IPLಗೆ ಮತ್ತೆ PSL ಚಾಲೆಂಜ್ – ಸೇಮ್ ಟೈಮ್ ನಲ್ಲೇ 12ನೇ ಸೀಸನ್
ಆಟಕ್ಕುಂಟು ಲೆಕ್ಕಕ್ಕಿಲ್ಲದ PAK ಲೀಗ್

ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ಸ್.. ಟೀಂ ಇಂಡಿಯಾದ ಲೆಜೆಂಡ್ಸ್.. ಭಾರತದ ಟ್ಯಾಲೆಂಟೆಡ್ ಹೀರೋಸ್.. ಹೀಗೆ ಘಟಾನುಘಟಿಗಳೆಲ್ಲಾ ಒಟ್ಟುಗೂಡಿ ಆಡೋ ಐಪಿಎಲ್ ಅಂದ್ರೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬನೇ.. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕಂಪ್ಲೀಟ್ ಎಂಟರ್ಟೈನ್ಮೆಂಟ್.. ಬಿಸಿಸಿಐಗಂತೂ ಹಣದ ಹೊಳೆಯೇ ಹರಿದುಬರುತ್ತೆ. ಆದ್ರೆ ಪ್ರತೀ ಬಾರಿಯೂ ಇಂಥಾ ಶ್ರೀಮಂತ ಲೀಗ್ಗೆ ಕಾಂಪಿಟೇಷನ್ ಕೊಡ್ತೀವಿ ಅನ್ನೋ ಪಾಕಿಸ್ತಾನ ಈ ಸಲನೂ ಅದೇ ಭ್ರಮೆಯಲ್ಲಿದೆ. ಐಪಿಎಲ್ಗೆ ಠಕ್ಕರ್ ಕೊಡ್ತೀವಿ ಅಂತಾ ಸೇಮ್ ಟೈಮಲ್ಲೇ ಶೆಡ್ಯೂಲ್ ಅನೌನ್ಸ್ ಮಾಡಿದೆ.
ಇದನ್ನೂ ಓದಿ : ಸುಂದರ್ ಆಟ ಮುಗಿಸಿದ್ರಾ ನಮನ್? – T-20I ಆಲ್ ರೌಂಡರ್ SLOT ಫಿಕ್ಸ್!
ಭಾರತ ಮತ್ತು ಪಾಕಿಸ್ತಾನ ನಡುವೆ ಆನ್ಫೀಲ್ಡ್ನಲ್ಲಿ ಭಾರತವೇ ಪ್ರತೀ ಸಲ ಗೆಲ್ಲೋ ಥರ ಆಫ್ ದಿ ಫೀಲ್ಡ್ ಬ್ಯುಸಿನೆಸ್ನಲ್ಲೂ ಭಾರತವೇ ಬಾಸ್. ಭಾರತದಲ್ಲಿ ನಡೆಯೋ ಐಪಿಎಲ್ ವಿಶ್ವದಾದ್ಯಂತ ಶ್ರೀಮಂತ ಲೀಗ್ ಆಗಿದ್ರೆ ಇದಕ್ಕೆ ಚಾಲೆಂಜ್ ಮಾಡ್ಬೇಕು ಅಂತಾ ಪಾಕ್ ಕೂಡ ಪಿಎಸ್ಎಲ್ ನಡೆಸುತ್ತೆ. 