ಬಿಗ್ ಬಾಸ್ ಮನೆಯಲ್ಲಿ ಶಾಕ್!- ಸಂಗೀತಾ ಭಟ್ ಆಸ್ಪತ್ರೆಗೆ ದಾಖಲು

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಇದೀಗ ಶಾಕ್ ನೀಡುವ ಬೆಳವಣಿಗೆಯೊಂದು ನಡೆದಿದೆ. ಕಠಿಣ ಟಾಸ್ಕ್ಗಳ ಮೂಲಕ ಸ್ಪರ್ಧಿಗಳ ಸಾಮರ್ಥ್ಯ ಪರೀಕ್ಷಿಸಲಾಗುತ್ತಿದ್ದು, ಇದೇ ವೇಳೆ ನಟಿ ಸಂಗೀತಾ ಭಟ್ ಅವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
‘ಗಂಧರ್ವರು ವರ್ಸಸ್ ರಾಕ್ಷಸರು’ ಎಂಬ ಟಾಸ್ಕ್ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಗೀತಾ ಭಟ್ ಅವರಿಗೆ ತೀವ್ರವಾದ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಪರಿಸ್ಥಿತಿ ಗಮನಿಸಿದ ಬಿಗ್ ಬಾಸ್ ತಂಡ ತಕ್ಷಣವೇ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ನಿಮ್ಮ ಜತೆ ಕೆಲಸ ಮಾಡಿದ್ದು ನಿಜಕ್ಕೂ ಗೌರವ- ಅಗರ್ಕರ್ಗೆ ಗಂಭೀರ್ ಭಾವುಕ ವಿದಾಯ!
ಕಠಿಣ ಟಾಸ್ಕ್ನ ಒತ್ತಡ, ದೈಹಿಕ ಶ್ರಮದಿಂದಾಗಿ ಅವರಿಗೆ ಈ ರೀತಿಯ ಸಮಸ್ಯೆ ಎದುರಾಯಿತೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಸಂಗೀತಾ ಭಟ್ ಅವರ ಆರೋಗ್ಯದ ಬಗ್ಗೆ ಸಹ ಸ್ಪರ್ಧಿಗಳು ಹಾಗೂ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಅವರ ಅನುಪಸ್ಥಿತಿ ಇದೀಗ ಗಮನ ಸೆಳೆದಿದ್ದು, ಅವರು ಮತ್ತೆ ಶೋಗೆ ಮರಳುತ್ತಾರಾ? ಅಥವಾ ಆರೋಗ್ಯದ ಕಾರಣದಿಂದ ಸ್ಪರ್ಧೆಯಿಂದ ಹೊರಗುಳಿಯಬೇಕಾಗುತ್ತಾ ಎಂಬ ಕುತೂಹಲವೂ ಹೆಚ್ಚಾಗಿದೆ.
ಸದ್ಯ ಸಂಗೀತಾ ಭಟ್ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅಭಿಮಾನಿಗಳು ಅಧಿಕೃತ ಮಾಹಿತಿ ಎದುರು ನೋಡುತ್ತಿದ್ದಾರೆ. ಕಠಿಣ ಟಾಸ್ಕ್ಗಳ ನಡುವೆ ಸ್ಪರ್ಧಿಗಳ ಆರೋಗ್ಯವೂ ಅಷ್ಟೇ ಮುಖ್ಯ ಎಂಬ ಚರ್ಚೆಯೂ ಆರಂಭವಾಗಿದೆ.

ನೋಡಿರಿ

