48 ದಿನ.. 17 T-20I  ಪಂದ್ಯ – ಭಾರತಕ್ಕೆ NON-STOP ಚಾಲೆಂಜ್
ರೆಸ್ಟ್ ಲೆಸ್ ಆದ್ರಾ ಪ್ಲೇಯರ್ಸ್?

ಬ್ಯಾಕ್ ಟು ಬ್ಯಾಕ್ ಸಿರೀಸ್.. ನಾನ್ ಸ್ಟಾಪ್ ಮ್ಯಾಚಸ್.. ಅದ್ರಲ್ಲೂ ಭಾರತ ಟಿ-20ಐ ತಂಡ ಅಂತೂ ಈಗ ಕಂಪ್ಲೀಟ್ ಬ್ಯುಸಿಯಾಗಿದೆ. ಒಂದೂವರೆ ತಿಂಗಳ ಅಂತರದಲ್ಲಿ ರೆಸ್ಟ್ ಲೆಸ್ ಆಗಿ ಪಂದ್ಯಗಳನ್ನ ಆಡ್ಬೇಕಿದೆ. ವೆಸ್ಟ್ ಇಂಡೀಸ್ ವಿರುದ್ಧ ಟಿ20ಐ ಸರಣಿ ಮಂಗಳವಾರದಿಂದ ಸ್ಟಾರ್ಟ್ ಆಗ್ತಿದ್ದು ಇದು ಮುಗಿಯೋ ಹೊತ್ತಿಗೆಲ್ಲಾ ನ್ಯೂಜಿಲೆಂಡ್ ವಿರುದ್ಧದ ಸಿರೀಸ್ ಶುರುವಾಗುತ್ತೆ.

ಇದನ್ನೂ ಓದಿ : ಕ್ರಿಕೆಟ್ ಸಾಮ್ರಾಜ್ಯದ KING ವೈಭವ್! – ಕೊಹ್ಲಿ ಸ್ಲಾಟ್‌ಗೆ ತಿಲಕ್ ವರ್ಮಾ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯನ್ನ ಭಾರತ 2-1 ಅಂತರದಲ್ಲಿ ಗೆದ್ದಿದೆ. ಇದೀಗ ಸೆಪ್ಟೆಂಬರ್ 6ರಿಂದ ಐದು ಪಂದ್ಯಗಳ ಟಿ-20ಐ ಸರಣಿ ಕೂಡ ಸ್ಟಾರ್ಟ್ ಆಗಿದ್ದು ಭಾರತಕ್ಕೆ ಮತ್ತೊಂದು ಚಾಲೆಂಜ್ ಶುರುವಾಗಿದೆ. ಌಂಡ್ ಈ ಸಲ ಭಾರತ ಬ್ಯಾಕ್ ಟು ಬ್ಯಾಕ್ 10 ಟಿ-20ಐ ಪಂದ್ಯಗಳನ್ನ ಆಡಬೇಕಿದೆ. ಕಳೆದ ತಿಂಗಳಿನಿಂದಲೇ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಭಾರತ ಚುಟುಕು ಮಾದರಿಯಲ್ಲಿ ಕಂಟಿನ್ಯೂಯಸ್ ಆಗಿ ಆಡ್ತಾನೇ ಇದೆ. 48 ದಿನಗಳ ಅಂತದಲ್ಲೇ 17 ಟಿ-20ಐ ಪಂದ್ಯಗಳನ್ನ ಫಿಕ್ಸ್ ಮಾಡಲಾಗಿದೆ.

ಆಫ್ಘನ್ ಸರಣಿಯಿಂದ ನ್ಯೂಜಿಲೆಂಡ್ ಸರಣಿವರೆಗೂ ನಾನ್ ಸ್ಟಾಪ್ ಶೆಡ್ಯೂಲ್!

