ಕೈಕೊಟ್ಟ KL.. ಕಾಪಾಡಿದ ಕರುಣ್! – ಆಂಧ್ರದ ಎದುರು ಸೋಲದಿದ್ದೇ ಸಾಧನೆ
ಕರ್ನಾಟಕಕ್ಕೆ ಸ್ಟಾರ್ ಗಳೇ ಹೊರೆನಾ?

2026-27ರ ರಣಜಿ ಟ್ರೋಫಿ ಟೂರ್ನಿ ಆರಂಭವಾಗಿದ್ದು ಆಟಗಾರರೆಲ್ಲಾ ಆರ್ಭಟ ಶುರು ಮಾಡಿದ್ದಾರೆ. ಆದ್ರೆ ಕರ್ನಾಟಕ ತಂಡಕ್ಕೆ ಮೊದಲ ಪಂದ್ಯದಲ್ಲೇ ಬಿಗ್ ಸ್ಟಾರ್ಸ್ ಕೈಕೊಟ್ಟಿದ್ದಾರೆ. ಹೀಗಿದ್ರೂ ಕರುಣ್ ನಾಯರ್ ಏಕಾಂಗಿ ಹೋರಾಟದಿಂದ ಕಂ ಬ್ಯಾಕ್ ಮಾಡಿದ ಕರ್ನಾಟಕ ಕೊನೆಗೂ ಪಂದ್ಯವನ್ನ ಡ್ರಾ ಮಾಡಿಕೊಳ್ಳುವಲ್ಲಿ ಸಕ್ಸಸ್ ಆಗಿದೆ.
ಇದನ್ನೂ ಓದಿ : INDಗೆ ಗೆಲುವು.. WIಗೆ ಸಮಬಲ – ಹೈದ್ರಾಬಾದ್ ಅದೃಷ್ಟ ಯಾರಿಗೆ?
ಭಾರತದ ಅತೀ ದೊಡ್ಡ ದೇಶಿ ಕ್ರಿಕೆಟ್ ಟೂರ್ನಿಯಾಗಿರೋ ರಣಜಿ ಟ್ರೋಫಿ 2026-27ರ ಹೊಸ ಸೀಸನ್ ಅಕ್ಟೋಬರ್ 11 ಅಂದ್ರೆ ಕಳೆದ ಭಾನುವಾರದಿಂದ ಸ್ಟಾರ್ಟ್ ಆಗಿದೆ. ಈ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಭಾಗವಹಿಸುತ್ತಿದ್ದು ಒಟ್ಟು 138 ಪಂದ್ಯಗಳು ನಡೆಯಲಿವೆ. ಭಾರತದ ಸ್ಟಾರ್ ಆಟಗಾರರಾದ ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಸರ್ಫರಾಜ್ ಖಾನ್ ಅವರು ಸೇರಿದಂತೆ ಸಾಕಷ್ಟು ಸ್ಟಾರ್ಸ್ ತಮ್ಮ ದೇಶಿ ತಂಡಗಳ ಪರ ಕಣಕ್ಕಿಳಿದಿರೋದು ಮತ್ತೊಂದು ಸ್ಪೆಷಾಲಿಟಿ. ಇನ್ನು ಕಳೆದ ಆವೃತ್ತಿಯ ರನ್ನರ್ಅಪ್ ಆಗಿರುವ ಕರ್ನಾಟಕ ತಂಡ ಸ್ಮರಣ್ ರವಿಚಂದ್ರನ್ ಕ್ಯಾಪ್ಟನ್ಸಿಯಲ್ಲಿ ಆಂಧ್ರ ವಿರುದ್ಧ ಕಣಕ್ಕಿಳಿದಿದೆ. ಆದ್ರೆ ಈ ಪಂದ್ಯದಲ್ಲಿ ಬಿಗ್ ಸ್ಟಾರ್ಸ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ.
