ನಾನಾ ಪಾಟೇಕರ್ ಇನ್ನಿಲ್ಲ! – ಬಡಿತ ನಿಲ್ಲಿಸಿದ ದಿಗ್ಗಜ ನಟನ ಹೃದಯ

ನಾನಾ ಪಾಟೇಕರ್ ಇನ್ನಿಲ್ಲ!  – ಬಡಿತ ನಿಲ್ಲಿಸಿದ ದಿಗ್ಗಜ ನಟನ  ಹೃದಯ
DUBAI, UNITED ARAB EMIRATES - DECEMBER 12: (EDITORS NOTE: Image has been digitally retouched) Nana Patekar poses during a portrait session on day three of the 11th Annual Dubai International Film Festival held at the Madinat Jumeriah Complex on December 12, 2014 in Dubai, United Arab Emirates. (Photo by Gareth Cattermole/Getty Images for DIFF)

ಭಾರತೀಯ ಚಿತ್ರರಂಗದ ಮತ್ತೊಂದು ದಿಗ್ಗಜ ನಟನ ಅಧ್ಯಾಯ ಅಂತ್ಯವಾಗಿದೆ. ತಮ್ಮ ಅದ್ಭುತ ಅಭಿನಯ, ಗಂಭೀರ ಧ್ವನಿ ಮತ್ತು ವಿಭಿನ್ನ ಮ್ಯಾನರಿಸಂ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದ ಹಿರಿಯ ನಟ ನಾನಾ ಪಾಟೇಕರ್ ಅವರು ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಗುರುವಾರ ಬೆಳಗಿನ ಜಾವ ಗೋವಾದ ಡೊನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ನಾನಾ ಪಾಟೇಕರ್ ಅಸ್ವಸ್ಥರಾಗಿದ್ದರು. ತೀವ್ರ ಹೃದಯಾಘಾತಕ್ಕೆ ಒಳಗಾದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನೀಡಿ ಉಳಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಿಸಲಿಲ್ಲ. ಬೆಳಗ್ಗೆ 5.20ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ICC RANKINGನಲ್ಲಿ ಭಾರತದ ದರ್ಬಾರ್! – ಶ್ರೇಯಸ್ ಅಯ್ಯರ್ ಭರ್ಜರಿ ಜಂಪ್!

 ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಾನಾ ಪಾಟೇಕರ್, ಮರಾಠಿ ಮತ್ತು ಹಿಂದಿ ಸಿನಿಮಾಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ‘ಪರಿಂಡಾ’, ‘ಕ್ರಾಂತಿವೀರ್’, ‘ಅಬ್ ತಕ್ ಛಪ್ಪನ್’, ‘ನಟಸಮ್ರಾಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿನ ಅವರ ಅಭಿನಯ ಇಂದಿಗೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಪದ್ಮಶ್ರೀ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದ ನಾನಾ ಪಾಟೇಕರ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಪರದೆ ಮೇಲೆ ತಮ್ಮ ಶಕ್ತಿಯುತ ಅಭಿನಯದಿಂದ ಮಿಂಚಿದ ಈ ದಿಗ್ಗಜ ನಟನ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ನಾನಾ ಪಾಟೇಕರ್ ಅವರ ನೆನಪುಗಳು ಮತ್ತು ಅವರ ಪಾತ್ರಗಳು ಸದಾ ಜೀವಂತ.

Kishor KV

Leave a Reply

Your email address will not be published. Required fields are marked *