5 ಲಕ್ಷ ಗಿಫ್ಟ್‌.. ದುಬೈನಲ್ಲಿ ಕೆಲಸ.. ಕೈಯಲ್ಲಿ ದುಡ್ಡಿದ್ರೂ ಸಿಂಪಥಿ ಪ್ಲೇಕಾರ್ಡ್? – ಬಿಗ್‌ಬಾಸ್‌ ಕುಮಾರಿ ಫುಲ್ ಟ್ರೋಲ್‌!

5 ಲಕ್ಷ ಗಿಫ್ಟ್‌.. ದುಬೈನಲ್ಲಿ ಕೆಲಸ.. ಕೈಯಲ್ಲಿ ದುಡ್ಡಿದ್ರೂ ಸಿಂಪಥಿ ಪ್ಲೇಕಾರ್ಡ್? – ಬಿಗ್‌ಬಾಸ್‌ ಕುಮಾರಿ ಫುಲ್ ಟ್ರೋಲ್‌!

ಬಿಗ್‌ ಬಾಸ್‌ ಕನ್ನಡ ಸೀಸನ್‌ 13. ಇಷ್ಟು ದಿನ ಬರೀ ಕೆಟ್ಟ ಮಾತು, ಬರೀ ಜಗಳದಿಂದ ಸದ್ದು ಮಾಡುತ್ತಿದ್ದ ದೊಡ್ಮನೆಯಲ್ಲಿ ಈ ವಾರ ಸ್ವಲ್ಪ ಸೈಲೆಂಟ್‌ ಆಗಿದೆ. ದೊಡ್ಮನೆಯಲ್ಲಿ ಮಾಡ್ರನ್‌ ಮಹಾಕವಿ ಮಂಜ ಎಲಿಮಿನೇಟ್‌ ಆದ ಮೇಲೆ ಅಗ್ನಿ ಪರೀಕ್ಷೆಯಲ್ಲಿ ವೀಕ್ಷಕರ ಮನಗೆದ್ದ ಕುಮಾರಿ ಹಾಗೂ ಲಕ್ಷ್ಮೀ ಗೌಡ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಇದೀಗ ಕುಮಾರಿ ಆರಂಭದಲ್ಲೇ ಮನೆ ಮಂದಿ ಮನ ಗೆದ್ದಿದ್ದಾರೆ. ಆದ್ರೀಗ ದೊಡ್ಮನೆಗೆ ಎಂಟ್ರಿ ಕೊಡ್ತಿದ್ದಂತೆ ಕುಮಾರಿ ಟ್ರೋಲ್‌ ಪೇಜ್‌ಗಳಿಗೆ ಆಹಾರ ಆಗಿದ್ದಾರೆ.

ಇದನ್ನೂ ಓದಿ: ಈ ಆಹಾರಗಳನ್ನ ಸೇವಿಸಿದ್ರೆ ಬ್ಯಾಡ್‌ ಕೊಲೆಸ್ಟ್ರಾಲ್‌ ಬರಲ್ಲ! – ಮನೆಯಲ್ಲೇ ಟ್ರೈ ಮಾಡಿ ಈ ರೆಸಿಪಿ!

