5ನೇ ಪಂದ್ಯಕ್ಕೇ ಬಂದಾಯ್ತು ಭುವಿ – ಬೆಂಗಳೂರಲ್ಲೇ T-20I ಕಂ ಬ್ಯಾಕ್
WI ಬೇಟೆಗೆ ಹೊಸ ಪ್ಲೇಯಿಂಗ್ 11

5ನೇ ಪಂದ್ಯಕ್ಕೇ ಬಂದಾಯ್ತು ಭುವಿ – ಬೆಂಗಳೂರಲ್ಲೇ T-20I ಕಂ ಬ್ಯಾಕ್WI ಬೇಟೆಗೆ ಹೊಸ ಪ್ಲೇಯಿಂಗ್ 11

ಬಂದಾಯ್ತು.. ಟಿ20ಐ ತಂಡಕ್ಕೆ ಭುವನೇಶ್ವರ್ ಕುಮಾರ್ ಬಂದಾಯ್ತು.. ನ್ಯೂಜಿಲೆಂಡ್ ಸಿರೀಸ್​ನಲ್ಲಿ ಕಂ ಬ್ಯಾಕ್ ಅನ್ಕೊಂಡ್ರೆ ವಿಂಡಿಸ್ ವಿರುದ್ಧದ ಕೊನೇ ಪಂದ್ಯಕ್ಕೇ ಭುವಿ ಎಂಟ್ರಿ ಕೊಟ್ಟಾಯ್ತು. ಅರ್ಶದೀಪ್ ಸಿಂಗ್ ಇಂಜುರಿ ನಡುವೆ ಈಗ ಭುವಿಯೇ ಗೇಮ್ ಚೇಂಜರ್. ಅದ್ರಲ್ಲೂ ಬೆಂಗಳೂರಲ್ಲೇ ಮ್ಯಾಚ್ ಇರೋದ್ರಿಂದ ಎಲ್ಲರ ಕಣ್ಣೂ ಸ್ವಿಂಗ್ ಕಿಂಗ್ ಮೇಲೆಯೇ ಇರುತ್ತೆ.

ಇದನ್ನೂ ಓದಿ : ವೈಭವ್‌ಗೆ ಗಂಭೀರ್ ಅನ್ಯಾಯ! ಬೌಲರ್ ಮೇಲೆ ಸಿಟ್ಟಾದ ಶ್ರೇಯಸ್!

ಭಾರತ-ವಿಂಡೀಸ್ ನಡುವಿನ ಸಿರೀಸ್​ನಲ್ಲಿ ಬ್ಯಾಟರ್​ಗಳದ್ದೇ ಹವಾ. ಕಳೆದ ನಾಲ್ಕು ಪಂದ್ಯಗಳಲ್ಲಿ ಆಲ್ರೆಡಿ 3 ಸಲ ಫಸ್ಟ್ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ತಂಡಗಳು 220+ ಟಾರ್ಗೆಟ್ ಸೆಟ್ ಮಾಡಿದ್ದಾರೆ. ಅದ್ರಲ್ಲಿ ಒಂದ್ಸಲ 250 ರನ್ಸ್ ಟಾರ್ಗೆಟ್​ನೂ ಯಶಸ್ವಿಯಾಗಿ ಚೇಸ್ ಮಾಡಿದ್ದಾರೆ. ಇನ್ನು ಟಿ20 ಪಂದ್ಯಗಳ ಒಜಿ ಸ್ಟೇಡಿಯಂ ಅಂತಾನೇ ಕರೆಸಿಕೊಳ್ಳೋ ಚಿನ್ನಸ್ವಾಮಿಯಲ್ಲಿ ಬ್ಯಾಟಿಂಗ್ ಖದರ್ ಕೇಳ್ಬೇಕಾ. ಎರಡೂ ಕಡೆ ಪವರ್ ಹಿಟ್ಟರ್​ಗಳೇ ಇರೋದ್ರಿಂದ ಯಾವ ತಂಡದ ಬೌಲರ್ಸ್ ರನ್ಸ್ ಕಂಟ್ರೋಲ್ ಮಾಡ್ತಾರೋ ಅವ್ರೇ ಗೇಮ್ ಚೇಂಜರ್ಸ್ ಆಗ್ತಾರೆ. ಈ ವಿಚಾರದಲ್ಲಿ ಭಾರತ ಪರ ಯಾವೊಬ್ಬ ಬೌಲರ್ ಕೂಡ ಭರವಸೆ ಮೂಡಿಸಿರಲಿಲ್ಲ. ಆದ್ರೆ ಕೊನೇ ಪಂದ್ಯಕ್ಕೆ ಬ್ರಹ್ಮಾಸ್ತ್ರವೇ ಸಿಕ್ಕಿದೆ.