ಒಂದಂಕಿಗೆ ರಾಹುಲ್ ಸುಸ್ತು.. ಕಾಪಾಡಿದ ಶಿಖರ್ & ಕರುಣ್!
ವಿಜಯವಾಡದಲ್ಲಿ ಅಕ್ಬೋಬರ್ 11ರಿಂದ ಶುರುವಾಗಿದ್ದ ಕರ್ನಾಟಕ-ಆಂಧ್ರ ನಡುವಿನ ರಣಜಿ ಮ್ಯಾಚಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಸ್ಮರಣ್ ರವಿಚಂದ್ರನ್ ಫಸ್ಟ್ ಬ್ಯಾಟಿಂಗ್ ಮಾಡ್ತೀವಿ ಅಂತಾ ಚೂಸ್ ಮಾಡಿಕೊಳ್ತಾರೆ. ಆದ್ರೆ ಕರ್ನಾಟಕದ ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಕೊಲ್ಯಾಪ್ಸ್. ಮೊದಲ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ 4 ರನ್ಸ್ಗೆ ಔಟ್ ಆದ್ರೆ ಮಯಾಂಕ್ ಅಗರ್ವಾಲ್ 5 ರನ್, ಅನೀಶ್ 0, ಕರುಣ್ ನಾಯರ್ 8 ರನ್ಗೆ ವಿಕೆಟ್ ಒಪ್ಪಿಸಿದ್ರು. ಇಂಥಾ ಟೈಮಲ್ಲಿ ನಾಯಕ ಸ್ಮರಣ್ ರವಿಚಂದ್ರನ್ 126 ರನ್ಸ್ ಸಿಡಿಸಿ ಆಸರೆಯಾದ್ರು. ಕೆ.ಶ್ರೀಜಿತ್ 58 ರನ್ಸ್ ಗಳಿಸಿದ್ದು ಮಾಧವ್ ಪ್ರಕಾಶ್ 33 ರನ್ಗಳ ಇನ್ನಿಂಗ್ಸ್ ಆಡಿದ್ರು. ಅಂತಿಮವಾಗಿ ಕರ್ನಾಟಕ 274 ರನ್ಗಳಿಗೆ ಆಲೌಟ್ ಆಯ್ತು. ಇನ್ನು ಇನ್ನಿಂಗ್ಸ್ ಆರಂಭಿಸಿದ ಆಂಧ್ರ ಅದ್ಭುತ ಪ್ರದರ್ಶನ ನೀಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಎಸ್ವಿ ರಾಹುಲ್ 119 ರನ್ಸ್, ರೇವಂತ್ ರೆಡ್ಡಿ 97, ರಶೀದ್ 54 ರನ್ಗಳ ಸಹಾಯದಿಂದ ಮೊದಲ ಇನ್ನಿಂಗ್ಸ್ನಲ್ಲೇ 418 ರನ್ಸ್ ಕಲೆ ಹಾಕಿದ್ರು. ಕರ್ನಾಟಕ ಪರ ಶಿಖರ್ ಶೆಟ್ಟಿ 6 ವಿಕೆಟ್ಸ್ ತೆಗೆದು ಮಿಂಚಿದ್ರೆ ಮಾಧವ್ ಪ್ರಕಾಶ್, ರಿತೇಶ್ ಭಟ್ಕಳ್ ತಲಾ ಎರಡೆರಡು ವಿಕೆಟ್ಸ್ ಬೇಟೆಯಾಡಿದ್ರು. ಸೋ ಅಲ್ಲಿಗೆ ಫಸ್ಟ್ ಇನ್ನಿಂಗ್ಸ್ನಲ್ಲೇ 