ನೌಟಂಕಿ ನಖ್ವಿಗಿಲ್ಲ ಉಳಿಗಾಲ! ACC ಅಧ್ಯಕ್ಷ ಸ್ಥಾನದಿಂದ ಔಟ್?
ಭಾರತಕ್ಕೆ 2 ಟ್ರೋಫಿ ವಾಪಸ್?

ಪಾಕಿಸ್ತಾನದವ್ರು ಭಾರತದ ವಿರುದ್ಧ ಪಂದ್ಯಗಳನ್ನ ಗೆಲ್ಲೋದನ್ನ ಮರೆತು ಬಾಲ ಬಿಚ್ಚೋದನ್ನೇ ಫುಲ್ ಟೈಂ ಡ್ಯೂಟಿ ಮಾಡ್ಕೊಂಡಿದ್ದಾರೆ. ಮೆನ್ಸ್ ಌಂಡ್ ವುಮೆನ್ಸ್ ಎರಡೂ ತಂಡಗಳಲ್ಲೂ ಬಿಲ್ಡಪ್ಗೇನು ಕಮ್ಮಿ ಇಲ್ಲ. ಆದ್ರೆ ಆಟಗಾರರಿಗಿಂತ ಜಾಸ್ತಿ ನಖ್ರಾ ಮಾಡೋದು ಪಿಸಿಬಿ ಌಂಡ್ ಎಸಿಸಿ ಅಧ್ಯಕ್ಷ ಆಗಿರೋ ಮೊಹ್ಸಿನ್ ನಖ್ವಿ. ಒಂದೇ ವರ್ಷದಲ್ಲಿ ಭಾರತ ಗೆದ್ದ ಎರಡು ಟ್ರೋಫಿಗಳನ್ನ ಕದ್ದೊಯ್ದ ನಖ್ವಿ ನಾನೇ ಗೆದ್ದೇ ಅನ್ನೋ ಥರ ಬೀಗಿದ್ದ. ಆದ್ರೀಗ ಇದೇ ಅಹಂಕಾರದಿಂದ ನಖ್ವಿ ಅಧ್ಯಕ್ಷಪಟ್ಟಕ್ಕೆ ಕುತ್ತು ಬಂದಿದೆ.
2025ರಲ್ಲಿ ಭಾರತದ ಮೆನ್ಸ್ ಟೀಂ ಏಷ್ಯಾಕಪ್ ಫೈನಲ್ ಗೆದ್ರೂ ಟ್ರೋಫಿ ಸಿಕ್ಕಿಲ್ಲ.. 2026ರಲ್ಲಿ ಭಾರತ ಮಹಿಳಾ ತಂಡ ಏಷ್ಯಾಕಪ್ ಚಾಂಪಿಯನ್ಸ್ ಆದ್ರೂ ಕಪ್ ಕೊಡ್ಲಿಲ್ಲ. ಒಂದೇ ವರ್ಷದ ಅಂತರದಲ್ಲೇ ಭಾರತದ ಎರಡು ಟ್ರೋಫಿಗಳನ್ನ ಕದ್ದ ಮೊಹ್ಸಿನ್ ನಖ್ವಿಗೆ ಈಗ ಕೇಡುಗಾಲ ಶುರುವಾಗಿದೆ. ಎಸಿಸಿ ಅಧ್ಯಕ್ಷಸ್ಥಾನವನ್ನೇ ಕಳ್ಕೊಳ್ಳೋ ಸ್ಥಿತಿಗೆ ಬಂದಿದ್ದಾರೆ. ಯಾಕಂದ್ರೆ ನಖ್ವಿ ಕಂಟಿನ್ಯೂ ಆಗೋಕೆ ಯಾವ ರಾಷ್ಟ್ರಗಳೂ ಸುತಾರಾಂ ಒಪ್ಪಿಗೆ ನೀಡ್ತಿಲ್ಲ.
ಎಸಿಸಿ ಅಧ್ಯಕ್ಷ ನಖ್ವಿ ವಿರುದ್ಧ ತಿರುಗಿ ಬಿದ್ದ ಸದಸ್ಯ ರಾಷ್ಟ್ರಗಳು!
