INDಗೆ ಗೆಲುವು.. WIಗೆ ಸಮಬಲ – ಹೈದ್ರಾಬಾದ್ ಅದೃಷ್ಟ ಯಾರಿಗೆ?
ದುಬಾರಿ ಬೌಲರ್ಸ್ ಕೈಯಲ್ಲಿ ರಿಸಲ್ಟ್

ಹೈದ್ರಾಬಾದ್ನಲ್ಲಿ ನಡೆಯಲಿರೋ ಇಂದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋದು ಭಾರತದ ಟಾರ್ಗೆಟ್.. ಪಂದ್ಯದಲ್ಲಿ ವಿನ್ ಆಗಿ ಸಮಬಲ ಸಾಧಿಸೋದು ವಿಂಡೀಸ್ ಗುರಿ. ಎರಡೂ ಕಡೆಯೂ ಪವರ್ ಹಿಟ್ಟರ್ಗಳೇ ಇರೋದ್ರಿಂದ ಈ ಮ್ಯಾಚ್ ರಣರೋಚಕವಾಗೋದು ಪಕ್ಕಾ.
ಇದನ್ನೂ ಓದಿ : IND Vs WI ಸರಣಿಯಲ್ಲೂ ಮೋಸ! – ಫ್ಯಾನ್ಸ್ ಕ್ರೇಜ್ ಮುಂದಿಟ್ಟು SCAM
ಪಂದ್ಯ ನಡೆಯಲಿರುವ ರಾಜೀವ್ ಗಾಂಧಿ ಕ್ರೀಡಾಂಗಣದ ಪಿಚ್ ನಾರ್ಮಲಿ ಬ್ಯಾಟಿಂಗ್ಗೆ ಬೆಡರ್ ಆಗಿರುತ್ತೆ. ಭಾರತೀಯ ಬ್ಯಾಟರ್ಗಳು ಇಲ್ಲಿನ ಕಂಡೀಷನ್ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡ್ಬೋದು. ಜೊತೆಗೆ ಸ್ಪಿನ್ನರ್ಗಳಿಗೂ ಇಲ್ಲಿ ಸಪೋರ್ಟ್ ಸಿಗುತ್ತೆ. ಬಟ್ ಭಾರತದ ಬೌಲಿಂಗ್ ಸಿಕ್ಕಾಪಟ್ಟೆ ಎಕ್ಸ್ಪೆನ್ಸಿವ್ ಆಗಿರೋದ್ರಿಂದ ಬ್ಯಾಕ್ ಫೈರ್ ಕೂಡ ಆಗ್ಬೋದು.
ಭಾರತದ ಪ್ಲಸ್ & ಮೈನಸ್!
ಭಾರತದ ಪರ ಬ್ಯಾಟಿಂಗ್ ನಲ್ಲಿ ಸ್ಫೋಟಕ ಹಿಟ್ಟರ್ ಗಳು ಇರೋದೇ ಪ್ಲಸ್
ಸರಣಿಯಲ್ಲಿ ಈಗಾಗಲೇ 2-1 ಲೀಡ್ ನಲ್ಲಿ ಇರೋದ್ರಿಂದ ಗೆದ್ರೆ ಸರಣಿ ಕೈವಶ
ಬೌಲಿಂಗ್ ನಲ್ಲಿ ಅರ್ಶದೀಪ್, ಕುಲ್ದೀಪ್, ಅಕ್ಷರ್ ಮೇಲೆ ಭರವಸೆ ಇಡಬಹುದು
