊಣಕಾಲಿನ ಗಾಯ. ಇದೇ ಕಾರಣಕ್ಕೆ ಅವ್ರಿಗೆ ಐಪಿಎಲ್ ಆದ್ಮೇಲೆ ಮೈದಾನಕ್ಕಿಳಿಯೋಕೆ ಸಾಧ್ಯನೇ ಆಗಿಲ್ಲ. 2027ರ ವಿಶ್ವಕಪ್​ಗೆ ವರ್ಷ ಕೂಡ ಇಲ್ಲ. ಹೀಗಿರುವಾಗ ಹಾರ್ದಿಕ್ ಅವರ ಫಿಟ್ನೆಸ್ ಭಾರತಕ್ಕೆ ದೊಡ್ಡ ಚಿಂತೆಯಾಗಿದೆ. ಪಾಂಡ್ಯ ಇಲ್ಲದ ಕಾರಣಕ್ಕೆ ನಿತೀಶ್ ರೆಡ್ಡಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿವೆ. ಅಟ್ ದಿ ಸೇಮ್ ಟೈಂ ಸೂರ್ಯಾಂಶ್ ಶೆಡ್ಜ್​ಗೆ ಅವರನ್ನು ಬ್ಯಾಕಪ್ ಆಗಿ ನೋಡ್ತಿದ್ದಾರೆ. ಆದ್ರೂ ಹಾರ್ದಿಕ್​ ಆಡಲೇಬೇಕು ಅನ್ನೋದು ಬಿಸಿಸಿಐ ಪ್ಲ್ಯಾನ್.

 

10 ಓವರ್ ಬೌಲಿಂಗ್ ಮಾಡೋದು ಹಾರ್ದಿಕ್ ಗೆ ಕಷ್ಟ!

ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಆಡ್ಬೇಕು ಅಂದರೆ ಅವರು 10 ಓವರ್‌ಗಳನ್ನು ಬೌಲಿಂಗ್ ಮಾಡುವಷ್ಟು ಫಿಟ್ ಆಗಿರಬೇಕು. ಪ್ರಸ್ತುತ, ಅವರಿಗೆ ಹೆಚ್ಚಿನ ಪಂದ್ಯಗಳ ಅಭ್ಯಾಸದ ಅಗತ್ಯವಿದೆ. 2026ರಲ್ಲಿ ಹಾರ್ದಿಕ್ ಪಾಂಡ್ಯ ಭಾರತ ಪರ 14 ಪಂದ್ಯಗಳನ್ನು ಆಡಿದ್ದಾರೆ. ಌಂಡ್ ಎಲ್ಲವೂ T20I ಗಳಲ್ಲಿ ಮತ್ತು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ 10 ಪಂದ್ಯಗಳನ್ನು ಆಡಿದ್ದಾರೆ. ಸೋ ಏಕದಿನ ವಿಶ್ವಕಪ್‌ನಲ್ಲಿ ಆಡಬೇಕಾದರೆ 10 ಓವರ್‌ಗಳನ್ನು ಬೌಲ್ ಮಾಡಲೇಬೇಕು. ಮತ್ತು ಆ 10 ಓವರ್‌ಗಳು ಮೋಸ್ಟ್ ಎಫೆಕ್ಟಿವ್ ಆಗಿರಬೇಕು. ಈವನ್ ನೆಟ್ಸ್ ಪ್ರಾಕ್ಟೀಸ್ ನಲ್ಲಿ 15-20 ಓವರ್‌ಗಳನ್ನು ಬೌಲ್ ಮಾಡಬೇಕಾಗುತ್ತೆ. ಭಾರತದ ಮಾಜಿ ತರಬೇತುದಾರ ರಾಮ್‌ಜಿ ಶ್ರೀನಿವಾಸನ್ ಕೂಡ ಇದನ್ನೇ ಹೇಳಿದ್ದಾರೆ. ಪ್ಲೇಯರ್ ಕಂಪ್ಲೀಟ್ ಆಗಿ ಫಿಟ್ ಆಗಿರಬೇಕು. ನಿಮ್ಮ ಫಾರ್ಮ್, ಫಿಟ್ನೆಸ್, ಸ್ಟ್ರೆಂತ್, ಕಂಡೀಷನಿಂಗ್, ರಿಕವರ್ ಪ್ರೋಟೋಕಾಲ್‌ಗಳು ಹೀಗೆ ಎಲ್ಲವೂ ಕ್ಲಿಯರ್ ಇದ್ದಾಗ ಮಾತ್ರ  ಸೆಲೆಕ್ಟ್ ಮಾಡೋಕೆ ಸಾಧ್ಯ ಎಂದಿದ್ದಾರೆ. ಅಷ್ಟಕ್ಕೂ ಹಾರ್ದಿಕ್ ಮೇಲೆ ಯಾಕೆ ಬಿಸಿಸಿಐ ಈ ಮಟ್ಟಿಗಿನ ಇಂಪಾರ್ಟೆನ್ಸ್ ಕೊಡ್ತಿದೆ ಅನ್ನೋದಕ್ಕೆ ಕಾರಣವೂ ಇದೆ.

 ಪಾಂಡ್ಯ ತಂಡದಲ್ಲಿದ್ರೆ ಬಲ!

ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸಬಲ್ಲ ಪ್ಲೇಯರ್

ವೇಗದ ಬೌಲಿಂಗ್ ಆಲ್‌ ರೌಂಡರ್ ಆಗಿ ತಂಡಕ್ಕೆ ಸಮತೋಲನ

ಬ್ಯಾಟರ್ ಮತ್ತು ಬೌಲರ್ ಎರಡೂ ರೋಲ್ಸ್ ಪ್ಲೇಯಿಂದ ಬ್ಯಾಲೆನ್ಸ್

ದೊಡ್ಡ ಟೂರ್ನಿಗಳ ಅನುಭವ ಇರೋದ್ರಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನ

ಇದೇ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಇದ್ದಷ್ಟೂ ಡಗೌಟ್ ಸ್ವಲ್ಪ ರಿಲ್ಯಾಕ್ಸ್ ಆಗಿರುತ್ತೆ. ಯಾಕಂದ್ರೆ ಬೌಲಿಂಗ್ ವಿಭಾಗಕ್ಕೆ ಬಿಗ್ಗೆಸ್ಟ್ ಸ್ಟ್ರೆಂಥ್ ಆಗ್ತಾರೆ. ಬಟ್ ಅವ್ರ ಕಂ ಬ್ಯಾಕ್ ಯಾವಾಗ ಅನ್ನೋದೇ ಈಗಿರೋ ದೊಡ್ಡ ಪ್ರಶ್ನೆ. ನಮಸ್ಕಾರ.

Kishor KV

Leave a Reply

Your email address will not be published. Required fields are marked *