ಹೈದ್ರಾಬಾದ್ ನಲ್ಲಿ ಅಭಿಯದ್ದೇ ಹವಾ – ವಿಂಡೀಸ್ ಬೌಲರ್ಸ್ ಬೆವರಿಳಿಸ್ತಾರಾ?
210+ ಸ್ಟ್ರೈಕ್ ರೇಟ್ ಸುನಾಮಿ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 4ನೇ ಟಿ-20ಐ ಪಂದ್ಯಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಹೈದ್ರಾಬಾದ್ ನಲ್ಲಿ ಪಂದ್ಯ ನಡೆಯಲಿದ್ದು ಎಲ್ಲರ ಕಣ್ಣೂ ಕೂಡ ಅಭಿಷೇಕ್ ಶರ್ಮಾ ಮೇಲೆಯೇ ಇದೆ. ಯಾಕಂದ್ರೆ ಈ ಪಿಚ್ ನಲ್ಲಿ ಅಭಿಷೇಕ್ ರೆಕಾರ್ಡ್ಸ್ ಎಕ್ಸ್ಟ್ರಾರ್ಡಿನರಿಯಾಗಿದೆ. ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಪರ ಆಡುವ ಅಭಿಗೆ ಇದು ಹೋಂ ಪಿಚ್ ಕೂಡ. ಹೀಗಾಗಿ ಇಂದಿನ ಪಂದ್ಯದಲ್ಲೂ ಬಿಗ್ ಇನ್ನಿಂಗ್ಸ್ ನಿರೀಕ್ಷೆ ಮಾಡ್ಲಾಗಿದೆ.
ಇದನ್ನೂ ಓದಿ : IND Vs WI ಸರಣಿಯಲ್ಲೂ ಮೋಸ! – ಫ್ಯಾನ್ಸ್ ಕ್ರೇಜ್ ಮುಂದಿಟ್ಟು SCAM
ಟಿ-20ಐ ಫಾರ್ಮೆಟ್ ನಲ್ಲಿ ಮೋಸ್ಟ್ ಡೇಂಜರಸ್ ಬ್ಯಾಟರ್ ಆಗಿ ತಮ್ಮದೇ ಟ್ರೇಡ್ ಮಾರ್ಕ್ ಸೆಟ್ ಮಾಡಿರೋ ಅಭಿಷೇಕ್ ಶರ್ಮಾ ಹಲವು ದಾಖಲೆಗಳ ಒಡೆಯನೂ ಆಗಿದ್ದಾರೆ. ಅದ್ರಲ್ಲೂ ರಾಜೀವ್ ಗಾಂಧಿ ಸ್ಟೇಡಿಯಮ್ ನಲ್ಲಿ ಹಲವು ಅದ್ಭುತ ಪ್ರದರ್ಶನಗಳು ಮೂಡಿ ಬಂದಿವೆ. ಇಂದಿನ ಪಂದ್ಯದ ಮೂಲಕ ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ.
ರಾಜೀವ್ ಗಾಂಧಿ ಸ್ಟೇಡಿಯಮ್ ನಲ್ಲಿ ಸಾವಿರ ರನ್ ಗಳ ಸನಿಹದಲ್ಲಿ ಅಭಿ!
ಕಳೆದ ಭಾನುವಾರ ಇಂದೋರ್ನಲ್ಲಿ ನಡೆದ ಮೂರನೇ ಟಿ20ಐ ಪಂದ್ಯದಲ್ಲಿ 30 ಎಸೆತಗಳಲ್ಲಿ 69 ರನ್ ಗಳಿಸಿದ ಅಭಿಷೇಕ್ ಶರ್ಮಾ 2000 ಟಿ20ಐ ರನ್ಗಳನ್ನು ಪೂರ್ಣಗೊಳಿಸಿದರು. ಇದೀಗ ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಿ20 ಕ್ರಿಕೆಟ್ನಲ್ಲಿ 1000 ರನ್ಗಳನ್ನು ಕಂಪ್ಲೀಟ್ ಮಾಡುವ ಸನಿಹದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಈ ಪಿಚ್ನಲ್ಲಿ 31 ಟಿ20 ಪಂದ್ಯಗಳಲ್ಲಿ 211.03 ಸ್ಟ್ರೈಕ್ ರೇಟ್ನೊಂದಿಗೆ 975 ರನ್ ಗಳಿಸಿದ್ದಾರೆ. ಇದರಲ್ಲಿ 141 ರನ್ ಗಳ ಇನ್ನಿಂಗ್ಸ್ ಬೆಸ್ಟ್ ಸ್ಕೋರ್ ಆಗಿದ್ರೆ 2 ಶತಕಗಳು ಮತ್ತು 7 ಅರ್ಧಶತಕಗಳಿವೆ. ಇವತ್ತಿನ ಮ್ಯಾಚಲ್ಲಿ 25 ರನ್ ಗಳನ್ನ ಕಲೆ ಹಾಕಿದ್ರೆ ಈ ಮೈದಾನದಲ್ಲಿ ಟಿ-20 ಮಾದರಿಯಲ್ಲಿ ಸಾವಿರ ರನ್ಗಳನ್ನ ಕಂಪ್ಲೀಟ್ ಮಾಡಿದಂತಾಗುತ್ತೆ. 