ಸ್ಮೃತಿ ಮಂಧಾನ ನಾಯಕತ್ವದಲ್ಲಿ ಶುಭಾರಂಭ- ಜಿಂಬಾಬ್ವೆಗೆ ಸೋಲುಣಿಸಿದ ಟೀಂ IND

ಸ್ಮೃತಿ ಮಂಧಾನ ನಾಯಕತ್ವದಲ್ಲಿ ಶುಭಾರಂಭ-  ಜಿಂಬಾಬ್ವೆಗೆ ಸೋಲುಣಿಸಿದ ಟೀಂ IND

ಭಾರತ ಮಹಿಳಾ ಟಿ20 ತಂಡದ ಪೂರ್ಣ ಪ್ರಮಾಣದ ನಾಯಕಿಯಾಗಿ ಸ್ಮೃತಿ ಮಂಧಾನ ಅವರು ಶುಭಾರಂಭ ಮಾಡಿದ್ದಾರೆ. ರಾಯ್‌ಪುರದಲ್ಲಿ ನಡೆದ ಭಾರತ ಮತ್ತು ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ಸ್ಮೃತಿ ಮಂಧಾನ ಅವರಿಗೆ ಈ ಗೆಲುವು ಆತ್ಮವಿಶ್ವಾಸ ಹೆಚ್ಚಿಸುವಂತಾಗಿದೆ. ತವರಿನ ಅಭಿಮಾನಿಗಳ ನಿರೀಕ್ಷೆಯ ನಡುವೆಯೇ ಕಣಕ್ಕಿಳಿದ ಭಾರತೀಯ ಆಟಗಾರ್ತಿಯರು ಪಂದ್ಯದಲ್ಲಿ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸಿದರು. ಜಿಂಬಾಬ್ವೆ ತಂಡ ಕೂಡ ಭಾರತಕ್ಕೆ ಸುಲಭವಾಗಿ ಗೆಲುವು ಬಿಟ್ಟುಕೊಡದೆ ಪೈಪೋಟಿ ನೀಡಿತು.
ಆದರೆ, ಒತ್ತಡದ ಸಂದರ್ಭದಲ್ಲೂ ತಾಳ್ಮೆ ಕಾಪಾಡಿಕೊಂಡ ಭಾರತೀಯ ಆಟಗಾರ್ತಿಯರು ಅಂತಿಮವಾಗಿ ಗೆಲುವಿನ ನಗೆ ಬೀರಿದರು. ಈ ಜಯದೊಂದಿಗೆ ಸರಣಿಯಲ್ಲಿ ಭಾರತ ಮೇಲುಗೈ ಸಾಧಿಸಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಸೂರ್ಯ 52/8… ಶ್ರೇಯಸ್ 19/8 – ಪರ್ಫಾಮೆನ್ಸ್ ಜೊತೆ ಕ್ಯಾಪ್ಟನ್ಸಿಯೂ ಫೇಲ್

ಅದರಂತೆ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 114 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಆರಂಭಿಕ ಆಟಗಾರ್ತಿ ಕೆಲ್ಲಿಸ್ ನ್ಡ್ಲೋವು (42 ರನ್) ಮತ್ತು ಶಾರ್ನೆ ಮೇಯರ್ಸ್ (ಅಜೇಯ 43 ರನ್) ಝಿಂಬಾಬ್ವೆ ಪರ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಭಾರತದ ಪರ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ನಂದಿನಿ ಶರ್ಮಾ ಕೇವಲ 11 ರನ್ ನೀಡಿ 2 ಪ್ರಮುಖ ವಿಕೆಟ್ ಉರುಳಿಸುವ ಮೂಲಕ ಝಿಂಬಾಬ್ವೆ ದೊಡ್ಡ ಮೊತ್ತ ಗಳಿಸದಂತೆ ಬ್ರೇಕ್ ಹಾಕಿದರು.

ಇನ್ನು ಎರಡನೇ ಟಿ20 ಪಂದ್ಯ ಭಾರತಕ್ಕೆ ಮತ್ತೊಂದು ಮಹತ್ವದ ಸವಾಲಾಗಲಿದೆ. ಈ ಪಂದ್ಯದಲ್ಲೂ ಗೆಲುವು ಸಾಧಿಸಿದರೆ ಸರಣಿಯನ್ನು ತನ್ನದಾಗಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾಗೆ ಸಿಗಲಿದೆ. ಮತ್ತೊಂದೆಡೆ, ಜಿಂಬಾಬ್ವೆ ಮಹಿಳಾ ತಂಡ ಸರಣಿಯಲ್ಲಿ ಪುಟಿದೇಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ಸ್ಮೃತಿ ಮಂಧಾನ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಈಗ ಎಲ್ಲರ ಗಮನ ಮುಂದಿನ ಪಂದ್ಯ ಹಾಗೂ ಸರಣಿ ಗೆಲುವಿನತ್ತ ನೆಟ್ಟಿದೆ.

Kishor KV

Leave a Reply

Your email address will not be published. Required fields are marked *