ವಿಶ್ವಕಪ್ ಗೆ ಅರ್ಧ ಟೀಂ ಫೈನಲ್! – RO-KO & KL ಜೊತೆ ಯಾರೆಲ್ಲಾ?
ಬೌಲಿಂಗ್, ಆಲ್ ರೌಂಡರ್ಸ್ ಸಿಕ್ಕಿಲ್ವಾ?

ವಿಶ್ವಕಪ್ ಗೆ ಅರ್ಧ ಟೀಂ ಫೈನಲ್! – RO-KO & KL ಜೊತೆ ಯಾರೆಲ್ಲಾ?ಬೌಲಿಂಗ್, ಆಲ್ ರೌಂಡರ್ಸ್ ಸಿಕ್ಕಿಲ್ವಾ?

2027ರ ಏಕದಿನ ವಿಶ್ವಕಪ್​ಗೆ ಇನ್ನೊಂದು ವರ್ಷ ಕೂಡ ಬಾಕಿ ಇಲ್ಲ. ಆದ್ರೆ ಟೀಂ ಇಂಡಿಯಾ ಕಾಂಬಿನೇಷನ್ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆದ್ಮೇಲಂತೂ ಈ ಡೌಟ್ಸ್ ಇನ್ನೂ ಜಾಸ್ತಿಯಾಗಿದೆ. ಬೌಲಿಂಗ್ ಯುನಿಟ್ ಅಂತೂ ತೀರಾ ಡಮ್ಮಿ ಅನ್ನಿಸ್ತಿದೆ

ಏಕದಿನ ವಿಶ್ವಕಪ್​ಗೆ 10 ಟೀಂ ಫೈನಲ್ ಆಗಿದ್ದು ಇನ್ನೂ ನಾಲ್ಕು ತಂಡಗಳು ಕ್ವಾಲಿಫೈಯರ್ ಟೂರ್ನಿಯಲ್ಲಿ ಆಡಿ ಆ ನಂತ್ರ ಅರ್ಹತೆ ಪಡ್ಕೊಳ್ತಾರೆ. ಕಳೆದ ಬಾರಿ ಜಸ್ಟ್ ಮಿಸ್ ಆಗಿರೋ ಟ್ರೋಫಿಯನ್ನ ಈ ಸಲ ಗೆಲ್ಲೋಣ ಅಂತಾ ಟಾರ್ಗೆಟ್ ಇಟ್ಟಿರೋ ಭಾರತಕ್ಕೆ ಟೀಂ ಫೈನಲ್ ಮಾಡೋದೇ ಅತಿದೊಡ್ಡ ಟಾಸ್ಕ್ ಆಗಿದೆ. ಪಂದ್ಯದಿಂದ ಪಂದ್ಯಕ್ಕೆ ಮ್ಯೂಸಿಕಲ್ ಚೇರ್ ಥರ ಪ್ರಯೋಗ ಮಾಡಿದ್ರೂ ಕ್ಲಾರಿಟಿ ಸಿಕ್ಕಿಲ್ಲ. ಸೋ ಈವರೆಗೂ ವಿಶ್ವಕಪ್​ನಲ್ಲಿ ಆಡಬಹುದಾದ ಅರ್ಧದಷ್ಟು ಪ್ಲೇಯರ್ಸ್ ಮಾತ್ರ ಕನ್ಫರ್ಮ್ ಆಗಿದ್ದಾರೆ. ಮಾಜಿ ಆಟಗಾರ ಆಕಾಶ್ ಚೋಪ್ರಾ ಮೊದಲ ಆರು ಸ್ಥಾನಗಳಲ್ಲಿ ಆಡುವ ಆಟಗಾರರನ್ನು ಪಿಕ್ ಮಾಡಿದ್ದಾರೆ.

ರಿಷಬ್ ಪಂತ್ ಔಟ್.. ಇಶಾನ್ ಕಿಶನ್ ಬ್ಯಾಕಪ್ ಕೀಪರ್!

2027ರ ವಿಶ್ವಕಪ್​ನಲ್ಲಿ ಯಾರೆಲ್ಲಾ ಆಡ್ತಾರೆ ಅನ್ನೋ ಬಗ್ಗೆ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಮಾತನಾಡಿದ್ದಾರೆ. ಹಾಗೇ ತಾವು ಸೆಲೆಕ್ಟ್ ಮಾಡಿರೋ ತಂಡದಿಂದ ರಿಷಭ್ ಪಂತ್ ಅವರನ್ನು ಹೊರಗಿಟ್ಟಿದ್ದಾರೆ. ಪಂತ್ ಫಾರ್ಮ್​ಗೆ ಕಂಪೇರ್ ಮಾಡಿದ್ರೆ ಇಶಾನ್ ಕಿಶನ್ ಅವರನ್ನು ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ಗೆ ಬ್ಯಾಕಪ್ ಆಯ್ಕೆಯಾಗಿ ಪ್ರಿಯಾರಿಟಿ ನೀಡಬಹುದು ಎಂದಿದ್ದಾರೆ. ಇನ್ನು 2023ರ ಏಕದಿನ ವಿಶ್ವಕಪ್​ಗೆ ಕಂಪೇರ್ ಮಾಡಿದ್ರೆ 2027ರ ವಿಶ್ವಕಪ್​ಗೂ ಬ್ಯಾಟಿಂಗ್ ಆರ್ಡರ್​​ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸೋ ಚೋಪ್ರಾರ ಸ್ಲಾಟ್ ಸೆಲೆಕ್ಷನ್ ಹೇಗಿದೆ ಅನ್ನೋದನ್ನ ನೋಡೋಣ.

