ಭಾರತಕ್ಕೀಗ NZ ಟಾರ್ಗೆಟ್! – ಬೌಲಿಂಗ್ ನಲ್ಲಿ ಭುವಿಯೇ ಬ್ರಹ್ಮಾಸ್ತ್ರ
5 ಪಂದ್ಯ.. ಶ್ರೇಯಸ್ ಗೆ ಕಷ್ಟ ಕಷ್ಟ!

ಭಾರತಕ್ಕೀಗ NZ ಟಾರ್ಗೆಟ್! – ಬೌಲಿಂಗ್ ನಲ್ಲಿ ಭುವಿಯೇ ಬ್ರಹ್ಮಾಸ್ತ್ರ5 ಪಂದ್ಯ.. ಶ್ರೇಯಸ್ ಗೆ ಕಷ್ಟ ಕಷ್ಟ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20ಐ ಸರಣಿ ಮುಗೀತು.. ಹಾಗಂತ ಟೀಂ ಇಂಡಿಯಾ ಪ್ಲೇಯರ್ಸ್  ರಿಲ್ಯಾಕ್ಸ್ ಮೋಡ್​ಗೆ ಜಾರುವಂತಿಲ್ಲ. ಯಾಕಂದ್ರೆ ನಾಲ್ಕೇ ದಿನಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಬಿಗ್ ಟಾಸ್ಕ್ ಶುರುವಾಗಲಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯ ಭಾರತ ಹಾಗೇ ಮಿಚೆಲ್ ಸ್ಯಾಂಟ್ನರ್ ಲೀಡರ್​ಶಿಪ್​ನ ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಟಿ20ಐ ಕದನ ಸ್ಟಾರ್ಟ್ ಆಗಲಿದೆ. ಟೀಂ ಇಂಡಿಯಾಗೆ ಭುವನೇಶ್ವರ್ ಕುಮಾರ್ ಕಂ ಬ್ಯಾಕ್ ಮಾಡಿರೋದ್ರಿಂದ ಈ ಸಿರೀಸ್ ಬಗ್ಗೆ ತುಂಬಾನೇ ಎಕ್ಸ್​ಪೆಕ್ಟೇಷನ್ಸ್ ಕೂಡ ಇದೆ.

ಇದನ್ನೂ ಓದಿ : ವೈಭವ್‌ಗೆ ಗಂಭೀರ್ ಅನ್ಯಾಯ! ಬೌಲರ್ ಮೇಲೆ ಸಿಟ್ಟಾದ ಶ್ರೇಯಸ್!

ಭಾರತ ತಂಡವು ಅಕ್ಟೋಬರ್‌ನಿಂದ ಡಿಸೆಂಬರ್ ರವರೆಗೆ ನ್ಯೂಜಿಲೆಂಡ್‌ನಲ್ಲಿ ಲಾಂಗ್ ಟೂರ್ ಮಾಡಲಿದ್ದು ಒಟ್ಟು 12 ಪಂದ್ಯಗಳನ್ನ ಆಡಲಿದೆ. ನ್ಯೂಜಿಲೆಂಡ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ದ್ವಿಪಕ್ಷೀಯ ಸರಣಿಯಾಗಿದೆ. 5 ಪಂದ್ಯಗಳ ಟಿ-20ಐ ಸರಣಿ, 5 ಪಂದ್ಯಗಳ ಏಕದಿನ ಸರಣಿ ಹಾಗೇ 2 ಪಂದ್ಯಗಳ ಟೆಸ್ಟ್ ಸಿರೀಸ್ ಆಡ್ಬೇಕಿದೆ.   ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಇದು ಅತಿ ದೊಡ್ಡ ದ್ವಿಪಕ್ಷೀಯ ಸರಣಿಗಳಲ್ಲೊಂದು. ಮೊದ್ಲಿಗೆ ಟಿ-20ಐ ಸಿರೀಸ್ ಸ್ಟಾರ್ಟ್ ಆಗೋದ್ರಿಂದ ಮೊದಲ ಪಂದ್ಯ ಅಕ್ಟೋಬರ್ 22 ಅಂದ್ರೆ ಗುರುವಾರದಿಂದ ಶುರುವಾಗಲಿದೆ. ಌಂಡ್ ಎಲ್ಲಾ ಮ್ಯಾಚಸ್ ಕೂಡ ಭಾರತೀಯ ಕಾಲಮಾನ ಮಧ್ಯಾಹ್ನ 12.30ಕ್ಕೆ ಸ್ಟಾರ್ಟ್ ಆಗಲಿವೆ.