ಮಾರ್ಡ್ರೆನ್ ಕ್ರಿಕೆಟ್​ನಲ್ಲಿ ಟಿ-20ಐ ಫಾರ್ಮೆಟ್ ಪಂದ್ಯಗಳಿಗೆ ಹೆಚ್ಚಿನ ಪ್ರಿಯಾರಿಟಿ ನೀಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಫ್ಯಾನ್ಸ್ ಗೂ ಇದೇ ಮಾದರಿ ಕ್ರೇಜ್, ಮಂಡಳಿಗಳಿಗೂ ಹೆಚ್ಚಿನ ಲಾಭ ತಂದುಕೊಡೋ ಫಾರ್ಮೆಟ್ ಇನ್ನು ಪ್ಲೇಯರ್ಸ್ ಕೂಡ ಹೊಡಿಬಡಿ ಆಟದಿಂದ  ಫುಲ್ ಫೇಮಸ್ ಆಗಿದೆ. ಭಾರತ ಕೂಡ ಇದೇ ಮಾದರಿ ಪಂದ್ಯಗಳನ್ನ ಹೆಚ್ಚೆಚ್ಚು ಆಡಿಸ್ತಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಕಳೆದ ತಿಂಗಳಿಂದ ಶುರುವಾಗಿರೋ ಈ ಚಾಲೆಂಜ್ ಮುಂದಿನ ತಿಂಗಳವರೆಗೂ ಬ್ರೇಕ್ ಲೆಸ್ ಆಗಿ ಮುಂದುವರಿಯಲಿದೆ. ಅಂದ್ರೆ ಸರಣಿಯಿಂದ ಸರಣಿಗೆ ಮಿನಿಮಮ್ ಒನ್ ವೀಕ್ ಕೂಡ ಗ್ಯಾಪ್ ಇಲ್ಲ. ಸೋ ಹೇಗಿದೆ ಶೆಡ್ಯೂಲ್ ಅನ್ನೋದನ್ನ ನೋಡೋಣ.

ನಾನ್-ಸ್ಟಾಪ್ ಚಾಲೆಂಜ್!

ಅಫ್ಘಾನಿಸ್ತಾನ ವಿರುದ್ಧ ಸೆ.13, 15 & 17ರಂದು 3 ಪಂದ್ಯಗಳ ಸರಣಿ

ಮೂರೂ ಪಂದ್ಯಗಳಲ್ಲೂ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದ ಭಾರತ

ಸೆಪ್ಟೆಂಬರ್ 22ರಂದು ಜಪಾನ್ ವಿರುದ್ಧ ಏಕೈಕ ಪಂದ್ಯ.. 2 ರನ್ಸ್ ಗೆಲುವು

ಸೆಪ್ಟೆಂಬರ್ 28ಕ್ಕೆ ಆಫ್ಘನ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ರದ್ದು

ಅಕ್ಟೋಬರ್ 1ಕ್ಕೆ ಲಂಕಾ ವಿರುದ್ಧ ಸೆಮಿಫೈನಲ್.. 124 ರನ್ ಗಳ ಗೆಲುವು

ಅಕ್ಬೋಬರ್ 3ಕ್ಕೆ ಭಾರತ-ಪಾಕ್ ಫೈನಲ್.. ಭಾರತಕ್ಕೆ 19 ರನ್ ಗಳ ಗೆಲುವು

ಅಕ್ಟೋಬರ್ 6ರಿಂದ ವಿಂಡೀಸ್ ವಿರುದ್ಧ ಐದು ಪಂದ್ಯಗಳ ಸರಣಿ ಆರಂಭ

ಅ. 6, 9, 11, 14 & 17ರವರೆಗೂ ವಿಂಡೀಸ್ ವಿರುದ್ಧ ಭಾರತದ ಸರಣಿ

ಅ. 22ರಿಂದ ನ್ಯೂಜಿಲೆಂಡ್ ವಿರುದ್ಧ ಮತ್ತೆ 5 ಪಂದ್ಯಗಳ ಟಿ-20ಐ ಸರಣಿ

ಅಕ್ಬೋಬರ್ 22, 24, 27, 30 & ನವೆಂಬರ್ 1ರಂದು ಕೊನೇ ಪಂದ್ಯ

Shantha Kumari

Leave a Reply

Your email address will not be published. Required fields are marked *