ನೆಲ ಕಚ್ಚಿದ್ರೂ ನಖ್ವಿಯ ದೌಲತ್ತು – IND ಕ್ಷಮೆಗೆ ಪಟ್ಟು.. WCLನಿಂದ ಔಟ್!
PAK ಕೋಚ್ ಗಳು ಫೇಲ್ಯೂರ್ ಕ್ರಿಕೆಟರ್ಸ್

ಟೂರ್ನಮೆಂಟ್ಗಳು ಚೇಂಜ್ ಆದ್ವು.. ಕ್ಯಾಪ್ಟನ್ಗಳು ಬದಲಾದ್ರು.. ಆಟಗಾರರು, ಮೈದಾನಗಳು ಬೇರೆ ಬೇರೆಯಾದ್ರೂ ರಿಸಲ್ಟ್ ಮಾತ್ರ ರಿಪೀಟ್ ಆಗ್ತಾನೇ ಇದೆ. ಭಾರತ ಗೆಲ್ಲುತ್ತಲೇ ಇದೆ.. ಪಾಕಿಸ್ತಾನ ಮಣ್ಣು ಮುಕ್ಕುತ್ತಾನೇ ಇದೆ. ಆನ್ಫೀಲ್ಡ್ನಲ್ಲಿ ಭಾರತವನ್ನ ಬೀಟ್ ಮಾಡೋದು ಕನಸಿನ ಮಾತು ಅನ್ನೋದು ಕ್ಲಿಯರ್ ಆದ್ಮೇಲೆ ಅಡ್ಡದಾರಿ ಹಿಡೀತಿದ್ದಾರೆ. ಆದ್ರೆ ಅಲ್ಲೂ ಶೇಪ್ ಔಟ್. ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ಟೂರ್ನಿಯನಲ್ಲೂ ಕೂಡ ಭಾರತದ ಎದುರು ಪಾಕಿಸ್ತಾನ ಮಾನ ಕಳ್ಕೊಂಡಿದೆ. ಟೀಂ ಇಂಡಿಯಾ ಪ್ಲೇಯರ್ಸ್ ನಮ್ಮ ಬಳಿ ಕ್ಷಮೆ ಕೇಳ್ಬೇಕು ಅಂತಾ ಬಿಲ್ಡಪ್ ಕೊಡೋಕೆ ಹೋಗಿ ಟೂರ್ನಮೆಂಟ್ನಿಂದಲೇ ಹೊರಬಿದ್ದಿದ್ದಾರೆ.
ಇದನ್ನೂ ಓದಿ : ಗಿಲ್ 1 ಡೀಲ್‌ಗೆ ₹10 ಕೋಟಿ.. ಬ್ರಾಂಡ್‌ಗಳ ನಯಾ ಕಿಂಗ್ ಗಿಲ್! – ಪ್ರಿನ್ಸ್ ಮುಂದೆ ಕೊಹ್ಲಿ ಸೈಡ್‌ಲೈನ್?
ಏಷ್ಯಾಕಪ್, ವಿಶ್ವಕಪ್ ಈಗ ಏಷ್ಯನ್ ಗೇಮ್ಸ್ ಅಂತಾ ಭಾರತದ ಎದುರು ಪಾಕಿಸ್ತಾನ ಸೋತು ಸೋತು ಸುಣ್ಣವಾಗಿತ್ತು. ಸೋ ನೆಕ್ಸ್ಟ್ ನಿವೃತ್ತ ಅಂತಾರಾಷ್ಟ್ರೀಯ ಕ್ರಿಕೆಟರ್ಗಳೆಲ್ಲಾ ಸೇರಿ ಆಡುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್ ಸರದಿ. 2026ರ 3ನೇ ಸೀಸನ್ ಅಕ್ಟೋಬರ್ 3 ರಿಂದ ಅಕ್ಟೋಬರ್ 18 ರವರೆಗೆ ಶಾರ್ಜಾ ಮತ್ತು ದುಬೈ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಲೆಜೆಂಡ್ಸ್ ತಂಡಗಳ ನಡುವೆ ಅಕ್ಟೋಬರ್ 10ಕ್ಕೆ ಮ್ಯಾಚ್ ಕೂಡ ಶೆಡ್ಯೂಲ್ ಆಗಿದೆ. ಆದ್ರೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯ ಅದೊಂದು ಉದ್ಧಟತನದಿಂದ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬಿದ್ದಿದೆ.
ಭಾರತ ತಂಡದ ಕ್ಷಮೆಗೆ ಪಟ್ಟು.. ಟೂರ್ನಿಯಿಂದ ಪಾಕ್ ಔಟ್!