5 ಪಂದ್ಯಗಳ ಟಿ-20ಐ ಸರಣಿ!

ಪಂದ್ಯ                           ದಿನಾಂಕ                         ಸ್ಥಳ

1ನೇ ಪಂದ್ಯ                    ಅಕ್ಟೋಬರ್ 22                ಕ್ರೈಸ್ಟ್‌ ಚರ್ಚ್

2ನೇ ಪಂದ್ಯ                     ಅಕ್ಟೋಬರ್ 24                ಕ್ರೈಸ್ಟ್‌ ಚರ್ಚ್

3ನೇ ಪಂದ್ಯ                    ಅಕ್ಟೋಬರ್ 27                   ವೆಲ್ಲಿಂಗ್ಟನ್

4ನೇ ಪಂದ್ಯ                    ಅಕ್ಟೋಬರ್ 30                    ಆಕ್ಲೆಂಡ್

5ನೇ ಪಂದ್ಯ                     ನವೆಂಬರ್ 1                       ಹ್ಯಾಮಿಲ್ಟನ್

ಅಲ್ಲಿಗೆ 11 ದಿನಗಳ ಅಂತರದಲ್ಲೇ 5 ಪಂದ್ಯಗಳೂ ಮುಗಿಯಲಿವೆ. ಎಲ್ಲಾ ಪಂದ್ಯಗಳು ಕೂಡ ಭಾರತೀಯ ಕಾಲಮಾನ ಮಧ್ಯಾಹ್ನ 12.30ಕ್ಕೆ ಸ್ಟಾರ್ಟ್ ಆಗಲಿವೆ. ಕ್ಯಾಪ್ಟನ್ ಆಗಿ ಕಿವೀಸ್ ವಿರುದ್ಧ ಮೊದಲ ಸರಣಿಯನ್ನ ಶ್ರೇಯಸ್ ಅಯ್ಯರ್ ಫೇಸ್ ಮಾಡ್ಬೇಕಿದೆ. ಌಂಡ್ ಕಿವೀಸ್ ನೆಲದಲ್ಲೇ ಸಿರೀಸ್ ಆಗ್ತಿರೋದು ಮತ್ತೊಂದು ಚಾಲೆಂಜಿಂಗ್ ವಿಚಾರ.

ಭಾರತ ತಂಡದ ನಿರೀಕ್ಷೆಗಳು!

4 ವರ್ಷಗಳ ಬಳಿಕ ಕಂ ಬ್ಯಾಕ್ ಮಾಡಿರುವ ಭುವನೇಶ್ವರ್ ಪ್ರದರ್ಶನ

ನ್ಯೂಜಿಲೆಂಡ್ ನಾಡಿನಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುತ್ತಾ?

ಅಭಿಷೇಕ್-ಸಂಜು-ಸೂರ್ಯವಂಶಿ ನಡುವೆ ಓಪನಿಂಗ್ ಜೋಡಿ ವಾರ್

ನ್ಯೂಜಿಲೆಂಡ್ ನಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆಗಿ ಗೆಲ್ಲಬೇಕಿರುವ ಶ್ರೇಯಸ್

