ಕೊಹ್ಲಿಗೆ ₹5 Cr ಕೊಟ್ರಾ ಪ್ರೇಮಾನಂದ? ಅಗರ್ಕರ್ ನಿರ್ಗಮನಕ್ಕೆ ಗೌತಿ ಕಣ್ಣೀರು!

ಕೊಹ್ಲಿಗೆ ₹5 Cr ಕೊಟ್ರಾ ಪ್ರೇಮಾನಂದ?  ಅಗರ್ಕರ್ ನಿರ್ಗಮನಕ್ಕೆ ಗೌತಿ ಕಣ್ಣೀರು!

ಕ್ರಿಕೆಟ್‌ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ನಾಲ್ಕು ವರ್ಷಗಳ ಬಳಿಕ ಟೀಂ ಇಂಡಿಯಾದ ಟಿ20 ತಂಡಕ್ಕೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಭುವಿ ಸ್ಥಾನ ಪಡೆದಿದ್ದಾರೆ. ಹಾಗೇ ವರುಣ್ ಚಕ್ರವರ್ತಿ ಕೂಡ ಟೀಂ ಇಂಡಿಯಾಗೆ ಮರಳಿದ್ದಾರೆ. ಅವರ ಜೊತೆಗೆ ಕುಲ್ದೀಪ್ ಯಾದವ್ ಸ್ಪಿನ್ ವಿಭಾಗದಲ್ಲಿ ಇರಲಿದ್ದಾರೆ. ವರುಣ್ ಕಮ್‌ಬ್ಯಾಕ್‌ನಿಂದ ಭಾರತದ ಬೌಲಿಂಗ್ ಮತ್ತಷ್ಟು ಬಲಿಷ್ಠವಾಗುವ ನಿರೀಕ್ಷೆಯಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ದೀರ್ಘ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಆಟಗಾರರ ಕೆಲಸದ ಹೊರೆಯನ್ನು ನಿರ್ವಹಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್ ಹಾಗೂ ಪ್ರಿನ್ಸ್ ಯಾದವ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ನ್ಯೂಜಿಲೆಂಡ್ ವಿರುದ್ಧದ ಟಿ20 ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದ 16 ಸದಸ್ಯರ ತಂಡದಲ್ಲಿ ವೈಭವ್ ಹೆಸರು ಕಾಣಿಸಿಕೊಂಡಿದೆ. ಭಾರತದ ಮುಂದಿನ ಟಿ20 ಪೀಳಿಗೆಯ ಪ್ರಮುಖ ಆಟಗಾರನಾಗಿ ವೈಭವ್‌ರನ್ನು ಬೆಳೆಸುವ ಪ್ರಯತ್ನದ ಭಾಗವಾಗಿ ಈ ಆಯ್ಕೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: T-20I ಗೆ ಬಂದಾಯ್ತು ಬೆಂಕಿ ಭುವಿ! – 4 ವರ್ಷ.. BCCI ತಲೆ ಬಾಗಿದ್ದೇಗೆ?

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅಬ್ಬರಿಸಿದ್ದಾರೆ. ಕೇವಲ 43 ಎಸೆತಗಳಲ್ಲಿ ಅಜೇಯ 102 ರನ್ ಸಿಡಿಸಿ ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದಾರೆ.   ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೂ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. 2019 ರಲ್ಲಿ ಕೊಹ್ಲಿ ವಿಂಡೀಸ್ ವಿರುದ್ಧ ಟಿ20 ಪಂದ್ಯದಲ್ಲಿ ಅಜೇಯ 94 ರನ್ ಬಾರಿಸಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಮನ ಧೀರ್ ಗಮನ ಸೆಳೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮೂಲಕ ಹೆಚ್ಚು ಪರಿಚಿತರಾಗಿದ್ದ ನಮನ, ಬೌಲಿಂಗ್‌ನಲ್ಲೂ ತಮ್ಮ ಸಾಮರ್ಥ್ಯ ತೋರಿಸಿ 3 ವಿಕೆಟ್ ಪಡೆದಿದ್ದಾರೆ. 31 ರನ್ ನೀಡಿ ಮೂರು ವಿಕೆಟ್ ಕಬಳಿಸಿದ ಅವರ ಪ್ರದರ್ಶನದಿಂದ ಭಾರತಕ್ಕೆ ಮತ್ತೊಂದು ಬೌಲಿಂಗ್ ಆಯ್ಕೆ ಸಿಕ್ಕಂತಾಗಿದೆ.