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಈಗಾಗ್ಲೇ ಮಾಜಿ ಕ್ರಿಕೆಟರ್ಸ್ ಧೂಳೆಬ್ಬಿಸ್ತಿದ್ದಾರೆ. ಆದ್ರೆ ಇಲ್ಲೂ ಕೂಡ ಪಾಕ್ ತಂಡ ಕ್ಯಾತೆ ತೆಗೆದು ಮಾನ ಕಳ್ಕೊಂಡಿದೆ. 2025ರ ಟೂರ್ನಿಯಲ್ಲಿ ಭಾರತ ತಂಡ ಪೆಹಲ್ಗಾಮ್ ಅಟ್ಯಾಕ್ ಸಿಟ್ಟಿನಿಂದ ಪಾಕಿಸ್ತಾನ ವಿರುದ್ಧ ಆಡದೆ ವಾಕೌಟ್ ಮಾಡಿತ್ತು. ಬಟ್ ಈ ಸಲ ಭಾರತ-ಪಾಕ್ ನಡುವೆ ಅಕ್ಟೋಬರ್ 10ಕ್ಕೆ ಪಂದ್ಯ ಶೆಡ್ಯೂಲ್ ಆಗಿದೆ. ಌಂಡ್ ಭಾರತ ಮ್ಯಾಚ್ ಆಡೋಕೆ ರೆಡಿ ಇದೆ. ಆದ್ರೆ ಪಾಕಿಸ್ತಾನ ಕಳೆದ ವರ್ಷದ ಶೇಪ್ಔಟ್ಗೆ ಈ ಸಲ ತೇಪೆ ಹಚ್ಚೋ ಪ್ಲ್ಯಾನ್ನಲ್ಲಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಸಲ ಭಾರತದ ವಿರುದ್ಧ ನಾವು ಆಡಬೇಕು ಅಂದ್ರೆ ಭಾರತ ತಂಡವು ಕಳೆದ ವರ್ಷದ ವಾಕೌಟ್ಗೆ ಲಿಖಿತವಾಗಿ ಕ್ಷಮೆಯಾಚಿಸಬೇಕು ಅಂತಾ ಪಟ್ಟು ಹಿಡಿದಿದ್ರು. ಯುವರಾಜ್ ಸಿಂಗ್, ಸುರೇಶ್ ರೈನಾ, ಹರ್ಭಜನ್ ಸಿಂಗ್ ಅವರನ್ನೊಳಗೊಂಡ ‘ಇಂಡಿಯಾ ಚಾಂಪಿಯನ್ಸ್’ ತಂಡವು ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿ, ಪಂದ್ಯವನ್ನು ಬಹಿಷ್ಕರಿಸಿತ್ತು. ಈ ಕಾರಣಕ್ಕಾಗಿ ಭಾರತೀಯ ಆಟಗಾರರು ಲಿಖಿತವಾಗಿ ಕ್ಷಮೆ ಕೇಳಬೇಕು ಮತ್ತು ಈ ಸಲ Handshake ಮಾಡಲು ಒಪ್ಪಬೇಕು ಎಂದು PCB ಷರತ್ತು ವಿಧಿಸಿತ್ತು. ಬರ್ಬಾದ್ ಆಗಿರೋ ಪಿಸಿಬಿ, ಸೋತು ಸೋತು ಸುಣ್ಣವಾಗಿರೋ ಆಟಗಾರರಿಗೇ ಇಷ್ಟು ಸೊಕ್ಕಿದ್ರೆ ಜಗತ್ತಿನ ಕ್ರಿಕೆಟ್ನೇ ಆಳ್ತಿರೋ ಭಾರತಕ್ಕೆ ಇನ್ನೆಷ್ಟಿರಬೇಡ. ಟಾಸ್ ಟೈಮಲ್ಲಿ ಕ್ಯಾಪ್ಟನ್ಗೆ ಕೈಕುಲುಕೋದನ್ನ ಬಿಟ್ಟಿದ್ದೀವಿ, ಆಟಗಾರರ ಶೇಕ್ಹ್ಯಾಂಡ್ನೂ ಬಿಟ್ಟಿದ್ದೀವಿ.. ನಿಮ್ಮ ವಿರುದ್ಧ ನಾವು ಮ್ಯಾಚ್ ಆಡ್ತಿರೋದೇ ಹೆಚ್ಚು. ಕ್ಷಮೆ ಕೇಳೋ ಸೀನ್ ಎಲ್ಲಾ ಇಲ್ಲ ಅಂತಾ ಕ್ಲಿಯರ್ ಆಗಿ ಹೇಳಿದ್ರು. ಯಾವಾಗ ಭಾರತ ಬಗ್ಗಲ್ಲ ಅನ್ನೋದು