ವಿಂಡೀಸ್ ಗೆ ಮರುಜನ್ಮದ HOPE! – ಕೆರೆಬಿಯನ್ಸ್ ಗತವೈಭವ ಮರುಕಳಿಸುತ್ತಾ?
IPLಗೆ ರೀ ಎಂಟ್ರಿ ಕೊಡ್ತಾರಾ ಶಾಯ್?

ವಿಂಡೀಸ್ ಗೆ ಮರುಜನ್ಮದ HOPE! – ಕೆರೆಬಿಯನ್ಸ್ ಗತವೈಭವ ಮರುಕಳಿಸುತ್ತಾ?IPLಗೆ ರೀ ಎಂಟ್ರಿ ಕೊಡ್ತಾರಾ ಶಾಯ್?

ವಿಶ್ವಕ್ರಿಕೆಟ್​ನಲ್ಲಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ವೆಸ್ಟ್ ಇಂಡೀಸ್ ಕಳೆದೊಂದು ದಶಕದಿಂದ ತನ್ನ ಚಾರ್ಮ್ ಕಳ್ಕೊಂಡಿದೆ. ಐಸಿಸಿ ಏಕದಿನ ವಿಶ್ವಕಪ್​ಗೆ ಕ್ವಾಲಿಫೈ ಆಗೋದೇ ಕಷ್ಟವಾಗಿದೆ. 2027ರ ವಿಶ್ವಕಪ್​ಗೂ ಡೈರೆಕ್ಟ್ ಟಿಕೆಟ್ ಸಿಕ್ಕಿಲ್ಲ. ಆದ್ರೆ ಅದೇ ಕೆರೆಬಿಯನ್ಸ್​ಗೆ ಈಗ ಹೊಸ ಭರವಸೆ ಸಿಕ್ಕಿದೆ. ಗತವೈಭವ ಮುರಕಳಿಸೋ ಸೂಚನೆ ಬಂದಿದೆ. ತಂಡದ ನಾಯಕ ಶಾಯ್ ಹೋಪ್ ಕಂ ಬ್ಯಾಕ್ ಆಸೆ ಮೂಡಿಸಿದ್ದಾರೆ. ಌಂಡ್ ಐಪಿಎಲ್ ಫ್ರಾಂಚೈಸಿಗಳಿಗೂ ಬೇಡವಾಗಿದ್ದ ಹೋಪ್​ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ : IPL ಪಿಚ್ ಗಳೇ ಬೌಲರ್ಸ್ ಗೆ ವಿಲನ್ – 3ನೇ ಪಂದ್ಯಕ್ಕೂ FLAT ಟ್ರ್ಯಾಕ್

ವೆಸ್ಟ್ ಇಂಡೀಸ್ ಗೆ ಹೊಸ ಭರವಸೆಯಾಗಿ ಕಾಣಿಸ್ತಿರೋ ಶಾಯ್ ಹೋಪ್ ವೈಯಕ್ತಿಕ ಪ್ರದರ್ಶನವೂ ಚೆನ್ನಾಗಿದೆ. ಕ್ಯಾಪ್ಟನ್ ಆಗಿಯೂ ಚೆನ್ನಾಗಿ ಲೀಡ್ ಮಾಡ್ತಿದ್ದಾರೆ. ಬ್ಯಾಟ್‌ನಿಂದಲೇ ಉತ್ತರ ನೀಡ್ತಿದ್ದಾರೆ. ಏಕದಿನ ಸರಣಿಯಲ್ಲೂ ಕ್ಯಾಪ್ಟನ್ ಆಗಿ ಅದ್ಭುತ ಪ್ರದರ್ಶನ ನೀಡಿದ್ರು. ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ 352 ರನ್‌ಗಳ ಬಿಗ್ ಟಾರ್ಗೆಟ್ ಇತ್ತು. ಶಾಯ್ ಹೋಪ್ ಮಾತ್ರ ಕೊನೆಯವರೆಗೂ ಹೋರಾಟ ಮಾಡಿ ಪಂದ್ಯ ಗೆಲ್ಲಿಸಿದ್ರು. 143 ಎಸೆತಗಳಲ್ಲಿ ಅಜೇಯ 162 ರನ್‌ಗಳನ್ನು ಸಿಡಿಸಿದ ಹೋಪ್, ವೆಸ್ಟ್ ಇಂಡೀಸ್ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಇದು ಭಾರತದ ವಿರುದ್ಧ ವೆಸ್ಟ್ ಇಂಡೀಸ್ ದಾಖಲಿಸಿದ ಅತ್ಯಧಿಕ ಯಶಸ್ವಿ ಏಕದಿನ ರನ್ ಚೇಸ್ ಆಗಿತ್ತು. ಈಗ ಟಿ-20ಐ ಮಾದರಿಯಲ್ಲೂ ಅದ್ಭುತ ಫಾರ್ಮ್​ನಲ್ಲಿದ್ದಾರೆ.

