ಆಗ ಕಿಶನ್.. ಈಗ ಸೂರ್ಯವಂಶಿ! – ಸಂಜುಗೆ SLOT ಭಯ ಕಾಡ್ತಿದ್ಯಾ?
11 ಇನ್ನಿಂಗ್ಸ್.. 179 ರನ್ಸ್ ಸಾಕಾ?

ಆಗ ಕಿಶನ್.. ಈಗ ಸೂರ್ಯವಂಶಿ! – ಸಂಜುಗೆ SLOT ಭಯ ಕಾಡ್ತಿದ್ಯಾ?11 ಇನ್ನಿಂಗ್ಸ್.. 179 ರನ್ಸ್ ಸಾಕಾ?

ಟೀಂ ಇಂಡಿಯಾದ ಟಿ-20ಐ ಪಂದ್ಯಗಳು ಅಂತಾ ಬಂದಾಗ ಇತ್ತೀಚೆಗೆ ಓಪನಿಂಗ್ ಸ್ಲಾಟ್ ಬಗ್ಗೆಯೇ ಅತೀ ಹೆಚ್ಚು ಚರ್ಚೆಯಾಗ್ತಿದೆ. ಒನ್ ಸೈಡ್ ಅಭಿಷೇಕ್ ಶರ್ಮಾ ಸ್ಲಾಟ್ ಖಾಯಂ ಆಗಿದ್ರೆ ಮತ್ತೊಂದೆಡೆ ಯಾರನ್ನ ಆಡಿಸ್ಬೇಕು ಅನ್ನೋದ್ರ ಬಗ್ಗೆ ಡಿಫ್ರೆಂಟ್ ಒಪೀನಿಯನ್ಸ್ ಇದೆ. ಕೆಲವ್ರು ಸಂಜು ಸ್ಯಾಮ್ಸನ್ ಅಂತಾರೆ ಇನ್ನೂ ಕೆಲವ್ರು ವೈಭವ್ ಸೂರ್ಯವಂಶಿ ಅಂತಾರೆ. ಬಟ್ ಇಲ್ಲಿ ಸಂಜುಗೆ ಪ್ರಿಯಾರಿಟಿ ಇದ್ರೂ ಅವ್ರ ಪರ್ಫಾಮೆನ್ಸ್​ನಲ್ಲಿ ಇನ್​ಕನ್ಸಿಸ್ಟೆನ್ಸಿ ರನ್ಸ್ ಬರ್ತಿದೆ.

ಇದನ್ನೂ ಓದಿ : DANGER ZONEನಲ್ಲಿ ಸಂಜು – ವಿಂಡೀಸ್ ಗೆ ಕಂ ಬ್ಯಾಕ್ ಟಾರ್ಗೆಟ್

2026ರ ಟಿ-20 ವಿಶ್ವಕಪ್​ನಲ್ಲಿ ಸಂಜು ಸ್ಯಾಮ್ಸನ್ ಅಕ್ಷರಶಃ ಹೀರೋ. ಇಡೀ ಕ್ರಿಕೆಟ್ ಜಗತ್ತೇ ಕೊಂಡಾಡಿತ್ತು. ನಾಕ್​ಔಟ್ ಹಾಗೇ ಫೈನಲ್ ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ರು. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಸೇರಿದಂತೆ ಸತತ ಮೂರು ನಾಕೌಟ್ ಪಂದ್ಯಗಳಲ್ಲಿ 80ಕ್ಕೂ ಹೆಚ್ಚು ರನ್ ಗಳಿಸಿದ್ರು. ಆದ್ರೆ ನಂತ್ರ ಭಾರತದ ಪರ ಸಂಜು ಸೈಲೆಂಟ್ ಆಗಿದ್ದಾರೆ. ಕಳೆದ 11 ಪಂದ್ಯಗಳ ಇನ್ನಿಂಗ್ಸ್​ ಹಲವು ಚರ್ಚೆಗಳನ್ನ ಹುಟ್ಟುಹಾಕಿದೆ. ತಮ್ಮ ಸ್ಲಾಟ್ ಬಗ್ಗೆ ಕಾಂಪಿಟೇಷನ್ ಇರೋದ್ರಿಂದಲೇ ಸ್ಯಾಮ್ಸನ್ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಮತ್ತು ಕಳಪೆ ಪ್ರದರ್ಶನ ನೀಡುತ್ತಾರೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಹನುಮ ವಿಹಾರಿ ಹೇಳಿದ್ದಾರೆ. ಕಳೆದ ಜನವರಿಯಲ್ಲಿ ಇಶಾನ್ ಕಿಶನ್ ಭಾರತ ತಂಡಕ್ಕೆ ಕಂ ಬ್ಯಾಕ್ ಮಾಡಿ ಉತ್ತಮ ಪ್ರದರ್ಶನ ನೀಡೋಕೆ ಶುರು ಮಾಡಿದಾಗಿಂದಲೂ ಸಂಜು ಡಲ್ ಆಗಿದ್ದಾರೆ ಎಂದಿದ್ದಾರೆ. ಈ ಹಿಂದೆಯೂ ಸಂದರ್ಶನವೊಂದ್ರಲ್ಲಿ ಸಂಜು ಕೂಡ ಇದನ್ನೇ ಹೇಳಿದ್ರು. ಸ್ಪರ್ಧೆ ಇದ್ದಾಗ ಪ್ರದರ್ಶನ ನೀಡುವುದು ಕಷ್ಟ ಎಂದಿದ್ರು. ಬಹುಶಃ ಸಂಜುಗೆ ಇದೇ ಎಫೆಕ್ಟ್ ಆಗ್ತಿದ್ಯಾ ಅನ್ನೋ ವಾದ ಶುರುವಾಗಿದೆ.

