ಮೈಸೂರು ದಸರಾಕ್ಕೆ ರೈಲ್ವೆ ಇಲಾಖೆ ಗುಡ್ನ್ಯೂಸ್ – ಬೆಂಗಳೂರು–ಮೈಸೂರು ನಡುವೆ ಹೆಚ್ಚುವರಿ ವಿಶೇಷ ರೈಲು

ಮೈಸೂರು ದಸರಾ ಹಬ್ಬಕ್ಕೆ ತೆರಳುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್ನ್ಯೂಸ್ ನೀಡಿದೆ. ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು–ಮೈಸೂರು ನಡುವೆ ಹೆಚ್ಚುವರಿ ವಿಶೇಷ ರೈಲುಗಳ ಸಂಚಾರಕ್ಕೆ ನೈರುತ್ಯ ರೈಲ್ವೆ ಮುಂದಾಗಿದೆ.
ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಅಕ್ಟೋಬರ್ 9ರಿಂದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಬೆಂಗಳೂರು, ಮೈಸೂರು, ಅಶೋಕಪುರಂ ಹಾಗೂ ಚಾಮರಾಜನಗರ ನಿಲ್ದಾಣಗಳ ನಡುವೆ ಒಟ್ಟು ಐದು ವಿಶೇಷ ಅನ್-ರಿಸರ್ವ್ಡ್ ರೈಲುಗಳನ್ನು ಸಂಚರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ದಸರಾ ಸಂಭ್ರಮಕ್ಕಾಗಿ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯ ಪ್ರಯಾಣಿಕರಿಗೆ ಈ ವಿಶೇಷ ರೈಲುಗಳು ಹೆಚ್ಚಿನ ಅನುಕೂಲ ಕಲ್ಪಿಸಲಿವೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದಸರಾ ಸಂದರ್ಭದಲ್ಲಿ ಮೈಸೂರು ನಗರಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಹೀಗಾಗಿ ಬಸ್ ಹಾಗೂ ಇತರೆ ಸಾರಿಗೆ ವ್ಯವಸ್ಥೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿಯೂ ಈ ರೈಲುಗಳು ನೆರವಾಗಲಿವೆ.
ವಿಶೇಷವಾಗಿ ಯಾವುದೇ ಮುಂಗಡ ಕಾಯ್ದಿರಿಸುವಿಕೆ ಅಗತ್ಯವಿಲ್ಲದ ಅನ್-ರಿಸರ್ವ್ಡ್ ರೈಲುಗಳಾಗಿರುವುದರಿಂದ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ದಸರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳು, ಜಂಬೂಸವಾರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಮೈಸೂರಿಗೆ ತೆರಳುವವರಿಗೆ ಇದು ಸಹಕಾರಿಯಾಗಲಿದೆ.
ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 06286 ಅಶೋಕಪುರಂ–ಕೆಎಸ್ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು ದಿನಾಂಕ 19.10.2026, 20.10.2026 ಮತ್ತು 21.10.2026 ರಂದು 16:10 ಗಂಟೆಗೆ ಅಶೋಕಪುರಂನಿಂದ ಹೊರಟು, ಅದೇ ದಿನ 20:00 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.
- ಮೈಸೂರು–ಕೆಎಸ್ಆರ್ ಬೆಂಗಳೂರು ನಡುವೆ 6 ಟ್ರಿಪ್ ಕಾಯ್ದಿರಿಸದ ವಿಶೇಷ ರೈಲು ಸಂಚಾರ (06297/06298):
ರೈಲು ಸಂಖ್ಯೆ 06297 ಮೈಸೂರು–ಕೆಎಸ್ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು ದಿನಾಂಕ 16.10.2026, 17.10.2026, 18.10.2026, 19.10.2026, 20.10.2026 ಮತ್ತು 21.10.2026 ರಂದು 23:15 ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ 02:50 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.
ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 06298 ಕೆಎಸ್ಆರ್ ಬೆಂಗಳೂರು–ಮೈಸೂರು ಕಾಯ್ದಿರಿಸದ ವಿಶೇಷ ರೈಲು ದಿನಾಂಕ 17.10.2026, 18.10.2026, 19.10.2026, 20.10.2026, 21.10.2026 ಮತ್ತು 22.10.2026 ರಂದು 03:15 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಅದೇ ದಿನ 06:30 ಗಂಟೆಗೆ ಮೈಸೂರು ತಲುಪಲಿದೆ.
