ಸೂರ್ಯ 52/8… ಶ್ರೇಯಸ್ 19/8 – ಪರ್ಫಾಮೆನ್ಸ್ ಜೊತೆ ಕ್ಯಾಪ್ಟನ್ಸಿಯೂ ಫೇಲ್
ಟೀಂ ಇಂಡಿಯಾ ದಿಕ್ಕು ಬದಲಾಗಿದ್ಯಾ?

ಪ್ರಸ್ತುತ ಭಾರತ ಟಿ-20 ವಿಶ್ವಕಪ್ ಚಾಂಪಿಯನ್ ಆಗಿದ್ರೂ ತಂಡದ ಇತ್ತೀಚಿನ ಪ್ರದರ್ಶನ ಎಕ್ಸ್ಪೆಕ್ಟೇಷನ್ ಲೆವೆಲ್ ರೀಚ್ ಆಗ್ತಿಲ್ಲ. ಸಾಲು ಸಾಲು ಸೋಲುಗಳ ನಡುವೆ ತಂಡದ ಕಳಪೆ ಪ್ರದರ್ಶನ ಎದ್ದು ಕಾಣ್ತಿದೆ. ಌಂಡ್ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯೂ ಅನಲೈಸ್ ಮಾಡ್ತಿದ್ದಾರೆ.
ಇದನ್ನೂ ಓದಿ : ವೈಭವ್ಗೆ ಗಂಭೀರ್ ಅನ್ಯಾಯ! ಬೌಲರ್ ಮೇಲೆ ಸಿಟ್ಟಾದ ಶ್ರೇಯಸ್!
2024ರಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಭಾರತ ಟಿ-20 ವಿಶ್ವಕಪ್ ಚಾಂಪಿಯನ್ ಆದ್ಮೇಲೆ ಸೂರ್ಯಕುಮಾರ್ ಯಾದವ್ ಗೆ ಕ್ಯಾಪ್ಟನ್ಸಿ ಸಿಗುತ್ತೆ. 2026ರಲ್ಲಿ ಸೂರ್ಯಕುಮಾರ್ ಲೀಡರ್ಶಿಪ್ನಲ್ಲಿ ಟ್ರೋಫಿ ಗೆದ್ದ ಭಾರತಕ್ಕೆ ನಂತ್ರದಲ್ಲಿ ಶ್ರೇಯಸ್ ಅಯ್ಯರ್ ನಾಯಕ ಆಗ್ತಾರೆ. ಇಲ್ಲಿ ಸೂರ್ಯ ಮತ್ತು ಶ್ರೇಯಸ್ ಗೆ ಪವರ್ ಸಿಕ್ಕಂತ ಸಿಚುಯೇಷನ್ ಸೇಮ್ ಇದೆ. ಆದ್ರೆ ಅದನ್ನ ಲೀಡ್ ಮಾಡ್ತಿರೋ ರೀತಿ ಡಿಫ್ರೆಂಟ್ ಆಗಿದೆ. ಒಬ್ರು ನೋ ಲಾಸ್ ಜರ್ನಿಯ ಇತಿಹಾಸ ಸೃಷ್ಟಿಸಿದ್ರೆ ಮತ್ತೊಬ್ರು ಸರಣಿಗಳನ್ನ ಗೆಲ್ಲೋದೇ ದೊಡ್ಡ ವಿಚಾರ ಆಗೋಗಿದೆ. ಸೂರ್ಯ 2 ವರ್ಷಗಳ ತಮ್ಮ ಕ್ಯಾಪ್ಟನ್ಸಿಯಲ್ಲಿ ಕಂಡ ಫೇಲ್ಯೂರ್ನ ಶ್ರೇಯಸ್ ಜಸ್ಟ್ ಐದೇ ತಿಂಗಳಲ್ಲಿ ಕಂಡಿದ್ದಾರೆ.
ಸೂರ್ಯನಡಿ 52ರಲ್ಲಿ 8 ಸೋಲು.. ಶ್ರೇಯಸ್ ಅಡಿ 19ಕ್ಕೆ 8 ಸೋಲು!
