ಇದು ಬಿಗ್ ಬಾಸ್ ಅಲ್ಲ, ** ಶೋ? – ಮಂಜನಿಗೆ ಶಿಕ್ಷೆ.. ಸೌಂದರ್ಯಗೆ ಇಲ್ವಾ?
ಸ್ಯಾಂಡಿ ಹುಚ್ಚಾಟಕ್ಕೆ ಬ್ರೇಕ್?

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮನರಂಜನೆಗಿಂತ ಹೆಚ್ಚಾಗಿ ಅಸಭ್ಯ ಪದ ಬಳಕೆ.. ಜಗಳ ಕಿರುಚಾಟದಿಂದಲೇ ಸದ್ದು ಮಾಡ್ತಿದೆ. ಬಿಗ್‌ಬಾಸ್ ಶೋನಲ್ಲಿ ಬರೀ ಬೀಪ್ ಸೌಂಡ್ ಕೇಳಿಸಿಕೊಳ್ಳೋದು ವೀಕ್ಷಕರಿಗೆ ಅನಿವಾರ್ಯವಾಗಿದೆ. ಇತ್ತೀಚೆಗಷ್ಟೇ ಶೋನಲ್ಲಿ ಅಸಭ್ಯ ಪದ ಬಳಕೆ ಮಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಡ್ರನ್ ಮಹಾಕವಿ ಮಂಜನನ್ನ ಎಲಿಮಿನೇಟ್ ಮಾಡಲಾಗಿತ್ತು. ಇದೀಗ ಸೌಂದರ್ಯ ಶೆಟ್ಟಿ ಶೋನಲ್ಲಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಈ ಬೆನ್ನಲ್ಲೇ ಸೌಂದರ್ಯ ಶೆಟ್ಟಿ ವಿರುದ್ಧ ವೀಕ್ಷಕರು ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ಮಂಜನಿಗೆ ಕೊಟ್ಟ ಶಿಕ್ಷೆ ಸ್ಯಾಂಡಿಗೆ ಯಾಕಿಲ್ಲ ಅಂತ ಪ್ರಶ್ನೆ ಮಾಡ್ತಿದ್ದಾರೆ.
ಇದನ್ನೂ ಓದಿ: ಭಾರತ ಮಹಿಳಾ ತಂಡಕ್ಕೆ ಕ್ಲೀನ್ ಸ್ವೀಪ್ ಗುರಿ! – ವೈಟ್ ವಾಶ್ ಆಗುತ್ತಾ ಜಿಂಬಾಬ್ವೆ?
ಕುಟುಂಬ ಸಮೇತರಾಗಿ ಕುಳಿತು ನೋಡುತ್ತಿದ್ದ ಬಿಗ್ ಬಾಸ್ ಶೋನಲ್ಲಿ ಈಗ ಬರೀ ಬೀಪ್ ಸೌಂಡ್ ಕೇಳಿಸುತ್ತಿದೆ. ಈ ಕಾರ್ಯಕ್ರಮವನ್ನ ಮನೆಯವರ ಸಮ್ಮುಖದಲ್ಲಿ ಪ್ಲೇ ಮಾಡಲು ಮುಜುಗರವಾಗುವ ಮಟ್ಟಕ್ಕೆ ತಲುಪುತ್ತಿದೆ. ಇತ್ತೀಚೆಗಷ್ಟೇ ಮಂಜ ಬಳಸಿದ ಬೀಪ್ ಪದಗಳ ವಿವಾದ, ಗಗನ್, ಗಾನವಿ ಕಿತ್ತಾಟ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಗಗನ್, ಗಾನವಿಗೆ ಕಿಚ್ಚ ಸುದೀಪ್ ಬುದ್ದಿಮಾತು ಹೇಳಿದ್ರು. ಅಶ್ಲೀಲ ಪದಗಳಿಂದ ಸಹ ಸ್ಪರ್ಧಿಗಳನ್ನ ನಿಂದಿಸಿದ್ದ ಮಂಜನಿಗೆ ನೇರವಾಗಿ ರೆಡ್ ಕಾರ್ಡ್ ನೀಡಿ ಮನೆಯಿಂದ ಹೊರಕಳುಹಿಸಲಾಯ್ತು. ಶೋನಲ್ಲಿ ನಿಯಮ ಉಲ್ಲಂಘನೆ ಮತ್ತು ಗೌರವಯುತ ಭಾಷೆ ಬಳಕೆಯಾಗಬೇಕು ಅನ್ನೋ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದ್ರೆ ಕಿಚ್ಚ ಎಷ್ಟು ಬುದ್ದಿಮಾತು ಹೇಳಿದ್ರೂ, ಸ್ಪರ್ಧಿಗಳು ಬದಲಾಗುವಂತೆ ಕಾಣುತ್ತಿಲ್ಲ. ಈ ವಾರ ಗಾನವಿ ಕೊಂಚ ಸೈಲೆಂಟ್ ಆಗಿದ್ರೆ, ಇತ್ತ ಸೌಂದರ್ಯ ಶೆಟ್ಟಿ ತಮ್ಮ ವರಸೆ ಶುರುಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ಅಂತ ನೋಡೋದಾದ್ರೆ, ನಿನ್ನೆಯ ಎಪಿಸೋಡ್‌ನಲ್ಲಿ ನಾಮಿನೇಷನ್ ಪ್ರಕ್ರಿಯೆ ಟಾಸ್ಕ್ ಮೂಲಕ ನಡೆದಿದೆ. ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಬಚ್ಚಿಟ್ಟ ಫೋಟೋಗಳನ್ನ ಹುಡುಕಿ ತೆಗೆದು, ಸ್ಪರ್ಧಿಗಳ ಫೋಟೋ ಕೊನೆಯದಾಗಿ ಸೇಫ್ ಜೋನನ್ನು ತಲುಪಿದ ಸದಸ್ಯರ ಬಳಿ ಇರುವ ಭಾವಚಿತ್ರ ಕಲೆಕ್ಟ್ ಮಾಡಿ, ಸೇಫ್ ಜೋನ್ ತಲುಪಿಸಬೇಕಿತ್ತು. ಇದು ಹೊಂದಾಣಿಕೆ ಮತ್ತು ಯುಕ್ತಿಯಿಂದ ನಡೆಯೋ ಟಾಸ್ಕ್ ಆಗಿತ್ತು. ಮೊದಲ ಸುತ್ತಿನಲ್ಲಿ ಸೋನಿಕಾ ಫೋಟೋ ಸೌಂದರ್ಯ ಬಳಿಯಿತ್ತು. ಸೌಂದರ್ಯ ಫೋಟೋ ತಾಂಡವ್ ರಾಮ್ ಬಳಿತ್ತು. ಜೈಲಿನಲ್ಲಿ ನಿಂತಿದ್ದ ಇಬ್ಬರಲ್ಲಿ ಯಾರು ಮೊದಲು ಟಾಸ್ಕ್ ಕಂಪ್ಲೀಟ್ ಮಾಡ್ತಾರೋ ಅವರು ಸೇಫ್ ಅಂತ ಲೆಕ್ಕ. ಆದರೆ, ಈ ಡಂಬ್ ಪದ ಬಳಕೆ ಮಾಡಿದ್ದ ಸೌಂದರ್ಯ ಸೇಫ್ ಆಗಲೇ ಬಾರದು ಅಂತ ತಾಂಡವ್ ಹಠ ಹಿಡಿದ್ರು. ಇನ್ನು ಸೌಂದರ್ಯ ಶೆಟ್ಟಿಗೆ ಸೋನಿಕಾರನ್ನ ಸೇವ್ ಮಾಡುವ ಆಸೆ ಇರಲಿಲ್ಲ. ಹೀಗಾಗಿ ಇಬ್ಬರು ಟಾಸ್ಕ್ ಮುಂದುವರೆಸಿಲ್ಲ. ಕೊನೆಗೆ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಗಗನ್‌ಗೆ ಯಾರನ್ನ ಸೇಫ್ ಮಾಡಬೇಕು ನಿರ್ಧರಿಸಲು ಹೇಳಿದ್ರು. ಈ ವೇಳೆ ಗಗನ್ ಸೋನಿಕಾರನ್ನ ಸೇಫ್ ಮಾಡುತ್ತಿದ್ದೇನೆ. ತಾಂಡವ್ ನನ್ನ ಗೆಳೆಯ ಅದಕ್ಕೆ ಸೇವ್ ಮಾಡುತ್ತೇನೆ ಎಂದಿದ್ದಾರೆ. ಇದು ಸೌಂದರ್ಯ ಶೆಟ್ಟಿ ಸಿಟ್ಟಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಜೈಲು ಬಟ್ಟೆ ತೊಟ್ಟು ಜೈಲು ಒಳಗೆ ಹೋಗುತ್ತಾ ಗಗನ್ ನಿರ್ಧಾರ ಪ್ರಶ್ನಿಸಿ, ಹೈ ಡ್ರಾಮಾ ಕ್ರಿಯೇಟ್ ಮಾಡಿದ್ರು. ಇಡೀ ಮನೆಯಲ್ಲಿ ಮನಬಂದಂತೆ ಕುಣಿದಾಡಿದ್ದಾರೆ. ಚೀರಾಡಿದ್ದಾರೆ. ಮಾತಿನ ಬರದಲ್ಲಿ ಸೌಂದರ್ಯ ಶೆಟ್ಟಿ ಕೆಟ್ಟ ಪದ ಬಳಸಿದ್ದಾರೆ. ಸೌಂದರ್ಯ ಬಳಸಿದ ಪದಕ್ಕೆ ಬಿಗ್‌ಬಾಸ್ ಬೀಪ್ ಸೌಂಡ್ ಹಾಕಿದ್ದಾರೆ. ಇದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಸೌಂದರ್ಯ ಶೆಟ್ಟಿಯನ್ನ ಕೂಡಲೇ ಎಲಿಮಿನೇಟ್ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಕಾಮನ್ ಮ್ಯಾನ್ ಆಗಿ ಬಿಗ್‌ಬಾಸ್ ಮನೆಗೆ ಬಂದ ಮಂಜನಿಗೆ ಒಂದು ನ್ಯಾಯ.. ಸೆಲೆಬ್ರಿಟಿಯಾಗಿ ಬಂದವರಿಗೆ ಮತ್ತೊಂದು ನ್ಯಾಯವೇ..? ಸ್ಪರ್ಧಿಗಳು ಅಂದ್ಮೇಲೆ ರೂಲ್ಸ್ ಕೂಡ ಒಂದೇ ಆಗಿರ್ಬೇಕು. ಮಂಜ ಕಾಮನ್ ಮ್ಯಾನ್ ಎನ್ನುವ ಕಾರಣಕ್ಕೆ ಸುಲಭವಾಗಿ ರೆಡ್ ಕಾರ್ಡ್ ಕೊಟ್ಟು ಕಳುಹಿಸಿದ್ರಿ. ಆದ್ರೆ, ಸೆಲೆಬ್ರಿಟಿಗಳು ಅದಕ್ಕಿಂತಲೂ ಕೆಟ್ಟ ಪದ ಬಳಸಿದ್ರೂ ಅವರಿಗೆ ಶಿಕ್ಷೆ ಯಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ. ಇದೀಗ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ನೋಡಿರಿ