ಗೊತ್ತಾಯ್ತೋ ಅಲ್ಲಿಗೆ ಪಿಸಿಬಿ ಅಲರ್ಟ್ ಆಯ್ತು. ಏಷ್ಯನ್ ಗೇಮ್ಸ್ನಲ್ಲೂ ಸೋತು ಮಾನ ಕಳ್ಕೊಂಡಿದ್ದೀವಿ ಈಗ ಡಬ್ಲ್ಯೂಸಿಎಲ್ನಲ್ಲೂ ಸೋತು ಮರ್ಯಾದೆ ತೆಗೀತಾರೆ ಅಂತಾ ಪಿಸಿಬಿ ತನ್ನ ದೇಶದ ಆಟಗಾರರಿಗೆ ಎನ್‌ಒಸಿ ಕೊಡೋದನ್ನೇ ನಿರಾಕರಿಸಿದೆ. ಇದೇ ಕಾರಣಕ್ಕೆ ಈ ಬಾರಿಯ WCL ಟೂರ್ನಿಯಿಂದ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಹೊರಗಿಡಲಾಗಿದೆ. ಸೋ ಅಲ್ಲಿಗೆ ಭಾರತದ ಎದುರು ಪಾಕ್ ಮತ್ತೊಮ್ಮೆ ಮಂಡಿಯೂರಬೇಕಾಯ್ತು. ಅಷ್ಟಕ್ಕೂ ಪಾಕಿಸ್ತಾನ ಪ್ರತೀಸಲ ಭಾರತದ ವಿರುದ್ಧ ಇಂಥಾ ಚೀಪ್ ಗಿಮಿಕ್ಗಳನ್ನ ಮಾಡೋ ಬದ್ಲು ತನ್ನ ಮಂಡಳಿಯಲ್ಲಿ ಆಗ್ತಿರೋ ಎಡವಟ್ಟುಗಳನ್ನ ಸರಿ ಮಾಡಿಕೊಳ್ಬೇಕಿದೆ. ಯಾಕಂದ್ರೆ ಅಲ್ಲಿನ ಮಾಜಿ ಕ್ರಿಕೆಟರ್ಗಳೇ ತಮ್ಮ ತಂಡದ ದುಸ್ಥಿತಿ ಹೇಗಿದೆ ಅನ್ನೋದನ್ನ ಬಟಾಬಯಲು ಮಾಡ್ತಿದ್ದಾರೆ.
ಪಾಕ್ ಕೋಚಿಂಗ್ ಸಿಬ್ಬಂದಿಯೆಲ್ಲಾ ಫೇಲ್ಯೂರ್ ಕ್ರಿಕೆಟರ್ಸ್!
ಯಾವುದೇ ಕ್ರಿಕೆಟ್ ತಂಡದಲ್ಲೂ ಆಟಗಾರರು ಎಷ್ಟು ಟ್ಯಾಲೆಂಟೆಡ್ ಆಗಿರ್ತಾರೆ ಅನ್ನೋದ್ರ ಜೊತೆಗೆ ಅಲ್ಲಿನ ಕೋಚಿಂಗ್ ಸ್ಟಾಫ್ಸ್ ಕೂಡ ಅಷ್ಟೇ ಸ್ಟ್ರಾಂಗ್ ಇರ್ಬೇಕಾಗುತ್ತೆ. ಯಾಕಂದ್ರೆ ತಂಡದ ಪರ್ಫಾಮೆನ್ಸ್ನಲ್ಲಿ ಅವ್ರ ಗೈಡೆನ್ಸ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಆದ್ರೆ ಈ ವಿಚಾರದಲ್ಲಿ ಪಿಸಿಬಿ ಹಳ್ಳ ಹಿಡಿದಿದೆ ಅನ್ನೋದನ್ನ ಪಾಕ್ ಮಾಜಿ ಕ್ರಿಕೆಟರ್ ಶೋಯೆಬ್ ಮೊಹಮ್ಮದ್ ರಿವೀಲ್ ಮಾಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಡಿಯಲ್ಲಿ ಕೆಲಸ ಮಾಡುತ್ತಿರುವ ಶೇ. 99.5 ರಷ್ಟು ತರಬೇತುದಾರರು ಫೇಲ್ಯೂರ್ ಕ್ರಿಕೆಟರ್ಸ್ ಎಂದು ಶೋಯೆಬ್ ಹೇಳಿದ್ದಾರೆ. ಪಿಸಿಬಿಯ ಸಂಬಳದ ಪಟ್ಟಿಯಲ್ಲಿ ಪ್ರಸ್ತುತ 230 ತರಬೇತುದಾರರಿದ್ದಾರೆ. ಆದರೆ ಇವರಲ್ಲಿ ಶೇ. 