DANGER ZONEನಲ್ಲಿ ಸಂಜು – ವಿಂಡೀಸ್ ಗೆ ಕಂ ಬ್ಯಾಕ್ ಟಾರ್ಗೆಟ್
2ನೇ ಪಂದ್ಯ.. ಯಾರಿಗೆ ಹೊಡಿಬಡಿ ಖೆಡ್ಡಾ?

ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಟಿ-20ಐ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದಿರೋ ಭಾರತ ಶುಕ್ರವಾರ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ. ರಾಂಚಿಯಲ್ಲಿ ಮ್ಯಾಚ್ ನಡೆಯಲಿದ್ದು ತುಂಬಾನೇ ಇಂಟ್ರೆಸ್ಟಿಂಗ್ ಇರುತ್ತೆ. ರಾಂಚಿ ಪಿಚ್ ನಾರ್ಮಲಿ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್ ಎರಡಕ್ಕೂ ಸಪೋರ್ಟಿವ್ ಆಗಿರೋದ್ರಿಂದ ಟಾಸ್ ಗೆಲುವು ಕೂಡ ಟರ್ನಿಂಗ್ ಮೂಮೆಂಟ್ ಆಗುತ್ತೆ. ಐದು ಪಂದ್ಯಗಳ ಸರಣಿಯಲ್ಲಿ 2ನೇ ಪಂದ್ಯವನ್ನೂ ಗೆಲ್ಲೋ ಟಾರ್ಗೆಟ್ನಲ್ಲಿರೋ ಭಾರತಕ್ಕೆ ಓಪನಿಂಗ್ ಜೋಡಿಯದ್ದು ಮತ್ತೆ ಟೆನ್ಷನ್ ಶುರುವಾಗಿದೆ. ಸಂಜು ಸ್ಯಾಮ್ಸನ್ ವರ್ಸಸ್ ವೈಭವ್ ಸೂರ್ಯವಂಶಿ ಕನ್ಫ್ಯೂಷನ್ ಕ್ರಿಯೇಟ್ ಆಗಿದೆ.
ಇದನ್ನೂ ಓದಿ : KL, DDP ಆಯ್ತು ಈಗ ಸ್ಮರಣ್ ರವಿಚಂದ್ರನ್ – TESTನಲ್ಲಿ ಕನ್ನಡಿಗರಿಗೆ ಜಾಕ್ ಪಾಟ್
ಶ್ರೇಯಸ್ ಅಯ್ಯರ್ ಸೆಂಚುರಿಯೊಂದಿಗೆ ಫಸ್ಟ್ ಮ್ಯಾಚಲ್ಲಿ ಒನ್ ಸೈಡೆಡ್ ಆಗಿ ಗೆದ್ದಿದ್ದ ಭಾರತಕ್ಕೆ ಎರಡನೇ ಟಾಸ್ಕ್ ಶುರುವಾಗ್ತಿದೆ. ರಾಂಚಿಯ ಜೆಎಸ್ಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಬಗ್ಗೆ ಬಾರೀ ಕುತೂಹಲ ಮೂಡಿದೆ. ಅದಕ್ಕೆ ಕಾರಣ ಸಂಜು ಸ್ಯಾಮ್ಸನ್..
ಸಿಂಗಲ್ ಡಿಜಿಟ್ ಸಂಜುಗೆ ಮತ್ತೆ ಡ್ರಾಪ್ ಟೆನ್ಷನ್!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯ ಗೆದ್ರೂ ಎರಡನೇ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಮಾಡುವ ಚಾನ್ಸಸ್ ಇದೆ. ಅದ್ರಲ್ಲೂ ಡೇಂಜರ್ ಝೋನ್ನಲ್ಲಿ ಇರೋದು ಸಂಜು ಸ್ಯಾಮ್ಸನ್. ಏಷ್ಯನ್ ಕ್ರೀಡಾಕೂಟದಲ್ಲೂ ಸಂಜು ಕಡೆಯಿಂದ ರನ್ಸ್ ಬಂದಿರಲಿಲ್ಲ. ಕಳೆದ ನಾಲ್ಕು ಪಂದ್ಯಗಳಲ್ಲೂ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದ್ದಾರೆ. ಒಟ್ಟು ಕೇವಲ 29 ರನ್ ಗಳಿಸಿದ್ದಾರೆ. ಹೀಗಾಗಿ ಸಂಜು ಬಿಟ್ಟು ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಡಿ ಎನ್ನುವಂಥ ವಾದ ಶುರುವಾಗಿದೆ. ಅದೂ ಅಲ್ದೇ ಸೂರ್ಯವಂಶಿ ಈಗಾಗ್ಲೇ ಭಾರತದ ಪರ ಆಡಿದ್ರೂ ಭಾರತದ ಮೈದಾನದಲ್ಲಿ ಆಡಿಲ್ಲ. ರಾಂಚಿ ಮೈದಾನದಲ್ಲಿ ಅವರಿಗೆ ಅವಕಾಶ ಕೊಡಬಹುದು ಅನ್ನೋದು ಅಭಿಮಾನಿಗಳ ಲೆಕ್ಕಾಚಾರ. ಮತ್ತೊಂದೆಡೆ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಬೇಕಾ ಅನ್ನೋ ಚರ್ಚೆಗಳು ಶುರುವಾಗಿವೆ. ಮೊದಲ ಪಮದ್ಯದಲ್ಲಿ ಮಯಾಂಕ್ ಯಾದವ್ ಸ್ವಲ್ಪ ದುಬಾರಿ ಅನ್ಸಿದ್ರು. ಮೊದಲ ಓವರ್ನಲ್ಲೇ 16 ರನ್ಸ್ ಕೊಟ್ಟಿದ್ರು. ವಿಂಡೀಸ್ ಬ್ಯಾಟರ್ಸ್ ಸುಲಭವಾಗಿ ರನ್ ಗಳಿಸುತ್ತಿದ್ರು. ಹೀಗಿದ್ರೂ ಎರಡನೇ ಪಂದ್ಯದಲ್ಲಿ ಮತ್ತೆ ಮಯಾಂಕ್ಗೆ ಚಾನ್ಸ್ ಸಿಗೋ ನಿರೀಕ್ಷೆಗಳಿವೆ.
ಸಂಜು & ವೈಭವ್ ರೇಸ್!
ಸಂಜು ಸ್ಯಾಮ್ಸನ್ / ವೈಭವ್ ಸೂರ್ಯವಂಶಿ
ಅಭಿಷೇಕ್ ಶರ್ಮಾ
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ಶಿವಂ ದುಬೆ
ಅಕ್ಷರ್ ಪಟೇಲ್
ನಮನ್ ಧೀರ್
ಕುಲ್ದೀಪ್ ಯಾದವ್
ಅರ್ಶದೀಪ್ ಸಿಂಗ್
ಮಯಾಂಕ್ ಯಾದವ್
ಹೀಗೆ ಭಾರತ ದೊಡ್ಡ ಬದಲಾವಣೆ ಇಲ್ಲದೆ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯೋಕೆ ರೆಡಿಯಾಗಿದೆ. ಅತ್ತ ಮೊದಲ ಪಂದ್ಯ ಸೋತಿರೋ ಶಾಯ್ ಹೋಪ್ ಕ್ಯಾಪ್ಟನ್ಸಿಯ ವೆಸ್ಟ್ ಇಂಡೀಸ್ ಎರಡನೇ ಪಂದ್ಯ ಗೆದ್ದು ಸರಣಿ ಸಮಬಲಕ್ಕೆ ಕಾಯ್ತಿದ್ದಾರೆ. ಅದೂ ಅಲ್ದೇ ಕೆರೆಬಿಯನ್ ಕಲಿಗಳ ಅತಿದೊಡ್ಡ ಬ್ಯಾಟಿಂಗ್. ಟಿ-20 ಮಾದರಿಯಲ್ಲಿ ಪವರ್ ಹಿಟ್ಟರ್ಸ್ ಅಂತಾನೇ ಟ್ಯಾಗ್ಲೈನ್ ಪಡೆದಿರೋ ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ರೋಸ್ಟನ್ ಚೇಸ್ ಮತ್ತು ರೊಮಾರಿಯೊ ಶೆಫರ್ಡ್, ಶಾಯ್ ಹೋಪ್ ಹೀತೆ ಫೈರ್ಪವರ್ ಬ್ಯಾಟಿಂಗ್ ಪ್ರದರ್ಶನ ನೀಡಬಹುದು. ಟಿ-20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಅತ್ಯಂತ ಅಪಾಯಕಾರಿ ತಂಡವಾಗಿದ್ದು, ಯಾವುದೇ ಬಲಿಷ್ಠ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಸೋ ಭಾರತ ಕೂಡ ವಿಂಡೀಸ್ ಪಡೆಯನ್ನ ಗ್ರ್ಯಾಂಟೆಡ್ ಆಗಿ ತಗೊಳ್ದೇ ಎರಡನೇ ಪಂದ್ಯದಲ್ಲಿ ಜವಾಬ್ದಾರಿಯುತವಾಗಿ ಪರ್ಫಾಮ್ ಮಾಡ್ಬೇಕಿದೆ.

ನೋಡಿರಿ

