ನಿಮ್ಮ ಜತೆ ಕೆಲಸ ಮಾಡಿದ್ದು ನಿಜಕ್ಕೂ ಗೌರವ- ಅಗರ್ಕರ್‌ಗೆ ಗಂಭೀರ್ ಭಾವುಕ ವಿದಾಯ!

ನಿಮ್ಮ ಜತೆ ಕೆಲಸ ಮಾಡಿದ್ದು ನಿಜಕ್ಕೂ ಗೌರವ- ಅಗರ್ಕರ್‌ಗೆ ಗಂಭೀರ್ ಭಾವುಕ ವಿದಾಯ!

ಟೀಂ ಇಂಡಿಯಾದ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಅಂತ್ಯಗೊಂಡಿದೆ.  , ಇದೀಗ ಅವರ ನಿರ್ಗಮನದ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಗರ್ಕರ್ ಅವರ ಅವಧಿ ಭಾರತೀಯ ಕ್ರಿಕೆಟ್ ಪಾಲಿಗೆ ಅತ್ಯಂತ ಯಶಸ್ವಿ ಅವಧಿಗಳಲ್ಲಿ ಒಂದಾಗಿದೆ. ಅವರ ನೇತೃತ್ವದ ಆಯ್ಕೆ ಸಮಿತಿ ಅವಧಿಯಲ್ಲಿ ಟೀಂ ಇಂಡಿಯಾ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಂಡಿದೆ. ಇದೇ ಅವಧಿಯಲ್ಲಿ ತಂಡದಲ್ಲಿ ಹಲವು ಮಹತ್ವದ ಬದಲಾವಣೆಗಳೂ ನಡೆದಿವೆ.

ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಸ್ಟಾರ್ ಆಟಗಾರರು ತಮ್ಮ ವೃತ್ತಿಜೀವನದ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಮುಂದಿನ ಪೀಳಿಗೆಯ ಟೀಂ ಇಂಡಿಯಾವನ್ನು ಕಟ್ಟುವ ಕೆಲಸವೂ ನಡೆದಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್ ಎಂಟ್ರಿ! – ಭುವಿ-ವರುಣ್ ಕಮ್‌ಬ್ಯಾಕ್!

ಅಗರ್ಕರ್ ಅವರ ನಿರ್ಗಮನದ ಬಗ್ಗೆ ಗೌತಮ್ ಗಂಭೀರ್ ಭಾವುಕವಾಗಿ ಪ್ರತಿಕ್ರಿಯಿಸಿದ್ದು, ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಸ್ಮರಿಸಿದ್ದಾರೆ. ತಂಡದ ಆಯ್ಕೆ, ಆಟಗಾರರ ಬೆಂಬಲ ಮತ್ತು ಕಠಿಣ ನಿರ್ಧಾರಗಳಲ್ಲಿ ಅಗರ್ಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.

‘ಡಿಯರ್ ಅಜಿತ್ ಬಾಯ್, ನಿಮ್ಮ ಜತೆ ಕೆಲಸ ಮಾಡಿದ್ದು ನಿಜಕ್ಕೂ ಗೌರವದ ವಿಚಾರ. ಆ ಮೂರು ಐಸಿಸಿ ಟ್ರೋಫಿಗಳು ನಿಮ್ಮ ದೃಢ ನಿಲುವಿಗೆ ಸಾಕ್ಷಿಯಾಗಿವೆ. ಯಾವಾಗಲೂ ತಂಡವೇ ಮೊದಲು ಮತ್ತು ತಂಡವೇ ಎಲ್ಲಕ್ಕಿಂತ ಮುಖ್ಯ ಎನ್ನುವ ಆ ನಿಲುವನ್ನು ಇತಿಹಾಸವು ನಿಮ್ಮನ್ನು ಖಂಡಿತವಾಗಿಯೂ ಗೌರವದಿಂದ ನೆನಪಿಸಿಕೊಳ್ಳುತ್ತದೆ ಎಂದು ನಾನು ಹೇಳಲೇಬೇಕು. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು! ” ಎಂದು ಗೌತಮ್ ಗಂಭೀರ್ ಬರೆದುಕೊಂಡಿದ್ದಾರೆ

ಇದೀಗ ಅವರ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಕುತೂಹಲ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಹೊಸ ಚೀಫ್ ಸೆಲೆಕ್ಟರ್ ಮುಂದೆ 2027ರ ಏಕದಿನ ವಿಶ್ವಕಪ್ ಸೇರಿದಂತೆ ಹಲವು ದೊಡ್ಡ ಸವಾಲುಗಳಿವೆ.

ಒಟ್ಟಿನಲ್ಲಿ ಅಜಿತ್ ಅಗರ್ಕರ್ ಅವರ ಚೀಫ್ ಸೆಲೆಕ್ಟರ್ ಅಧ್ಯಾಯ ಅಂತ್ಯಗೊಂಡಿದ್ದರೂ, ಭಾರತೀಯ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆ ಬಹುಕಾಲ ನೆನಪಿನಲ್ಲಿ ಉಳಿಯಲಿದೆ.

Kishor KV

Leave a Reply

Your email address will not be published. Required fields are marked *