ಮೈನಸ್ ಅಂದ್ರೆ ಬಿಗ್ ಸ್ಕೋರ್ ಸೆಟ್ ಮಾಡಿದ್ರೂ ಡಿಫೆನ್ಸ್ ಮಾಡುವ ಧೈರ್ಯವಿಲ್ಲ
ಡೆತ್ ಓವರ್ ಗಳಲ್ಲಿ ಹಿಗ್ಗಾಮುನ್ನಾ ಹೊಡೆಸಿಕೊಳ್ಳುತ್ತಿರುವ ಭಾರತದ ಬೌಲರ್ಸ್
ಟಾಪ್ ಆರ್ಡರ್ ಬ್ಯಾಟರ್ಸ್ ಬೇಗ ಔಟ್ ಆದ್ರೆ ನಂತರದಲ್ಲಿ ರನ್ಸ್ ಕುಸಿತ
ನೋ ಬಾಲ್, ವೈಡ್ ಜೊತೆಗೆ ಕ್ಯಾಚ್ ಡ್ರಾಪ್ ಹಾಗೇ ಮಿಸ್ ಫೀಲ್ಡ್ ಜಾಸ್ತಿ ಇದೆ
ಸೋ ಟೀಂ ಇಂಡಿಯಾ ಸರಣಿಯಲ್ಲಿ ಸದ್ಯ ಲೀಡ್ನಲ್ಲಿದ್ರೂ ನಾಲ್ಕನೇ ಪಂದ್ಯವನ್ನ ಗೆಲ್ಲೋದು ಸುಲಭದ ಮಾತೂ ಅಲ್ಲ. ಯಾಕಂದ್ರೆ ವೆಸ್ಟ್ ಇಂಡೀಸ್ ತಂಡ ಕಂ ಬ್ಯಾಕ್ ಮಾಡೋ ಎಲ್ಲಾ ಚಾನ್ಸಸ್ ಕೂಡ ಇದೆ. ಈಗಾಗ್ಲೇ ಎರಡನೇ ಮ್ಯಾಚಲ್ಲಿ 250 ರನ್ಗಳ ಟಾರ್ಗೆಟ್ ಚೇಸ್ ಮಾಡಿದ್ರು. ಇಂದೋರ್ನಲ್ಲಿ 209 ರನ್ಸ್ ಕಲೆ ಹಾಕಿದ್ರು. ಟೇಲ್ ಎಂಡರ್ಸ್ ಕೂಡ ಬಿಗ್ ಹಿಟ್ಟರ್ಸ್ ಇರೋದ್ರಿಂದ ಯಾವುದೇ ಮೂಮೆಂಟ್ನಲ್ಲೂ ಗೇಮ್ ಚೇಂಜ್ ಮಾಡ್ಬೋದು.
ವಿಂಡೀಸ್ ಪ್ಲಸ್ & ಮೈನಸ್!
ಶಾಯ್ ಹೋಪ್, ಶಿಮ್ರಾನ್ ಹೆಟ್ಮೈಯರ್, ರುದರ್ ಫೋರ್ಡ್ ಬ್ಯಾಟಿಂಗ್
ಟೇಲ್ ಎಂಡರ್ಸ್ ಕೂಡ ಸಿಕ್ಸರ್ ಬಾರಿಸಿ ಡೆತ್ ಓವರ್ ನಲ್ಲಿ ಪಂದ್ಯದ ದಿಕ್ಕು ಬದಲು
ಡೂ-ಆರ್-ಡೈ ಆಗಿರೋದ್ರಿಂದ ಸರಣಿ ಜೀವಂತವಾಗಿಡಲು ಪಂದ್ಯವನ್ನು ಗೆಲ್ಲಲೇಬೇಕು
ವೀಕ್ ನೆಸ್ ಅಂದ್ರೆ ಭಾರತದ ಪಿಚ್ ಗಳಲ್ಲಿ ಕ್ವಾಲಿಟಿ ಸ್ಪಿನ್ ಎದುರು ಔಟ್
ಒಂದು ಮ್ಯಾಚಲ್ಲಿ ಅದ್ಭುತವಾಗಿ ಆಡಿದ್ರೆ ಮುಂದಿನ ಪಂದ್ಯದಲ್ಲಿ ಮತ್ತೆ ಫೇಲ್ಯೂರ್

ನೋಡಿರಿ

