RCBಗೆ ಶೇಯ್ ಹೋಪ್? – ವಿಚ್ಛೇದನ ನೆನೆದು ಚಹಲ್ ಕಣ್ಣೀರು!

RCBಗೆ ಶೇಯ್ ಹೋಪ್?   – ವಿಚ್ಛೇದನ ನೆನೆದು ಚಹಲ್ ಕಣ್ಣೀರು!

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು 

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5ನೇ ಹಾಗೂ ನಿರ್ಣಾಯಕ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಆದರೆ, ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. 2025ರ ಕಾಲ್ತುಳಿತದ ಘಟನೆಯ ಬಳಿಕ ನಡೆಯುತ್ತಿರುವ ಈ ಮೊದಲ ಅಂತಾರಾಷ್ಟ್ರೀಯ ಪಂದ್ಯ ಕುತೂಹಲ ಮೂಡಿಸಿದೆ. ಗುರುವಾರ ಸಂಜೆ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಬೆಂಗಳೂರು ನಗರದಲ್ಲಿ ಮುಂದಿನ 6 ದಿನಗಳ ಕಾಲ ಮಳೆಯಾಗಲಿದೆ. ಇದು ಶನಿವಾರದ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆಯಿದೆ.

ನಾಳೆ ಚಿನ್ನಸ್ವಾಮಿಯಲ್ಲಿ ನಡೆಯುವ  ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯಕ್ಕೆ ಕೆಎಸ್‌ಸಿಎ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ಪಂದ್ಯದ ಟಿಕೆಟ್ ಹೊಂದಿರುವ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ. ಮಾತ್ರವಲ್ಲದೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೂ ಇದೆ ಎಂದು ಕೆಎಸ್‌ಸಿಎ ತಿಳಿಸಿದೆ. ಕ್ರೀಡಾಂಗಣದಲ್ಲಿ ಭದ್ರತೆ, ಪ್ರವೇಶ, ನಿರ್ಗಮನ, ಜನಸಂದಣಿ ನಿರ್ವಹಣೆ, ಸಿಸಿಟಿವಿ, ಅಗ್ನಿ ಸುರಕ್ಷತೆ ಸೇರಿ ಪ್ರಮುಖ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ..

ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಭಾರತ ತಂಡವು ಮೊದಲನೆಯದಾಗಿ ಗುರಿಯನ್ನು ಬೆನ್ನಟ್ಟುವ ತನ್ನ ಶೈಲಿಯಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯನ್ನು ನಿರ್ವಹಿಸದಿದ್ದರೆ, ಭಾರತ ತಂಡಕ್ಕೆ ಯಶಸ್ಸು ಸಿಗುವುದಿಲ್ಲ’ ಎಂದಿದ್ದಾರೆ.

ಭಾರತದ ವಿರುದ್ಧದ ಮುಂಬರುವ ಏಕದಿನ ಸರಣಿಗಾಗಿ ನ್ಯೂಜಿಲೆಂಡ್ ತಂಡದಲ್ಲಿ ಫಿನ್ ಅಲೆನ್, ಲಾಕಿ ಫರ್ಗ್ಯೂಸನ್ ಮತ್ತು ಟಿಮ್ ಸೈಫರ್ಟ್ ಅವರಿಗೆ ಅವಕಾಶ ನೀಡಲಾಗಿದೆ. ಮೂವರು ಆಟಗಾರರು ಬಹಳ ಸಮಯದ ಬಳಿಕ ಏಕದಿನ ತಂಡಕ್ಕೆ ಮರಳುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ರಚಿನ್ ರವೀಂದ್ರ ಕೂಡ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ. ವಿಶ್ವಕಪ್‌ಗೆ ಒಂದು ವರ್ಷ ಬಾಕಿ ಇರುವ ಸಂದರ್ಭದಲ್ಲಿ ಆಟಗಾರರ ಸಾಮರ್ಥ್ಯ ಪರೀಕ್ಷಿಸಲು ಈ ಸರಣಿ ಮಹತ್ವದ್ದಾಗಿದೆ.

ಭಾರತದ ಮಹಿಳಾ ಕ್ರಿಕೆಟ್ ತಂಡ ಇಂದು ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಡಲಿದೆ. ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಸ್ಮೃತಿ ಮಂಧಾನ ಪೂರ್ಣಾವಧಿ ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.  ವಿಶ್ವಕಪ್ ಗೆಲುವಿನ ಸಂಭ್ರಮದ ಬಳಿಕ ಮಹಿಳಾ ತಂಡದ ಪ್ರದರ್ಶನದ ಮೇಲೆ ಅಭಿಮಾನಿಗಳ ಕಣ್ಣಿದೆ. ನಾಯಕಿಯಾಗಿ ಸ್ಮೃತಿ ಯಾವ ರೀತಿ ತಂಡವನ್ನು ಮುನ್ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಗೀತಂ ಯೂನಿವರ್ಸಿಟಿ ಆವರಣದಲ್ಲಿ ದುರಂತ.. ಬಹುಮಹಡಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು!