ಹತ್ತೊಂಬತ್ತು ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲುಗಳು, ಎರಡೂ ಮಾರ್ಗಗಳಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ, ಬ್ಯಾಡರಹಳ್ಳಿ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಂ, ಬಿಡದಿ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ನಿಲ್ಲಲಿವೆ.
- ಮೈಸೂರು–ಚಾಮರಾಜನಗರ ನಡುವೆ 1 ಟ್ರಿಪ್ ಕಾಯ್ದಿರಿಸದ ವಿಶೇಷ ರೈಲು ಸಂಚಾರ (06293/06294):
ರೈಲು ಸಂಖ್ಯೆ 06293 ಮೈಸೂರು–ಚಾಮರಾಜನಗರ ಕಾಯ್ದಿರಿಸದ ವಿಶೇಷ ರೈಲು ದಿನಾಂಕ 21.10.2026 ರಂದು 21:30 ಗಂಟೆಗೆ ಮೈಸೂರಿನಿಂದ ಹೊರಟು, ಅದೇ ದಿನ 23:20 ಗಂಟೆಗೆ ಚಾಮರಾಜನಗರ ತಲುಪಲಿದೆ.
ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 06294 ಚಾಮರಾಜನಗರ–ಮೈಸೂರು ಕಾಯ್ದಿರಿಸದ ವಿಶೇಷ ರೈಲು ದಿನಾಂಕ 21.10.2026 ರಂದು 23:50 ಗಂಟೆಗೆ ಚಾಮರಾಜನಗರದಿಂದ ಹೊರಟು, ಮರುದಿನ 01:50 ಗಂಟೆಗೆ ಮೈಸೂರು ತಲುಪಲಿದೆ.
ಇಪ್ಪತ್ತು ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲುಗಳು, ಎರಡೂ ಮಾರ್ಗಗಳಲ್ಲಿ ಚಾಮರಾಜಪುರಂ, ಅಶೋಕಪುರಂ, ಕಡಕೊಳ, ತಾಂಡವಪುರ ಹಾಲ್ಟ್, ಸುಜಾತಾಪುರ ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಟ್, ನರಸಾಂಬುಧಿ ಹಾಲ್ಟ್, ಕವಲಂದೆ ಹಾಲ್ಟ್, ಕೊಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಮತ್ತು ಮರಿಯಾಲ ಗಂಗವಾಡಿ ಹಾಲ್ಟ್ ನಿಲ್ದಾಣಗಳಲ್ಲಿ ನಿಲ್ಲಲಿವೆ.
- ಮೈಸೂರು–ಚಾಮರಾಜನಗರ ನಡುವೆ 1 ಟ್ರಿಪ್ ಕಾಯ್ದಿರಿಸದ ವಿಶೇಷ ರೈಲು ಸಂಚಾರ (06289/06290):
ರೈಲು ಸಂಖ್ಯೆ 06289 ಮೈಸೂರು–ಚಾಮರಾಜನಗರ ಕಾಯ್ದಿರಿಸದ ವಿಶೇಷ ರೈಲು ದಿನಾಂಕ 21.10.2026 ರಂದು 00:10 ಗಂಟೆಗೆ ಮೈಸೂರಿನಿಂದ ಹೊರಟು, ಅದೇ ದಿನ 02:00 ಗಂಟೆಗೆ ಚಾಮರಾಜನಗರ ತಲುಪಲಿದೆ.
ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 06290 ಚಾಮರಾಜನಗರ–ಮೈಸೂರು ಕಾಯ್ದಿರಿಸದ ವಿಶೇಷ ರೈಲು ದಿನಾಂಕ 21.10.2026 ರಂದು 02:30 ಗಂಟೆಗೆ ಚಾಮರಾಜನಗರದಿಂದ ಹೊರಟು, ಅದೇ ದಿನ 04:15 ಗಂಟೆಗೆ ಮೈಸೂರು ತಲುಪಲಿದೆ.
ಹೀಗಾಗಿ ದಸರಾ ಸಂದರ್ಭದಲ್ಲಿ ಮೈಸೂರು ಪ್ರಯಾಣ ಬೆಳೆಸುವವರು ವಿಶೇಷ ರೈಲುಗಳ ಸಂಚಾರದ ಸಮಯ ಹಾಗೂ ನಿಲ್ದಾಣಗಳ ವಿವರಗಳನ್ನು ಮುಂಚಿತವಾಗಿ ಪರಿಶೀಲಿಸಿಕೊಂಡು ಪ್ರಯಾಣದ ಯೋಜನೆ ರೂಪಿಸಿಕೊಳ್ಳುವುದು ಉತ್ತಮ.

ನೋಡಿರಿ