2027ರಲ್ಲಿ ನಡೆಯಲಿರುವ ಪಿಎಸ್ಎಲ್ 12ನೇ ಆವೃತ್ತಿಯನ್ನು ಮಾರ್ಚ್ 18 ರಿಂದ ಮೇ 2 ರವರೆಗೆ ನಡೆಸಲು ಪಿಸಿಬಿ ಅಧಿಕೃತವಾಗಿ ಘೋಷಿಸಿದೆ. ಸೋ ಅಲ್ಲಿಗೆ ಮುಂದಿನ ವರ್ಷವೂ ಐಪಿಎಲ್ ಮತ್ತು ಪಿಎಸ್ಎಲ್ ನಡುವೆ ಕ್ಲ್ಯಾಶ್ ಫಿಕ್ಸ್ ಆಗಿದೆ. ಯಾಕಂದ್ರೆ ಐಪಿಎಲ್ ಕೂಡ ಮಾರ್ಚ್ ಸೆಕೆಂಡ್ ವೀಕ್ನಿಂದಲೇ ಶುರುವಾಗೋ ಚಾನ್ಸಸ್ ಇದೆ. ಸೋ ಸೇಮ್ ಟೈಮಲ್ಲೇ ಎರಡೂ ಕಡೆ ಪಂದ್ಯಗಳು ನಡೆಯೋದ್ರಿಂದ ಇದು ಕೇವಲ 2 ಲೀಗ್ಗಳ ನಡುವಿನ ಪೈಪೋಟಿಯಲ್ಲ, ಡಿಪ್ಲೊಮೆಸಿ ಬ್ಯುಸಿನೆಸ್ ಎಂಪೈರ್ ನಡುವಿನ ಸಮರ ಕೂಡ. ಆದ್ರೆ ಐಪಿಎಲ್ ಜೊತೆ ನಾವು ಕಾಂಪಿಟ್ ಮಾಡ್ತೀವಿ ಅಂತಾ ಬಡಾಯಿ ಕೊಚ್ಚಿಕೊಳ್ಳೋ ಪಾಕಿಸ್ತಾನ ಐಪಿಎಲ್ನ ಒಂದು ಫ್ರಾಂಚೈಸಿಗೆ ಇಡೀ ಲೀಗ್ ಸಮ ಇಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ ನಡುವೆ ಕಂಪೇರ್ ಮಾಡಿದ್ರೆ ವರ್ಲ್ಡ್ ವೈಡ್ ಐಪಿಎಲ್ ಅತ್ಯಂತ ಶ್ರೇಷ್ಠ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್. ಫೈನಾನ್ಶಿಯಲ್, ಆಡಿಯನ್ಸ್ ಹಾಗೇ ಕ್ವಾಲಿಟಿ ವಿಚಾರದಲ್ಲೂ ಐಪಿಎಲ್ ಟಾಪ್ನಲ್ಲಿದೆ. ಐಪಿಎಲ್ನ ಒಟ್ಟು ಬ್ರ್ಯಾಂಡ್ ಮೌಲ್ಯ ಸುಮಾರು $18.5 ಬಿಲಿಯನ್ ಅಂದ್ರೆ 1.5 ಲಕ್ಷ ಕೋಟಿಗೂ ಹೆಚ್ಚು. ಆದರೆ ಪಿಎಸ್ಎಲ್ನ ಒಟ್ಟು ಮೌಲ್ಯ ಕೇವಲ $260 ಮಿಲಿಯನ್ ಆಸುಪಾಸಿನಲ್ಲಿದೆ. ಐಪಿಎಲ್ ಪಿಎಸ್ಎಲ್ಗಿಂತ ಸುಮಾರು 60 ಪಟ್ಟು ದೊಡ್ಡದಾಗಿದೆ. ಇನ್ನು ಸ್ಯಾಲರಿ ವಿಚಾರಕ್ಕೆ ಬಂದ್ರೆ ಐಪಿಎಲ್ನಲ್ಲಿ ಒಂದು ತಂಡದ ಆಟಗಾರರ ವೇತನ ಮಿತಿ ₹120 ಕೋಟಿ ಅಂದ್ರೆ 14.5 ಮಿಲಿಯನ್ ಡಾಲರ್ ಇದ್ರೆ ಪಿಎಸ್ಎಲ್ನ ಇಡೀ ತಂಡದ ಬಜೆಟ್ ಕೇವಲ $1.6 ಮಿಲಿಯನ್ ಆಗಿದೆ. ಹಾಗೇ ಐಪಿಎಲ್ ನಲ್ಲಿ ರಿಷಬ್ ಪಂತ್ 27 ಕೋಟಿಗೆ ಸೇಲ್ ಆಗಿದ್ರು. ಇದು ಐಪಿಎಲ್ ಇತಿಹಾಸದಲ್ಲೇ ಹೈಯೆಸ್ಟ್ ವೇತನ. ಪಾಕಿಸ್ತಾನದಲ್ಲಿ ಸ್ಟೀವ್ ಸ್ಮಿತ್ ಗೆ 4 ಕೋಟಿ ಕೋಟಿದ್ದೇ ಹೈಯೆಸ್ಟ್ ಪೇಯ್ಡ್ ಪ್ಲೇಯರ್ ಆಗಿದ್ದಾರೆ. ಐಪಿಎಲ್ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ನ ವಿಶ್ವದ ಶ್ರೇಷ್ಠ ಆಟಗಾರರು ಭಾಗವಹಿಸುತ್ತಾರೆ. ಆದ್ರೆ ಐಪಿಎಲ್ ನಲ್ಲಿ ರಿಜೆಕ್ಟ್ ಆದವ್ರು ಪಿಎಸ್ಎಲ್ ಕಡೆ ಮುಖ ಮಾಡುತ್ತಾರೆ. ಐಪಿಎಲ್ ತನ್ನ ಅತ್ಯಾಧುನಿಕ ತಂತ್ರಜ್ಞಾನ, ಡಿಆರ್ಎಸ್ ವ್ಯವಸ್ಥೆ ಮತ್ತು ಡಿಸಿಪ್ಲೀನ್ಡ್ ಮ್ಯಾನೇಜ್ಮೆಂಟ್ನಲ್ಲಿ ನಡೆದ್ರೆ ಪಿಎಸ್ಎಲ್ ಪಂದ್ಯಗಳಲ್ಲಿ ಮ್ಯಾನೇಜ್ಮೆಂಟ್ ವೈಫಲ್ಯಗಳು, ಪ್ಲೇಯಿಂಗ್ ಇಲೆವೆನ್ ಗೊಂದಲಗಳು ಮತ್ತು ಬಿಳಿ ಚೆಂಡು ಪಂದ್ಯದ ಮಧ್ಯದಲ್ಲೇ ಕೆಂಪು ಬಣ್ಣಕ್ಕೆ ತಿರುಗುವಂತಹ ಸಾಕಷ್ಟು ಮುಖಭಂಗದ ವಿಚಾರಗಳನ್ನ ಎದುರಿಸಿದೆ. ಹೀಗಾಗಿ ಐಪಿಎಲ್ಗೆ ಪಿಎಸ್ಎಲ್ನ ಕಂಪೇರ್ ಮಾಡೋಕೂ ಆಗಲ್ಲ. ಹೀಗಿದ್ರೂ ನಾವು ಐಪಿಎಲ್ಗೆ ಸರಿಸಮ ಇದ್ದೇವೆ ಅಂತಾ ಪಿಸಿಬಿ ಬಿಲ್ಡಪ್ ಕೊಡೋದ್ರ ಜೊತೆಗೆ ಮುಂದಿನ ಬಾರಿಯೂ ಸೇಮ್ ಟೈಮಲ್ಲೇ ಟೂರ್ನಿ ನಡೆಸೋಕೆ ಮುಂದಾಗಿದೆ.

ನೋಡಿರಿ


One thought on “IPLಗೆ ಮತ್ತೆ PSL ಚಾಲೆಂಜ್ – ಸೇಮ್ ಟೈಮ್ ನಲ್ಲೇ 12ನೇ ಸೀಸನ್
ಆಟಕ್ಕುಂಟು ಲೆಕ್ಕಕ್ಕಿಲ್ಲದ PAK ಲೀಗ್”