ರಣಜಿಯಲ್ಲಿ KL, ಕರುಣ್ ಪ್ಲಾಫ್ ಶೋ – ಇಶಾನ್ ಬೆಸ್ಟ್.. ಸಂಜುಗೆ ಶ್ರೇಯಸ್ ಟಾಂಗ್
ಶಮಿಗೆ 4 ವಿಕೆಟ್.. BCCIಗೆ ಕಾಣಿಸ್ತಿಲ್ವಾ?

ರಣಜಿಯಲ್ಲಿ KL, ಕರುಣ್ ಪ್ಲಾಫ್ ಶೋ – ಇಶಾನ್ ಬೆಸ್ಟ್.. ಸಂಜುಗೆ ಶ್ರೇಯಸ್ ಟಾಂಗ್ಶಮಿಗೆ 4 ವಿಕೆಟ್.. BCCIಗೆ ಕಾಣಿಸ್ತಿಲ್ವಾ?

ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆದ್ದಿದೆ. ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ, ರಣಜಿಯಲ್ಲಿ ಕನ್ನಡಿಗರು ಒದ್ದಾಡಿದ್ದಾರೆ. ಹೀಗೆ ಕ್ರಿಕೆಟ್ ಬಗೆಗಿನ ಕುತೂಹಲಕಾರಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಸೂಪರ್ ಸಂಡೇ INDಗೋ.. WIಗೋ? – 1-1 ಸಮರದಲ್ಲಿ ಯಾರಿಗೆ ಲೀಡ್?

  • ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಪಂದ್ಯದ ಗೆಲುವಿಗೆ ಕಾರಣವಾದ ಬೌಲರ್‌ಗಳನ್ನ ಕೊಂಡಾಡಿದ್ದಾರೆ ಕ್ಯಾಪ್ಟನ್ ಶ್ರೇಯಸ್ ಅಯ್ಯರ್. ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಇಲ್ಲದಿದ್ದದ್ದು ಪ್ಲಸ್ ಪಾಯಿಂಟ್ ಆಯಿತು. ಇದರಿಂದಲೇ ನಮ್ಮ ಬೌಲರ್​ಗಳು ಉತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
  • ಮತ್ತೊಂದೆಡೆ ಟೀಮ್ ಇಂಡಿಯಾ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪವರ್‌ಪ್ಲೇನಲ್ಲಿ ಅಭಿಷೇಕ್ ಶರ್ಮಾ ಆಡಿದ ಬಿರುಸಿನ ಬ್ಯಾಟಿಂಗ್ ನಮಗೆ ಫೆನಾಮಿನಲ್ ಆರಂಭ ತಂದುಕೊಟ್ಟಿತು. ಅದರ ಬೆನ್ನಲ್ಲೇ ಇಶಾನ್ ಕಿಶನ್ ವಿಂಡೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕಳೆದ ಕೆಲವು ತಿಂಗಳುಗಳಿಂದ ಇಶಾನ್ ಅತ್ಯದ್ಭುತ ಫಾರ್ಮ್‌ನಲ್ಲಿದ್ದಾರೆ ಎಂದು ಶ್ರೇಯಸ್ ಇಶಾನ್ ಕಿಶನ್ ಪರ ಬ್ಯಾಟಿಂಗ್ ಮಾಡಿದ್ರು.
  • ರಣಜಿ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದೆ. ಗ್ರೂಪ್ ಸಿ ರಣಜಿ ಪಂದ್ಯದಲ್ಲಿ ವೆಸ್ಟ್ ಬೆಂಗಾಲ್ ಹಾಗೂ ಡೆಲ್ಲಿ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಸೆಲೆಕ್ಟ್ ಮಾಡಿಕೊಂಡ ಬೆಂಗಾಲ್ ತಂಡದ ಪರ ಮಹಮ್ಮದ್ ಶಮಿ ಶೈನ್ ಆಗಿದ್ದಾರೆ. ಮೊಹಮ್ಮದ್ ಶಮಿ 30 ರನ್‌ಗಳಿಗೆ 4 ವಿಕೆಟ್ ಕಬಳಿಸುವ ಮೂಲಕ ತನ್ನನ್ನು ಆಯ್ಕೆ ಮಾಡದ ಬಿಸಿಸಿಐಗೆ ಬೌಲಿಂಗ್ ಮೂಲಕವೇ ಟಕ್ಕರ್ ನೀಡಿದ್ದಾರೆ.
  • ಡರ್ಬನ್‌ನಲ್ಲಿ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಸೀಸ್ ಬ್ಯಾಟರ್ ರೆನ್ ಶಾ ವಿರಾಟ್ ಕೊಹ್ಲಿ ಹೆಸರಲ್ಲಿದ್ದ 10 ವರ್ಷಗಳ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಆಸೀಸ್ ಪಡೆ ಕೇವಲ 124 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಟ್ ರೆನ್‌ಶಾ, 397 ಎಸೆತಗಳಲ್ಲಿ 21 ಫೋರ್ ಹಾಗೂ 1 ಸಿಕ್ಸರ್​ನೊಂದಿಗೆ 190 ರನ್​ ಬಾರಿಸಿದ್ರು. ಈ ಮೂಲಕ ಕಿಂಗ್ ಕೊಹ್ಲಿ ದಾಖಲೆ ಮುರಿದಿದ್ದಾರೆ.
  • ಮ್ಯಾಟ್ ರೆನ್‌ಶಾ ಅವರು 5ನೇ ಕ್ರಮಾಂಕದಲ್ಲಿ ಬಂದು ದಾಖಲೆಯ ಸೆಂಚುರಿ ಸಿಡಿಸಿದ್ದು ಕೂಡಾ ವಿಶೇಷವಾಗಿದೆ. ಇದು ರೆನ್ ಶಾ ಟೆಸ್ಟ್ ವೃತ್ತಿಜೀವನದಲ್ಲಿ ಸಿಡಿಸಿದ ಕೇವಲ ಎರಡನೇ ಶತಕವಾಗಿದೆ. 2017ರಲ್ಲಿ ಪಾಕಿಸ್ತಾನ್ ವಿರುದ್ಧ ಸಿಡ್ನಿಯಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದರು. ಇದೀಗ 9 ವರ್ಷ ಹಾಗೂ 280 ದಿನಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
  • ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ 284 ರನ್​ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ನಲ್ಲಿ 390 ರನ್ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಇನಿಂಗ್ಸ್ ಆಡಿದ ಸೌತ್ ಆಫ್ರಿಕಾ ತಂಡವನ್ನು 3ನೇ ದಿನದಾಟದಲ್ಲೇ ಆಲೌಟ್ ಮಾಡುವಲ್ಲಿ ಆಸ್ಟ್ರೇಲಿಯಾ ಬೌಲರ್​ಗಳು ಯಶಸ್ವಿಯಾಗಿದ್ದಾರೆ. ಮೂರನೇ ದಿನದಾಟದ ವಿಶೇಷತೆಯೆಂದರೆ, ಸ್ಟೀವ್ ಸ್ಮಿತ್ ಅವರ ಅದ್ಭುತ ಫೀಲ್ಡಿಂಗ್. ನಾಲ್ಕು ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಸ್ಮಿತ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಔಟ್‌ಫೀಲ್ಡ್ ಆಟಗಾರನಾಗಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಶ್ವ ದಾಖಲೆ ಬರೆದರು.
  • ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನ ಕ್ರಿಕೆಟ್ ಲೋಕವೇ ತನ್ನತ್ತ ತಿರುಗವಂತೆ ಮಾಡಿದೆ. ಹೊಸ ಟೀಮ್‌ನೊಂದಿಗೆ ಕಣಕ್ಕಿಳಿದಿರುವ ಪಾಕಿಸ್ತಾನ್ ,ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 82 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಪಾಕಿಸ್ತಾನ ಗೆದ್ದುಕೊಂಡಿದೆ. ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ  ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ 3 ವಿಕೆಟ್ ನಷ್ಟಕ್ಕೆ 215 ರನ್‌ಗಳನ್ನು ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ, ಕೇವಲ 133 ರನ್‌ ಗಳಿಸುವ ಮೂಲಕ ಸೋಲೊಪ್ಪಿಕೊಂಡಿದೆ.
  • ಆಂಧ್ರಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ 22 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕಕ್ಕೆ ನಾಯಕ ರವಿಚಂದ್ರನ್‌ ಸ್ಮರಣ್‌ ನೆರವಾಗಿದ್ದಾರೆ. ಸ್ಮರಣ್ ಭರ್ಜರಿ ಶತಕ ಸಿಡಿಸಿದ್ದು, ಕರ್ನಾಟಕ 274 ರನ್‌ ಕಲೆಹಾಕಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ, 22 ರನ್‌ಗೆ 4 ವಿಕೆಟ್‌ ಕಳೆದುಕೊಂಡಿತ್ತು. ಆಗ ನಾಯಕ ಸ್ಮರಣ್‌ ತಾಳ್ಮೆಯಿಂದ ಕಟ್ಟಿದ ಇನ್ನಿಂಗ್ಸ್‌, ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 274 ರನ್‌ ಕಲೆಹಾಕಲು ನೆರವಾಯಿತು.
  • ರಣಜಿ ಪಂದ್ಯದಲ್ಲಿ ಕರ್ನಾಟಕದ ಪರ ಕೆ.ಎಲ್ ರಾಹುಲ್ ಮತ್ತು ಕರುಣ್ ನಾಯರ್ ಬ್ಯಾಟಿಂಗ್ ನಲ್ಲಿ ಕೈಕೊಟ್ಟಿದ್ದಾರೆ. ಸ್ಟಾರ್ ಕ್ರಿಕೆಟರ್ಸ್ ಟೀಮ್ ನೊಂದಿಗೆ ಕಣಕ್ಕಿಳಿದ ಕರ್ನಾಟಕ ತಂಡ ಕೆ.ಎಲ್ ಮತ್ತು ಕರುಣ್ ನಾಯರ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಕೆ.ಎಲ್ ರಾಹುಲ್ ಕೇವಲ ನಾಲ್ಕು ರನ್‌ಗೆ ವಿಕೆಟ್ ಒಪ್ಪಿಸಿದರೆ, ಕರುಣ್ ನಾಯರ್ ಕೇವಲ 8 ರನ್ ಗಳಿಸಿದರು. ಇನ್ನು ಮಯಾಂಕ್ ಅಗರ್‌ವಾಲ್ ಕೇವಲ 5 ರನ್ ಗಳಿಸಿ ಔಟಾದರು.
  • ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಕರ್ನಾಟಕ ತಂಡ ಆಂಧ್ರಪ್ರದೇಶ ಬ್ಯಾಟರ್ ಗಳ ಬೆವರಳಿಸಿದ್ದಾರೆ. ಮೊದಲ 16 ರನ್‌ ಗಳಿಸುವಷ್ಟರಲ್ಲಿ ಆಂಧ್ರದ 2 ವಿಕೆಟ್‌ ಉರುಳಿದೆ. ಇದೀಗ ಆಂಧ್ರ ಟೀಮ್ ಬ್ಯಾಟಿಂಗ್ ಮುಂದುವರೆಸಿದ್ದು, 163 ರನ್‌ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟಾರ್ ಬ್ಯಾಟರ್ಸ್ ಕೈಕೊಟ್ಟರೂ ಕೂಡಾ ಎರಡನೇ ಇನ್ನಿಂಗ್ಸ್ ನಲ್ಲಿ ಕರ್ನಾಟಕ ತಂಡದ ಬ್ಯಾಟಿಂಗ್ ಮೇಲೆಯೇ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ.

Shantha Kumari

Leave a Reply

Your email address will not be published. Required fields are marked *