ಪಿಚ್ ಗಳ ವೇಗ, ಸ್ವಿಂಗ್ & ಕಂಡೀಷನ್ ಬ್ಯಾಟರ್ಸ್ & ಬೌಲರ್ಸ್ ಗೆ ಸವಾಲ್

ಸಾಲು ಸಾಲು ಪಂದ್ಯಗಳನ್ನ ಆಡಿ ರೆಸ್ಟ್ ಲೆಸ್ ಆಗಿರುವ ಪ್ಲೇಯರ್ಸ್

ಹೀಗೆ ಟೀಂ ಇಂಡಿಯಾಗೆ ನ್ಯೂಜಿಲೆಂಡ್ ನಲ್ಲಿ ಗೆಲ್ಲೋದು ಸುಲಭದ ಮಾತಲ್ಲ. ವಿದೇಶಿ ಪಿಚ್​ಗಳಲ್ಲಿ ಈಗಾಗ್ಲೇ ಶ್ರೇಯಸ್ ಕ್ಯಾಪ್ಟನ್ಸಿಯಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಭಾರತ ಕ್ಲೀನ್ ಸ್ವೀಪ್ ಆಗಿತ್ತು. ಜಿಂಬಾಬ್ವೆ ವಿರುದ್ಧ ಗೆದ್ರೂ ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡವನ್ನು ಅವರದ್ದೇ ತವರಿನಲ್ಲಿ ಎದುರಿಸೋಕೆ ಸ್ಪೆಷಲ್ ಪ್ರಿಪರೇಷನ್ ಬೇಕಾಗುತ್ತೆ. ಹಾಗೇ 2026ರ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನೇ ಸೋಲಿಸಿ ಚಾಂಪಿಯನ್ ಆಗಿತ್ತು. ಅದಕ್ಕೂ ಮುನ್ನ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್​ನಲ್ಲೂ ಭಾರತ ನ್ಯೂಜಿಲೆಂಡ್ ಸೋಲಿಗೆ ಟ್ರೋಫಿ ಗೆದ್ದಿತ್ತು. ಹೀಗಾಗಿ ಈ ಸೋಲುಗಳ ಸೇಡನ್ನ ತೀರಿಸಿಕೊಳ್ಳೋಕೆ ಕಿವೀಸ್ ಪ್ಲೇಯರ್ಸ್ ಕೂಡ ಕಾಯ್ತಾ ಇರ್ತಾರೆ. ಅದೂ ಅಲ್ದೇ ಸ್ಪೋಟಕ ಆರಂಭಿಕ ಆಟಗಾರ ಫಿನ್ ಅಲೆನ್ ತಂಡಕ್ಕೆ ಕಂ ಬ್ಯಾಕ್ ಮಾಡಿರೋದು ಬ್ಯಾಟಿಂಗ್ ಶಕ್ತಿ ಹೆಚ್ಚಿಸಲಿದೆ. ಗಂಟೆಗೆ 150+ ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಲಾಕಿ ಫರ್ಗುಸನ್ ಬೌಲಿಂಗ್​ನ ಬ್ರಹ್ಮಾಸ್ತ್ರವಾಗಲಿದ್ದಾರೆ. ಇನ್ನು ತಂಡದ ನಾಯಕ ಸ್ಯಾಂಟ್ನರ್ ಮತ್ತು ಇಶ್ ಸೋಧಿ ನ್ಯೂಜಿಲೆಂಡ್ ಮೈದಾನಗಳಲ್ಲಿ ರನ್ ಕಂಟ್ರೋಲ್ ಮಾಡೋದ್ರಲ್ಲಿ ಎಕ್ಸ್​ಪರ್ಟ್ಸ್ ಆಗಿದ್ದಾರೆ. ಸೋ ಈ ಎಲ್ಲಾ ಕಾರಣಗಳಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ-20ಐ ಸರಣಿ ಹೈವೋಲ್ಟೇಜ್ ಆಗೋದ್ರಲ್ಲಿ ಡೌಟೇ ಇಲ್ಲ.

Shantha Kumari

Leave a Reply

Your email address will not be published. Required fields are marked *