ಯುಜ್ವೇಂದ್ರ ಚಹಲ್‌ ವಿಚ್ಛೇದನದ ಬಳಿಕ ತಾವು ಎದುರಿಸಿದ ಮಾನಸಿಕ ಹಾಗೂ ದೈಹಿಕ ಸಂಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಎದುರಾದ ಸಮಸ್ಯೆಗಳು ತಮ್ಮ ಕ್ರಿಕೆಟ್ ಮೇಲೆಯೂ ಪರಿಣಾಮ ಬೀರಿದ್ದವು. ಆ ಸಂದರ್ಭದಲ್ಲಿ ತೀವ್ರ ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್‌ಗಳಿಂದ ಬಳಲಿದ್ದ ಕಾರಣ ಕ್ರಿಕೆಟ್‌ನಿಂದ ವಿರಾಮ ಪಡೆಯಬೇಕಾಯಿತು ಎಂದು  ಚಹಲ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟರ್ ಶೇಯ್‌ ಹೋಪ್  ಅವರನ್ನು ಖರೀದಿಸುವಂತೆ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, RCB ತಂಡಕ್ಕೆ ಸಲಹೆ ನೀಡಿದ್ದಾರೆ.  ನನ್ನ ಪ್ರಕಾರ ಅವರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಬಹುದು. ಈ ಹರಾಜಿನಲ್ಲಿ ಅವರನ್ನು ಖರೀದಿಸಲೇಬೇಕು ಎಂಬುದು ನನ್ನ ಅಭಿಪ್ರಾಯ. ಅವರು ಆಯ್ಕೆಯಾಗಲಿ ಎಂದು ಆಶಿಸುತ್ತೇನೆ ಎಂದು ಅಶ್ವಿನ್ ತಿಳಿಸಿದ್ದಾರೆ.

ಪ್ಲೇಯಿಂಗ್ XI ಆಯ್ಕೆ ವಿಚಾರವಾಗಿ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಟೀಕಿಸಿದ್ದಾರೆ. ಬೌನ್ಸ್ ಸಿಗುವ ನಿರೀಕ್ಷೆಯಿರುವ ಪಿಚ್‌ನಲ್ಲಿ ಕುಲ್ದೀಪ್ ಯಾದವ್ ಅವರನ್ನು ಕೈಬಿಟ್ಟಿರುವುದು ಅಚ್ಚರಿ ಎಂದಿದ್ದಾರೆ. ವೆಸ್ಟ್ ಇಂಡೀಸ್ ಬ್ಯಾಟರ್‌ಗಳಿಗೆ ಕುಲ್ದೀಪ್‌ರ ಗೂಗ್ಲಿ, ಲೆಗ್ ಸ್ಪಿನ್ ಎದುರಿಸುವುದು ಕಷ್ಟವಾಗುತ್ತಿರುವಾಗ, ಅವರನ್ನು ಕೈಬಿಟ್ಟ ನಿರ್ಧಾರದಲ್ಲಿ ಸಾಮಾನ್ಯ ವಿವೇಚನೆಯೇ ಕಾಣುತ್ತಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಇದೀಗ ಪ್ರವಾಸಿಗರ ಸ್ವರ್ಗವಾಗಿರುವ ದುಬೈನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ.  ವಿಶೇಷವೆಂದರೆ ಅವರ ಈ ಮನೆ ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಅವರ ವಸತಿ ಯೋಜನೆಯ ಸಮೀಪದಲ್ಲೇ ಇದೆ. ಅಲ್ಲಿನ ಭದ್ರತೆ ಮತ್ತು ಜೀವನಶೈಲಿಯ ಕಾರಣಕ್ಕಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ದೇಶದ ಹೆಮ್ಮೆಯ ಕ್ರೀಡಾಪಟುಗಳನ್ನು ಗುರುವಾರ ಸನ್ಮಾನಿಸಿದರು. ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು 15 ರಿಂದ 17 ವರ್ಷ ವಯಸ್ಸಿನ ಯುವ ಅಥ್ಲೀಟ್‌ಗಳು ದೇಶಕ್ಕಾಗಿ ಪದಕ ಗೆಲ್ಲುತ್ತಿರುವುದನ್ನು ಪ್ರಧಾನಿ ವಿಶೇಷವಾಗಿ ಶ್ಲಾಘಿಸಿದರು. ಕೇವಲ 15 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕುರಿತಂತೆ ಪ್ರಧಾನಿಯವರ ಈ ಮಾತು ಬಂದಾಗ, ಸಭೆಯಲ್ಲಿದ್ದ ವೈಭವ್ ಮುಖದಲ್ಲಿ ಮೂಡಿದ ಮುಗುಳುನಗು ಎಲ್ಲರ ಗಮನ ಸೆಳೆಯಿತು.

 

 

Kishor KV

Leave a Reply

Your email address will not be published. Required fields are marked *