OTT ಅಂಗಳಕ್ಕೆ ಪ್ರೇಮದ ಊರಲಿ? – ಎಷ್ಟು ಕೋಟಿಗೆ, ಯಾವಾಗ ರಿಲೀಸ್?
ಟಾಕ್ಸಿಕ್ಗೆ ಲೋ ಬಜೆಟ್ ಚಾಲೆಂಜ್
ಪ್ರೇಮದ ಊರಲಿ ಸಿನಿಮಾ ಗೆದ್ದಿದೆ, ಥಿಯೇಟರ್ನಲ್ಲಿ 3ನೇ ವಾರ ಕೂಡ ಹೌಸ್ ಫುಲ್ ಕಲೆಕ್ಷನ್ ಮಾಡ್ತಿದೆ. ಸಾಕಷ್ಟು ಜನ 4-5 ಸಲ ಈ ಸಿನಿಮಾ ನೋಡ್ತಿದ್ದಾರೆ. ಹಾಗಿದ್ರೆ ಮೊದಲ ದಿನ ಲಕ್ಷ ಎಣಿಸೋಕೆ ಒದ್ದಾಡುತ್ತಿದ್ದ ಈ ಸಿನಿಮಾದ ಈಗ ಎಷ್ಟು ಕಲೆಕ್ಷನ್ ಮಾಡಿದೆ?. ಟಿಕೆಟ್ ಸಿಗದೇ ಜನರು ಒದ್ದಾಡುತ್ತಿರುವುದು ಯಾಕೆ?. OTTಗೆ ಯಾವಾಗ ಬರುತ್ತೆ.. OTTಯಲ್ಲಿ ಟಾಕ್ಸಿಕ್ಗೆ ಪ್ರೇಮದ ಊರಲಿ ಸಿನಿಮಾ ಹೇಗೆ ಫೈಟ್ ಕೊಡಲಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ನೀಡುತ್ತೇನೆ. ನಾನು ನಿಮ್ಮ ಶಿವರಾಜ್ ಬಾಣಂಕಿ.. ನೀವು ಸುದ್ದಿಯಾನದ ಸಬ್ಸ್ಕೈಬರ್ ಆಗೋದ್ದನ್ನ ಮರೆಯಬೇಡಿ.
ಸೆಪ್ಟೆಂಬರ್ 25ರಂದು ದೊಡ್ಡ ಮಟ್ಟದ ಹೈಪ್ ಇಲ್ಲದೆ ಚಿತ್ರಮಂದಿರಕ್ಕೆ ಬಂದ ‘ಪ್ರೇಮದ ಊರಲಿ’ ಸಿನಿಮಾ ಆರಂಭದಲ್ಲಿ ನಿಧಾನವಾಗಿ ಓಪನ್ ಆಗಿತ್ತು. ಆದರೆ ಸಿನಿಮಾ ನೋಡಿದ ಪ್ರೇಕ್ಷಕರು ಕೊಟ್ಟ ಮೌತ್ ಪಬ್ಲಿಸಿಟಿ ಚಿತ್ರದ ಗೇಮ್ನ್ನೇ ಬದಲಿಸಿತು. ಮೊದಲ ದಿನದ ಸಾಧಾರಣ ಕಲೆಕ್ಷನ್ನಿಂದ ದಿನೇ ದಿನೇ ಕಲೆಕ್ಷನ್ ಏರಿಕೆಯಾಗುತ್ತಾ ಬಂದಿದೆ. ಎರಡನೇ ವಾರದ ವೇಳೆಗೆ ಸಿನಿಮಾ ದೊಡ್ಡ ಮಟ್ಟದ ಯಶಸ್ಸಿನತ್ತ ಸಾಗಿತ್ತು. ಈಗ 3ನೇ ವಾರ ಟೆಿಕೆಟ್ ಸಿಗದೇ ಹೌಸ್ ಫುಲ್ ಕಲೆಕ್ಷನ್ ಮಾಡ್ತಿದೆ. ಹಳ್ಳಿ ಜನ ಟ್ರ್ಯಾಕ್ಟರ್ಗಳಲ್ಲಿ ಸಿನಿಮಾ ನೋಡೋಕೆ ಥಿಯೇಟರ್ಗೆ ಕಾಲಿಡುತ್ತಿದ್ದಾರೆ.
3ನೇ ವಾರದಲ್ಲಿ ವೀಕೆಂಡ್ ಹೊರತುಪಡಿಸಿ ಸುಮಾರು 27ರಿಂದ 29 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಶನಿವಾರ ಭಾನುವಾರ ಕಲೆಕ್ಷನ್ ಸೇರಿದ್ರೆ 35 ಕೋಟಿ ದಾಟುವ ಸಾಧ್ಯತೆ ಇದೆ.. ಯಾಕಂದ್ರೆ ಈ ವೀಕೆಂಡ್ನಲ್ಲಿ 7 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಹೀಗಾದರೆ ಚಿತ್ರದ ಒಟ್ಟು ಕಲೆಕ್ಷನ್ ಮತ್ತಷ್ಟು ವೇಗವಾಗಿ 35 ಕೋಟಿ ಗಡಿ ದಾಟುವ ಸಾಧ್ಯತೆ ಇದೆ. ಇದು ಅಧಿಕೃತ ಕಲೆಕ್ಷನ್ ಅಲ್ಲ, ಸದ್ಯದ ಟ್ರೆಂಡ್ ಆಧರಿಸಿದ ಅಂದಾಜು ಮಾತ್ರ.
ಇನ್ನು OTT ವಿಚಾರಕ್ಕೆ ಬಂದರೆ, ಥಿಯೇಟರ್ನಲ್ಲಿ ಓಡ್ತಾ ಇರುವುದ್ದರಿಂದ ಸದ್ಯಕ್ಕೆ ಓಟಿಟಿಗೆ ಬರಲ್ಲ. ಬಂದ್ರೂಕೂಡ 30 ಕೋಟಿಗೂ ಹೆಚ್ಚು ಹಣಕ್ಕೆ ಸೇಲ್ ಆಗುತ್ತೆ ಲೆಕ್ಕಚಾರ ಇದೆ. ಸದ್ಯ 400 ಕೋಟಿಯ ಟಾಕ್ಸಿಕ್ ಕೂಡ ಇನ್ನೂ OTTಗೆ ಬಂದಿಲ್ಲ. ಆದ್ರೆ ಟ್ರೆಂಡ್ ಲೆಕ್ಕಚಾರದ ಪ್ರಕಾರ ಟಾಕ್ಸಿಕ್ಗಿಂತ ಹೆಚ್ಚಿನ ಬೆಲೆಗೆ ಪ್ರೇಮದ ಊರಿನಲಿ ಸಿನಿಮಾ ಮಾರಾಟ ಆಗಲಿದೆ ಅನ್ನೋ ಮಾತು ಕೇಳಿ ಬರ್ತಿದೆ. ಹೀಗಾಗಿ ಹೈ ಬಜೆಟ್ ಸಿನಿಮಾಕ್ಕೆ ಲೋ ಬಜೆಟ್ ಸಿನಿಮಾ ಫೈಟ್ ಕೊಡ್ತಿದೆ. ಸದ್ಯಕ್ಕೆ ಯಾವುದೇ ಅಧಿಕೃತ OTT ಪ್ಲಾಟ್ಫಾರ್ಮ್ ಅಥವಾ ರಿಲೀಸ್ ಡೇಟ್ ಘೋಷಣೆಯಾಗಿಲ್ಲ.
ಇನ್ನೂ ಈ ಹಿಂದೆ ‘ಸು ಫ್ರಂ ಸೋ’ ಸಿನಿಮಾ ಕೂಡ ಜನರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ಇದೀಗ ಪ್ರೇಮದ ಊರಲಿ ಕೂಡ ಹಾಗೆಯೇ ಯಶಸ್ಸಿನ ಹಾದಿಗೆ ಮರಳಿದೆ ಸಣ್ಣ ಬಜೆಟ್ನ ಸಿನಿಮಾ ದೊಡ್ಡ ಸ್ಟಾರ್ಗಳ ಸಿನಿಮಾಗಳಿಗೆ ಸೆಡ್ಡು ಹೊಡೆದು ಪ್ರೇಕ್ಷಕರನ್ನು ಥಿಯೇಟರ್ಗೆ ಕರೆತರುತ್ತಿದೆ. ಇದೇ ಕಾರಣಕ್ಕೆ ‘ಪ್ರೇಮದ ಊರಲಿ’ ಈಗ ಕೇವಲ ಸಿನಿಮಾವಲ್ಲ, ಸ್ಯಾಂಡಲ್ವುಡ್ನ ಸರ್ಪ್ರೈಸ್ ಸಕ್ಸಸ್ ಸ್ಟೋರಿಯಾಗಿ ಬದಲಾಗಿದೆ.
ಕನ್ನಡದಲ್ಲಿ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಯ ಬೆನ್ನಲ್ಲೇ ಸಿನಿಮಾಗೆ ಇತರ ಭಾಷೆಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಅಲ್ಲಿಯೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ಮಾತುಕತೆ ನಡೆಯುತ್ತಿದೆ.

ನೋಡಿರಿ