11 ಪಂದ್ಯ.. 179 ರನ್ಸ್.. ಸಂಜು ಆನ್ & ಆಫ್ ಆಗ್ತಿದ್ದಾರಾ?

ಭಾರತದ ಟಿ-20ಐ ಫಾರ್ಮೆಟ್​ನಲ್ಲಿ ಓಪನಿಂಗ್ ಸ್ಲಾಟ್​ಗೆ ಸಾಕಷ್ಟು ಕಾಂಪಿಟೇಷನ್ ಇದೆ. ಹಿಂದೆಲ್ಲಾ ಅಭಿಷೇಕ್ ಮತ್ತು ಸಂಜು ಸ್ಯಾಮ್ಸನ್ ವಿಚಾರದಲ್ಲಿ ಯಾವುದೇ ಡೌಟ್ಸ್ ಇರ್ಲಿಲ್ಲ. ಆದ್ರೆ ಕಳೆದ ವರ್ಷ ಶುಭ್​ಮನ್ ಗಿಲ್ ಓಪನರ್ ಆದಾಗ ಸಂಜು ಮಿಡಲ್​ ಆರ್ಡರ್​ಗೆ ಹೋಗ್ತಾರೆ. ಬಟ್ ಗಿಲ್ ಕಡೆಯಿಂದ ರನ್ಸ್ ಬರದೆ ಹೊರಗಿಟ್ಟಾಗ ಮತ್ತೆ ಸಂಜುಗೆ ಓಪನಿಂಗ್ ಸ್ಲಾಟ್ ಫಿಕ್ಸ್ ಆಯ್ತು. ಬಟ್ ಯಾವಾಗ ಪಾಕೆಟ್ ಡೈನಮೋ ಇಶಾನ್ ಕಿಶನ್ ಟಿ-20ಐ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೂ ಸಂಜುಗೆ ಮತ್ತೆ ಸ್ಲಾಟ್ ವೇರಿಯೇಷನ್. ಅಭಿಷೇಕ್ ಜೊತೆ ಇಶಾನ್ ಕಿಶನ್ ಓಪನರ್ ಆಗಿ ಕೆಲ ಪಂದ್ಯಗಳನ್ನ ಆಡಿದಾಗ ಸಂಜು ಬೆಂಚ್ ಕಾಯಬೇಕಾಯ್ತು. ಬಟ್ ಮ್ಯಾನೇಜ್​ಮೆಂಟ್ ಕಿಶನ್​ನ ಒನ್ ಡೌನ್ ಬ್ಯಾಟರ್ ಆಗಿ ಸಂಜುಗೆ ಮತ್ತೆ ಓಪನಿಂಗ್ ಸ್ಲಾಟ್ ಕೊಟ್ಟಾಗ ವಿಶ್ವಕಪ್​ನಲ್ಲಿ ಸಂಜು ಚೆನ್ನಾಗಿ ಪರ್ಫಾಮ್ ಮಾಡಿದ್ರು. ಬಟ್ ಐಪಿಎಲ್ ಆದ್ಮೇಲೆ ವೈಭವ್ ಸೂರ್ಯವಂಶಿ ಟಿ-20ಐಗೆ ಪದಾರ್ಪಣೆ ಮಾಡಿದ್ಮೇಲೆ ಮತ್ತೆ ಸಂಜು ಸ್ಲಾಟ್​ ಅಲುಗಾಡ್ತಿದೆ. ಕಳೆದ 11 ಇನ್ನಿಂಗ್ಸ್​ಗಳಲ್ಲಿ ಅವ್ರ ಪರ್ಫಾಮೆನ್ಸ್​​ನಲ್ಲಿ ಇನ್ ಕನ್ಸಿಸ್ಟೆನ್ಸಿ ಎದ್ದು ಕಾಣ್ತಿದೆ. ಐಪಿಎಲ್ ಆದ್ಮೇಲೆ ಸಂಜು 11 ಇನ್ನಿಂಗ್ಸ್ ಗಳಲ್ಲಿ ಭಾರತದ ಪರ ಬ್ಯಾಟ್ ಬೀಸಿದ್ದಾರೆ. ಅದ್ರಲ್ಲಿ ಐರ್ಲೆಂಡ್ ವಿರುದ್ಧ 5, 0, ಇಂಗ್ಲೆಂಡ್ ವಿರುದ್ಧ 1, 27 ಅಫ್ಘಾನಿಸ್ತಾನ ವಿರುದ್ಧ 10, 57, 50, ಜಪಾನ್ ವಿರುದ್ಧ 9, ಏಷ್ಯನ್ ಗೇಮ್ಸ್ ಸೆಮಿಫೈನಲ್ 7,  ಪಾಕ್ ವಿರುದ್ಧ ಫೈನಲ್ 2, ಈಗ ವಿಂಡೀಸ್ ವಿರುದ್ಧ ಮೊದಲ ಮ್ಯಾಚಲ್ಲಿ 11 ರನ್​ಗಳಿಗೆ ಔಟ್ ಆಗಿದ್ದಾರೆ. ಸೋ ಅಲ್ಲಿಗೆ ಕಳೆದ 11 ಇನ್ನಿಂಗ್ಸ್​ಗಳಲ್ಲಿ ಸಂಜು 179 ರನ್ಸ್ ಮಾತ್ರ ಕಲೆ ಹಾಕಿದ್ದಾರೆ. ಇದೇ ಈಗ ಸಂಜು ಪರ್ಫಾಮೆನ್ಸ್ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ. ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಟ್ಟು ಸಂಜುನ ಒನ್ ಡೌನ್ ಅಥವಾ ಬೆಂಚ್ ಕಾಯಿಸಿ ಅನ್ನೋದು ಕೆಲವರ ವಾದ. ಆದ್ರೆ ಸಂಜು ಸ್ಯಾಮ್ಸನ್ ಉತ್ತಮ ಆಟಗಾರನೇ.

ಸೌತ್ ಇಂಡಿಯನ್ ಬ್ಯಾಟರ್ಸ್ ಮಾತ್ರ ಪ್ರತೀ ಮ್ಯಾಚಲ್ಲಿ ಆಡ್ಬೇಕಾ?

ಅಷ್ಟಕ್ಕೂ ಸಂಜು ಸ್ಯಾಮ್ಸನ್ ಮೇಲೆ ಪ್ರತೀ ಮ್ಯಾಚಲ್ಲೂ ಆಡಲೇಬೇಕು ಅನ್ನೋ ಒತ್ತಡ ಹೆಚ್ಚಾಗೋಕೆ ಕಾರಣ ಕೂಡ ಇದೆ. ಯಾಕಂದ್ರೆ ಕ್ರಿಕೆಟ್​ನಲ್ಲಿ ಮೊದ್ಲಿಂದಲೂ ಕೂಡ ದಕ್ಷಿಣ ಭಾರತದ ಆಟಗಾರರ ಮೇಲೆ ತುಂಬಾ ಪ್ರೆಶರ್ ಇರುತ್ತೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಸರ್ವೈವ್ ಆಗೋದು ಈಸಿ ಇರಲ್ಲ. ಈಗ ಸಂಜುಗು ಕೂಡ ಅದೇ ಆಗ್ತಿದೆ.

ಸಂಜುಗೆ ಕನ್ಸಿಸ್ಟೆನ್ಸಿ ಕಂಟಕ!

