ಜಗ್ಗ ಮಮ್ಮಿಗೆ ಸೋನಿಕಾ ಮೇಲೆ LOVE.. ಗಿಲ್ಲಿ ಕೆಣಕಿದ ಜಗ್ಗಿ ಟ್ರಿಕ್ ಗೆಲ್ಲುತ್ತಾ? – ಕೆಲಸ ಕಮ್ಮಿ.. ಮಾತೇ ಹೆಚ್ಚಾಯ್ತಾ?

ಬಿಗ್‌ಬಾಸ್ ಕನ್ನಡ ಸೀಸನ್ 13 ಸದ್ಯ ರೋಚಕ ಘಟ್ಟ ತಲುಪಿದೆ. ಒಂದ್ಕಡೆ ಕೆಲ ಸ್ಪರ್ಧಿಗಳು ಬರೀ ಕಿತ್ತಾಟದಿಂದಲೇ ಸದ್ದು ಮಾಡ್ತಿದ್ರೆ, ಮತ್ತೊಂದ್ಕಡೆ ಕೆಲ ಸ್ಪರ್ಧಿಗಳು ತಾವು ಹೈಲೈಟ್ ಆಗ್ಬೇಕು ಅಂತ ಲವ್ ಟ್ರ್ಯಾಕ್ ಶುರು ಮಾಡಿದ್ದಾರೆ. ಯಶಸ್ ಸೌಂದರ್ಯ, ಆಸಿಯಾ ಜೊತೆ ಫ್ಲರ್ಟ್ ಮಾಡ್ತಿದ್ದಾರೆ. ಇನ್ನೊಂದ್ಕಡೆ ಜಗ್ಗ ಮಮ್ಮಿ ಮದುವೆಯಾಗಿದ್ರೂ ಕೂಡ ಬಿಗ್‌ಬಾಸ್ ಮನೆಯಲ್ಲಿ ಲವ್ ಟ್ರ್ಯಾಕ್ ಶುರುಮಾಡಿದ್ದಾರೆ. ಅದೂ ಕೂಡ ಸೋನಿಕಾ ಗೌಡ ಜೊತೆ ಫ್ಲರ್ಟ್ ಮಾಡ್ತಿದ್ದಾರೆ. ಇದೀಗ ಜಗ್ಗ ಮಮ್ಮಿ ವಿರುದ್ಧ ವೀಕ್ಷಕರಿಂದ ಆಕ್ರೋಶ ವ್ಯಕ್ತವಾಗಿದೆ. ಮದುವೆಯಾಗಿದ್ರೂ ಈ ಶೋಕಿ ಬೇಕಿತ್ತಾ ಅಂತ ಕೇಳಿದ್ದಾರೆ. ಮತ್ತೊಂದ್ಕಡೆ ಜಗದೀಶ್ ಗಿಲ್ಲಿನಟನ ಬಗ್ಗೆ ಮಾತನಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಆರೋಗ್ಯ ವೃದ್ಧಿಗೆ ಈ ಹಣ್ಣು ಬೆಸ್ಟ್! – ಕಿವಿ ಹಣ್ಣಿನಿಂದ ಎಷ್ಟೊಂದು ಆರೋಗ್ಯ ಲಾಭ!
ಲವ್ ಮಾಕ್ಟೇಲ್ 3 ಸಿನಿಮಾದಲ್ಲಿ ನಟಿದ್ದ ಜಗದೀಶ್, ಜಗ್ಗ ಮಮ್ಮಿ ಅಂತಾನೇ ಫೇಮಸ್ ಆಗಿದ್ದಾರೆ. ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಜಗದೀಶ್ ಆಟಕ್ಕಿಂತ ಮಾತಿನ ಮೂಲಕವೇ ಹೈಲೈಟ್ ಆಗ್ತಿದ್ದಾರೆ. ಆರಂಭದಲ್ಲಿ ಸದಾ ಸೈಲೆಂಟ್ ಆಗಿರುತ್ತಿದ್ದ ಜಗ್ಗಮಮ್ಮಿ 3ನೇ ವಾರ ಕಳಿತಾ ಇದ್ದಂತೆ ಲವ್ ಟ್ರ್ಯಾಕ್ ಶುರುಮಾಡಿದ್ದಾರೆ. ಇದೀಗ ದೊಡ್ಮನೆಯ ಫ್ಲರ್ಟ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಜಗ್ಗ ಮಮ್ಮಿ ಈಗ ಸೋನಿಕಾ ಗೌಡ ಹಿಂದೆ ಬಿದ್ದಿದ್ದಾರೆ. ಪ್ರೀತ್ಸೇ ಪ್ರೀತ್ಸೇ ಅಂತಾ ಜೀವ ತಿಂತಾ ಇದ್ದಾರೆ.
ಹೌದು.. ಸೋನಿಕಾ ಗೌಡ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅಲ್ಲಿಂದ ಜಗ್ಗ ಮಮ್ಮಿಯ ಆಟದ ವರಸೆ ಚೇಂಜ್ ಆಗಿದೆ. ಸದಾ ಸೋನಿಕಾ ಹಿಂದೆಯೇ ಸುತ್ತುತಾ ಇದ್ದಾರೆ. ಆರಂಭದಲ್ಲಿ ಜಗ್ಗಮಮ್ಮಿ ತಮಾಷೆಗೆ ಹೀಗೆ ಹೇಳ್ತಿದ್ದಾರೆ ಎಂದು ಎಲ್ಲರೂ ಅಂದ್ಕೊಂಡಿದ್ರು. ಆದ್ರೀಗ ಜಗ್ಗ ಮಮ್ಮಿ ನಡೆದುಕೊಳ್ಳುತ್ತಿರುವ ರೀತಿ ನೋಡಿದ್ರೆ, ಇದು ಬರಿ ತಮಾಷೆಯಷ್ಟೇ ಅಲ್ಲ, ಅವರ ಮನಸ್ಸಿನಲ್ಲಿ ನಿಜಕ್ಕೂ ಪ್ರೀತಿಯ ಭಾವನೆ ಮೂಡಿದೆಯಾ ಅನ್ನೋ ಅನುಮಾನ ವೀಕ್ಷಕರಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಜಗ್ಗಮಮ್ಮಿ ಕಿರಣ್ ಶಾಸ್ತ್ರಿ ಜೊತೆ ಹೇಳಿದ ಮಾತು. ಕಿರಣ್ ಬಳಿ ತಮ್ಮ ಮನಸ್ಸಿನ ಮಾತನ್ನ ಬಿಚ್ಚಿಟ್ಟ ಜಗ್ಗ ಮಮ್ಮಿ, ನಾನು ಅವರನ್ನ ಒಪ್ಪಿಸ್ತೀನಿ ಕಣ್ಲಾ ಪ್ರೀತಿ ಮಾಡೋಕೆ ಎಂದು ನೇರವಾಗಿ ಹೇಳಿದ್ದಾರೆ. ಒಂದ್ವೇಳೆ ಅವರಿಗೆ ಬೇಡ ಅಂದರೆ ಏನು ಮಾಡ್ತೀಯಾ? ಎಂದು ಕಿರಣ್ ಕೇಳಿದಾಗ, ಜಗ್ಗ ಮಮ್ಮಿ ಬಿಟ್ಟುಕೊಡದೇ, ಅವರಿಗೆ ಬೇಡ ಅಂದರೆ? ನನಗೆ ಬೇಕು. ಅವರು ಇಷ್ಟಪಡಲೇಬೇಕು, ಇಲ್ಲಾಂದ್ರೆ ಇಷ್ಟ ಪಡೋ ತರ ಮಾಡ್ತೀನಿ ಎಂದಿದ್ದಾರೆ. ಬಳಿಕ ಕಿರಣ್ ಶಾಸ್ತ್ರಿ ಕುಟುಂಬ ಮತ್ತು ಮಗಳ ಜವಾಬ್ದಾರಿಯನ್ನ ಜಗ್ಗ ಮಮ್ಮಿಗೆ ನೆನಪಿಸಿ ಬುದ್ಧಿ ಹೇಳಿದ್ರೂ ಕೇಳೋಕೆ ರೆಡಿ ಇಲ್ಲ. ನಾನು – ನನ್ನ ಹೆಂಡತಿಯರು ಅಂತ ಹಾಡು ಹೇಳ್ತಾ ಕಿರಣ್ ಮಾತನ್ನ ನಿರ್ಲಕ್ಷಿಸಿದ್ದಾರೆ. ಇನ್ನು ಜಗ್ಗ ಮಮ್ಮಿ ಫ್ಲರ್ಟ್ ಮಾಡಲು ಶುರುಮಾಡ್ತಿದ್ದಂತೆ ಸೋನಿಕಾ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅವರು ಜಗ್ಗ ಮಮ್ಮಿಯನ್ನ ಅಣ್ಣ ಅಂತ ಕರೆದಿದ್ದಾರೆ. ಅಷ್ಟೇ ಅಲ್ಲ ನನಗೆ ನನ್ನದೇ ಲೈಫ್ ಇದೆ. ಮನೆಯವರು ಇದನ್ನ ನೋಡ್ತಿರ್ತಾರೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಇದೀಗ ಜಗ್ಗ ಮಮ್ಮಿ ವರ್ತನೆಗೆ ವೀಕ್ಷಕರು ಕಿಡಿಕಾರಿದ್ದಾರೆ. ಜಗದೀಶ್ ಗೆ ಮದುವೆಯಾಗಿದ್ದು ಒಬ್ಳು ಮಗಳೂ ಇದ್ದಾಳೆ. ಹೀಗಿದ್ರೂ, ಸೋನಿಕಾಗೆ ಲವ್ ಮಾಡುವಂತೆ ಬೆನ್ನು ಬಿದ್ದಿರುವುದು ಸರಿಯಲ್ಲ. ಬಿಗ್ ಬಾಸ್ ಮನೆಗೆ ಬಂದ್ಮೇಲೆ ಮನರಂಜನೆ ಕೊಡ್ಬೇಕು. ಅದು ಬಿಟ್ಟು ಹೀಗೆ ಮಾಡಿದ್ರೆ ಜಾಸ್ತಿ ದಿನ ದೊಡ್ಮನೆಯಲ್ಲಿ ಇರಲು ಆಗಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಂದ್ಕಡೆ ಜಗ್ಗ ಮಮ್ಮಿ ಮಾತು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಜಗ್ಗ ಮಮ್ಮಿ ತಮ್ಮ ಆಟವನ್ನ ಸಮರ್ಥಿಸಿಕೊಳ್ಳುವ ಭರದಲ್ಲಿ, ಗಿಲ್ಲಿ ನಟ ಅಂತೂ ಬರೀ ಕಾಮಿಡಿ ಮಾಡಿಕೊಂಡೇ ಗೆದ್ದುಬಿಟ್ಟ ಎಂದು ಹೇಳಿದ್ರು. ಈ ಹೇಳಿಕೆ ಗಿಲ್ಲಿನಟನ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜಗ್ಗಮಮ್ಮಿಯನ್ನ ಫುಲ್ ರೋಸ್ಟ್ ಮಾಡಿದ್ದಾರೆ. ಗಿಲ್ಲಿ ಆಗೋಕೆ ಹೋಗ್ಬೇಡಿ ನೀವುಗಳು. ಅವರ 10% ಸಹ ಇಲ್ಲ, ಗಿಲ್ಲಿ ವ್ಯಕ್ತಿತ್ವ, ನಿಯತ್ತು ಜೊತೆಗೆ ಎಂಟರ್‌ಟೈನ್‌ಮೆಂಟ್, 13ನೇ ಸೀಸನ್‌ನಲ್ಲಿ 5%ರಷ್ಟು ಯಾರಿಗೂ ಇಲ್ಲ ಬಿಡಿ. ಗಿಲ್ಲಿ ಬರೀ ಕಾಮಿಡಿ ಮಾಡಿಲ್ಲ.. ಸಕಲ ಕಲಾ ವಲ್ಲಭ. ಗಿಲ್ಲಿ ಕಷ್ಟದ ಹಾದಿಯಲ್ಲಿ ನಡೆದು ತನ್ನ ಸ್ವಂತ ಪ್ರತಿಭೆಯಿಂದ ತನ್ನನ್ನ ತಾನು ಪರಿಚಯ ಮಾಡಿಕೊಂಡ ಅಪ್ರತಿಮ ಕಲಾವಿದ. ಹಾಸ್ಯದಲ್ಲಿಯೂ ಜೀವನ ಪಾಠ ಹೇಳುವ ನಮ್ಮ ಗಿಲ್ಲಿ ಟ್ಯಾಲೆಂಟ್‌ನ ಇಡೀ ಕರ್ನಾಟಕ ಮೆಚ್ಚಿದೆ. ಗಿಲ್ಲಿ ಗತ್ತು ನಿಮಗೆ ಎನ್ ಗೊತ್ತು, ಗಿಲ್ಲಿ ಕಾಲ್ ದೂಳಿಗೂ ಸಮ ಇಲ್ಲ ಇವರಗಳು. ಗಿಲ್ಲಿಗೆ ಬರ್ತಿದ್ದ ವಾರದ ವೋಟ್‌ಗಳು ಈ ಸೀಸನ್‌ನ ಫಿನಾಲೆಯಲ್ಲೂ ಬರಲ್ಲ ಅನ್ಸತ್ತೆ. ಗಿಲ್ಲಿ ಅಟ್ಲೀಸ್ಟ್ ಕಾಮಿಡಿ ಮಾಡಿ ಗೆದ್ದ, ನೀನೇನು ದಬ್ಬಾಕ್ತಿದ್ದೀಯಾ ಅಲ್ಲಿ? ಬರೀ ಸಿಂಪತಿಯ ಡ್ರಾಮ ಮಾಡ್ತಾ ಇದ್ದೀಯ ಎಂದು ಕಮೆಂಟ್ ಮಾಡ್ತಿದ್ದಾರೆ.

ನೋಡಿರಿ