ಅರ್ಶದೀಪ್ ಸಿಂಗ್ ಗೆ ಇಂಜುರಿ.. 5ನೇ ಪಂದ್ಯಕ್ಕೆ ಭುವಿ ಎಂಟ್ರಿ!

ವೆಸ್ಟ್ ಇಂಡೀಸ್ ವಿರುದ್ಧ ಅಕ್ಟೋಬರ್ 17 ಅಂದ್ರೆ ಶನಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐದನೇ ಮತ್ತು ನಿರ್ಣಾಯಕ ಟಿ20 ಪಂದ್ಯಕ್ಕೆ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹೈದರಾಬಾದ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದ ವೇಳೆ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಅವರ ಬೌಲಿಂಗ್ ಶೋಲ್ಡರ್​​ಗೆ ಗಾಯವಾದ ಕಾರಣ, ಬಿಸಿಸಿಐ ಭುವನೇಶ್ವರ್ ಕುಮಾರ್  ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಸೋ ಅರ್ಶದೀಪ್​ಗೆ ರೆಸ್ಟ್ ಕೊಟ್ಟು ಭುವಿಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ನೀಡೋದು ಪಕ್ಕಾ. ಅದೂ ಅಲ್ದೇ ಐಪಿಎಲ್​ನಲ್ಲಿ ಭುವಿಗೆ ಚಿನ್ನಸ್ವಾಮಿ ಸ್ಟೇಡಿಯಂ ಹೋಂ ಪಿಚ್. ಪವರ್ ಪ್ಲೇ ಹಾಗೇ ಡೆತ್ ಓವರ್​ಗಳ ಸ್ಪೆಷಲಿಸ್ಟ್ ಆಗಿರೋ ಭುವಿ ಬೆಂಗಳೂರಲ್ಲಿ ವಿಂಡೀಸ್ ಬ್ಯಾಟರ್​ಗಳಿಗೆ ಸಿಂಹಸ್ವಪ್ನವಾಗೋ ಎಲ್ಲಾ ಚಾನ್ಸಸ್ ಇದೆ.

5ನೇ ಪಂದ್ಯದಲ್ಲೂ ಆಡಲ್ಲ ವೈಭವ್.. ಕುಲ್ದೀಪ್ ಗೆ ಚಾನ್ಸ್?