ಬಿಗ್‌ಬಾಸ್‌ ಅಗ್ನಿ ಪರೀಕ್ಷೆಯಲ್ಲಿ ಜನರ ಮೆಚ್ಚುಗೆ ಗಳಿಸಿದ್ದ ನಂಜನಗೂಡಿನ ಕುಮಾರಿ ಇದೀಗ ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಕುಂತ್ರೆ ನಿಂತ್ರೆ ಚುಟುಕು ಉದುರಿಸೋ ಈ ಚಟಪಟಾಕಿ ದೊಡ್ಮನೆಯಲ್ಲೂ ತಮ್ಮ ಮಾತಿನ ಮೂಲಕ ಮನಗೆದ್ದಿದ್ದಾರೆ. ಚುಟುಕಿನ ಮೂಲಕವೇ ಎಲ್ಲರನ್ನೂ ಹೊಗಳಿ ಅಟ್ಟಕ್ಕೇರಿಸಿ ಸಹ ಸ್ಪರ್ಧಿಗಳಿಂದ ಬೆನ್ನು ತಟ್ಟಿಸಿಕೊಂಡಿದ್ದಾರೆ. ಆದ್ರೀಗ ಕುಮಾರಿ ಟ್ರೋಲ್‌ ಪೇಜ್‌ಗಳಿಗೆ ಆಹಾರ ಆಗಿದ್ದಾರೆ. ಬಡತನ ಅನ್ನೋ ಟಾಪಿಕ್‌ ಇಟ್ಕೊಂಡು ಸಿಂಪತಿ ಪ್ಲೇಕಾರ್ಡ್‌ ಬಳಸ್ತಿದ್ದಾರೆ. ವೋಟ್‌ಗಾಗಿ ಈ ಡ್ರಾಮಾ ಆಡ್ತಿದ್ದಾರೆ ಅಂತ ಹೇಳ್ತಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡಿನ ಗ್ರಾಮೀಣ ಭಾಗದವರಾದ 20 ವರ್ಷದ ಲಾವಣ್ಯ ಕುಮಾರಿ, ಬಿಗ್‌ಬಾಸ್‌ ಕನ್ನಡ 13ರ ಆರಂಭಕ್ಕೂ ಮುನ್ನ ನಡೆದ ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಅದಾದ ಬಳಿಕ ಅನಾರೋಗ್ಯದ ಕಾರಣ ನೀಡಿ ಕಾರ್ಯಕ್ರಮದಿಂದ ಅರ್ಧದಲ್ಲೇ ಹೊರಬರಬೇಕಾಯಿತು. ಕಡುಬಡತನದ ಕುಟುಂಬದಿಂದ ಬಂದಿರುವ ಕುಮಾರಿ, ತಂದೆಯ ಆಸರೆಯಿಲ್ಲದೆ ಬದುಕುತ್ತಿದ್ದಾರೆ. ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದರಿಂದ ಸಣ್ಣ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಕುಮಾರಿ  ಅಗ್ನಿಪರೀಕ್ಷೆಯಿಂದ ಹೊರಬಂದಾಗ ಅವರ ಕುಟುಂಬದ ಪರಿಸ್ಥಿತಿ ಅರಿತ ಶೋನ ಪ್ರಾಯೋಜಕ ಸಂಸ್ಥೆ ಆಕೆಗೆ 5 ಲಕ್ಷ ರೂಪಾಯಿ ಹಣದ ಸಹಾಯ ಮಾಡಿತ್ತು. ಜೊತೆಗೆ ಕುಮಾರಿಯ ಕಾಲೇಜು ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಹಾಗೂ ವ್ಯಾಸಂಗದ ನಂತರ ಉದ್ಯೋಗಾವಕಾಶ ನೀಡುವ ಭರವಸೆ ನೀಡಿತ್ತು. ಅದಾದ ಬಳಿಕ ಮನೆಯಲ್ಲೇ ಸ್ಪಲ್ಪ ಸಮಯ ಇದ್ದ ಕುಮಾರಿಗೆ ಮತ್ತೆ ಬಿಗ್‌ಬಾಸ್‌ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ದೊಡ್ಮನೆಯಲ್ಲಿ ಚೆನ್ನಾಗೇ ಆಟ ಆಡ್ತಿದ್ದಾರೆ. ಆದ್ರೆ ಟ್ರೋಲ್‌ ಪೇಜ್‌ಗಳು ಮಾತ್ರ ಕುಮಾರಿ ಕಾಸ್ಟೂಮ್‌ ವಿಚಾರ ಇಟ್ಕೊಂಡು ಟೀಕೆ ಮಾಡ್ತಿದೆ.