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷನಾಗಿರುವ ಕಾರಣಕ್ಕೆ ಮೊಹ್ಸಿನ್ ನಖ್ವಿ ಭಾರತದ ಎರಡು ಟ್ರೋಫಿಗಳನ್ನ ಕದ್ದೊಯ್ದಿದ್ದಾರೆ. ಹಸ್ತಾಂತರ ಮಾಡುವಂತೆ ಬಿಸಿಸಿಐ ಒತ್ತಾಯಿಸಿದ್ರೂ ಕ್ಯಾಪ್ಟನ್ಗಳೇ ಬಂದು ನನ್ನ ಕೈಯ್ಯಾರೆ ಟ್ರೋಫಿ ತಗೊಂಡು ಹೋಗ್ಲಿ ಅಂತಾ ಉದ್ಧಟತನದ ಮಾತುಗಳನ್ನಾಡಿದ್ರು. ಆದ್ರೀಗ ಅದೇ ನಖ್ವಿಯ ಕುರ್ಚಿಗೆ ಕುತ್ತು ಬಂದಿದೆ. ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಕೌನ್ಸಿಲ್‌ನ ಪ್ರಮುಖ ಸದಸ್ಯ ರಾಷ್ಟ್ರಗಳು ತಿರುಗಿಬಿದ್ದಿದ್ದು ಅಧ್ಯಕ್ಷಸ್ಥಾನದಲ್ಲಿ ಕಂಟಿನ್ಯೂ ಆಗುವ ಚಾನ್ಸ್ ಮಿಸ್ ಆಗಲಿದೆ. ಌಂಡ್ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ಈ ಪ್ರತಿಷ್ಠಿತ ಹುದ್ದೆಗೇರೋ ಮಾತುಗಳೂ ಶುರುವಾಗಿವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಪ್ರಮುಖ 5 ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ಪೈಕಿ ಅಂದ್ರೆ ಭಾರತ, ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್ ಮತ್ತು ಅಫ್ಘಾನಿಸ್ತಾನ್ ಪೈಕಿ ಮೂರರಿಂದ ನಾಲ್ಕು ದೇಶಗಳು ಮೊಹ್ಸಿನ್ ನಖ್ವಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯೋ ಬಗ್ಗೆ ಬೆಂಬಲ ಹಿಂಪಡೆಯಲು ನಿರ್ಧರಿಸಿದ್ದಾರೆ. ಏಷ್ಯಾಕಪ್ ಟೂರ್ನಿಗಳ ಆಯೋಜನೆ ಮತ್ತು ರಾಜಕೀಯ ಬಿಕ್ಕಟ್ಟುಗಳ ವಿಚಾರದಲ್ಲಿ ನಖ್ವಿ ನಡೆಯೇ ಇತರ ರಾಷ್ಟ್ರಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರ ಅವಧಿ ಹೇಗಿರುತ್ತೆ ಅನ್ನೋದನ್ನ ಮೊದ್ಲು ನೋಡೋಣ.
ನೌಟಂಕಿ ನಖ್ವಿಗಿಲ್ಲ ಸಪೋರ್ಟ್!
ಸದಸ್ಯ ರಾಷ್ಟ್ರಗಳ ನಡುವೆ ತಲಾ 2 ವರ್ಷಗಳಿಗೊಮ್ಮೆ ಅಧ್ಯಕ್ಷರ ರೊಟೇಷನ್
2 ವರ್ಷ ಆದಮೇಲೂ ಮುಂದುವರಿಯಲು ಎಲ್ಲ ರಾಷ್ಟ್ರಗಳ ಸಮ್ಮತಿ ಅಗತ್ಯ
ನಖ್ವಿ 2 ವರ್ಷಗಳ ಅಧಿಕಾರಾವಧಿ 2027ರ ಏ.2 ರಂದು ಅಧಿಕೃತವಾಗಿ ಅಂತ್ಯ
ಮೊಹ್ಸಿನ್ ನಖ್ವಿಗೆ ಬಹುಮತವೇ ಇಲ್ಲದ ಕಾರಣ ಅವಧಿ ವಿಸ್ತರಣೆ ಅಸಾಧ್ಯ