2ನೇ ಮ್ಯಾಚಲ್ಲಿ ಸೆಂಚುರಿ ಬಾರಿಸಿ ಗೆಲ್ಲಿಸಿದ ಹೋಪ್!

ಅಕ್ಟೋಬರ್ 9ರಂದು ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ 249 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ಆದರೆ ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಟಾರ್ಗೆಟ್ ಚೇಸ್ ಮಾಡಿದ್ರು. ಒನ್ಸ್ ಅಗೇನ್ ಕ್ರೀಸ್ ಕಚ್ಚಿ ನಿಂತಿದ್ದೇ ನಾಯಕ ಶಾಯ್ ಹೋಪ್. ಕೇವಲ 45 ಎಸೆತಗಳಲ್ಲಿ ಅಜೇಯ 102 ರನ್ ಸಿಡಿಸಿದರು. ಶೆರ್ಫೇನ್ ರುದರ್‌ಫೋರ್ಡ್ 37 ಎಸೆತಗಳಲ್ಲಿ 84 ರನ್ ಗಳಿಸಿ ಅದ್ಭುತ ಸಾಥ್ ನೀಡಿದರು. ನಾಲ್ಕನೇ ವಿಕೆಟ್‌ಗೆ ಬಂದ 120 ರನ್‌ಗಳ ಜೊತೆಯಾಟ ಭಾರತದ ಗೆಲುವಿನ ಆಸೆಯನ್ನೇ ಕಸಿಯಿತು. ಪ್ರಸ್ತುತ ಭಾರತದ ವಿರುದ್ಧ  ODI ಮತ್ತು T20I ಪಂದ್ಯಗಳಲ್ಲಿ ಶಾಯ್ ಹೋಪ್ ಒಟ್ಟು 437 ರನ್‌ಗಳನ್ನು ಗಳಿಸಿದ್ದಾರೆ. ಇದೆಲ್ಲಕ್ಕಿಂತ ಇಂಟ್ರೆಸ್ಟಿಂಗ್ ಅಂದ್ರೆ ಅವ್ರ ಬ್ಯಾಟಿಂಗ್ ಸ್ಟೈಲ್ ಚೇಂಜ್ ಆಗಿರೋದು.

ನಿಧಾನಗತಿಯ ಬ್ಯಾಟಿಂಗ್ ಎಂದವ್ರಿಗೆ ಪವರ್ ಹಿಟ್ಟಿಂಗ್ ಉತ್ತರ!

ಅಷ್ಟಕ್ಕೂ ಶಾಯ್ ಹೋಪ್ ಅವರ ಬ್ಯಾಟಿಂಗ್ ಶೈಲಿಯ ಬಗ್ಗೆ ಈ ಹಿಂದೆ ನಿಧಾನವಾಗಿ ಆಡ್ತಾರೆ ಅಂತಾನೇ ಟೀಕೆಗಳಿತ್ತು. ಆದರೆ ಭಾರತ ಪ್ರವಾಸದಲ್ಲಿ ಅವರ ಪ್ರದರ್ಶನ ಬೇರೆ ಲೆವೆಲ್​ನಲ್ಲಿದೆ.  ಏಕದಿನದಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಸಾಮರ್ಥ್ಯವಷ್ಟೇ ಅಲ್ಲ, ಟಿ20ಯಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯವೂ ತಮ್ಮಲ್ಲಿದೆ ಎಂಬುದನ್ನು ಹೋಪ್ ಸಾಬೀತುಪಡಿಸಿದ್ದಾರೆ. 2027ರ ಏಕದಿನ ವಿಶ್ವಕಪ್‌ಗೆ ಮುನ್ನ ಭಾರತದ ವಿರುದ್ಧದ ಈ ಪ್ರದರ್ಶನ ವೆಸ್ಟ್ ಇಂಡೀಸ್ ತಂಡಕ್ಕೆ ಕಾನ್ಫಿಡೆನ್ಸ್ ನೀಡಿದೆ. ಹೋಪ್ ಅವರ ಕ್ಯಾಪ್ಟನ್ಸಿ, ರುದರ್‌ಫೋರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ತಂಡದ ಫೈಟಿಂಗ್​ ಚೆನ್ನಾಗಿದೆ. ಹಾಗಂತ ಒಂದು ಅಥವಾ ಎರಡು ಅದ್ಭುತ ಗೆಲುವುಗಳಿಂದಲೇ ವೆಸ್ಟ್ ಇಂಡೀಸ್ ತನ್ನ ಹಳೆಯ ಪ್ರಾಬಲ್ಯವನ್ನು ಮರಳಿ ಪಡೆದಿದೆ ಅನ್ನೋಕಾಗಲ್ಲ. ಕನ್ಸಿಸ್ಟೆನ್ಸಿ  ಪ್ರದರ್ಶನ, ಬೌಲಿಂಗ್‌ನಲ್ಲಿ ಇಂಪ್ರೂವ್ ಮತ್ತು ಒತ್ತಡದ ಪಂದ್ಯಗಳಲ್ಲಿ ಸ್ಥಿರತೆ ಬೇಕು. ಮಾಜಿ ಆಟಗಾರರಾದ ಡ್ವೇನ್ ಬ್ರಾವೋ ಸೇರಿದಂತೆ ಕ್ರಿಕೆಟ್ ವಲಯದಲ್ಲಿ ಹೋಪ್ ಅವರ ಈ ಅದ್ಭುತ ಫಾರ್ಮ್​ಗೆ ಅಪ್ರಿಸಿಯೇಷನ್ ಕೂಡ ಸಿಗ್ತಿದೆ. ಅಲ್ಲದೆ ಐಪಿಎಲ್ ಫ್ರಾಂಚೈಸಿಗಳೂ ಹೋಪ್ ಮೇಲೆ ಕಣ್ಣಿಟ್ಟಿದ್ದಾರೆ.

