ನವರಾತ್ರಿಯಲ್ಲಿ ಯಾಕೆ ಆಯುಧ ಪೂಜೆ ಮಾಡುತ್ತಾರೆ? – ಇದರ ಉದ್ದೇಶ ಏನು ಗೊತ್ತಾ?

ವಿಜಯದಶಮಿ ಎಂದರೆ ವಿಜಯದ ಸಂಕೇತ. ಕೆಟ್ಟದ್ದರ ಮೇಲೆ ಒಳ್ಳೆಯದು ಜಯಗಳಿಸಿದ ದಿನ. ಈ ವಿಶೇಷ ದಿನದಂದು ದೇವಿಯ ಆರಾಧನೆಯ ಜೊತೆಗೆ ಶಸ್ತ್ರಾಸ್ತ್ರ ಮತ್ತು ನಾವು ಪ್ರತಿದಿನ ಬಳಸುವ ಆಯುಧಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವೂ ಇದೆ. ಹಾಗಾದರೆ ವಿಜಯದಶಮಿಯಂದು ಆಯುಧ ಪೂಜೆ ಮಾಡುವುದರ ಹಿಂದಿನ ಉದ್ದೇಶವೇನು? ಅನ್ನೋದ್ದನ್ನ ನೋಡೋಣ.
ಪುರಾಣಗಳ ಪ್ರಕಾರ, ಮಹಿಷಾಸುರನ ವಿರುದ್ಧ ಹೋರಾಡಿದ ದುರ್ಗಾದೇವಿ ದುಷ್ಟಶಕ್ತಿಯನ್ನು ಸಂಹರಿಸಿ ವಿಜಯ ಸಾಧಿಸಿದಳು. ಈ ವಿಜಯದ ನೆನಪಿಗಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸುವುದು ಶಕ್ತಿ, ಧೈರ್ಯ, ರಕ್ಷಣೆ ಮತ್ತು ಕರ್ತವ್ಯನಿಷ್ಠೆಯ ಸಂಕೇತವಾಗಿದೆ.
ಹಿಂದಿನ ಕಾಲದಲ್ಲಿ ರಾಜರು, ಸೈನಿಕರು ಮತ್ತು ಯೋಧರು ಯುದ್ಧದಲ್ಲಿ ಬಳಸುತ್ತಿದ್ದ ಕತ್ತಿ, ಬಿಲ್ಲು, ಬಾಣ ಸೇರಿದಂತೆ ವಿವಿಧ ಆಯುಧಗಳನ್ನು ಪೂಜಿಸುತ್ತಿದ್ದರು. ಇಂದಿಗೂ ಈ ಸಂಪ್ರದಾಯ ಮುಂದುವರಿದಿದ್ದು, ವಾಹನಗಳು, ಕೃಷಿ ಉಪಕರಣಗಳು, ಯಂತ್ರಗಳು, ಕಂಪ್ಯೂಟರ್ಗಳು ಹಾಗೂ ಕೆಲಸಕ್ಕೆ ಬಳಸುವ ಸಾಧನಗಳಿಗೂ ಪೂಜೆ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ: ಬೆಳಗ್ಗೆ ಎದ್ದ ಕೂಡಲೇ ಈ ತಪ್ಪು ಮಾಡುತ್ತೀರಾ? – ಎಚ್ಚರ.. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳಬಹುದು!
ನಾವು ಜೀವನೋಪಾಯಕ್ಕಾಗಿ ಬಳಸುವ ಸಾಧನಗಳನ್ನು ಗೌರವಿಸುವುದು, ಅವುಗಳನ್ನು ಜವಾಬ್ದಾರಿಯಿಂದ ಬಳಸುವುದು ಮತ್ತು ನಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವುದು ಈ ಆಚರಣೆಯ ಪ್ರಮುಖ ಸಂದೇಶವಾಗಿದೆ. ಆಯುಧ ಪೂಜೆ ಕೇವಲ ಆಯುಧಗಳ ಆರಾಧನೆಯಲ್ಲ. ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಒಳ್ಳೆಯ ಉದ್ದೇಶಗಳಿಗೆ ಬಳಸಬೇಕು ಎಂಬುದನ್ನು ನೆನಪಿಸುವ ಸಂಪ್ರದಾಯವಾಗಿದೆ. ಇದೇ ವಿಜಯದಶಮಿಯ ನಿಜವಾದ ಸಂದೇಶ.

ನೋಡಿರಿ