ಕಳೆದ ನಾಲ್ಕೂ ಪಂದ್ಯಗಳಲ್ಲೂ ಭಾರತದ ಪರ ಆಡಲು ವೈಭವ್ ಸೂರ್ಯವಂಶಿಗೆ ಚಾನ್ಸ್ ಸಿಕ್ಕಿಲ್ಲ. ಬೆಂಚ್ ಗೆ ಸೀಮಿತವಾಗಿದ್ದಾರೆ. ಅಟ್ ಲೀಸ್ಟ್ ಐದನೇ ಪಂದ್ಯದಲ್ಲಾದ್ರೂ ಅವಕಾಶ ಕೊಡ್ತಾರಾ ಅಂದ್ರೆ ಸದ್ಯದ ಮಾಹಿತಿಗಳ ಪ್ರಕಾರ ಕೊನೇ ಮ್ಯಾಚಲ್ಲೂ ವೈಭವ್ ಮೈದಾನದಕ್ಕಿಳಿಯೋ ಸಾಧ್ಯತೆಗಳೂ ತೀರಾ ಕಡಿಮೆ. ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೂಡ ಚೆನ್ನಾಗಿ ಆಡಿರೋದ್ರಿಂದ ವೈಭವ್ ಮತ್ತೆ ಕಾಯಬೇಕಾಗಬಹುದು. ಮತ್ತೊಂದೆಡೆ ಬೌಲಿಂಗ್ ನಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಌಂಡ್ ಕುಲ್ದೀಪ್ ಯಾದವ್ ರನ್ನು ಬೆಂಗಳೂರಲ್ಲಿ ಆಡಿಸೋದು ಬೆಸ್ಟ್ ಅನ್ಸುತ್ತೆ. ಯಾಕಂದ್ರೆ ಬೆಂಗಳೂರಿನಲ್ಲಿ ಅವರು ಅತ್ಯುತ್ತಮ ದಾಖಲೆಗಳನ್ನ ಹೊಂದಿದ್ದಾರೆ, ಆರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಗಳಿಸಿದ್ದಾರೆ, ಸರಾಸರಿ 19.44 ಮತ್ತು 7.29 ರ ಎಕಾನಮಿ ರೇಟ್ ಹೊಂದಿದ್ದಾರೆ. ಹೈದರಾಬಾದ್‌ನಲ್ಲಿ ವಿಕೆಟ್ ಪಡೆಯದ ಮಾಯಾಂಕ್‌ಗೆ ರೆಸ್ಟ್ ನೀಡುವ ಸಾದ್ಯತೆಗಳಿವೆ.

ವೈಭವ್ ಗಿಲ್ಲ ಚಾನ್ಸ್?

ಸಂಜು ಸ್ಯಾಮ್ಸನ್

ಅಭಿಷೇಕ್ ಶರ್ಮಾ

ಇಶಾನ್ ಕಿಶನ್

ಶ್ರೇಯಸ್ ಅಯ್ಯರ್

ತಿಲಕ್ ವರ್ಮಾ

ಅಕ್ಷರ್ ಪಟೇಲ್

ನಿತೀಶ್ ರೆಡ್ಡಿ

ನಮನ್ ಧೀರ್

ಕುಲದೀಪ್ ಯಾದವ್

ಪ್ರಿನ್ಸ್ ಯಾದವ್

ಭುವನೇಶ್ವರ್ ಕುಮಾರ್

ಹೀಗೆ ಬೌಲಿಂಗ್​ನಲ್ಲಿ ಬದಲಾವಣೆ ಮಾಡುವ ಸಾದ್ಯತೆಗಳಿವೆ. ಮತ್ತೊಂದೆಡೆ 5ನೇ ಟಿ20 ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡದಲ್ಲೂ ದೊಡ್ಡ ಬದಲಾವಣೆಗಳೇನು ಇರಲ್ಲ. ಹೈದರಾಬಾದ್‌ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದರಿಂದ, ವೆಸ್ಟ್ ಇಂಡೀಸ್ ತಂಡವು ಅದೇ ವಿನ್ನಿಂಗ್ ಕಾಂಬಿನೇಷನ್ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಒಟ್ನಲ್ಲಿ ಸರಣಿ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಎರಡೂ ತಂಡಗಳ ಆಟಗಾರರು ಗೆಲ್ಲಲೇಬೇಕು ಅನ್ನೋ ಪ್ರೆಶರ್​ನಲ್ಲೇ ಮೈದಾನಕ್ಕಿಳಿಯಲಿದೆ. ಆದ್ರೆ ಅಂತಿಮವಾಗಿ ಯಾರು ಪಾಸ್ ಆಗ್ತಾರೆ ಅನ್ನೋದೇ ಇಲ್ಲಿರೋ ಪ್ರಶ್ನೆ. ಇನ್ನು ಭುವಿ ಬೆಂಗಳೂರಲ್ಲೇ ತಮ್ಮ ಟಿ-20ಐ ಕರಿಯರ್​ಗೆ ಕಂ ಬ್ಯಾಕ್ ಮಾಡಿದ್ರೆ ಆರ್​ಸಿಬಿ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ.

Shantha Kumari

Leave a Reply

Your email address will not be published. Required fields are marked *