ರೋಹಿತ್ ಶರ್ಮಾ ಬಳಿಕ ಭಾರತ ತಂಡವನ್ನ ಯಶಸ್ವಿಯಾಗಿ ನಿಭಾಯಿಸಿದ ಸೂರ್ಯಕುಮಾರ್ ಯಾದವ್ ಟಿ-20ಐನಲ್ಲಿ ಒಂದೂ ಸರಣಿಯಲ್ಲೂ ಭಾರತ ಸೋತಿಲ್ಲ. ಸೂರ್ಯನ ಅಡಿ ಭಾರತ 52 ಟಿ-20ಐ ಪಂದ್ಯಗಳನ್ನ ಆಡಿದೆ. ಈ ಪೈಕಿ 40 ಪಂದ್ಯಗಳನ್ನ ಗೆದ್ರೆ 8 ಪಂದ್ಯಗಳನ್ನ ಸೋತಿದೆ. 2 ಪಂದ್ಯ ಟೈ ಮತ್ತು 2 ಪಂದ್ಯಗಳು ರದ್ದಾಗಿವೆ. ಌಂಡ್ ಎಲ್ಲಿಯೂ ಕೂಡ ಬ್ಯಾಕ್ ಟು ಪಂದ್ಯಗಳನ್ನೇ ಸೋತಿಲ್ಲ. ಒಂದು ಮ್ಯಾಚಲ್ಲಿ ಸೋತ್ರೆ ನೆಕ್ಸ್ಟ್ ಮ್ಯಾಚಲ್ಲೇ ಗೆದ್ದು ಕಂ ಬ್ಯಾಕ್ ಮಾಡ್ತಿದ್ರು. ಆದ್ರೆ ಶ್ರೇಯಸ್ ಅಡಿಯಲ್ಲಿ ಭಾರತ 19 ಪಂದ್ಯಗಳನ್ನ ಆಡಿದ್ದು ಈ ಪೈಕಿ 10ರಲ್ಲಿ ಗೆದ್ರೆ 8ರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಇನ್ನು ಶ್ರೇಯಸ್ಗೆ ಕ್ಯಾಪ್ಟನ್ಸಿ ಸಿಕ್ಕ ಮೇಲೆ 8ನೇ ಪಂದ್ಯದಲ್ಲಿ ಮೊದಲ ಗೆಲುವನ್ನ ಕಂಡಿದ್ದು. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಸೋಲು ಕಂಡು ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ವಿರುದ್ಧ ಸರಣಿ ಗೆದ್ರು. ಆ ನಂತ್ರದಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಗೋಲ್ಡ್ ಮೆಡಲ್ ಗೆದ್ರೂ ಕೂಡ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತ 2 ಪಂದ್ಯಗಳನ್ನ ಸೋತು ಸಂಕಷ್ಟದಲ್ಲಿದೆ. ಕ್ಯಾಪ್ಟನ್ ಆಗಿ ಶ್ರೇಯಸ್ ಸಾಕಷ್ಟು ಸ್ಟ್ರಗಲ್ ಪಡ್ತಿರೋದ್ರ ಜೊತೆಗೆ ಒಬ್ಬ ಬ್ಯಾಟರ್ ಆಗಿಯೂ ಮಂಕಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ T20I ಪಂದ್ಯದಲ್ಲಿ 43 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿ ನಾಯಕನಾಗಿ ತಮ್ಮ ಸಾಮರ್ಥ್ಯ ತೋರಿಸಿದರು. ಆದರೆ ಒಂದು ದೊಡ್ಡ ಇನ್ನಿಂಗ್ಸ್ನಿಂದ ಮಾತ್ರ ನಾಯಕತ್ವದ ಯಶಸ್ಸನ್ನು ಡಿಸೈಡ್ ಮಾಡೋಕಾಗಲ್ಲ. ಬೌಲರ್ಗಳ ಬಳಕೆ, ಫೀಲ್ಡ್ ಸೆಟ್ಟಿಂಗ್, ಒತ್ತಡದ ಸಂದರ್ಭಗಳ ನಿರ್ಧಾರಗಳು ಮತ್ತು ತಂಡದ ನಿರಂತರ ಗೆಲುವುಗಳೂ ಮುಖ್ಯವಾಗುತ್ತೆ. ಈ ವಿಚಾರದಲ್ಲಿ ಸೂರ್ಯ ಮತ್ತು ಶ್ರೇಯಸ್ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ.
ಸೂರ್ಯ & ಶ್ರೇಯಸ್ ಸಮರ!
2024ರ ಟಿ-20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಸೂರ್ಯನಿಗೆ ಕ್ಯಾಪ್ಟನ್ಸಿ
2026ರ ಟಿ-20 ವಿಶ್ವಕಪ್ ತಂಡದಲ್ಲಿ ಇಲ್ಲದ ಶ್ರೇಯಸ್ ಗೆ ನಾಯಕತ್ವ
ಬೌಲಿಂಗ್ & ಫೀಲ್ಡಿಂಗ್ ವೇಳೆ ಸೂರ್ಯಕುಮಾರ್ ನಿರ್ಧಾರಗಳು ಸಕ್ಸಸ್
ಡೆತ್ ಓವರ್ ಗಳಲ್ಲಿ ಬೌಲಿಂಗ್ ಆಯ್ಕೆಯೇ ಶ್ರೇಯಸ್ ಗೆ ಹೊಡೆತ
ಸೂರ್ಯನ ಅಡಿಯಲ್ಲಿ ಬುಮ್ರಾ, ಪಾಂಡ್ಯನಂಥ ಅನುಭವಿ ಪ್ಲೇಯರ್ಸ್
ಶ್ರೇಯಸ್ ಅಡಿಯಲ್ಲಿ ಹೊಸ ಬೌಲರ್ ಗಳೇ ಜಾಸ್ತಿ ಇರೋದ್ರಿಂದ ದುಬಾರಿ
ಸೂರ್ಯ ಬ್ಯಾಟಿಂಗ್ ನಲ್ಲಿ ರನ್ಸ್ ಬರದೇ ಇದ್ರೂ ನಾಯಕನಾಗಿ ತಂಡ ಗೆಲುವು
ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಕನ್ಸಿಸ್ಟೆನ್ಸಿ ಇಲ್ಲ, ತಂಡಕ್ಕೂ ಸೋಲುಗಳ ಸಂಕಷ್ಟ
ಟೋಟಲಿ ಹೇಳ್ಬೇಕು ಅಂದ್ರೆ 2024 ರಿಂದ 2026ರ ವಿಶ್ವಕಪ್ವರೆಗೆ ಭಾರತವನ್ನ ಯಾರೂ ಟಚ್ ಮಾಡೋಕೂ ಆಗ್ತಾ ಇರ್ಲಿಲ್ಲ. ಆದ್ರೆ ಶ್ರೇಯಸ್ ನಾಯಕ ಆದ್ಮೇಲೆ ಐರ್ಲೆಂಡ್ನಂತ ತಂಡವೂ ಕ್ಲೀನ್ ಸ್ವೀಪ್ ಮಾಡಿದೆ. ಜಪಾನ್ ಕೂಡ ಟಫ್ ಫೈಟ್ ಕೊಟ್ಟಿದೆ. ವಿಂಡೀಸ್ ಭಾರತದಲ್ಲೇ ದಾಖಲೆಗಳ ಸುರಿಮಳೆ ಮಾಡ್ತಿದೆ. ಹೀಗಾಗಿ ಶ್ರೇಯಸ್ ಮುಂದೆ ಸಾಲು ಸಾಲು ಸವಾಲುಗಳೇ ಇವೆ. ನಾಯಕನಾಗಿ ತಂಡವನ್ನ ಗೆಲ್ಲಿಸ್ಬೇಕು ಬ್ಯಾಟಿಂಗ್ನಲ್ಲೂ ಶೈನ್ ಆಗ್ಬೇಕು. ಸೂರ್ಯ ಕಟ್ಟಿದ್ದ ಲೆಗಸಿಯನ್ನ ಕಂಟಿನ್ಯೂ ಮಾಡ್ಬೇಕು. ಕಳೆದ ಐದು ತಿಂಗಳಲ್ಲಿ ಶ್ರೇಯಸ್ ಗೆ ಅಂದುಕೊಟ್ಟ ಮಟ್ಟಿಗೆ ಸಕ್ಸಸ್ ಸಿಗದೇ ಇದ್ರೂ ಮುಂದಿನ ಪಂದ್ಯಗಳಲ್ಲಿ ಅದನ್ನೆಲ್ಲಾ ಸರಿ ಮಾಡಿಕೊಂಡು ಓವರ್ ಕಂ ಮಾಡಬೇಕಾದ ಟಾಸ್ಕ್ ಕೂಡ ಇದೆ.

ನೋಡಿರಿ

