ಮಹೇಂದ್ರ ಔಟ್? ಧನಂಜಯನಿಗೆ ಅಂಬಾರಿ? – ಅಂಬಾರಿ ಹೊರುವ ಆನೆ ಯಾವುದು ಗೊತ್ತಾ?

ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿಯನ್ನು ಈ ಬಾರಿ ಹೊರುವ ಆನೆ ಯಾವುದು? ಮಹೇಂದ್ರ ಆನೆ ತಾಲೀಮಿನಲ್ಲಿ ವಿಫಲವಾಗಿ ರೇಸ್ನಿಂದ ಬಹುತೇಕೆ ಹೊರಬಿದ್ದಿದೆ. ಧನಂಜಯನ ಹೆಗಲಿಗೆ ಚಿನ್ನದ ಅಂಬಾರಿ ವರ್ಗಾವಣೆಯಾಗುತ್ತಾ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ!
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಹಿಂದೆ ಹಲವು ವರ್ಷಗಳ ಕಾಲ ಅಭಿಮನ್ಯು ಆನೆ ಯಶಸ್ವಿಯಾಗಿ ಅಂಬಾರಿ ಹೊತ್ತು ಗಮನ ಸೆಳೆದಿತ್ತು. ಆದರೆ ಈ ಬಾರಿ ಅಂಬಾರಿ ಹೊರುವ ಆನೆಯ ಆಯ್ಕೆ ವಿಚಾರದಲ್ಲಿ ಕುತೂಹಲ ಹೆಚ್ಚಾಗಿದೆ.
ಮೈಸೂರು ದಸರಾ 2026ರ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಆನೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ಪ್ರಮುಖ ಆನೆಯಾಗಿದ್ದ ‘ಮಹೇಂದ್ರ’ ಭಾರ ತಡೆಯಲಾಗದೆ ಸತತ ಎರಡನೇ ಬಾರಿಯೂ ತಾಲೀಮಿನಲ್ಲಿ ವಿಫಲವಾಗಿದೆ. ಇದರಿಂದಾಗಿ ಮಹೇಂದ್ರ ಆನೆ ಅಂಬಾರಿ ಹೊರುವ ರೇಸ್ನಿಂದ ಬಹುತೇಕ ಹೊರಬಿದ್ದಂತಾಗಿದೆ. ಹೀಗಾಗಿ ಧನಂಜಯ ಆನೆಗೆ ಚಿನ್ನದ ಅಂಬಾರಿ ಹೊರುವ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆಯೂ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: 174 ಜನರ ಜೀವ ಉಳಿಸಿದ ಭಾರತೀಯ ಪೈಲಟ್! ಇಸ್ರೇಲ್ನಿಂದ ಸಿಗಲಿದೆ ಅತ್ಯುನ್ನತ ಶೌರ್ಯ ಪ್ರಶಸ್ತಿ!
ಆದರೆ ತಾಲೀಮಿನಲ್ಲಿ ಒಂದು ಆನೆಯ ಪ್ರದರ್ಶನದ ಆಧಾರದ ಮೇಲೆ ಅದು ಸಂಪೂರ್ಣವಾಗಿ ಸ್ಪರ್ಧೆಯಿಂದ ಹೊರಬಿದ್ದಿದೆ ಎಂದು ನಿರ್ಧರಿಸುವುದು ಸರಿಯಲ್ಲ. ಅರಣ್ಯ ಇಲಾಖೆ ಮತ್ತು ದಸರಾ ಆನೆಗಳ ನಿರ್ವಹಣಾ ತಂಡದ ಪರಿಶೀಲನೆ, ಆರೋಗ್ಯ, ನಡವಳಿಕೆ ಹಾಗೂ ತಾಲೀಮಿನ ಪ್ರದರ್ಶನದ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಹಾಗಾದರೆ ಈ ಬಾರಿ ಚಿನ್ನದ ಅಂಬಾರಿ ಹೊರುವ ಅದೃಷ್ಟ ಯಾವ ಆನೆಗೆ ಸಿಗಲಿದೆ? ಧನಂಜಯನ ಹೆಗಲಿಗೆ ಅಂಬಾರಿ ಏರಲಿದೆಯೇ ಅಥವಾ ಮತ್ತೊಂದು ಆನೆ ಆಯ್ಕೆಯಾಗಲಿದೆಯೇ? ಅಧಿಕೃತ ಘೋಷಣೆಯ ಬಳಿಕವೇ ಈ ಕುತೂಹಲಕ್ಕೆ ತೆರೆ ಬೀಳಲಿದೆ.

ನೋಡಿರಿ