ಅಂದ್ಹಾಗೆ ಟ್ರೋಲ್ ಪೇಜ್‌ಗಳ ಆರೋಪ ಕುಮಾರಿ ಧರಿಸುತ್ತಿರುವ ಬಟ್ಟೆ ಬಗ್ಗೆ. ಅಗ್ನಿಪರೀಕ್ಷೆಯಲ್ಲಿ ಭಾಗವಹಿಸಿದ್ದಾಗಲೂ ಕುಮಾರಿ ಅದೇ ಸ್ವೆಟರ್ ಧರಿಸಿದ್ದರು. ಬಿಗ್‌ ಬಾಸ್‌ಗೆ ಎಂಟ್ರಿ ಕೊಡುವಾಗಲೂ ವೇದಿಕೆಗೆ ಅದೇ ಸ್ವೆಟರ್ ಧರಿಸಿ ಬಂದಿದ್ದಾರೆ. ಆದ್ರೆ, ಅವರ ಸೋಶಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ & ರೀಲ್ಸ್‌ ವಿಡಿಯೋಗಳಲ್ಲಿ ಥರ ಥರವಾದ ಉಡುಪುಗಳನ್ನ ಧರಿಸಿದ್ದಾರೆ. ರೀಲ್ಸ್‌ ಮಾಡೋವಾಗ ಕಲರ್‌ ಕಲರ್‌ ಡ್ರೆಸ್‌ ಹಾಕೋಕೆ ಆಗುತ್ತೆ. ಆದ್ರೆ ಬಿಗ್‌ಬಾಸ್‌ ಮನೆಯಲ್ಲಿ ಒಂದೇ ಯೂನಿಫಾರ್ಮ್‌ ಯಾಕೆ? ಲಕ್ಷ ಲಕ್ಷ ಹಣ ಸಿಕ್ಕಿದ್ರೂ ಶಾಪಿಂಗ್‌ ಮಾಡೋಕೆ ಆಗಿಲ್ವಾ? ಒಂದೇ ಬಟ್ಟೆ ಧರಿಸಿ ಸಿಂಪತಿ ಗಿಟ್ಟಿಸಿಕೊಳ್ತಿದ್ದಾರಾ? ವೋಟ್‌ಗಾಗಿ ಇಷ್ಟೆಲ್ಲಾ ಡ್ರಾಮಾ ಮಾಡ್ತಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಕುಮಾರಿ ಟ್ರೋಲ್‌ ಆಗ್ತಿದ್ದಂತೆ ಆಕೆ ಸ್ನೇಹಿತ ಜಯಪ್ರಕಾಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಜಯಪ್ರಕಾಶ್‌ ಗೌಡ, ಬಿಗ್ ಬಾಸ್ ಆಡಿಷನ್‌ಗೆ ಕುಮಾರಿ ಕಳಿಸಿದ್ದ ವಿಡಿಯೋ ಸೆಲೆಕ್ಟ್ ಆಗಿತ್ತು. ಇದಾದ ನಂತರ ಕುಮಾರಿ ಗ್ರೂಪ್‌ ಡಿಸ್ಕಶನ್‌ಗೆ ಹೋಗಿದ್ದಾಗ ಇದೇ ರೀತಿಯ ಡ್ರೆಸ್‌ ಹಾಕಿಕೊಂಡು ಹೋಗಿದ್ದರು. ನಂತರ, ಅಗ್ನಿ ಪರೀಕ್ಷೆಗೆ, ಬಿಗ್‌ಬಾಸ್‌ ಮನೆಗೆ ಹೋಗುವಾಗಲೂ ಇದೇ ರೀತಿಯ ಡ್ರೆಸ್ ಹಾಕಿಕೊಂಡು ಬರುವುದಕ್ಕೆ ಬಿಗ್‌ಬಾಸ್‌ ಟೀಂ ಹೇಳಿದ್ದು. ಅದಕ್ಕಾಗೇ ಈ ಡ್ರೆಸ್‌ ಹಾಕಿಕೊಂಡು ಬಂದ್ರು ಎಂದಿದ್ದಾರೆ. ಇನ್ನು ಬಿಗ್ ಬಾಸ್ ಕಾರ್ಯಕ್ರಮದ ಪ್ರಾಯೋಜಕ ಸಂಸ್ಥೆ ಕುಮಾರಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿರುವ ವಿಚಾರದ ಬಗ್ಗೆಯೂ ಜಯಪ್ರಕಾಶ್‌ ಮಾತನಾಡಿದ್ದಾರೆ. ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆಯ ಮಾಲೀಕರು ಕುಮಾರಿಗೆ  5 ಲಕ್ಷ ರೂ. ನಗದು ಸಹಾಯಧನ ಕೊಡುವುದಾಗಿ ಘೋಷಣೆ ಮಾಡುತ್ತಾರೆ. ಜೊತೆಗೆ, ಕುಮಾರಿಯ ಓದು ಮುಗಿದ ನಂತರ ಕರ್ನಾಟಕ ಶಾಖೆ ಅಥವಾ ದುಬೈ ಶಾಖೆಯಲ್ಲಿ ಕೆಲಸ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದ್ರೆ,‌ ಇಲ್ಲಿವರೆಗೂ ಆ 5 ಲಕ್ಷದಲ್ಲಿ ಒಂದೇ ಒಂದು ರೂಪಾಯಿ ಆಕೆಯ ಖಾತೆಗೆ ಬಂದಿಲ್ಲ. ಕುಮಾರಿ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಮಾಡ್ತಿದ್ರೂ ಇಲ್ಲಿವರೆಗೂ ಒಂದೇ ಒಂದು ಪ್ರಮೋಷನ್ ವಿಡಿಯೋ ಕೂಡ ಮಾಡಿಲ್ಲ. ಅವರ ಬಳಿ ಹಣವೇ ಇಲ್ಲದ ಕಾರಣ ಈಗಲೂ ಕಾಲೇಜಿಗೆ ರಜೆ ಇದ್ದಾಗ ಕೆಲಸಕ್ಕೆ ಹೋಗುತ್ತಾರೆ. ಅಗ್ನಿ ಪರೀಕ್ಷೆ ವೇದಿಕೆಗೆ ಬಂದಾಕ್ಷಣ ಆಕೆಯ ಜೀವನವೇನೂ ಬದಲಾವಣೆ ಆಗಿಲ್ಲ ಎಂದು ಜಯಪ್ರಕಾಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *