ರಣಜಿಯಲ್ಲಿ ಶುಭಮನ್ ಫ್ಲಾಪ್ ಶೋ – 2 ವಿಕೆಟ್ ಕಿತ್ತು ಕನ್ನಡತಿ ಹಿಸ್ಟರಿ
ಮದುವೆಗೆ ಅಭಿ, ಡೇಟಿಂಗ್ಗೆ ಗಿಲ್!

ಭಾರತ ಮಹಿಳಾ ತಂಡ ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಒಂಬತ್ತು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಸರಣಿ ಕೈ ವಶ ಮಾಡಿಕೊಂಡಿದೆ.. ಶಫಾಲಿ ವರ್ಮಾ ಕೇವಲ 25 ಎಸೆತಗಳಲ್ಲಿ 55 ರನ್ ಸಿಡಿಸಿದರೆ, ಸ್ಮೃತಿ ಮಂಧಾನ ಅಜೇಯ 47 ರನ್ ಗಳಿಸಿದರು. ಜಿಂಬಾಬ್ವೆ ತಂಡ 102 ರನ್ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತು. ಭಾರತ 8.5 ಓವರ್ಗಳಲ್ಲೇ ಗುರಿ ತಲುಪಿ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು.
ಭಾರತ ಮತ್ತು ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ ಎರಡನೇ ಪಂದ್ಯದಲ್ಲಿ ಕನ್ನಡತಿ ನಿಕಿ ಪ್ರಸಾದ್ ಮೊದಲ ಓವರ್ನ ಆರಂಭಿಕ ಎರಡು ಎಸೆತಗಳಲ್ಲೇ ಎರಡು ವಿಕೆಟ್ಗಳನ್ನು ಕಬಳಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಮೊದಲ ಪಂದ್ಯದಲ್ಲಿ ತಂಡ ಗುರಿ ಬೆನ್ನಟ್ಟುವ ವೇಳೆ 39 ರನ್ಗಳ ಮಹತ್ವದ ಇನ್ನಿಂಗ್ಸ್ ಆಡಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಮೊದಲ ಎರಡು ಎಸೆತಗಳಿಗೆ ಎರಡು ವಿಕೆಟ್ ಪಡೆದ ವಿಶ್ವದ ಮೊದಲ ಮಹಿಳಾ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೀಂ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಮುಂಬರುವ ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರಶ್ನೆ ಎತ್ತಿದ್ದಾರೆ. ಹಿರಿಯ ಆಟಗಾರನನ್ನು ನಿರಂತರವಾಗಿ ಕೈಬಿಡುತ್ತಿರುವುದಕ್ಕೆ ಆಯ್ಕೆ ಸಮಿತಿ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡುತ್ತಿದ್ದರು ಯಾಕೆ ಶಮಿಯನ್ನ ಕೈ ಬಿಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸಿದ್ದ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್, ರಣಜಿ ಟ್ರೋಫಿಯಲ್ಲಿ ನಿರಾಸೆ ಅನುಭವಿಸಿದ್ದಾರೆ. ಪಂಜಾಬ್ ಪರ ಛತ್ತೀಸ್ಗಢ ವಿರುದ್ಧ ಆಡಿದ ಗಿಲ್ ಕೇವಲ ಐದು ಎಸೆತಗಳಲ್ಲಿ ಒಂದು ರನ್ ಗಳಿಸಿ ಔಟಾದರು. ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ರೆಡ್ ಬಾಲ್ ಕ್ರಿಕೆಟ್ನಲ್ಲಿ ಅಭ್ಯಾಸ ಪಡೆಯುವ ಉದ್ದೇಶದಿಂದ ಕಣಕ್ಕಿಳಿದಿದ್ದ ಗಿಲ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಇದನ್ನೂ ಓದಿ: ಬುಮ್ರಾಗೆ ಬೇಕಂತೆ BIG ಬ್ರೇಕ್! – ಭುವಿ ಬೆನ್ನಿಗೆ ಶಾಸ್ತ್ರಿ ಸಪೋರ್ಟ್
ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸ್ಥಾನವನ್ನು ತುಂಬಲು ಮತ್ತೊಬ್ಬ ಆಟಗಾರನನ್ನು ಹುಡುಕುವ ಬದಲು, ತಂಡದ ತಂತ್ರವನ್ನೇ ಬದಲಿಸಬೇಕು ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ಹಾರ್ದಿಕ್ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಕೊಡುಗೆ ವಿಶಿಷ್ಟವಾಗಿದ್ದು, ಅವರಂತೆಯೇ ಮತ್ತೊಬ್ಬ ಆಟಗಾರ ಸಿಗುವುದು ಸುಲಭವಲ್ಲ. ಹೀಗಾಗಿ ತಂಡವು ಲಭ್ಯವಿರುವ ಆಟಗಾರರ ಸಾಮರ್ಥ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕು ಎಂಬುದು ಗವಾಸ್ಕರ್ ಹೇಳಿದ್ದಾರೆ.
ಮೂರು ವರ್ಷಗಳ ಬಳಿಕ ಭಾರತಕ್ಕೆ ಮರಳಿರುವ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಗೋವಾದಲ್ಲಿ ಆಯೋಜಿಸಲು ಬಿಸಿಸಿಐ ಈಗಾಗಲೇ ನಿರ್ಧರಿಸಿತ್ತು. ಈಗ ದಿನಾಂಕ ಕೂಡ ಫಿಕ್ಸ್ ಆಗಿದೆ. ಡಿಸೆಂಬರ್ 16 ರಂದು ನಡೆಯಲಿದೆ ಎಂದು ಬೆಳಕಿಗೆ ಬಂದಿದೆ. ಐಪಿಎಲ್ ಹರಾಜು ಡಿಸೆಂಬರ್ 16 ರಂದು ಗೋವಾದ ಒಂದು ಪಂಚತಾರಾ ಹೋಟೆಲ್ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಆದ್ರೆ ಬಗ್ಗೆ ಇನ್ನೂ ಅಧಿಕೃತವಾಗಿ ಬಿಸಿಸಿಐ ಘೋಷಣೆ ಮಾಡಿಲ್ಲ.
ಯಶಸ್ವಿ ಕೋಚ್ಗಳಲ್ಲಿ ಒಬ್ಬರಾದ ಮಹೇಲಾ ಜಯವರ್ಧನೆ ಹಾಗೂ ಮುಂಬೈ ಫ್ರಾಂಚೈಸಿ ಪರಸ್ಪರ ಒಪ್ಪಂದದ ಮೇರೆಗೆ ಬೇರ್ಪಡಲು ನಿರ್ಧರಿಸಿದ್ದು, ಈ ನಿರ್ಗಮನವು ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಮುನ್ಸೂಚನೆಯಾಗಿದೆ. ಇದರೊಂದಿಗೆ ತಂಡದ ನಾಯಕತ್ವದ ಕುರಿತಾಗಿಯೂ ಹೊಸ ಚರ್ಚೆಗಳು ಮುನ್ನೆಲೆಗೆ ಬಂದಿದ್ದು, ರೋಹಿತ್ ಶರ್ಮಾ ಅವರು ಮತ್ತೆ ಮುಂಬೈ ತಂಡದ ನಾಯಕನಾಗಿ ಕಣಕ್ಕಿಳಿಯಬಹುದು ಎಂಬ ಊಹಾಪೋಹಗಳು ಜೋರಾಗಿವೆ.
ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಅವರು ಸಂದರ್ಶನ ಸಖತ್ ವೈರಲ್ ಆಗಿದೆ. ಯೂಟ್ಯೂಬ್ ಚಾನೆಲ್ ಸಂದರ್ಶನದ ವೇಳೆ 3ಜನರ ಹೆಸರು ಹೇಳಿ ‘ಕಿಲ್, ಮ್ಯಾರಿ, ಹುಕ್ಅಪ್’ ಆಟವಾಡಲು ಕೇಳಲಾಗಿತ್ತು. ಆಗ ಶ್ರೇಯಸ್ ಅಯ್ಯರ್ ಅವರನ್ನು ಕೊಂದು, ಅಭಿಷೇಕ್ ಶರ್ಮಾ ಅವರನ್ನು ಮದುವೆಯಾಗಿ ಮತ್ತು ಶುಭಮನ್ ಗಿಲ್ ಅವರೊಂದಿಗೆ ಹುಕ್ಅಪ್ ಮಾಡುವೆ” ಎಂದು ಅನಯಾ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಗೆ ಮುಂಚೂಣಿಯಲ್ಲಿದ್ದ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್, ಕೊನೆಯ ಕ್ಷಣದಲ್ಲಿ ರೇಸ್ನಿಂದ ಹಿಂದೆ ಸರಿಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಕ್ಟೋಬರ್ 14, 2026ರ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದವರೆಗೂ ಇವರ ಹೆಸರೇ ಜೋರಾಗಿ ಕೇಳಿಬರುತ್ತಿತ್ತಾದರೂ, ಅಂತಿಮವಾಗಿ ಇವರು ಅರ್ಜಿ ಸಲ್ಲಿಸದಿರಲು ಆರ್ಥಿಕ ಕಾರಣಗಳು ಮತ್ತು ಬಿಸಿಸಿಐನ ಕಠಿಣ ನಿಯಮಗಳೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಪಂದ್ಯ ಆರಂಭವಾಗಿದ್ದು, ಎರಡು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದು, ಸ್ಟೀವ್ ಸ್ಮಿತ್ಗೆ ತಲೆಗೆ ಚೆಂಡು ಬಡಿದ ಕಾರಣ ಕನ್ಕಷನ್ ಪರೀಕ್ಷೆ ನಡೆಸಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ಆಡಲು ಅನುಮತಿ ಪಡೆದ ಅವರು ಮತ್ತೆ ಕಣಕ್ಕಿಳಿದರು. ಇದೀಗ ಎರಡನೇ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ತಿರುಗೇಟು ನೀಡಲು ಪ್ರಯತ್ನಿಸುತ್ತಿದ್ದು, ಸರಣಿ ರೋಚಕ ಹಂತ ತಲುಪಿದೆ.

ನೋಡಿರಿ