99.5 ರಷ್ಟು ಜನರು ಉನ್ನತ ಮಟ್ಟದ ಅಂದ್ರೆ ಅಂತರರಾಷ್ಟ್ರೀಯ ಕ್ರಿಕೆಟ್ನೂ ಆಡಿಲ್ಲ. ಹಾಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಕಲ್ಪನೆ ಅವರಿಗೆ ಇಲ್ಲ. ಭಾರತ ಅಥವಾ ಆಸ್ಟ್ರೇಲಿಯಾದಲ್ಲಿ ಯುವ ಆಟಗಾರರು ರಾಷ್ಟ್ರೀಯ ತಂಡಕ್ಕೆ ಬರುವ ಮೊದಲೇ ಸಂಪೂರ್ಣವಾಗಿ ಪಳಗಿರುತ್ತಾರೆ. ಆದರೆ ಪಾಕಿಸ್ತಾನದಲ್ಲಿ ತಳಮಟ್ಟದ ತರಬೇತಿ ಸರಿಯಿಲ್ಲದ ಕಾರಣ ಕಷ್ಟವಾಗ್ತಿದೆ. ದುರದೃಷ್ಟವಶಾತ್ ಪ್ರಸ್ತುತ ಪಾಕಿಸ್ತಾನ ತಂಡದಲ್ಲಿ ಒಬ್ಬ ಸಮರ್ಥ ನಾಯಕನೂ ಇಲ್ಲ ಅಂತಾನೂ ಹೇಳಿದ್ದಾರೆ,. ಌಂಡ್ ಇಲ್ಲಿ ಮತ್ತೊಮ್ಮೆ ಕ್ಯಾಪ್ಟನ್ ಗೆ ಗೇಟ್ ಪಾಸ್ ಕೊಟ್ಟಿದ್ದಾರೆ.
ಸಲ್ಮಾನ್ ಔಟ್.. ಫರ್ಹಾನ್ ಗೆ ಟಿ-20ಐ ಕ್ಯಾಪ್ಟನ್ಸಿ!
ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಕೋಚ್ ಅಥವಾ ಕ್ಯಾಪ್ಟನ್ಸ್ ಯಾವಾಗ ಕುರ್ಚಿ ಕಳೆದುಕೊಳ್ತಾರೋ ಅನ್ನೋದು ಗೊತ್ತೇ ಆಗಲ್ಲ. ಈಗ ಟಿ-20ಐ ತಂಡದಲ್ಲೂ ಮತ್ತೆ ಸರ್ಜರಿಯಾಗಿದೆ. ಪಾಕಿಸ್ತಾನ ಪುರುಷರ ಟಿ-20ಐ ಕ್ರಿಕೆಟ್ ತಂಡಕ್ಕೆ ಸಾಹಿಬ್ಜಾದಾ ಫರ್ಹಾನ್ ಕ್ಯಾಪ್ಟನ್ ಆಗಿದ್ದಾರೆ. ಅಕ್ಟೋಬರ್ 9ರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶ್ರೀಲಂಕಾ ವಿರುದ್ಧದ ಟಿ-20 ಸರಣಿಗಾಗಿ ಹೊಸ ನಾಯಕನನ್ನಾಗಿ ಘೋಷಿಸಿದೆ. ಈ ಹಿಂದೆ ನಾಯಕರಾಗಿದ್ದ ಸಲ್ಮಾನ್ ಅಲಿ ಅಘಾ ಅವರ ಸ್ಥಾನಕ್ಕೆ ಸಾಹಿಬ್ಜಾದಾ ಫರ್ಹಾನ್ ಅವ್ರನ್ನ ನೇಮಕ ಮಾಡಲಾಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದ ಫರ್ಹಾನ್, ತಂಡಕ್ಕೆ ಬೆಳ್ಳಿ ಪದಕ ಕೊಡಿಸಿದ್ರು. ಒಟ್ನಲ್ಲಿ ಪಾಕ್ ಕ್ರಿಕೆಟ್ನಲ್ಲೇ ನೂರೆಂಟು ಸಮಸ್ಯೆಗಳಿವೆ. ಮೊದ್ಲು ತಮ್ಮ ಟೀಂ ಸ್ಟ್ರಾಂಗ್ ಮಾಡ್ಕೊಂಡು ಗೆಲ್ಲೋದನ್ನ ಕಲಿಸೋ ಬದಲು ಸುಖಾಸುಮ್ಮನೆ ಭಾರತದ ವಿರುದ್ಧ ಕಿರಿಕ್ ತೆಗೆದು ಮಾನ ಕಳ್ಕೊಳ್ತಿದ್ದಾರೆ ಅಷ್ಟೇ.

ನೋಡಿರಿ