2 ವರ್ಷ ಅನ್ ಸೋಲ್ಡ್.. 2027ರಕ್ಕೆ ಕಂ ಬ್ಯಾಕ್!

ಶಾಯ್ ಹೋಪ್ ಅದ್ಭುತ ಪ್ರದರ್ಶನದ ಬೆನ್ನಲ್ಲೇ ಐಪಿಎಲ್ ಕಂ ಬ್ಯಾಕ್ ಚರ್ಚೆಯೂ ನಡೀತಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ಮೂಲಕ ತಮ್ಮ ಐಪಿಎಲ್ ಕೆರಿಯರ್ ಆರಂಭಿಸಿದರು. ಆ ಸೀಸನ್​ನಲ್ಲಿ 183 ರನ್ ಗಳಿಸಿದ್ರು. ಆದ್ರೆ ಡೆಲ್ಲಿ ಪರ ಸಾಧಾರಣ ಪ್ರದರ್ಶನ ನೀಡಿದ್ದರಿಂದ, ಅವರು ನಿಧಾನವಾಗಿ ಬ್ಯಾಟಿಂಗ್ ಮಾಡುತ್ತಾರೆ ಎಂಬ ಕಾರಣಕ್ಕೆ ನಂತರದ ಹರಾಜಿನಲ್ಲಿ ಯಾವುದೇ ತಂಡ ಅವರನ್ನು ಖರೀದಿಸದೆ ಅನ್‌ಸೋಲ್ಡ್ ಆಗಿದ್ರು. ಅಂದ್ರೆ 2025 ಮತ್ತು 26ರಲ್ಲಿ ಯಾವ ತಂಡವೂ ಖರೀದಿ ಮಾಡಿರಲಿಲ್ಲ. ಆದ್ರೀಗ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ವಿಶೇಷವಾಗಿ ರಾಂಚಿಯಲ್ಲಿ ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿದ ನಂತರ  ಶಾಯ್ ಹೋಪ್ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ಕಂಡು ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಸೇರಿದಂತೆ ಹಲವು ವಿಶ್ಲೇಷಕರು, ಶಾಯ್ ಹೋಪ್ ಮುಂಬರುವ ಐಪಿಎಲ್ ಮಿನಿ ಹರಾಜಿನಲ್ಲಿ ತಮ್ಮ ಹೆಸರು ನೋಂದಾಯಿಸಿದರೆ ಅವರನ್ನು ಖರೀದಿಸಲು ಫ್ರಾಂಚೈಸಿಗಳ ನಡುವೆ ಭಾರಿ ಪೈಪೋಟಿ (ಬಿಡ್ಡಿಂಗ್ ವಾರ್) ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಒಟ್ನಲ್ಲಿ ಕಳೆಗುಂದಿರೋ ವಿಂಡೀಸ್​ಗೆ ಶಾಯ್ ಹೋಪ್ ಹೊಸ ನಿರೀಕ್ಷೆ ಮೂಡಿಸ್ತಿದ್ದು, 2027ರ ಏಕದಿನ ವಿಶ್ವಕಪ್​ಗೂ ಕಾಲಿಡೋ ಆಸೆಯಲ್ಲಿದ್ದಾರೆ. ಭಾರತ ವಿರುದ್ಧದ ಈ ಸರಣಿ ಅವ್ರಿಗೆ ದೊಡ್ಡ ಕಾನ್ಫಿಡೆನ್ಸ್​ನೂ ಮೂಡಿಸಿದೆ.

Shantha Kumari

One thought on “ವಿಂಡೀಸ್ ಗೆ ಮರುಜನ್ಮದ HOPE! – ಕೆರೆಬಿಯನ್ಸ್ ಗತವೈಭವ ಮರುಕಳಿಸುತ್ತಾ?
IPLಗೆ ರೀ ಎಂಟ್ರಿ ಕೊಡ್ತಾರಾ ಶಾಯ್?
”

Leave a Reply

Your email address will not be published. Required fields are marked *