ಟೀಂ ಇಂಡಿಯಾಗೆ ಬಿಗ್ ಎಂಟ್ರಿ! – ಭುವಿ-ವರುಣ್ ಕಮ್‌ಬ್ಯಾಕ್!

ಟೀಂ ಇಂಡಿಯಾಗೆ ಬಿಗ್ ಎಂಟ್ರಿ! – ಭುವಿ-ವರುಣ್ ಕಮ್‌ಬ್ಯಾಕ್!

ನಮಸ್ಕಾರ ಸ್ನೇಹಿತರೇ, ನ್ಯೂಜಿಲೆಂಡ್ ವಿರುದ್ಧದ ಬಹುನಿರೀಕ್ಷಿತ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ತಂಡದಲ್ಲಿ ಎರಡು ಪ್ರಮುಖ ಕಮ್‌ಬ್ಯಾಕ್‌ಗಳು ಇದೀಗ ಭಾರೀ ಗಮನ ಸೆಳೆಯುತ್ತಿವೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತೆ ಟೀಂ ಇಂಡಿಯಾ ಬಾಗಿಲು ತಟ್ಟಿದ್ದಾರೆ.

ವಿಶೇಷವಾಗಿ ಭುವನೇಶ್ವರ್ ಕುಮಾರ್ ಅವರ ವಾಪಸ್ಸು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹೊಸ ಚೆಂಡಿನ ಸ್ವಿಂಗ್, ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹಾಗೂ ಡೆತ್ ಓವರ್‌ಗಳಲ್ಲಿ ಅನುಭವ ಹೊಂದಿರುವ ಭುವಿ, ತಂಡಕ್ಕೆ ಮತ್ತಷ್ಟು ಬೌಲಿಂಗ್ ಆಯ್ಕೆ ನೀಡಲಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಯುಗ ಅಂತ್ಯ!- 21 ಆಟಕ್ಕೆ ವರ್ಷಗಳ ಭಾವುಕ ವಿದಾಯ

ಇನ್ನೊಂದೆಡೆ, ಮಿಸ್ಟರಿ ಸ್ಪಿನ್ನರ್ ಎಂದೇ ಗುರುತಿಸಿಕೊಂಡಿರುವ ವರುಣ್ ಚಕ್ರವರ್ತಿ ಕೂಡ ಮತ್ತೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಕಠಿಣ ಸವಾಲು ನೀಡುವ ವರುಣ್, ಮಧ್ಯಮ ಓವರ್‌ಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ನ್ಯೂಜಿಲೆಂಡ್ ತಂಡದ ವಿರುದ್ಧದ ಸರಣಿ ಭಾರತಕ್ಕೆ ಮುಂದಿನ ಟಿ20 ಸವಾಲುಗಳಿಗೆ ಸಿದ್ಧತೆ ನಡೆಸಲು ಮಹತ್ವದ್ದಾಗಿದೆ. ಯುವ ಆಟಗಾರರ ಜೊತೆ ಅನುಭವಿಗಳ ಸಂಯೋಜನೆ ಹೇಗೆ ಕೆಲಸ ಮಾಡಲಿದೆ ಎಂಬುದೇ ಈಗ ಎಲ್ಲರ ಕುತೂಹಲ.

ಭುವಿ ಮತ್ತು ವರುಣ್ ಇಬ್ಬರೂ ತಮ್ಮ ಕಮ್‌ಬ್ಯಾಕ್‌ ಅನ್ನು ಭರ್ಜರಿ ಪ್ರದರ್ಶನದ ಮೂಲಕ ಸ್ಮರಣೀಯವಾಗಿಸಿಕೊಳ್ಳುತ್ತಾರಾ? ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾದ ಬೌಲಿಂಗ್ ದಾಳಿ ಹೇಗಿರಲಿದೆ? ಎಂಬುದನ್ನು ಸರಣಿ ಆರಂಭವಾದ ಬಳಿಕ ನೋಡಬೇಕಿದೆ.

Kishor KV

Leave a Reply

Your email address will not be published. Required fields are marked *