ರನ್ಸ್ ಅಭಿಷೇಕ.. ಬೌಲರ್ಸ್ ಧಮಾಕ! – ಇಂದೋರ್ ನಲ್ಲಿ ಬೆಂಡೆತ್ತಿದ ಭಾರತ
224 ರನ್ಸ್.. ವಿಂಡೀಸ್ ಎಡವಿದ್ದೆಲ್ಲಿ?

ರಾಂಚಿಯಲ್ಲಿ ನಡೆದ ಎರಡನೇ ಮ್ಯಾಚಲ್ಲಿ 250 ರನ್ಸ್ ಟಾರ್ಗೆಟ್ ಕೊಟ್ಟೂ ಸೋತಿದ್ದ ಭಾರತ ಇಂದೋರ್ನಲ್ಲಿ 224 ರನ್ಸ್ ಟಾರ್ಗೆಟ್ ಸೆಟ್ ಮಾಡಿ ಗೆದ್ದು ಬೀಗಿದೆ. ಸರಣಿಯಲ್ಲಿ 2-1 ಅಂತರದಲ್ಲಿ ಲೀಡ್ ಪಡ್ಕೊಂಡಿದೆ. ಪ್ಲೇಯಿಂಗ್ 11ನಲ್ಲಿ ಎರಡು ಬದಲಾವಣೆಗಳೊಂದಿಗೆ ಅಂದ್ರೆ ದುಬೆ ಬದಲಿಗೆ ನಿತೀಶ್ ರೆಡ್ಡಿ ಹಾಗೇ ಕುಲ್ದೀಪ್ ಬದಲಿಗೆ ಪ್ರಿನ್ಸ ಯಾದವ್ ಜೊತೆ ಕಣಕ್ಕಿಳಿದಿದ್ದ ಭಾರತ.
ಇದನ್ನೂ ಓದಿ : IPL ಪಿಚ್ ಗಳೇ ಬೌಲರ್ಸ್ ಗೆ ವಿಲನ್ – 3ನೇ ಪಂದ್ಯಕ್ಕೂ FLAT ಟ್ರ್ಯಾಕ್
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ಇವತ್ತು ಸಿಕ್ಕಾಪಟ್ಟೆ ಹೈಡ್ರಾಮಾಗಳೇ ಆಯ್ತು. ಒಂಥರಾ ಅನ್ಲಕ್ಕಿ ಅನ್ನೋ ಥರ ಸುಮಾರ್ ಬ್ಯಾಟರ್ಸ್ ಔಟ್ ಆದ್ರು. ಸಂಜು ಸ್ಯಾಮ್ಸನ್ ಹಾಗೇ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಶುರು ಮಾಡಿದ್ದು ಬ್ಯಾಡ್ ಲಕ್ ಅಂದ್ರೆ ಸಂಜು ಬೇಗನೇ ಔಟ್ ಆದ್ರು. ಲಾಸ್ಟ್ ಮ್ಯಾಚಲ್ಲಿ 80+ ರನ್ಸ್ ಸ್ಕೋರ್ ಮಾಡಿದ್ದ ಸಂಜು ಈ ಮ್ಯಾಚಲ್ಲಿ 6 ಬಾಲ್ಗಳಲ್ಲಿ 3 ರನ್ ಗಳಿಸಿ ಔಟ್ ಆದ್ರು. ಆದ್ರೆ ಎರಡನೇ ವಿಕೆಟ್ ಗೆ ಜೊತೆಯಾದ ಅಭಿಷೇಕ್ ಮತ್ತು ಇಶಾನ್ ಕಿಶನ್ ಸ್ಕೋಟಕ ಇನ್ನಿಂಗ್ಸ್ ಆಡಿದ್ರು. 39 ಬಾಲಲ್ಲೇ 100+ ರನ್ಸ್ ಜೊತೆಯಾಟವಾಡಿದ್ರು. ಅಭಿಷೇಕ್ ಅಂತೂ ವಿಂಡೀಸ್ ಬೌಲರ್ ಗಳನ್ನ ಲೆಫ್ಟ್ ರೈಟ್ ಅಂತಾ ಚಾರ್ಜ್ ಮಾಡ್ತಿದ್ರು. ಅಭಿ & ಕಿಶನ್ ಕ್ರೀಸ್ ನಲ್ಲಿ ಇರೋವರೆಗೂ ಸಿಕ್ಸ್, ಫೋರ್ಗಳ ಸುರಿಮಳೆ ಆಗ್ತಿತ್ತು. ಬಟ್ ಇಂಥಾ ಟೈಮಲ್ಲಿ 9ನೇ ಓವರ್ ನಲ್ಲಿ ರೋಸ್ಟನ್ ಚೇಸ್ ಬೌಲಿಂಗ್ ನಲ್ಲಿ ಬಿಗ್ ಟ್ವಿಸ್ಟ್ ಸಿಗುತ್ತೆ. 17 ಬಾಲಲ್ಲಿ 38 ರನ್ ಗಳಿಸಿ ಚೆನ್ನಾಗಿ ಆಡ್ತಿದ್ದ ಇಶಾನ್ ಕಿಶನ್ ಕ್ರೀಸ್ ಬಿಟ್ಟು ಮುಂದೆ ಬಂದು ಬಿಗ್ ಹಿಟ್ ಗೆ ಟ್ರೈ ಮಾಡಿ ಸ್ಟಂಪ್ ಔಟ್ ಆದ್ರು. ಌಂಡ್ ನೆಕ್ಸ್ ಟ್ ಅದೇ ಓವರ್ ನಲ್ಲೇ ಶ್ರೇಯಸ್ ಅಯ್ಯರ್ 1 ರನ್ ಗೆ ಎಲ್ಬಿಡಬ್ಲ್ಯೂ. ಅಲ್ಲಿಂದ ಭಾರತದ ಬ್ಯಾಟಿಂಗ್ ಡೌನ್ ಫಾಲ್ ಶುರುವಾಯ್ತು. 30 ಬಾಲಲ್ಲೇ 69 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಸ್ಪ್ರಿಂಗರ್ಗೆ ಕಾಟನ್ ಬೌಲ್ಡ್ ಆಗ್ತಾರೆ. ಇನ್ನು 28 ರನ್ ಗಳಿಸಿ ಚೆನ್ನಾಗಿ ಆಡ್ತಿದ್ದ ತಿಲಕ್ ವರ್ಮಾ ರನ್ ಔಟ್ ಆಗ್ತಾರೆ. ಅದೂ ಕೂಡ ಬಾಲ್ ಬೌಂಡರಿ ತಲುಪಿದೆ ಅನ್ಕೊಂಡು ಕೇರ್ ಲೆಸ್ ಮಾಡಿ ಕ್ರೀಸ್ ಮಧ್ಯೆ ನಿಂತಿದ್ರು. ಬಟ್ ಅದು ಬೌಂಡರಿ ಲೈನ್ ಟಚ್ ಮಾಡೋ ಮೊದಲೇ ಫೀಲ್ಡಿಂಗ್ ಮಾಡಿ ಔಟ್ ಮಾಡಿದ್ರು. ನಮನ್ ಧೀರ್ 10 ರನ್ಗೆ ಔಟ್ ಆದ್ರೆ ನಿತೀಶ್ ರೆಡ್ಡಿ 21 ರನ್ಗೆ ವಿಕೆಟ್ ಒಪ್ಪಿಸಿದ್ರು. ಇನ್ನು ಅಕ್ಷರ್ ಪಟೇಲ್ ಕೂಡ ಮಿಸ್ ಕಮ್ಯುನಿಕೇಷನ್ ನಿಂದ ರನ್ ಔಟ್. ಕೊನೆಗೆ ಲಾಸ್ಟ್ ಓವರ್ ನಲ್ಲಿ ಪ್ರಿನ್ಸ್ ಯಾದವ್ ಮೂರು ಬೌಂಡರಿ ಬಾರಿಸಿ ಕಿಕ್ ಕೊಟ್ರು. ಡಗೌಟ್ ಹಾಗೇ ಗ್ಯಾಲರಿಯಲ್ಲಿ ಫುಲ್ ಎಂಟರ್ಟೈನ್ ಮೆಂಟ್. ಹೀಗೆ ಭಾರತ 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳ್ಕೊಂಡು 223 ರನ್ಗಳನ್ನ ಕಲೆ ಹಾಕಿತ್ತು. ವಿಂಡೀಸ್ ಪರ ಬೌಲಿಂಗ್ ಮಾಡಿದ ಎಲ್ರೂ ವಿಕೆಟ್ಸ್ ಬೇಟೆಯಾಡಿದ್ದು ವಿಶೇಷವಾಗಿತ್ತು.
224 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ವಿಂಡೀಸ್ ಪರ ಯಾರ ಪಾರ್ಟ್ನರ್ಶಿಪ್ ಕೂಡ ಬಿಲ್ಡ್ ಆಗ್ತಿಲ್ಲ. ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಕ್ಯಾಪ್ಟನ್ ಶಾಯ್ ಹೋಪ್ಗೆ ಎರಡನೇ ಓವರ್ನಲ್ಲೇ ಅರ್ಶದೀಪ್ ಸಿಂಗ್ ಪೆವಿಲಿಯನ್ ದಾರಿ ತೋರಿಸಿದ್ರು. ಇನ್ನು 43 ರನ್ ಗಳಿಸಿ ಹೊಡಿಬಡಿ ಅಂತಾ ತುಂಬಾನೇ ಡೇಂಜರಸ್ ಆಗಿದ್ದ ಶಿಮ್ರಾನ್ ಹೆಟ್ಮೆಯರ್ ನಮನ್ ಧೀರ್ ಬೌಲಿಂಗ್ನಲ್ಲಿ ಬೌಲ್ಡ್ ಆದ್ರು. ರೋವ್ಮನ್ ಪೊವೆಲ್ 5 ರನ್, ಸ್ಯಾಂಪ್ಸನ್ 31, ಪೊವೆಲ್ 5, ಪಾಲ್ 6 ರನ್ಗಳಿಗೆ ಔಟ್ ಆದ್ರು. ಬಟ್ ಇವತ್ತಿನ ಮ್ಯಾಚಲ್ಲೂ ಶೆರ್ಫೇನ್ ರುದರ್ಫೋರ್ಡ್ ಫೈಟ್ ಕೊಟ್ರು. 32 ರನ್ ಗಳಿಸಿ ಬಿಗ್ ಹಿಟ್ಗೆ ಟ್ರೈ ಮಾಡ್ತಿದ್ದದವ್ರು ಅರ್ಶದೀಪ್ ಬಲೆಗೆ ಬಿದ್ರು. ಇನ್ನು ವಿಂಡೀಸ್ಗೆ 20ನೇ ಓವರ್ನಲ್ಲಿ ಗೆಲುವಿಗೆ 37 ರನ್ಗಳು ಬೇಕಾಗಿತ್ತು. ಬಟ್ ಶಮರ್ ಲಾಸ್ಟ್ ಮೂಮೆಂಟ್ ಚೆನ್ನಾಗಿ ಆಡಿದ್ರೂ ಮ್ಯಾಚ್ ಆಲ್ರೆಡಿ ಕೈಜಾರಿತ್ತು. ಅಂತಿಮವಾಗಿ ಭಾರತ 14 ರನ್ಗಳಿಂದ ಪಂದ್ಯವನ್ನ ಗೆದ್ದು ಬೀಗಿತು. ಌಕ್ಚುಲಿ ಭಾರತ ಈ ಪಂದ್ಯ ಗೆಲ್ಲೋಕೆ ಸಾಕಷ್ಟು ರೀಸನ್ಸ್ ಇದೆ.. 224 ರನ್ಸ್ ಟಾರ್ಗೆಟ್.. ಪ್ರೆಶರ್ನಲ್ಲೇ ಇದ್ದ ವಿಂಡೀಸ್ ಪಡೆಯನ್ನ ಪವರ್ ಪ್ಲೇನಲ್ಲೇ ಕಟ್ಟಿ ಹಾಕಿದ್ದು. ಭಾರತ ಪವರ್ ಪ್ಲೇನಲ್ಲಿ 87 ರನ್ಸ್.. ಬಟ್ ವಿಂಡೀಸ್ 54 ರನ್ಸ್ ಅಷ್ಟೇ ಕಲೆ ಹಾಕಿದ್ದು. ಸೋ ಇಲ್ಲೇ ವೇರಿಯೇಷನ್ ಜಾಸ್ತಿ ಇತ್ತು. ಌಂಡ್ ಇಂದೋರ್ ಪಿಚ್ನಲ್ಲಿ ಡ್ಯೂ ಅಂದ್ರೆ ಇಬ್ಬನಿ ಇರ್ಲಿಲ್ಲ. ಭಾರತದ ಬೌಲರ್ಗಳಿಗೆ ಬಾಲ್ ಗ್ರಿಪ್ ಚೆನ್ನಾಗಿ ಸಿಗ್ತಿದ್ರಿಂದ ಅಂದುಕೊಂಡಂತೆ ಡೆಲಿವರ್ ಮಾಡೋದು ಈಸಿ ಆಯ್ತು. ಭಾರತದ ಪರ ಅರ್ಶದೀಪ್ 3 ವಿಕೆಟ್ಸ್ ತೆಗೆದ್ರೆ ನಮನ್ 2, ಅಕ್ಷರ್ & ರೆಡ್ಡಿ ಒಂದೊಂದು ವಿಕೆಟ್ಸ್ ತೆಗೆದ್ರು. ಒಟ್ನಲ್ಲಿ ಭಾರತ ಗೆದ್ದಾಗಿದೆ. ಸರಣಿ ಲೀಡ್ ಪಡೆದಿದೆ. ಇನ್ನೆರಡು ಪಂದ್ಯ ಬಾಕಿ ಇದ್ದು ಭಾರತ ಗೆಲ್ಲೋದು ಈಸಿಯಂತೂ ಇರಲ್ಲ ಅನ್ನೋದು ಕನ್ಫರ್ಮ್ ಆಗಿದೆ.

ನೋಡಿರಿ


One thought on “ರನ್ಸ್ ಅಭಿಷೇಕ.. ಬೌಲರ್ಸ್ ಧಮಾಕ! – ಇಂದೋರ್ ನಲ್ಲಿ ಬೆಂಡೆತ್ತಿದ ಭಾರತ
224 ರನ್ಸ್.. ವಿಂಡೀಸ್ ಎಡವಿದ್ದೆಲ್ಲಿ?”