ಭಾರತೀಯ ನೌಕಾಪಡೆಗೆ ಹೊಸ ಶಕ್ತಿ!- ಕಾರವಾರದಲ್ಲಿ INS ಸಮರ್ಥಕ್ ಲೋಕಾರ್ಪಣೆ!

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ತುಂಬುವ ಮಹತ್ವದ ಬೆಳವಣಿಗೆ ನಡೆದಿದೆ. ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಐಎನ್ಎಸ್ ಸಮರ್ಥಕ್ ಯುದ್ಧನೌಕೆಯನ್ನು ಇಂದು ಕಾರವಾರದ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆ ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ, ತಮಿಳುನಾಡಿನ ಕಟ್ಟುಪಳ್ಳಿಯಲ್ಲಿರುವ ಲಾರ್ಸನ್ ಅಂಡ್ ಟ್ಯೂಬ್ರೊ ಸಂಸ್ಥೆ ಈ ನೌಕೆಯನ್ನು ನಿರ್ಮಿಸಿದೆ.
ನೌಕಾಪಡೆಗೆ ಸೇರ್ಪಡೆಯಾಗಲಿರುವ ನಾಲ್ಕು ಬಹು-ಉದ್ದೇಶದ ನೌಕೆಗಳಲ್ಲಿ ಐಎನ್ಎಸ್ ಸಮರ್ಥಕ್ ಮೊದಲನೆಯದಾಗಿದೆ.
ಇದನ್ನೂ ಓದಿ: ಮದನಪಲ್ಲೆ ಲಾಡ್ಜ್ನಲ್ಲಿ ಮ*ರ್ಡರ್!- ಅ*ನೈತಿಕ ಸಂಬಂಧದ ಶಂಕೆ ನೆ*ತ್ತರು ಹರಿಸಿದ ಪತಿ
ಸಮುದ್ರದಲ್ಲಿ ಕಣ್ಗಾವಲು ನಡೆಸುವುದು, ಗಸ್ತು ಕಾರ್ಯಾಚರಣೆ, ಕಡಿಮೆ ತೀವ್ರತೆಯ ಸಮುದ್ರ ಕಾರ್ಯಾಚರಣೆಗಳು, ಗುರಿ ನಿಯೋಜನೆ ಹಾಗೂ ವಿವಿಧ ವ್ಯವಸ್ಥೆಗಳ ಪರೀಕ್ಷೆ ನಡೆಸುವುದು ಈ ನೌಕೆಯ ಪ್ರಮುಖ ಕಾರ್ಯಗಳಾಗಿವೆ. ಸುಮಾರು 100 ಮೀಟರ್ಗಿಂತಲೂ ಹೆಚ್ಚು ಉದ್ದ ಹೊಂದಿರುವ ಈ ಯುದ್ಧನೌಕೆಯ ತೂಕ ಸುಮಾರು 5,000 ಟನ್ಗಳು. ಅಷ್ಟೇ ಅಲ್ಲ, ಸುಮಾರು 7,200 ನಾಟಿಕಲ್ ಮೈಲುಗಳಷ್ಟು ದೂರ ಕ್ರಮಿಸುವ ಸಾಮರ್ಥ್ಯವನ್ನೂ ಇದು ಹೊಂದಿದೆ.
ಈ ನೌಕೆಯ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸಾಮರ್ಥ್ಯ ಹೆಚ್ಚಲಿದೆ. ಜೊತೆಗೆ, ಪ್ರಮುಖ ಸಮರ ನೌಕೆಗಳನ್ನು ಅವುಗಳ ಮುಖ್ಯ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಲು ಹೆಚ್ಚಿನ ಅವಕಾಶ ದೊರೆಯಲಿದೆ. ಒಟ್ಟಿನಲ್ಲಿ, ಐಎನ್ಎಸ್ ಸಮರ್ಥಕ್ ಸೇರ್ಪಡೆ ಭಾರತದ ರಕ್ಷಣಾ ಸ್ವಾವಲಂಬನೆಗೆ ಮಹತ್ವದ ಮೈಲಿಗಲ್ಲಾಗಿದೆ.

ನೋಡಿರಿ