ಸಂಜು ಸ್ಯಾಮ್ಸನ್ ಫಾರ್ಮ್ ನಲ್ಲಿ ಇದ್ರೂ ಕನ್ಸಿಸ್ಟೆನ್ಸಿ ಪ್ರದರ್ಶನ ನೀಡ್ತಿಲ್ಲ

ಒಂದೆರಡು ಪಂದ್ಯಗಳಲ್ಲಿ ಬಿಗ್ ಇನ್ನಿಂಗ್ಸ್.. ಮತ್ತೆ ಕೆಲ ಪಂದ್ಯಗಳಲ್ಲಿ ಸ್ಟ್ರಗಲ್

ಸೀನಿಯಾರಿಟಿ ಸ್ಥಾನ ಉಳಿಸುತ್ತಿದ್ರೂ ಪ್ರದರ್ಶನದ ಮೂಲಕ ಕಂ ಬ್ಯಾಕ್

ಕಾಂಪಿಟೇಷನ್ ಜಾಸ್ತಿ ಇರೋದ್ರಿಂದ ತಮ್ಮ ಸ್ಲಾಟ್ ತಾವೇ ಉಳಿಸಿಕೊಳ್ಳಬೇಕು

ಸಂಜು ಓಪನಿಂಗ್ ಇದ್ದಾಗ ಕರೆಕ್ಟ್ ಕಾಂಬಿನೇಷನ್.. ಎದುರಾಳಿಗಳಿಗೆ ಕಷ್ಟ

ಸಂಜು ಫಸ್ಟ್ ಬಾಲ್ ಫೇಸ್ ಮಾಡಿದ್ರೆ ಅಭಿಷೇಕ್ ನಾನ್ ಸ್ಟ್ರೈಕರ್ ಓಪನರ್

ಕೆಎಲ್ ರಾಹುಲ್, ಸಂಜು ಸೇರಿದಂತೆ ದಕ್ಷಿಣದ ಆಟಗಾರರ ಮೇಲೆ ಒತ್ತಡ

ಕೆಎಲ್ ರಾಹುಲ್ ಪ್ಯೂರ್ ಬ್ಯಾಟರ್ ಇದ್ರೂ ಕೀಪಿಂಗ್ ಮಾಡಿದ್ರಷ್ಟೇ ಸ್ಥಾನ

ಒಂದೆರಡು ಪಂದ್ಯಗಳಲ್ಲಿ ಆಡದಿದ್ರೆ ಬೇರೆ ಆಟಗಾರರನ್ನ ಆಡಿಸಿ ಎನ್ನುವ ವಾದ

ಇಂಡಿಯನ್ ಕ್ರಿಕೆಟ್​ನಲ್ಲಿ ಮೊದ್ಲಿಂದಲೂ ಕೂಡ ಇಂಥಾ ರಾಜಕೀಯ ಇದ್ದಿದ್ದೇ. ಬಟ್ ರಾಷ್ಟ್ರೀಯ ತಂಡದಲ್ಲಿ ಉಳೀಬೇಕು ಅಂದ್ರೆ ತಮ್ಮ ಆಟದ ಮೂಲಕವೇ ಎಲ್ಲರ ಬಾಯಿ ಮುಚ್ಚಿಸಬೇಕು. ಬಟ್ ಪ್ರತೀ ಮ್ಯಾಚಲ್ಲೂ ಆ ರೀತಿ ಪ್ರದರ್ಶನ ಕಷ್ಟವೇ. ಇದೇ ಒತ್ತಡ ಸಂಜು ಸ್ಯಾಮ್ಸನ್ ಮೇಲೆ ಕೂಡ ಇದೆ. ಆದ್ರೆ ಈ ಸಂಕಷ್ಟದ ಸುಳಿಯಿಂದ ಅವ್ರನ್ನ ಅವ್ರೇ ರಕ್ಷಣೆ ಮಾಡಿಕೊಳ್ಬೇಕು. ಅವ್ರೇ ಓವರ್​ ಕಂ ಮಾಡ್ಬೇಕು. ಯಾಕಂದ್ರೆ ಆಲ್ರೆಡಿ ಸಂಜು ಸ್ಲಾಟ್​ಗೆ ಟವೆಲ್ ಹಾಕಿ ನಾನ್ ರೆಡಿ ಅಂತಾ ವೈಭವ್ ಸೂರ್ಯವಂಶಿ ಕಾಯ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *