5 ಕೋಟಿಗಾಗಿ ಕೊಹ್ಲಿ ಅಕೌಂಟ್ ಚೆಕ್? – ಯಶಸ್ವಿ ಜೈಸ್ವಾಲ್ ವಿಕೆಟ್ ಕೀಪರ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಇಂದು ರಾಂಚಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ಎಂಟು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದು, ಸರಣಿಯಲ್ಲಿ ಮುನ್ನಡೆ ಪಡೆದಿದೆ. ಇದೀಗ ತವರಿನಲ್ಲಿ ಮತ್ತೊಂದು ಗೆಲುವು ಸಾಧಿಸಿ ಸರಣಿ ಮೇಲೆ ಹಿಡಿತ ಸಾಧಿಸುವುದು ಟೀಂ ಇಂಡಿಯಾದ ಗುರಿ. ವೆಸ್ಟ್ ಇಂಡೀಸ್ ತಂಡ ತಿರುಗೇಟು ನೀಡುತ್ತಾ ಎನ್ನುವುದೇ ಅಭಿಮಾನಿಗಳ ಕುತೂಹಲ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇತ್ತೀಚಿನ ನಾಲ್ಕು ಟಿ20 ಇನ್ನಿಂಗ್ಸ್ಗಳಲ್ಲಿ 9, 7, 2 ಮತ್ತು 11 ರನ್ ಗಳಿಸಿರುವ ಸಂಜುಗೆ ಒತ್ತಡ ಹೆಚ್ಚಾಗಿದೆ. ಈ ಪಂದ್ಯದಲ್ಲಿ ಅವಕಾಶ ಸಿಕ್ಕಿದ್ರೆ, ಸಂಜು ಹೇಗೆ ಬಳಸಿಕೊಳ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.
ಸಂಜು ಸ್ಯಾಮ್ಸನ್ ವೈಫಲ್ಯಕ್ಕೆ ಅನಗತ್ಯ ಒತ್ತಡವೇ ಕಾರಣ ಎಂದು ಹನುಮ ವಿಹಾರಿ ಹೇಳಿದ್ದಾರೆ. ಸಂಜು ಸ್ಯಾಮ್ಸನ್ ಅವರಿಗೆ ಇನ್ನೂ ಎಷ್ಟು ಅವಕಾಶಗಳನ್ನು ನೀಡಲಾಗುತ್ತೆ? ನಾನೂ ಅವರ ಅಭಿಮಾನಿ ಮತ್ತು ಅವರು ಉತ್ತಮ ಪ್ರದರ್ಶನ ನೀಡಬೇಕೆಂದು ಬಯಸುತ್ತೇನೆ. ಆದರೆ ತಂಡದೊಳಗಿನ ಹೆಚ್ಚುತ್ತಿರುವ ಪೈಪೋಟಿಯಿಂದಾಗಿ ಸಂಜು ಸ್ಯಾಮ್ಸನ್ ಅಸುರಕ್ಷಿತ ಭಾವನೆಯನ್ನು ಹೊಂದಿರುವಂತೆ ತೋರುತ್ತಿದೆ. ಈ ಹಿಂದೆ ಇಶಾನ್ ಕಿಶನ್ ತಂಡಕ್ಕೆ ಮರಳಿದಾಗಲೂ ಅವರು ಇದೇ ರೀತಿಯ ಒತ್ತಡವನ್ನು ಎದುರಿಸಿದ್ದರು. ಈಗ, ವೈಭವ್ ಸೂರ್ಯವಂಶಿ ಕೂಡ ತಂಡಕ್ಕೆ ಬಂದ ಮೇಲೆ ಆ ಒತ್ತಡ ಇನ್ನಷ್ಟು ಹೆಚ್ಚಾದಂತೆ ಕಾಣುತ್ತಿದೆ ಎಂದಿದೆ.
ವೈಭವ್ ಸೂರ್ಯವಂಶಿ ಟೀಂ ಇಂಡಿಯಾದ ಅಭ್ಯಾಸದ ವೇಳೆ ಗಮನ ಸೆಳೆದಿದ್ದಾರೆ. ರಾಂಚಿಯಲ್ಲಿ ನಡೆದ ನೆಟ್ಸ್ ಅಭ್ಯಾಸದಲ್ಲಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಆಯ್ಕೆಗಾರರ ಗಮನ ಸೆಳೆದಿದೆ ಎಂದು ವರದಿಯಾಗಿದೆ. ಸಂಜು ಸ್ಯಾಮ್ಸನ್ ಕಳಪೆ ಫಾರ್ಮ್ನಲ್ಲಿರುವುದರಿಂದ ವೈಭವ್ಗೆ ಅವಕಾಶ ಸಿಗಬಹುದು ಎಂಬ ಚರ್ಚೆ ಜೋರಾಗಿದೆ.
ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಹತ್ವದ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. 2,000 ರನ್ಗಳ ಗಡಿ ತಲುಪಲು ಅವರಿಗೆ ಇನ್ನೂ 53 ರನ್ಗಳ ಅಗತ್ಯವಿದೆ. ಸೂರ್ಯಕುಮಾರ್ ಯಾದವ್ 1,164 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಅಭಿಷೇಕ್ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಅವಕಾಶ ಹೊಂದಿದ್ದಾರೆ.