144 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ಮತ್ತೊಮ್ಮೆ ಓಪನಿಂಗ್ ಜೋಡಿ ಕೈಕೊಡ್ತು. ಕೆಎಲ್ ರಾಹುಲ್ 1 ರನ್ಗೆ ಔಟಾದ್ರೆ ಮಯಾಂಕ್ 18 ರನ್ಸ್ಗೆ ಸುಸ್ತಾದ್ರು. ಮನ್ವಂತ್ ಕುಮಾರ್ 44 ರನ್ಸ್ ಗಳಿಸಿದ್ದು ಕರುಣ್ ನಾಯರ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ್ರು. 155 ರನ್ಸ್ ಗಳಿಸಿ ಅಜೇಯರಾಗಿ ಉಳಿದ್ರು. ಅಂತಿಮವಾಗಿ ನಾಲ್ಕನೇ ದಿನದಾಟಕ್ಕೆ 337 ರನ್ ಗಳಿಸಿ 9 ವಿಕೆಟ್ ನಷ್ಟಕ್ಕೆ ಡಿಕ್ಲೇರ್ ಘೋಷಿಸಿದ್ರು. ಅಲ್ಲಿಗೆ ಪಂದ್ಯ ಗೆಲ್ಲಲು ಆಂಧ್ರಗೆ 194 ರನ್ಗಳ ಗುರಿ ನೀಡಲಾಯ್ತು. ಎರಡನೇ ಇನ್ನಿಂಗ್ಸ್ನಲ್ಲಿ ಆಂಧ್ರ ಪರ ಟಾಪ್ ಆರ್ಡರ್ ಬ್ಯಾಟರ್ಸ್ ಬೇಗನೇ ಪೆವಿಲಿಯನ್ ಸೇರ್ಕೊಂಡ್ರು. ಶಿಖರ್ ಶೆಟ್ಟಿ ಆರಂಭದಲ್ಲೇ ಎರಡು ವಿಕೆಟ್ಸ್ ತೆಗೆದ್ರೆ ರಿತೇಶ್ ಮತ್ತು ಮಾಧವ್ ಕೂಡ ವಿಕೆಟ್ಸ್ ಬೇಟೆಯಾಡಿದ್ರು. ಹೀಗಾಗಿ ಆಂಧ್ರ ತಂಡ 53 ರನ್ಸ್ ಕಲೆ ಹಾಕುವಷ್ಟರಲ್ಲೇ 4 ವಿಕೆಟ್ಸ್ ಕಳ್ಕೊಂಡಿತ್ತು. ಅಂತಿಮವಾಗಿ ನಾಲ್ಕನೇ ದಿನದಾಟದ ಮೂರನೇ ಸೆಷನ್ ಮುಗಿದ್ರೂ ಪಂದ್ಯ ಮುಗಿಯದ ಕಾರಣ ಮ್ಯಾಚ್ ಡ್ರಾನಲ್ಲಿ ಕೊನೆಯಾಯ್ತು. ಆದ್ರೆ ಇಲ್ಲಿ ಪಂದ್ಯ ಡ್ರಾ ಆದ್ರೂ ಕೂಡ ಕರ್ನಾಟಕದ ಆಟಗಾರರ ಕಳಪೆ ಪ್ರದರ್ಶನವೇ ಚರ್ಚೆಯಾಗ್ತಿದೆ. ಪ್ರಸ್ತುತ ಆಂಧ್ರ ತಂಡದಲ್ಲಿ ಸೂಪರ್ ಸ್ಟಾರ್ ಪ್ಲೇಯರ್ಸ್ ಅಂತಾ ಯಾರೂ ಇಲ್ಲ. ಆದ್ರೆ ಕರ್ನಾಟಕ ತಂಡದಲ್ಲಿ ಇದ್ರೂ ಕೂಡ ಪ್ರದರ್ಶನ ಸಪ್ಪೆಯಾಗಿತ್ತು. ಹೀಗಾಗಿ ಮುಂದಿನ ಪಂದ್ಯಗಳ ಪ್ರದರ್ಶನದ ಬಗ್ಗೆ ಕುತೂಹಲ ಮೂಡಿದೆ.

ನೋಡಿರಿ