ಅಧಿಕಾರ ರೊಟೇಷನ್ ಆಧಾರದ ಮೇಲಿದ್ದು ಪಾಕ್ ಬಳಿಕ ಬಾಂಗ್ಲಾ ಸರದಿ
ಬಹುಶಃ ಇಲ್ಲಿ ನಖ್ವಿ ನಿಯತ್ತಾಗಿ ಅಧ್ಯಕ್ಷ ಸ್ಥಾನ ನಿರ್ವಹಣೆ ಮಾಡಿದ್ರೆ ಇನ್ನೊಂದು ಎರಡು ವರ್ಷ ಕಂಟಿನ್ಯೂ ಆಗಪ್ಪ ಅಂತಾ ಎಲ್ರೂ ಸಪೋರ್ಟ್ ಮಾಡ್ತಿದ್ರು. ಆದ್ರೆ ನಖ್ವಿ ವಿವಾದಗಳಲ್ಲೇ ತಮ್ಮ ಅಧಿಕಾರ ಕಳೆದಿದ್ದಾರೆ. ಪಿಸಿಬಿ ಅಧ್ಯಕ್ಷ ಮತ್ತು ಪಾಕ್ ಆಂತರಿಕ ಸಚಿವರೂ ಆಗಿರೋ ನಖ್ವಿ ತನ್ನ ಸರ್ಕಾರವನ್ನ ಮೆಚ್ಚಿಸೋಕೆ ಹೋಗಿ ಬೇಡದೇ ಇರೋ ಕೆಲಸಗಳನ್ನೇ ಮಾಡಿದ್ದಾರೆ. ಅದ್ರಲ್ಲೂ ಭಾರತ ವಿರೋಧಿ ನಿಲುವು ಹಾಗೂ ಪ್ರವೋಕ್ ಮಾಡುವ ರೀತಿಯಲ್ಲಿ ಸೋಶಿಯಲ್ ಮೀಡಿಯಾ ಪೋಸ್ಟ್ಗಳನ್ನ ಹಾಕುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ಭಾರತೀಯ ಪುರುಷರ ಕ್ರಿಕೆಟ್ ತಂಡ (2025) ಮತ್ತು ಮಹಿಳಾ ಕ್ರಿಕೆಟ್ ತಂಡ (2026) ಏಷ್ಯಾಕಪ್ ಟೂರ್ನಿಗಳನ್ನು ಗೆದ್ದ ಮೇಲೂ ನಖ್ವಿ ಕೈಯಿಂದ ಟ್ರೋಫಿ ತಗೊಳ್ಳಲ್ಲ ಅಂದಿದ್ದು. ಯಾವಾಗ ಭಾರತ ತನಗೆ ನಯಾಪೈಸೆ ಬೆಲೆ ಕೊಡಲ್ಲ ಅನ್ನೋದು ಗೊತ್ತಾಯ್ತೋ ಟ್ರೋಫಿನೇ ಹೊತ್ತೊಯ್ದಿದ್ರು. ಆದ್ರೆ ಮುಂದಿನ ಏಷ್ಯಾಕಪ್ಗಳಲ್ಲಿ ಭಾರತ ಯಾವುದೇ ಸಮಸ್ಯೆ ಇಲ್ಲದೆ ಟ್ರೋಫಿ ಹಿಡಿದು ಸಂಭ್ರಮಿಸಬಹುದು.
ಎಸಿಸಿ ಅಧ್ಯಕ್ಷರಾಗಲು ತಮೀಮ್ ಇಕ್ಬಾಲ್ ಉತ್ಸುಕ!
ಸದ್ಯ ಪಾಕ್ ಟರ್ಮ್ ಬಳಿಕ ಬಾಂಗ್ಲಾದೇಶಕ್ಕೆ ಎಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ. ಬಾಂಗ್ಲಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪ್ರಸ್ತುತ ಬಿಸಿಬಿ ಮುಖ್ಯಸ್ಥರಾಗಿರುವ ತಮೀಮ್ ಇಕ್ಬಾಲ್ ಅವರು ಎಸಿಸಿ ಅಧ್ಯಕ್ಷ ಹುದ್ದೆಗೇರಲು ಇಂಟ್ರೆಸ್ಟ್ ತೋರಿಸ್ತಿದ್ದಅರೆ. ಈಗಾಗಲೇ ಎಸಿಸಿ ಮಂಡಳಿಯ ಸದಸ್ಯರಿಗೆ ಅಧಿಕೃತವಾಗಿ ತಿಳಿಸಿದ್ದಾರೆ. ಭಾರತ ಸೇರಿದಂತೆ ಇತರ ಪ್ರಮುಖ ಸದಸ್ಯ ರಾಷ್ಟ್ರಗಳು ಕೂಡ ಬಾಂಗ್ಲಾದೇಶಕ್ಕೆ ಬೆಂಬಲ ನೀಡಲಿದ್ದಾರೆ. ಸೋ ಹೊಸ ಅಧ್ಯಕ್ಷರ ಅಡಿಯಲ್ಲಿ ಮುಂದಿನ ಏಷ್ಯಾಕಪ್ ಹೇಗೆ ನಡೆಯುತ್ತೆ ಅನ್ನೋದೇ ಇಲ್ಲಿರೋ ಕುತೂಹಲ.

ನೋಡಿರಿ

