ಶಮಿಗೂ ಕಂ ಬ್ಯಾಕ್ ಟೈಂ ಬಂತಾ? – ರಣಜಿ 4 ವಿಕೆಟ್.. BCCI ಅಲರ್ಟ್
ದುಬಾರಿ ಬೌಲಿಂಗ್ ಗೆ ಇದೇ ಪರಿಹಾರ

ಭುವನೇಶ್ವರ್ ಕುಮಾರ್ ಟೀಂ ಇಂಡಿಯಾ ಟಿ-20ಐ ತಂಡಕ್ಕೆ ಕಂ ಬ್ಯಾಕ್ ಮಾಡಿದ್ಮೇಲೆ ಅತೀ ಹೆಚ್ಚು ಚರ್ಚೆಯಾಗ್ತಿರೋ ಹೆಸ್ರು ಮೊಹಮ್ಮದ್ ಶಮಿ. ಶಮಿ ಕೂಡ ಭಾರತ ತಂಡದಲ್ಲಿ ಅವಕಾಶ ಪಡೆಯಲಿ ಅನ್ನೋದು ಕೆಲ ಕ್ರಿಕೆಟ್ ಎಕ್ಸ್ಪರ್ಟ್ಗಳ ವಾದ. ಅದೂ ಅಲ್ದೇ ಡೊಮೆಸ್ಟಿಕ್ನಲ್ಲಿ ಶಮಿ ಪರ್ಫಾಮೆನ್ಸ್ ಕೂಡ ಪೀಕ್ನಲ್ಲಿದೆ.
ಇದನ್ನೂ ಓದಿ : IND Vs WI ಸರಣಿಯಲ್ಲೂ ಮೋಸ! – ಫ್ಯಾನ್ಸ್ ಕ್ರೇಜ್ ಮುಂದಿಟ್ಟು SCAM
ಟೀಂ ಇಂಡಿಯಾದ ಬ್ಯಾಟಿಂಗ್ನಲ್ಲಿ ಯಾವುದೇ ಟೆನ್ಷನ್ ಇಲ್ಲದೇ ಇದ್ರೂ ಫಾಸ್ಟ್ ಬೌಲಿಂಗ್ ಅಂತಾ ಬಂದಾಗ ತಲೆಬಿಸಿಯಂತೂ ಇದ್ದೇ ಇದೆ. ಸೋ ಇದರ ಹೊರೆಯನ್ನ ತಗ್ಗಿಸೋಕೆ ಒನ್ ಆಫ್ ದಿ ಸಲ್ಯೂಷನ್ ಮೊಹಮ್ಮದ್ ಶಮಿ. ಶಮಿ ಭಾರತ ತಂಡಕ್ಕೆ ಕಂ ಬ್ಯಾಕ್ ಮಾಡುವುದು ತಂಡದ ವೇಗದ ಬೌಲಿಂಗ್ ಅಟ್ಯಾಕ್ ಬಲಪಡಿಸಲು ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಮೇಲಿನ ಪ್ರೆಶರ್ ಕಡಿಮೆ ಮಾಡೋಕೆ ಒಳ್ಳೆ ದಾರಿ. ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದು ಅಂತರಾಷ್ಟ್ರೀಯ ಪಂದ್ಯಗಳ ಸಾಕಷ್ಟು ಅನುಭವ ಭಾರತ ತಂಡಕ್ಕೆ ಬಿಗ್ಗೆಸ್ಟ್ ಸ್ಟ್ರೆಂಥ್ ಆಗಲಿದೆ.
ಬಿಸಿಸಿಐಗೆ ಬೌಲಿಂಗ್ ನಲ್ಲೇ ಮೆಸೇಜ್ ಕೊಟ್ಟ ಶಮಿ!
ಮೊಹಮ್ಮದ್ ಶಮಿ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಣಕ್ಕಿಳಿದು ವರ್ಷವೇ ಕಳೆದಿದೆ. ಭಾರತ ತಂಡದ ಪರ ಕೊನೆಯದಾಗಿ 2025ರ ಮಾರ್ಚ್ 9ರಂದು ಆಡಿದ್ದರು. ICC ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 9 ಓವರ್ಗಳಲ್ಲಿ 74 ರನ್ ನೀಡಿ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಭಾರತ 4 ವಿಕೆಟ್ಗಳಿಂದ ಗೆದ್ದು ಚಾಂಪಿಯನ್ ಆಯಿತು. ಆದ್ರೆ ಇದಾದ್ಮೇಲೆ ಶಮಿಗೆ ಮತ್ತೆ ಭಾರತದ ಪರ ಕಣಕ್ಕಿಳಿಯೋ ಅವಕಾಶ ಸಿಕ್ಕಿಲ್ಲ. ಹೀಗಿದ್ರೂ ಡೊಮೆಸ್ಟಿಕ್ನಲ್ಲಿ ಶಮಿ ಪರ್ಫಾಮೆನ್ಸ್ ಚೆನ್ನಾಗಿದೆ. ಇತ್ತೀಚೆಗೆ ರಣಜಿ ಟ್ರೋಫಿ ಪಂದ್ಯದಲ್ಲಿ ಬೆಂಗಾಲ್ ತಂಡದ ಪರವಾಗಿ ದೆಹಲಿ ವಿರುದ್ಧ ಕೇವಲ 30 ರನ್ ನೀಡಿ 4 ವಿಕೆಟ್ ಪಡೆದು ನಮ್ಮಲ್ಲಿರೋ ಟ್ಯಾಲೆಂಟ್ನ ಪ್ರೂವ್ ಮಾಡಿದ್ರು. ಪಂದ್ಯದ ಬಳಿಕ ಮಾತನಾಡಿರುವ ಶಮಿ ಬಿಸಿಸಿಐಗೆ ಕೌಂಟರ್ ಕೊಟ್ಟಿದ್ದಾರೆ. ಜನರು ಬಹುಶಃ ನೋಡುವುದನ್ನು ಮತ್ತು ಕಾಮೆಂಟ್ ಮಾಡೋದನ್ನ ಎಂಜಾಯ್ ಮಾಡ್ತಾರೆ. ಅಥವಾ ಫಾರ್ಮ್ ಇಲ್ಲ. ಫಿಟ್ ಆಗಿ ಕಾಣುತ್ತಿಲ್ಲ ಅಥವಾ ಇನ್ನೇನಾದರೂ ಹೇಳುತ್ತಾರೆ. ಅದ್ರಿಂದ ನನಗೇನು ತೊಂದರೆ ಇಲ್ಲ. ನಾನು ಅವಕಾಶ ಸಿಗ್ತಿದೆ. ಚೆನ್ನಾಗಿ ಆಡ್ತಿದ್ದೇನೆ ಮುಂದಿನದು ಅವರ ಕೆಲಸ ಎಂದಿದ್ದಾರೆ. ಅದೂ ಅಲ್ದೇ ಕಳೆದ ರಣಜಿ ಸೀಸನ್ನಲ್ಲಿಯೂ ಅವರು 7 ಪಂದ್ಯಗಳಿಂದ 37 ವಿಕೆಟ್ ಬೇಟೆಯಾಡಿದ್ರು. ಸೋ ಶಮಿ ತಂಡಕ್ಕೆ ಕಂ ಬ್ಯಾಕ್ ಮಾಡೋದ್ರಿಂದ ಸಾಕಷ್ಟು ಲಾಭಗಳೂ ಇವೆ.
ಶಮಿ ಕಂ ಬ್ಯಾಕ್ ಎಷ್ಟು ಮುಖ್ಯ?
ಭಾರತದ ಪರ ಜಸ್ಪ್ರೀತ್ ಬುಮ್ರಾ ಮಾತ್ರವೇ ನಂಬಿಕಸ್ಥ ಬೌಲರ್
ಪ್ರಸ್ತುತ ತಂಡದಲ್ಲಿ ಬೌಲಿಂಗ್ ನಲ್ಲಿ ದುಬಾರಿ ಆಗುತ್ತಿರುವ ಪ್ಲೇಯರ್ಸ್
ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಉತ್ತಮ ಫಾರ್ಮ್
ಸ್ವಿಂಗ್ & ಸೀಮ್ ಚೆನ್ನಾಗಿರೋದ್ರಿಂದ ಆರಂಭಿಕ ಓವರ್ ಗಳಲ್ಲೇ ವಿಕೆಟ್
2027ರ ಏಕದಿನ ವಿಶ್ವಕಪ್ ತಂಡದಲ್ಲೂ ಆಯ್ಕೆ ಮಾಡಲು ಸಾಧ್ಯತೆ
ಜಸ್ಪ್ರೀತ್ ಬುಮ್ರಾ ಮೇಲಿನ ವರ್ಕ್ ಲೋಡ್ ಕಡಿಮೆ ಮಾಡಲು ದಾರಿ
ಇದೆಲ್ಲದ್ರ ನಡುವೆ ಶಮಿಗೆ ಭಾರತದ ಪರ ಸಾಕಷ್ಟು ಪಂದ್ಯಗಳನ್ನ ಆಡಿರುವ ಅನುಭವ ಇದೆ. ಭಾರತದ ಪರ 64 ಟೆಸ್ಟ್ಗಳಲ್ಲಿ 229 ವಿಕೆಟ್ ಮತ್ತು 108 ಏಕದಿನ ಪಂದ್ಯಗಳಲ್ಲಿ 206 ವಿಕೆಟ್ ಪಡೆದಿದ್ದಾರೆ. ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ಹಾಗೂ ಪ್ರೆಶರ್ ಟೈಮಲ್ಲೂ ವಿಕೆಟ್ಸ್ ತೆಗೆದಿದ್ದಾರೆ. ಹೀಗಾಗಿ ಶಮಿ ತಂಡಕ್ಕೆ ವಾಪಸ್ ಆದ್ರೆ ಟೀಂ ಇಂಡಿಯಾದ ಮುಂದಿನ ಸರಣಿ ಅಥವಾ ಟೂರ್ನಿಗಳಿಗೆ ಆನೆಬಲ ಸಿಕ್ಕಂತಾಗುತ್ತೆ. ಹಿರಿಯ ಆಟಗಾರರ ಇಂಜುರಿ, ಆಬ್ಸೆನ್ಸ್ ನಡುವೆ ಬೆಸ್ಟ್ ಆಪ್ಶನ್ ಕೂಡ ಸಿಕ್ಕಂತಾಗುತ್ತೆ. ಆದ್ರೆ ಮ್ಯಾನೇಜ್ಮೆಂಟ್ ನಿರ್ಧಾರ ಏನಾಗಿರುತ್ತೆ ಅನ್ನೋದೇ ಇಲ್ಲಿರೋ ಪ್ರಶ್ನೆ.

ನೋಡಿರಿ