ಪ್ರೇಮಾ ಮಹಾರಾಜರ ಖ್ಯಾತಿ ಹೆಚ್ಚಿಸಲು ವಿರಾಟ್ ಕೊಹ್ಲಿ ಹಣ ಪಡೆದಿದ್ದಾರೆ ಅನ್ನೋ ಸುದ್ದಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿರಾಟ್ ಕೊಹ್ಲಿ ಅವರ ವಕ್ತಾರ, ಇದೊಂದು ಆಧಾರರಹಿತ ಆರೋಪ, ಇದು ಕೇವಲ ಒಂದು ವದಂತಿ ಎಂದು ಹೇಳಿದ್ದಕ್ಕೆ, ದಿನೇಶ್ ಫಲಹಾರಿ ಮಹಾರಾಜ್ ಮತ್ತೊಮ್ಮೆ ಕೌಂಟರ್ ಕೊಟ್ಟಿದ್ದು, ಹೋಗಿ ಬ್ಯಾಂಕ್ ಅಕೌಂಟ್ ಚೆಕ್ ಮಾಡಿ, ದುಡ್ಡಿ ಬಂದಿದಿಯೋ? ಇಲ್ಲವೋ? ಎನ್ನವುದು ಬಯಲಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ನ 12ನೇ ಆವೃತ್ತಿಯ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ. 2027ರ ಮಾರ್ಚ್ 18ರಿಂದ ಮೇ 2ರವರೆಗೆ ಟೂರ್ನಿ ನಡೆಯಲಿದೆ ಎಂದು ವರದಿಯಾಗಿದೆ. ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಲೀಗ್ನ ಆಡಳಿತ ಮಂಡಳಿ ಸಭೆಯಲ್ಲಿ ದಿನಾಂಕಗಳನ್ನು ಅಂತಿಮಗೊಳಿಸಲಾಗಿದ್ದು, ಫ್ರಾಂಚೈಸಿಗಳು ಮುಂದಿನ ಸೀಸನ್ಗೆ ಸಿದ್ಧತೆ ಆರಂಭಿಸಬಹುದು.
ಅಜಿತ್ ಅಗರ್ಕರ್ ಅವರ ನಿರ್ಗಮನದ ಬಳಿಕ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡದಲ್ಲಿ ಹಲವು ಹಿರಿಯ ಆಟಗಾರರಿಗೆ ಅವಕಾಶ ನೀಡಬಹುದು ಎಂದು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ತಿಳಿಸಿದ್ದಾರೆ. ನಾಲ್ಕು ವರ್ಷಗಳ ಬಳಿಕ ಭುವನೇಶ್ವರ್ ಕುಮಾರ್ ರಾಷ್ಟ್ರೀಯ ತಂಡಕ್ಕೆ ಮರಳಬಹುದಾದರೆ, ಮತ್ತೊಬ್ಬ ಹಿರಿಯ ವೇಗಿ ಮೊಹಮ್ಮದ್ ಶಮಿ ಕೂಡ ಮರಳಬಹುದು ಎಂದಿದ್ದಾರೆ.
ಇದನ್ನೂ ಓದಿ: ಸುಂದರ್ ಆಟ ಮುಗಿಸಿದ್ರಾ ನಮನ್? – T-20I ಆಲ್ ರೌಂಡರ್ SLOT ಫಿಕ್ಸ್!
ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಆಟದ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ವಿಕೆಟ್ ಕೀಪಿಂಗ್ ಅಭ್ಯಾಸ ಆರಂಭಿಸಿದ್ದು, ಕ್ರಿಕೆಟ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಚಂಡೀಗಢ ವಿರುದ್ಧದ ರಣಜಿ ಟ್ರೋಫಿ ಆರಂಭಿಕ ಪಂದ್ಯಕ್ಕೂ ಮುನ್ನ ಅವರು ಕೀಪಿಂಗ್ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ರಾಹುಲ್ ದ್ರಾವಿಡ್, ಕೆ.ಎಲ್. ರಾಹುಲ್ ಹಾಗೂ ಉತ್ತಪ್ಪ ಹಾದಿಯಲ್ಲೇ ಜೈಸ್ವಾಲ್ ಸಾಗುತ್ತಿದ್ದಾರೆ ಎನ್ನಲಾಗಿದೆ.
ಧನಂಜಯ ಡಿ ಸಿಲ್ವಾ ಶ್ರೀಲಂಕಾ ಟೆಸ್ಟ್ ತಂಡದ ನಾಯಕತ್ವದಿಂದ ಕೆಳೆಗ ಇಳಿದ ಬೆನ್ನಲ್ಲೆ ನೂತನ ನಾಯಕನನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಬ್ಯಾಟ್ಸ್ಮನ್ ಕುಸಾಲ್ ಮೆಂಡಿಸ್ಗೆ ಶ್ರೀಲಂಕಾ ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗಿದೆ. 31ರ ವಯಸ್ಸಿನ ಕುಸಾಲ್ ಮೆಂಡಿಸ್ ಶ್ರೀಲಂಕಾ ತಂಡದ ಪ್ರಮುಖ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಈಗಾಗಲೇ ತಂಡವನ್ನು ಮುನ್ನಡೆಸಿರುವ ಅವರು, 22 ಏಕದಿನ ಹಾಗೂ ಮೂರು ಟಿ20 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ.

ನೋಡಿರಿ