 

 ರೋಹಿತ್-ಗಿಲ್ ಓಪನರ್ಸ್!

ಅದ್ಭುತ ಫಾರ್ಮ್ ನಲ್ಲಿರುವ ರೋಹಿತ್ & ಗಿಲ್ ವಿಶ್ವಕಪ್ ಓಪನರ್ಸ್

ನಂಬರ್ 3ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಬದಲಾವಣೆ ಬೇಕಿಲ್ಲ

4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬೆಸ್ಟ್ ಬ್ಯಾಟಿಂಗ್ ಆಪ್ಶನ್

4ನೇ ಸ್ಲಾಟ್ ನಲ್ಲಿ 47ಕ್ಕಿಂತ ಹೆಚ್ಚಿನ ಆವರೇಜ್ ನಲ್ಲಿ 2,000 ರನ್ಸ್ ಕಲೆ

5ನೇ ಕ್ರಮಾಂಕದಲ್ಲಿ ದಿ ಬೆಸ್ಟ್ ಬ್ಯಾಟರ್ ಆಗಿರುವ ಕನ್ನಡಿಗ ಕೆಎಲ್ ರಾಹುಲ್

5ನೇ ಸ್ಲಾಟ್ ನಲ್ಲಿ 68.58ರ ಆವರೇಜ್, 4 ಶತಕ, 10 ಅರ್ಧಶತಕ

ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾಗೆ ವಿಶ್ವಕಪ್ ಟಿಕೆಟ್ ಕನ್ಫರ್ಮ್

ಸೋ ಇದಿಷ್ಟು ಆಕಾಶ್ ಚೋಪ್ರಾ ಅವ್ರ ವಿಶ್ವಕಪ್ ಟೀಂ ಪ್ರೆಡಿಕ್ಷನ್. ಌಂಡ್ ಇಲ್ಲಿ ಚೋಪ್ರಾ ತಮ್ಮ ಟೀಂ ಸೆಲೆಕ್ಷನ್​ನಲ್ಲಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಹೆಸ್ರನ್ನೂ ಪಿಕ್ ಮಾಡಿದ್ದಾರೆ. 6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡಿದ್ರೆ ಬೆಟರ್. ಆದ್ರೆ ಇಂಜುರಿಯಿಂದಾಗಿ ಹೊರಗೆ ಉಳಿದಿರೋದ್ರ ಬಗ್ಗೆ ಸ್ಪಲ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಉಳಿದಂತೆ ತಂಡಕ್ಕೆ ಯಾವುದೇ ಆಟಗಾರರ ಹೆಸ್ರನ್ನೂ ಅವ್ರು ಸಜೆಸ್ಟ್ ಮಾಡಿಲ್ಲ. ಅಂದ್ರೆ ಪ್ರಸ್ತುತ ಬೇರೆ ಯಾವುದೇ ಆಟಗಾರ ಕೂಡ ವಿಶ್ವಕಪ್​ನಲ್ಲಿ ಆಡಿಸಬಹುದಾದ ಫಾರ್ಮ್ ಮತ್ತು ಪರ್ಫಾಮೆನ್ಸ್ ನೀಡ್ತಿಲ್ಲ ಅನ್ನೋದು ಚೋಪ್ರಾ ಅವರ ವಾದ. ಸೋ ಇಲ್ಲಿ ಒಂದಂತು ಕ್ಲಿಯರ್ ಆಗಿದೆ. ಸದ್ಯಕ್ಕೆ ಭಾರತಕ್ಕೆ ಬ್ಯಾಟಿಂಗ್ ಆರ್ಡರ್​ನಲ್ಲಿ ಯಾವುದೇ ಟೆನ್ಷನ್ ಇಲ್ಲ. ರೋಹಿತ್, ಕೊಹ್ಲಿ, ಗಿಲ್, ರಾಹುಲ್, ಶ್ರೇಯಸ್ ಹೀಗೆ ಸಾಲಿಡ್ ಪ್ಲೇಯರ್​ಗಳ ಹೆಸ್ರೇ ಇದೆ. ಆದ್ರೆ ಮಿಡಲ್ ಆರ್ಡರ್​ನಲ್ಲಿ ಬ್ಯಾಟ್ ಹಾಗೇ ಬಾಲ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡಬಲ್ಲ ಆಲ್​ರೌಂಡರ್ಸ್ ಸಿಕ್ಕಿಲ್ಲ.. ಬೌಲಿಂಗ್​ನಲ್ಲಿ ಜಸ್ಪ್ರೀತ್ ಬುಮ್ರಾಗೆ ಸಾಥ್ ನೀಡಬಲ್ಲ ಸಾಲಿಡ್ ಬೌಲರ್ಸ್ ಆಪ್ಶನ್ಸ್ ಇಲ್ಲ. ಇದೇ ಈಗ ಮ್ಯಾನೇಜ್​ಮೆಂಟ್​​ಗೂ ತಲೆಬಿಸಿ ತಂದಿದೆ. ಸೋ ನಿಮ್ಮ ಪ್ರಕಾರ ಏಕದಿನ ವಿಶ್ವಕಪ್ ತಂಡಕ್ಕೆ ಭಾರತದ ಟೀಂ ಸೆಲೆಕ್ಷನ್ ಹೇಗಿರಬೇಕು ಅನ್ನೋದನ್ನ ಕಮೆಂಟ್ಸ್ ಮೂಲಕ ತಿಳಿಸಿ.

 

 

Kishor KV

Leave a Reply

Your email address will not be published. Required fields are marked *