2026ರ ಐಪಿಎಲ್ಗೂ ಮುನ್ನ ಕಾವ್ಯ ಮಾರನ್ ಒಡೆತನದ ಎಸ್ಆರ್ಹೆಚ್ 14 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಇನ್ನು ಅಭಿಷೇಕ್ ಇಲ್ಲಿಯವರೆಗೆ ಭಾರತದ ಪರ 65 ಟಿ20ಐ ಪಂದ್ಯಗಳಲ್ಲಿ 32.83 ಸರಾಸರಿಯಲ್ಲಿ 2036 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 14 ಅರ್ಧಶತಕಗಳು 195.95 ಸ್ಟ್ರೈಕ್ ರೇಟ್ನಲ್ಲಿವೆ. ಇನ್ನು ಐಪಿಎಲ್ ಪರ್ಫಾಮೆನ್ಸ್ ನೋಡೋದಾದ್ರೆ 2026 ರ ಸೀಸನ್ನಲ್ಲಿ ಅಭಿಷೇಕ್ 15 ಪಂದ್ಯಗಳಲ್ಲಿ 40.21 ರ ಸರಾಸರಿಯಲ್ಲಿ 563 ರನ್ ಗಳಿಸಿದ್ದರು. ಇದರಲ್ಲಿ 1 ಶತಕ ಮತ್ತು 4 ಅರ್ಧಶತಕಗಳಿದ್ವು. ಅದ್ರಲ್ಲೂ 204.72 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದು ವಿಶೇಷವಾಗಿತ್ತು. ಹೀಗಾಗಿ ಅಭಿಷೇಕ್ ಸ್ಪೋಟಕ ಹಿಟ್ಟಿಂಗ್ಗೆ ಹೆಸರಾಗಿದ್ದು ಇವತ್ತಿನ ಮ್ಯಾಚಲ್ಲೂ ಒಂದೊಳ್ಳೆ ಸ್ಕೋರ್ ಬಂತು ಅಂದ್ರೆ ಭಾರತಕ್ಕೆ ಗೆಲುವು ಪಕ್ಕಾ ಅಂತಾನೇ ಅರ್ಥ.
ಪವರ್ ಪ್ಲೇನಲ್ಲೇ ಪಂದ್ಯದ ಗತಿ ಬದಲಿಸೋ ಅಭಿಷೇಕ್!
ಅಭಿಷೇಕ್ ಶರ್ಮಾ ಅವ್ರ ಬ್ಯಾಟಿಂಗ್ ಶೈಲಿಯೇ ಹಾಗೇ. ಪ್ರತೀ ಬಾಲ್ನೂ ಬೌಂಡರಿ ಕಡೆಯೇ ನೋಡ್ತಾರೆ. ಇದು ಅವ್ರ ಪ್ಲಸ್ & ಮೈನಸ್ ಎರಡೂ ಆಗುತ್ತೆ. ಌಂಡ್ ಪವರ್ ಪ್ಲೇ ಪೂರ್ತಿ ಬ್ಯಾಟಿಂಗ್ ಮಾಡಿದ್ರೂ ಸಾಕು ಪಂದ್ಯದ ಗತಿಯನ್ನೇ ಬದಲಿಸಿ ಬಿಡ್ತಾರೆ. ಇಂದೋರ್ ಮ್ಯಾಚ್ನಲ್ಲಿ ಭಾರತ 14 ರನ್ಗಳಿಂದ ಪಂದ್ಯ ಗೆಲ್ಲೋಕೆ ಒನ್ ಆಫ್ ದಿ ರೀಸನ್ ಅಭಿಷೇಕ್ ಶರ್ಮಾ. ಪವರ್ ಪ್ಲೇನಲ್ಲಿ ಅಭಿಷೇಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದಲೇ ಮೊದಲ 6 ಓವರ್ ಗಳಲ್ಲೇ ಭಾರತ 87 ರನ್ಸ್ ಕಲೆ ಹಾಕಿತ್ತು. ಆ ನಂತ್ರದಲ್ಲಿ ಬೇಗ ವಿಕೆಟ್ಸ್ ಬಿದ್ರೂ 224 ರನ್ಗಳ ಟಾರ್ಗೆಟ್ ನಿಡೋಕೆ ಸಾಧ್ಯವಾಗಿದ್ದು. ಇತ್ತ ಚೇಸಿಂಗ್ ಆರಂಭಿಸಿದ್ದ ವಿಂಡೀಸ್ ಪವರ್ ಪ್ಲೇನಲ್ಲಿ 54 ರನ್ಗಳಷ್ಟೇ ಕಲೆ ಹಾಕಿದ್ದು. ಇಲ್ಲೇ 30+ ರನ್ಸ್ ವೇರಿಯೇಷನ್ ಇತ್ತು. ಸೋ ಲಾಸ್ಟ್ ಮೂಮೆಂಟ್ನಲ್ಲಿ ವಿಂಡೀಸ್ ಸೋಲಿಗೆ ಕಾರಣ ಆಯ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಅದ್ರಲ್ಲೂ ಅವ್ರ ಫೇವರೆಟ್ ಹೈದ್ರಾಬಾದ್ ಪಿಚ್ನಲ್ಲಿ ಅಭಿಷೇಕ್ ಕಡೆಯಿಂದ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಬಂತು ಅಂದ್ರೆ ಭಾರತ ಗೆಲ್ಲೋ ಚಾನ್ಸಸ್ ಜಾಸ್ತಿ ಇದೆ.

ನೋಡಿರಿ