ನ್ಯೂಜಿಲೆಂಡ್ ಪ್ರವಾಸಕ್ಕೆ ಪ್ರಕಟಿಸಿರುವ ಭಾರತ ‘ಎ’ ತಂಡದಲ್ಲಿ ರಿಷಭ್ ಪಂತ್ ಕೂಡ ಸ್ಥಾನ ಪಡೆದಿದ್ದಾರೆ. ಆದರೆ ಅವರ ಆಯ್ಕೆ ಫಿಟ್ನೆಸ್‌ಗೆ ಒಳಪಟ್ಟಿದೆ.   ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಕೂಡ ನ್ಯೂಜಿಲೆಂಡ್ ಪ್ರವಾಸದ ಭಾರತ ‘ಎ’ ತಂಡದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್ ಸೇರಿದಂತೆ ಹಲವು ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ.

ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರಾಗಿ ಅಜಿತ್ ಅಗರ್ಕರ್ ಅವರ ಅವಧಿ ಅಂತ್ಯಗೊಂಡಿದೆ. ಬಿಸಿಸಿಐ ಇದೀಗ ಮುಂದಿನ ಮುಖ್ಯ ಆಯ್ಕೆಗಾರರ ನೇಮಕಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಕ್ರಿಕೆಟ್‌ನ ಮುಂದಿನ ದಿಕ್ಕು, ವಿಶೇಷವಾಗಿ 2027ರ ವಿಶ್ವಕಪ್ ಸಿದ್ಧತೆಯಲ್ಲಿ ಹೊಸ ಮುಖ್ಯ ಆಯ್ಕೆಗಾರರ ಪಾತ್ರ ಅತ್ಯಂತ ಮಹತ್ವದ್ದಾಗಲಿದೆ.    

ಅಜಿತ್ ನಿರ್ಗಮನದ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಡಿಯರ್ ಅಜಿತ್ ಬಾಯ್, ನಿಮ್ಮ ಜತೆ ಕೆಲಸ ಮಾಡಿದ್ದು ನಿಜಕ್ಕೂ ಗೌರವದ ವಿಚಾರ. ಆ ಮೂರು ಐಸಿಸಿ ಟ್ರೋಫಿಗಳು ನಿಮ್ಮ ದೃಢ ನಿಲುವಿಗೆ ಸಾಕ್ಷಿಯಾಗಿವೆ. ಯಾವಾಗಲೂ ತಂಡವೇ ಮೊದಲು ಮತ್ತು ತಂಡವೇ ಎಲ್ಲಕ್ಕಿಂತ ಮುಖ್ಯ ಎನ್ನುವ ಆ ನಿಲುವನ್ನು ಇತಿಹಾಸವು ನಿಮ್ಮನ್ನು ಖಂಡಿತವಾಗಿಯೂ ಗೌರವದಿಂದ ನೆನಪಿಸಿಕೊಳ್ಳುತ್ತದೆ ಎಂದು ನಾನು ಹೇಳಲೇಬೇಕು. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು! ” ಎಂದು ಗೌತಮ್ ಗಂಭೀರ್ ಬರೆದುಕೊಂಡಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಭೇಟಿಗೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಸದ್ದು ಮಾಡುತ್ತಿದೆ. ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಯಾಸ್ ಅಧ್ಯಕ್ಷ ದಿನೇಶ್ ಫಲಹಾರಿ ಮಹಾರಾಜ್ ಈ ಆರೋಪ ಮಾಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿ ಮಾಡಲು ಕರೆತಂದಿದ್ದು, ಇದಕ್ಕಾಗಿ ಬರೋಬ್ಬರಿ 5 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಅಂದ್ರೆ ಕೊಹ್ಲಿಗಿಯೇ 5 ಕೋಟಿ ಕೊಟ್ಟಿದ್ದಾರೆ ಅನ್ನೋದು ಆರೋಪ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಸಾಕಷ್ಟು ಚರ್ಚೆ ಆಗ್ತಿದೆ.

ವಿರಾಟ್ ಮೇಲೆ 5 ಕೋಟಿ ಆರೋಪ ಬಂದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರ ವಕ್ತಾರರು ಇದು ಸುಳ್ಳು ಎಂದಿದ್ದಾರೆ. ಶ್ರೀ ವಿರಾಟ್ ಕೊಹ್ಲಿ ಬಗ್ಗೆ ಫಲಹರಿ ಮಹಾರಾಜ್ ದಿನೇಶ್ ಶರ್ಮಾ ಮಾಡಿದ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ವಾಸ್ತವಿಕವಾಗಿ ತಪ್ಪಾಗಿದೆ ಎಂದು ನಾವು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ’ ಎಂದು ವಿರಾಟ್ ಕೊಹ್ಲಿ ವಕ್ತಾರರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

 

Kishor KV

Leave a Reply

Your email address will not be published. Required fields are marked *